Husband Torture: ಪ್ರೀತಿಸಿ ಮದುವೆಯಾಗಿ ಅಶ್ಲೀಲ ಚಿತ್ರ ತೋರಿಸಿ ಟಾರ್ಚರ್; 5 ಬಾರಿ ಗರ್ಭಪಾತ ಮಾಡಿಸಿ ಹಿಂಸೆ ಕೊಟ್ಟ ಪಾಪಿ!

ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಪ್ರದೀಪ್​, ವಿವಾಹವಾದ ಐದೇ ತಿಂಗಳಿಗೇ ಹೆಂಡತಿಗೆ ತನ್ನ ಅಸಲಿ ಮುಖ ತೋರಿಸಿದ್ದಾನೆ. ನಿತ್ಯ ಯುವತಿಗೆ ಚಿತ್ರಹಿಂಸೆ ನೀಡಿದ್ದಾನೆ. ಹೆಂಡತಿಗೆ ಅಶ್ಲೀಲ ಚಿತ್ರ ತೋರಿಸಿ ಮಾನಸಿಕ ಹಾಗೂ ದೈಹಿಕವಾಗಿಯೂ ಕಿರುಕುಳ ನೀಡಿದ್ದಾನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜು.19): ಪ್ರೀತಿಸಿ ಮದುವೆಯಾಗಿ ಪತ್ನಿಗೆ ಕೊಡಬಾರದ ಹಿಂಸೆ (Torture) ಕೊಟ್ಟು ಇದೀಗ ಜೈಲು ಪಾಲಾಗಿದ್ದಾನೆ. ಮದುವೆಯಾದ (Marriage) 5 ತಿಂಗಳಿಗೆ ಈತನ ಬಣ್ಣ ಬಯಲಾಗಿದೆ. ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಹಿಂಸೆ ನೀಡುತ್ತಿದ್ದ. ಅಷ್ಟೆ ಅಲ್ಲದೇ ಮದ್ಯ ಕುಡಿಸಿ (Drink Alcohol) ದೈಹಿಕವಾಗಿ ಹಿಂಸೆ ಕೊಟ್ಟು ಸಿಗರೇಟ್ (Cigarette)​ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ. ಗಂಡನ ಕಿರುಕುಳ ತಾಳಲಾರದೇ ಪತ್ನಿ ಬೆಂಗಳೂರಿನ ಬಾಣಸವಾಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪತ್ನಿ ದೂರಿನ ಮೇರೆಗೆ ಪ್ರದೀಪ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೀತಿಸಿ ಮದುವೆಯಾಗಿ ಕಿರುಕುಳ

ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಪ್ರದೀಪ್​, ವಿವಾಹವಾದ ಐದೇ ತಿಂಗಳಿಗೇ ಹೆಂಡತಿಗೆ ತನ್ನ ಅಸಲಿ ಮುಖ ತೋರಿಸಿದ್ದಾನೆ. ನಿತ್ಯ ಯುವತಿಗೆ ಚಿತ್ರಹಿಂಸೆ ನೀಡಿದ್ದಾನೆ. ಹೆಂಡತಿಗೆ ಅಶ್ಲೀಲ ಚಿತ್ರ ತೋರಿಸಿ ಮಾನಸಿಕ ಹಾಗೂ ದೈಹಿಕವಾಗಿಯೂ ಕಿರುಕುಳ ನೀಡಿದ್ದಾನೆ. ಈತನ ಕಿರುಕುಳ ತಾಳಲಾರದೇ ಯುವತಿ ಮನೆಬಿಟ್ಟು ಹೋಗಿದ್ರು ಈತನ ಆಕೆಗೆ ಕಿರುಕುಳ ಕೊಡುವುದನ್ನು ಬಿಟ್ಟಿಲ್ಲ.

5 ಬಾರಿ ಗರ್ಭಪಾತ ಮಾಡಿಸಿದ ಪಾಪಿ

ಹೆಂಡತಿಗೆ ಕಿರುಕುಳ ನೀಡಿದ್ದಲ್ಲದೆ 5 ಬಾರಿ ಗರ್ಭಪಾತ ಮಾಡಿಸಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಮಕ್ಕಳು ಬೇಡ ಎಂದು ಹೆಂಡತಿ ಜೊತೆ ಜಗಳವಾಡಿದ್ದಾನೆ. ಬಳಿಕ ಪತ್ನಿ ಕಾಡಿ-ಬೇಡಿ‌ 2 ಮಕ್ಕಳನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Anekal: ಒಂದೇ ಬಟ್ಟೆ ಹಾಕ್ತಾರೆ, ಕೈಯಲ್ಲಿ ಆಯುಧ ಹಿಡಿದಿರ್ತಾರೆ; ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್

ಸ್ನೇಹಿತರನ್ನು ಕರೆಸಿ ಮೋಜು ಮಸ್ತಿ

ಪ್ರದೀಪ್ ಮನೆಗೆ ಸ್ನೇಹಿತರನ್ನು ಕರೆಸಿ ಪಾರ್ಟಿ ಮಾಡಿ ಅವರ ಮುಂದೆ ಹೆಂಡತಿಗೆ ಹಿಂಸೆ ಕೊಡುತ್ತಿದ್ದನಂತೆ. ಈ ಬಗ್ಗೆ ಪ್ರಶ್ನಿಸಿದರೆ ಹಲ್ಲೆ ಮಾಡಿ ವಿಚ್ಛೇದನ ನೀಡುವಂತೆ ಒತ್ತಾಯ ಮಾಡಿದ್ದಾನೆ.  ಇದರಿಂದ ಬೇಸತ್ತಿದ್ದ ಪತ್ನಿ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದಳು. ಆದರೂ ಹೆಂಡತಿಗೆ ಪತಿ ಕಾಟ ತಪ್ಪಿಲ್ಲ. ಹೀಗಾಗಿ ನೊಂದ ಯುವತಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರಿ, ಆರೋಪಿ ಪ್ರದೀಪ್​ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ‌.

ನೀನು ಕುರೂಪಿ ಎಂದು ಟಾರ್ಚರ್​, ಪತ್ನಿ ಸೂಸೈಡ್​ 

ನೀನು ಕುರೂಪಿ, ಸುಂದರವಾಗಿಲ್ಲ‌ ಎಂದು ಪದೇ ಪದೇ ಪತಿ ಪತ್ನಿಯನ್ನ ನಿಂದನೆ ಮಾಡಿದ ಕಾರಣ ಮನನೊಂದ ಮಹಿಳೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ಇದೇ ತಿಂಗಳ 18 ರಂದು ಬೆಳಗ್ಗೆ 12.30 ಕ್ಕೆ ಈ ಘಟನೆ ನಡೆದಿದ್ದು, ಅನಿಶಾ (33) ಆತ್ಮಹತ್ಯೆ ಯತ್ನಿಸಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮೂರು ವರ್ಷದ ಹಿಂದೆ ನಿಜಾಮುದ್ದೀನ್ ಜೊತೆಗೆ ಎರಡನೇ ಮದುವೆಯಾಗಿದ್ದ ಅನಿಶಾಗೆ ಪ್ರತಿದಿನ ಕಿರುಕುಳ ನೀಡಲಾಗುತ್ತಿತ್ತು, ದಂಪತಿಗೆ ಎರಡು ವರ್ಷ ಹಾಗೂ 6 ತಿಂಗಳ ಇಬ್ಬರು ಮಕ್ಕಳಿದ್ರೂ ಗಂಡ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ವಿಫಲವಾಗಿ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: Hanuman Temple Yalagureshwara: ಜೈ ಆಂಜನೇಯ ಯಲಗೂರೇಶ್ವರ! 350 ವರ್ಷದ ಹಳೆಯ ದೇಗುಲ ಹೀಗಿದೆ ನೋಡಿ

ಹೆಂಡತಿಯನ್ನೇ ಕೊಂದ ಪಾಪಿ ಗಂಡ

ಕುತ್ತಿಗೆ ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದ್ದು, ಆಕೆಯನ್ನ ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಗೃಹಿಣಿಯ ಕುಟುಂಬಸ್ಥರು ಆರೋಪ ಮಾಡಿರೋ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ಜರುಗಿದೆ. ಆದ್ರೆ ಅತ್ತ ಇದಕ್ಕೆಲ್ಲ ಉತ್ತರ ನೀಡಬೇಕಾದ ಪತಿ ಹಾಗೂ ಆತನ ಮನೆಯವರು ಮಾತ್ರ ನಾಪತ್ತೆಯಾಗಿದ್ದಾರೆ. ಇಂತಹ ಘಟನೆ ನಡೆದಿರೋದು ಸಕ್ಕರೆ ನಾಡು ಮಂಡ್ಯದ  ಶ್ರೀರಂಗಪಟ್ಟಣದ  ಗೆಂಡೆಹೊಸಹಳ್ಳಿ ಗ್ರಾಮದಲ್ಲಿ.

ಗ್ರಾಮದ 28 ವರ್ಷದ ಯೋಗಿತಾ ಎಂಬ ಗೃಹಿಣಿಯ ಶವ ಆಕೆಯ ಮನೆಯಲ್ಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ರೆ ಇದಕ್ಕೆಲ್ಲಾ ಕಾರಣ ಆಕೆಯ ಪತಿ ರವಿ ಮತ್ತು ಆತನ ಕುಟುಂಬಸ್ಥರು, ಆಕೆಯ ಪತಿಯೇ ಈಕೆಯನ್ನ ಕೊಲೆ ಮಾಡಿದ್ದಾನೆ ಎಂದು ಯೋಗಿತಾ ಕುಟುಂಬಸ್ಥರು ಆರೋಪಿಸಿದ್ದಾರೆ.
Published by:Pavana HS
First published: