ಕಾರವಾರ (ಡಿ.7): ಅನುಮಾನ ದೊಡ್ಡ ರೋಗ ಎಂಬಂತೆ ಹೆಂಡತಿ ಮೇಲೆ ಸುಖಾ ಸುಮ್ಮನೆ ಅನುಮಾನಿಸಿ, ಕೊಲ್ಲಲೆತ್ನಿಸಿ, ಕೊಲೆಗೆ ಇಲ್ಲ ಸಲ್ಲದ ಕಥೆ ಕಟ್ಟಲು ಹೋಗಿ ಪೊಲೀಸರ ವಶವಾಗಿದ್ದಾನೆ. ರಮೇಶ್ ದೇಸಾಯಿ ಸದ್ಯ ಪೊಲೀಸರ ವಶದಲ್ಲಿರುವ ವ್ಯಕ್ತಿ. ಕಾರವಾರ ನಗರದೊಂದ 45 ಕಿ.ಮೀ ದೂರದಲ್ಲಿರುವ ಅರಣ್ಯ ಪ್ರದೇಶದಿಂದ ಸುತ್ತುವರೆದಿರುವ ಹಿಂದುಳಿದ ಗ್ರಾಮ ಗೋಯರ್ ನಿವಾಸಿ ಈಥ. ಇದೇ ಗ್ರಾಮದಲ್ಲಿ ಹೆಂಡತಿ ರಸಿಕಾ ಎಂಬಾಂಕೆ ಜೊತೆ ಸುಂದರ ಸಂಸಾರ ನಿರ್ವಹಿಸುತ್ತಿದ್ದ ಈತನಿಗೆ ಹೆಂಡತಿ ಮೇಲೆ ಅನುಮಾನ ಹುಟ್ಟಿದೆ. ಇದೇ ಕಾರಣಕ್ಕೆ ಆಕೆಯನ್ನು ಕೊಲ್ಲುಲು ಮುಂದಾಗಿದ್ದಾನೆ. ಅದೃಷ್ಟವಶಾತ್ ಆಕೆ ಸಾವಿನಿಂದ ಪಾರಾಗಿ, ಕೈಗೆ ಗಾಯವಾಗಿದೆ.
ಹೆಂಡತಿ ಶೀಲ ಕುರಿತು ಸದಾ ಅನುಮಾನದಿಂದ ನೋಡುತ್ತಿದ್ದ ಇದೇ ಕಾರಣಕ್ಕೆ ಹಲವು ಭಾರಿ ಜಗಳ ಆಡಿದ್ದಾನೆ. ಈ ಅನುಮಾನ ಯಾವ ಹಂತಕ್ಕೆ ತಲುಪಿದೆ ಎಂದರೆ ಆಕೆಯನ್ನು ಸಾಯಿಸುವ ನಿರ್ಧಾರಕ್ಕೆ ಆತ ಮುಂದಾಗಿದ್ದಾನೆ. ಇದೇ ಕಾರಣ ಡಿ. 4ರಂದು ರಾತ್ರಿ ಸಮಯದಲ್ಲಿ ಮನೆ ಹೊರಗೆ ನಾಡ ಬಂದೂಕಿನಿಂದ ಕೊಲ್ಲುವ ಯೋಜನೆ ರೂಪಿಸಿದ್ದ. ಮರೆಯಲ್ಲಿ ನಿಂತು ಹೆಂಡತಿ ಹೊರ ಬರುತ್ತಿದ್ದಂತೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಈ ಗುಂಡು ರಸಿಕಾಳ ಕೈಗೆ ಹೊಕ್ಕಿತ್ತು, ಜೀವ ಉಳಿದಿದೆ.
ಇದನ್ನು ಓದಿ: ಕೊರೊನಾ ಮಧ್ಯೆ ಡೇಂಘಿ ನರ್ತನ; ಭೀತಿಯಲ್ಲಿ ಗೋನವಾಟ್ಲ ತಾಂಡಾದ ಮಂದಿ
ಕೈಗೆ ಗುಂಡು ತಗುಲಿತ್ತಿದ್ದಂತೆ ಹೌಹಾರಿದ ರಮೇಶ, ಆಕೆಯನ್ನು ಬದುಕಿಸುವ ಪ್ರಯತ್ನ ಮಾಡಿದ್ದಾನೆ, ಅಕ್ಕ ಪಕ್ಕದವರಿಗೆ ಗೊತ್ತಾಗುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲದೇ ಇದು ಬೇಟೆಗಾರರ ಕೃತ್ಯ ಎಂದು ಬಿಂಬಿಸಿದ್ದಾನೆ. ಈ ಕುರಿತು ಕದ್ರಾ ಪೊಲೀಸ್ ಠಾಣೆಯಲ್ಲಿ ಕೂಡ ದೂರು ದಾಖಲಿಸಿದ್ದಾನೆ. ಇದೊಂದು ಬೇಟೆಗಾರರ ಕೃತ್ಯ ಇರಬಹುದು ಅಥವಾ ಅಪರಿಚಿತರು ಯಾರೋ ಗುಂಡು ಹಾರಿಸಿದ್ದಾರೆ ಎಂದು ದೂರಿದ್ದಾನೆ.
ಈ ಘಟನೆ ಬೆನ್ನತ್ತಿದ್ದ ಪೊಲೀಸರಿಗೆ ರಮೇಶನ ಮಾತುಗಳು ಸಾಕಷ್ಟು ಅನುಮಾನ ಮೂಡಿಸಿದೆ. ಒಮ್ಮೆ ಯಾರೋ ಕಾಡು ಪ್ರಾಣಿ ಬೇಟೆಗಾರರು ಬೇಟೆಯಾಡಲು ಹೋದಾಗ ಬಂದೂಕಿನ ಗುರಿ ತಪ್ಪಿ ಗುಂಡು ತನ್ನ ಹೆಂಡತಿ ಕೈಗೆ ಬಿದ್ದಿರಬಹುದು ಎಂದಿದ್ದಾನೆ ಮತ್ತೊಮ್ಮೆ ಇಆಸ್ಪತ್ರೆಗೆ ಸಾಗಿಸಿದಾಗ ಜೇನು ನೋಣ ಕಚ್ಚಿ ಈ ರೀತಿ ಗಾಯವಾಗಿದೆ ಎಂದು ಮತ್ತೊಂದು ಕತೆ ಕಟ್ಟಿದ್ದಾನೆ. ಸಂಶಯಗೊಂಡ ಪೋಲಿಸರು ಗಂಡ ರಮೇಶನನ್ನ ತನಿಖೆಗೆ ಒಳಪಡಿಸಿದಾಗ ಹೆಂಡತಿಯ ಶೀಲದ ಮೇಲೆ ಸಂಶಯಪಟ್ಟು ಕೊಲೆ ಮಾಡಲು ಪ್ರಯತ್ನಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ