Karnataka HC: ಗಂಡ ತನ್ನ ಹೆಂಡತಿ ಜೊತೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಮಾತ್ನಾಡೋದು ಕ್ರೌರ್ಯವಲ್ಲ

ದಂಪತಿಗಳ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ಹೊರಡಿಸಿದೆ. ಮಹಿಳೆಯೊಬ್ಬರು ಈ ಮೂರು ವಿಚಾರವಾಗಿ ಪತಿ ಸೇರಿ ಆತನ ಕುಟುಂಬದ ಮೇಲೆ ದೂರು ದಾಖಲಿಸಿದ್ದರು. ಮೊದಲ ತೀರ್ಪಿನಲ್ಲಿ ಪತಿ ಮತ್ತು ಆತನ ಕುಟುಂಬಕ್ಕೆ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿತ್ತು. ಪ್ರಕರಣ ಮತ್ತೆ ತೆರೆದುಕೊಂಡಿದ್ದು, 2013ರ ತೀರ್ಪನ್ನು ರದ್ದುಪಡಿಸಿ ಕುಟುಂಬವನ್ನು ಕರ್ನಾಟಕ ಹೈಕೋರ್ಟ್ ದೋಷಮುಕ್ತರನ್ನಾಗಿ ಘೋಷಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪತಿ ತನ್ನ ಹೆಂಡತಿಗೆ (Wife) ಓದುವುದನ್ನು ಮುಂದುವರಿಸುವಂತೆ ಕೇಳುವುದು, ಮಗುವನ್ನು ಹೊಂದುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಮತ್ತು ತನ್ನ ಅತ್ತೆ-ಮಾವ ಮಾತನಾಡುವ ಭಾಷೆಯನ್ನು ಕಲಿಯಲು ಹೇಳುವುದು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ದಂಪತಿಗಳ (Couple) ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ (Karnataka Highcourt) ಮಹತ್ವದ ತೀರ್ಪನ್ನು ಹೊರಡಿಸಿದೆ. ಮಹಿಳೆಯೊಬ್ಬರು ಈ ಮೂರು ವಿಚಾರವಾಗಿ ಪತಿ ಸೇರಿ ಆತನ ಕುಟುಂಬದ ಮೇಲೆ ದೂರು ದಾಖಲಿಸಿದ್ದರು. ಮೊದಲ ತೀರ್ಪಿನಲ್ಲಿ ಪತಿ ಮತ್ತು ಆತನ ಕುಟುಂಬಕ್ಕೆ (Family) ನ್ಯಾಯಾಲಯವು (Court) ಶಿಕ್ಷೆಯನ್ನು ವಿಧಿಸಿತ್ತು. ಪ್ರಕರಣ ಮತ್ತೆ ತೆರೆದುಕೊಂಡಿದ್ದು, 2013ರ ತೀರ್ಪನ್ನು ರದ್ದುಪಡಿಸಿ ಕುಟುಂಬವನ್ನು ಕರ್ನಾಟಕ ಹೈಕೋರ್ಟ್ ದೋಷಮುಕ್ತರನ್ನಾಗಿ ಘೋಷಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498-ಎ ಮತ್ತು ಸೆಕ್ಷನ್ 34 ಮತ್ತು ಸೆಕ್ಷನ್ 3 ಮತ್ತು 4ರ ಅಡಿಯಲ್ಲಿರುವ ಪ್ರಕರಣದ ಅಪರಾಧಿಗಳಾದ ಡಾ. ಶಶಿಧರ ಸುಬ್ಬಣ್ಣ ಮತ್ತು ಅವರ ತಾಯಿಗೆ ನೀಡಿದ ಶಿಕ್ಷೆಯನ್ನು ರದ್ದುಪಡಿಸಿದ ನ್ಯಾಯಮೂರ್ತಿ ಡಾ. ಎಚ್‌ಬಿ ಪ್ರಭಾಕರ ಶಾಸ್ತ್ರಿ ಪತಿ ತನ್ನ ಹೆಂಡತಿಗೆ ವಿದ್ಯಾಭ್ಯಾಸ ಮುಂದುವರಿಸಿ, ಕೆಲಸ ಹುಡುಕುವಂತೆ ಕೇಳುವುದು ಮತ್ತು ಮಗುವನ್ನು ಹೊಂದುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಕ್ರೌರ್ಯವಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಸೆಪ್ಟೆಂಬರ್ 7, 2013ರ ತೀರ್ಪಿನಲ್ಲಿ ಪ್ರತಿವಾದಿಗಳಾದ ಶಶಿಧರ ಸುಬ್ಬಣ್ಣ ಮತ್ತು ಅವರ ತಾಯಿಯನ್ನು ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿತು ಮತ್ತು ಡಿಸೆಂಬರ್ 1, 2016ರ ತೀರ್ಪಿನಲ್ಲಿ ಮೇಲ್ಮನವಿಯ ಮೇಲೆ ವಿಚಾರಣಾ ನ್ಯಾಯಾಧೀಶರು ಅದನ್ನು ದೃಢಪಡಿಸಿದ್ದರು.

ಪ್ರಕರಣ ಮತ್ತು ಮಹಿಳೆಯ ದೂರು ಏನಾಗಿತ್ತು?
ದಂಪತಿಗಳು ಅಮೇರಿಕಾದಲ್ಲಿ ವಾಸಿಸುತ್ತಿದ್ದರು. ಕುಟುಂಬವನ್ನು ನಡೆಸಲು ಮತ್ತು ತಿಂಗಳ ಖರ್ಚನ್ನು ಭರಿಸಲು ಅಧ್ಯಯನವನ್ನು ಮುಂದುವರಿಸಲು ಮತ್ತು ಉದ್ಯೋಗವನ್ನು ಹುಡುಕುವಂತೆ ತನ್ನ ಪತಿ ಕೇಳಿದ್ದಾನೆ ಎಂದು ದೂರುದಾರರು ಆರೋಪಿಸಿದ್ದರು. ಮತ್ತು ತನ್ನ ಪತಿ ಮಗುವನ್ನು ಹೊಂದುವ ಬಗ್ಗೆ ಮೊದಲ ರಾತ್ರಿಯೇ ಅಭಿಪ್ರಾಯ ಕೇಳಿದ್ದ ಮತ್ತು ಆತನ ಅಭಿಪ್ರಾಯ ಕೂಡ ಹೇಳಿದ್ದ ಎಂದು ದೂರು ನೀಡಿದ್ದರು.

“ಪತ್ನಿಗೆ ಓದು ಮುಂದುವರಿಸುವಂತೆ ಹೇಳುವುದು ಕಿರುಕುಳವಲ್ಲ”
ದೂರುದಾರರ ಎಲ್ಲಾ ಮಾಹಿತಿಯನ್ನು ಕೂಲಂಕುಷವಾಗಿ ಪರೀಶಿಲಿಸಿದ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಿದೆ. ತಾನು ಅಮೇರಿಕಾದಲ್ಲಿ ತನ್ನ ಪತಿಯನ್ನು ಸೇರಿಕೊಂಡ ನಂತರ, ತಾನು ಉನ್ನತ ಶಿಕ್ಷಣವನ್ನು ಪಡೆಯಬೇಕಾಗಬಹುದು ಮತ್ತು ಕುಟುಂಬದ ವೆಚ್ಚವನ್ನು ಸರಿದೂಗಿಸಲು ಉದ್ಯೋಗವನ್ನು ಹುಡುಕಬೇಕಾಗಬಹುದು ಎಂದು ಅವರು ಮದುವೆಗೆ ಮೊದಲು ಮಾತುಕತೆ ನಡೆಸಿದ್ದರು ಎಂದು ಪತ್ನಿ ಸ್ವತಃ ದೂರಿನಲ್ಲಿ ಉಲ್ಲೇಖಿಸಿದ್ದರು. ಇದನ್ನು ಗಮನಿಸಿದ ನ್ಯಾಯಾಲಯ ಪೂರ್ವ ಸಮಾಲೋಚನೆಯಿಲ್ಲದೆ ಅವಳ ಪತಿ ಇದ್ದಕ್ಕಿದ್ದಂತೆ ಅವಳನ್ನು ಕೆಲಸ ಹುಡುಕುವಂತೆ ಒತ್ತಾಯಿಸಿದ ಪ್ರಕರಣವಲ್ಲ ಇದು ಎಂದು ಗಮನಿಸಿ ಮಹತ್ವದ ತೀರ್ಪು ನೀಡಿದೆ.

ಇದನ್ನೂ ಓದಿ: Love Marriage: ಪ್ರೀತಿಸಿ ಮದ್ವೆಯಾದ ಜೋಡಿ, ಗ್ಯಾಂಗ್ ಕಟ್ಕೊಂಡು ಬಂದು ಹುಡುಗನ ಮನೆ ಮೇಲೆ ದಾಳಿ

“ಫಿರ್ಯಾದಿ ಮತ್ತು ಪ್ರತಿವಾದಿ ನಂ.1 ಇಬ್ಬರೂ ಹೆಚ್ಚು ವಿದ್ಯಾವಂತರಾಗಿದ್ದರಿಂದ ಮತ್ತು ಅವರ ಮದುವೆಗೆ ಮುಂಚಿತವಾಗಿ ಭವಿಷ್ಯದ ಬಗ್ಗೆ ಮಾತುಕತೆ ನಡೆಸುತ್ತಿದ್ದರು ಮತ್ತು ದೂರುದಾರರ ಮುಂದಿನ ಶಿಕ್ಷಣ ಮತ್ತು ಅವರ ಉದ್ಯೋಗದ ನಿರೀಕ್ಷೆಗಳನ್ನು ಒಳಗೊಂಡಂತೆ ಅವರ ಭವಿಷ್ಯದ ಜೀವನದ ಬಗ್ಗೆ ಚರ್ಚಿಸಿದ್ದಾರೆ, ಹೀಗಾಗಿ ಪತ್ನಿಗೆ ಪತಿ ಅವಳ ಶಿಕ್ಷಣವನ್ನು ಮುಂದುವರಿಸಲು ಹೇಳಿದ್ದನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲ” ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

“ಫ್ಯಾಮಿಲಿ ಪ್ಲಾನಿಂಗ್ ಮಾಡುವುದು ಕ್ರೌರ್ಯವಲ್ಲ”
ಮದುವೆಯಾದ ಮೊದಲ ರಾತ್ರಿಯೇ ಪತಿ ತನಗೆ ಮುಂದಿನ ಮೂರು ವರ್ಷಗಳವರೆಗೆ ಮಗು ಬೇಡವೆಂದೂ ಹೇಳಿದ್ದನೆಂದು ದೂರುದಾರರು ಆರೋಪಿಸಿದ್ದರು. ಈ ವಿಚಾರದ ಬಗ್ಗೆ ಗಮನಹರಿಸಿದ ಕೋರ್ಟ್ “ದಂಪತಿ ನಡುವಿನ ಸಂಭಾಷಣೆಯು ಮಗುವನ್ನು ಯಾವಾಗ ಪಡೆಯಬೇಕು ಅಥವಾ ಮಗುವನ್ನು ಹೊಂದುವ ಬಗ್ಗೆ ಗಂಡನ ಅಭಿಪ್ರಾಯವೇನು ಮತ್ತು ಅವರಿಗೆ ಸರಿಯಾದ ಸಮಯ ಯಾವುದು ಎಂಬ ಬಗ್ಗೆ ಸರಿಯಾದ ಯೋಜನೆಗಾಗಿ ಸಂಗಾತಿಗಳ ನಡುವೆ ಇದು ಸಾಮಾನ್ಯ ಸಂಭಾಷಣೆಯಾಗಿದೆ. ಅವರ ಕುಟುಂಬ ಯೋಜನೆ ಬಗ್ಗೆ ಸಂಗಾತಿಯು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದನ್ನು ಕಿರುಕುಳ ಅಥವಾ ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ” ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

“ಮಹಿಳೆಯನ್ನು ತನ್ನ ಅತ್ತೆ-ಮಾವ ಮಾತನಾಡುವ ಭಾಷೆಯನ್ನು ಕಲಿಯಲು ಹೇಳುವುದು ಕ್ರೌರ್ಯವಲ್ಲ”
ಹೆಂಡತಿಗೆ ಪತಿ ತಮಿಳು ಭಾಷೆ ಕಲಿಯಲು ಮತ್ತು ತನ್ನ ಅತ್ತೆಯೊಂದಿಗೆ ಶಟಲ್ ಕಾಕ್ ಮತ್ತು ಕಾರ್ಡ್ ಆಡಲು ಕೇಳಲಾಗಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್ "ಸೊಸೆಯಾಗಿ ತನ್ನ ಗಂಡನ ಕುಟುಂಬಕ್ಕೆ ಬಂದಾಗ, ಗಂಡನ ಕುಟುಂಬ ಸದಸ್ಯರು ಆಕೆ ತಮ್ಮಲ್ಲಿ ಸಾಂಸ್ಕೃತಿಕವಾಗಿ ಬೆರೆಯಬೇಕೆಂದು ನಿರೀಕ್ಷಿಸುತ್ತಾರೆ. ಪರಿಣಾಮಕಾರಿ ಸಂವಹನದ ಉದ್ದೇಶಕ್ಕಾಗಿ ಭಾಷೆ ಕಲಿಯಲು ಹೇಳಲಾಗಿತ್ತು.

ಇದನ್ನೂ ಓದಿ:  Burqa Arrest: ಬುರ್ಖಾ ಧರಿಸಿ ಗರ್ಲ್​ಫ್ರೆಂಡ್ ಭೇಟಿಗೆ ಬಂದ ಯುವಕ! ಮುಂದೆ ಆಗಿದ್ದೇ ಬೇರೆ!

ಹೊಸ ಸದಸ್ಯನಿಗೆ ತನ್ನ ಗಂಡನ ಮನೆಯಲ್ಲಿ ಕುಟುಂಬದ ಇತರ ಸದಸ್ಯರು ಸಂವಹನ ನಡೆಸುವ ಭಾಷೆ ಅರ್ಥವಾಗದಿದ್ದರೆ, ಈ ಹೊಸ ಸದಸ್ಯ, ಅಂದರೆ ಸೊಸೆ, ಬೇರೆಯವಳು ಎನಿಸಬಹುದು. ಹಾಗಾಗಿ, ಪಿಡಬ್ಲ್ಯು 1 ರಿಂದ 4 ರ ಪ್ರಕಾರ ಆರೋಪಿಯ ಬಲವಂತವಾಗಿರದ ತಮಿಳು ಭಾಷೆಯನ್ನು ಕಲಿಯಲು ದೂರುದಾರರಿಗೆ ಆರೋಪಿಯ ಪ್ರಸ್ತಾಪವನ್ನು ದೂರುದಾರರ ಮೇಲಿನ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
Published by:Ashwini Prabhu
First published: