ಗಂಡ ಬಿಜೆಪಿ ಅಭ್ಯರ್ಥಿ-ಹೆಂಡತಿ ಕಾಂಗ್ರೆಸ್ ಜಿಪಂ ಸದಸ್ಯೆ; ಗಣಿನಾಡು ಬಳ್ಳಾರಿಯಲ್ಲಿ ಜುಗಲ್ ಬಂದಿ ದಂಪತಿ!

ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ವೈ ದೇವೇಂದ್ರಪ್ಪ ಆಯ್ಕೆಯಾಗಿದ್ದರೆ, ಅವರ ಪತ್ನಿ ಸುಶೀಲಮ್ಮ ಪಕ್ಕಾ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದಾರೆ. ಹಾಲಿ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿರುವ ಸುಶೀಲಮ್ಮ ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಅರಸಿಕೆರೆ ಜಿಪಂ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

G Hareeshkumar | news18
Updated:March 28, 2019, 10:45 PM IST
ಗಂಡ ಬಿಜೆಪಿ ಅಭ್ಯರ್ಥಿ-ಹೆಂಡತಿ ಕಾಂಗ್ರೆಸ್ ಜಿಪಂ ಸದಸ್ಯೆ; ಗಣಿನಾಡು ಬಳ್ಳಾರಿಯಲ್ಲಿ ಜುಗಲ್ ಬಂದಿ ದಂಪತಿ!
ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ವೈ.ಸುಶೀಲಮ್ಮ
  • News18
  • Last Updated: March 28, 2019, 10:45 PM IST
  • Share this:
ಬಳ್ಳಾರಿ (ಮಾ.23): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ ಹಾಗೂ ಕಾಂಗ್ರೆಸ್ ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾಗಿವೆ. ಬದ್ಧ ವೈರಿ ರಾಜಕೀಯ ಪಕ್ಷಗಳಾಗಿ ಮತದಾರರನ್ನು ಸೆಳೆಯಲು ರಣತಂತ್ರ ರೂಪಿಸುತ್ತಿವೆ. ಆದರೆ ಗಣಿನಾಡು ಬಳ್ಳಾರಿಯಲ್ಲಿ ಮಾತ್ರ ವಿಶೇಷ. ಇಲ್ಲಿರುವ ದಂಪತಿಗಳು ಒಂದು ಮನೆ ಪಾರ್ಟಿ ಎರಡು. ಗಂಡ ಬಿಜೆಪಿಯವರಾದ್ರೆ, ಹೆಂಡತಿ ಪಕ್ಕಾ ಕಾಂಗ್ರೆಸ್ಸಿಗರು. ಈ ಬಾರಿಯ ಚುನಾವಣೆಯಲ್ಲಿ ದೇವೇಂದ್ರಪ್ಪ ಬಿಜೆಪಿ ಅಭ್ಯರ್ಥಿಯಾದ್ರೆ, ಪತ್ನಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಮುಂದುವರೆದಿದ್ದಾರೆ.

ರಾಜಕೀಯನೇ ಹಾಗೆ ಅಣ್ಣ ಒಂದು ಪಕ್ಷದಲ್ಲಿದ್ದರೆ, ತಮ್ಮ ಇನ್ನೊಂದು ಪಕ್ಷದಲ್ಲಿರುತ್ತಾನೆ. ಆದರೆ ಗಂಡಹೆಂಡತಿ ಬೇರೆ ಬೇರೆ ಪಕ್ಷದಲ್ಲಿರೋದು ತುಂಬಾನೇ ವಿರಳ. ಆದರೆ ಗಣಿನಾಡು ಬಳ್ಳಾರಿಯಲ್ಲಿ ಲೋಕಸಭಾ ಚುನಾವಣೆ ಘೋಷಣೆ ಬಳಿಕ ಇಂಥದೊಂದು ಬೆಳವಣಿಗೆಗೆ ಸಾಕ್ಷಿಯಾಗಿದೆ. ಹರಪನಹಳ್ಳಿಯ ಈ ದಂಪತಿ ಮೊದಲು ಕಾಂಗ್ರೆಸ್​​ನಲ್ಲೇ ಇದ್ದರು. ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ, ಪತಿಗೆ, ‘ಕಾಂಗ್ರೆಸ್ ಪಕ್ಷ ತನ್ನನ್ನು ಗುರುತಿಸಲಿಲ್ಲ ಎಂಬ ಅರಿವಾಯಿತು.

ಹೆಂಡತಿ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಸದಸ್ಯೆ

ಕೂಡಲೇ ಅವರು ಬಳ್ಳಾರಿಗೆ ಬಂದು ಬಿಜೆಪಿಗೆ ಸೇರ್ಪಡೆಗೊಂಡರು. ಕೆಲವೇ ದಿನಗಳಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿಯೂ ಬಿಟ್ಟಿತು! ಯಾಕೆಂದರೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ವೈ ದೇವೇಂದ್ರಪ್ಪ ಆಯ್ಕೆಯಾಗಿದ್ದರೆ, ಅವರ ಪತ್ನಿ ಸುಶೀಲಮ್ಮ ಪಕ್ಕಾ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದಾರೆ. ಹಾಲಿ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿರುವ ಸುಶೀಲಮ್ಮ ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಅರಸಿಕೆರೆ ಜಿಪಂ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಂಡ ದೇವೇಂದ್ರಪ್ಪ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ನಂತರವೂ ಬಿಜೆಪಿಗೆ ಸೇರಲಿಲ್ಲ. ಸದ್ಯ ಬಿಜೆಪಿ ಅಭ್ಯರ್ಥಿಯಾಗಿದ್ದರೂ ಸದ್ದಿಲ್ಲದೆ ಕಾಂಗ್ರೆಸ್ ಜಿಪಂ ಸದಸ್ಯೆಯಾಗಿ ಪಕ್ಷದಲ್ಲಿಯೇ ಮುಂದುವರೆದಿದ್ದಾರೆ. ಈ ಬಗ್ಗೆ ಪ್ರಶ್ನೆಗೆ ನೀವೇ ಅವರನ್ನೇ ಕೇಳಬೇಕು' ಇದಕ್ಕೆ ನಾನು ಉತ್ತರಿಸಲ್ಲ ಎನ್ನುತ್ತಾರೆ.

ಗಂಡ ಬಿಜೆಪಿ  ಲೋಕಸಭಾ ಅಭ್ಯರ್ಥಿ

ಬಳ್ಳಾರಿ ಬಿಜೆಪಿ ಅಭ್ಯರ್ಥಿ ವೈ ದೇವೇಂದ್ರಪ್ಪ ಮೂಲತಃ ಕಾಂಗ್ರೆಸ್ಸಿಗರು. ಕಳೆದೊಂದು ವಾರದ ಹಿಂದೆ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಯಾಗಿ ಬಳ್ಳಾರಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. 1995ರಲ್ಲಿ ಬಳ್ಳಾರಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷರಾಗಿ ಐದು ವರ್ಷ ಕಾರ್ಯನಿರ್ವಹಿಸಿದ್ದಾರೆ. ಅರಸಿಕೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

ತಮ್ಮ 62ನೇ ವಯಸ್ಸಿನಲ್ಲಿ ದೇವೇಂದ್ರಪ್ಪ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡರೆ, ಪತ್ನಿ ಸುಶೀಲಮ್ಮ ಹಾಲಿ ಜಿಪಂ ಸದಸ್ಯ ಸ್ಥಾನ ಮುಗಿಯುವವರೆಗೂ ಕಾಂಗ್ರೆಸ್ ಬಿಡುವ ಲಕ್ಷಣ ಕಾಣುತ್ತಿಲ್ಲ. ಮೇಲಾಗಿ ಇವರು ಜಾರಕಿಹೊಳಿ ಸಹೋದರರ ಸಂಬಂಧಿ ಬೇರೆ. ಅಣ್ಣ ಒಂದು ಪಾರ್ಟಿಯಲ್ಲಿ, ತಮ್ಮ ಮತ್ತೊಂದು ಪಾರ್ಟಿಯಲ್ಲಿದ್ದಂತೆ ಇವರು ಗಂಡ ಹೆಂಡತಿ ಒಂದೊಂದು ಪಾರ್ಟಿಯಲ್ಲಿ ಇದ್ದಾರೆ.ಇದನ್ನೂ ಓದಿ : ಶ್ರೀರಾಮುಲು-ರೆಡ್ಡಿ ಪಾಳೆಯಕ್ಕೆ ಸೆಡ್ಡು ಹೊಡೆಯುವ ಏಕೈಕ ನಾಯಕ ಡಿಕೆಶಿ; ಬಳ್ಳಾರಿ ಉಸ್ತುವಾರಿಯಾಗಿ ಮುಂದುವರಿಕೆ!

ಹರಪನಹಳ್ಳಿಯ ವೈ.ದೇವೇಂದ್ರಪ್ಪ ಮತ್ತು ವೈ.ಸುಶೀಲಮ್ಮ ದಂಪತಿಯ ಜೀವನವನ್ನು ಲೋಕಸಭಾ ಚುನಾವಣೆ ದಿಢೀರ್ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇತ್ತೀಚಿಗಷ್ಟೆ ಬಳ್ಳಾರಿ ಜಿಲ್ಲೆಗೆ ಮರುಸೇರ್ಪಡೆಗೊಂಡಿರುವ ಹರಪನಹಳ್ಳಿ ತಾಲ್ಲೂಕಿನ, ಅರಸೀಕೆರೆ ಜಿಲ್ಲಾ ಪಂಚಾಯತ್​​ ಸದಸ್ಯೆ ಸುಶೀಲಮ್ಮ ಕಾಂಗ್ರೆಸ್​​ನಲ್ಲೇ ಮುಂದುವರೆದಿದ್ದಾರೆ. ಅವರದ್ದು ಈಗ ಒಂದೇ ಮನೆ ಎರಡು ಪಕ್ಷ ಎಂಬಂತಾಗಿದೆ !

(ವರದಿ -ಶರಣು ಹಂಪಿ ) 
First published: March 23, 2019, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading