ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಹೋರಾಟ: ಗೆದ್ದು ಬೀಗಿದ ಅಪ್ಪ- ಮಗ, ಗಂಡ- ಹೆಂಡತಿ..!


Updated:September 3, 2018, 5:21 PM IST
ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಹೋರಾಟ: ಗೆದ್ದು ಬೀಗಿದ ಅಪ್ಪ- ಮಗ, ಗಂಡ- ಹೆಂಡತಿ..!

Updated: September 3, 2018, 5:21 PM IST
ಚಂದ್ರಕಾಂತ್​ ಸುಗಂಧಿ, ನ್ಯೂಸ್​ 18 ಕನ್ನಡ

ಬೆಳಗಾವಿ(ಸೆ.03): ಗಡಿ ಜಿಲ್ಲೆಯ ಬೆಳಗಾವಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಬೈಲಹೊಂಗದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಗೋಕಾಕ್, ಕೊಣ್ಣುರುನಲ್ಲಿ ಸಚಿವರ ರಮೇಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ರಾಮದುರ್ಗ, ಸವದತ್ತಿ ಹಾಗೂ ಮೂಡಲಗಿ ಪುರಸಭೆಯನ್ನು ಬಿಜೆಪಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನೂ ಚುನಾವಣೆಯಲ್ಲಿ ಅಪ್ಪ-ಮಗ, ಗಂಡ- ಹೆಂಡತಿ ಗೆದ್ದು ಸಂಭ್ರಮಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಲೋಕಲ್ ಫೈಟ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಹಲವರಿಗೆ ಗೆಲವು ತಂದುಕೊಟ್ಟರೆ, ಇನ್ನೂ ಅನೇಕರಿಗೆ ಮುಖಭಂಗವನ್ನು ಉಂಟು ಮಾಡಿದೆ. ಚುನಾವಣೆಯಲ್ಲಿ ಅಪ್ಪ- ಮಗ, ಗಂಡ- ಹೆಂಡತಿ ಗೆದ್ದಿರುವುದು ವಿಶೇಷವಾಗಿದೆ.

ಬೆಳಗಾವಿಯ ಜಿಲ್ಲೆಯ ಗೋಕಾಕ್ ನಗರಸಭೆ, ಕೊಣ್ಣೂರು ಪುರಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನೂ ಸವದತ್ತಿ, ರಾಮದುರ್ಗ ಹಾಗೂ ಮೂಡಲಗಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಖಾನಾಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲರೂ ಪಕ್ಷೇತರರೇ ಗೆದ್ದಿದ್ದಾರೆ. ಈಗ ಯಾವ ಪಕ್ಷದ ಕಡೆ ಮುಖ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕು.

ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆ ಫಲಿತಾಂಶದ ಬಗ್ಗೆ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ, ನಮ್ಮ ನಿರೀಕ್ಷೆಯಂತೆ ಅನೇಕ ಕಡಗಳಲ್ಲಿ ನಾವು ಗೆದ್ದಿದ್ದೇವೆ. ಚುನಾವಣೆಯಿಂದ ಜನ ನಮ್ಮ ಪರ ಇದ್ದಾರೆ ಎಂಬುದು ಸಾಬೀತಾಗಿದೆ. ಈ ಚುನಾವಣೆ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗಲ್ಲ ಎಂದರು.ಖಾನಾಪುರ ಪಟ್ಟಣ ಪಂಚಾಯಿ ಚುನಾವಣೆಯಲ್ಲಿ ಗಂಡ- ಹೆಂಡತಿ ದಂಪತಿ ಗೆಲುವು ಸಾಧಿಸಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ವಾರ್ಡ್ 5ರಿಂದ ಸ್ಪರ್ಧಿಸಿದ್ದ ಸಿದ್ದೋಜಿ ಗಾವಡೆ, ವಾರ್ಡ್ 14ರಿಂದ ಸ್ಪರ್ಧಿಸಿದ್ದ ಶೋಭಾ ಗಾವಡೆ ಇಬ್ಬರು ಆಯ್ಕೆಯಾಗಿದ್ದಾರೆ. ಶೋಭಾ ಗಾವಡೆ ಕೇವಲ 1 ಮತದಿಂದ ಗೆದ್ದಿರೋದು ವಿಶೇಷವಾಗಿದೆ. ಇನ್ನೂ ವಾರ್ಡ್ 12ರಿಂದ ಸ್ಪರ್ಧಿಸಿದ್ದ ರಫಿಕ್ ಖಾನಾಪುರಿ, 17ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಮಗ ಮಜರ್ ಖಾನಾಪುರಿ ಇಬ್ಬರು ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಇನ್ನೂ ಬೈಲಹೊಂಗಲ ಸತತವಾಗಿ ಎಡರನೇ ಭಾರಿ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. ಈ ಬಗ್ಗೆ ಶಾಸಕ ಮಹಾಂತೇಶ ಕೌಜಲಗಿ ಸಂತಸ ವ್ಯಕ್ತಪಡಿಸಿದರು.
Loading...

ಒಟ್ಟಾರೆಯಾಗಿ ಲೋಕಸಭಾ ಚುನಾವಣೆಗೂ ಮೊದಲು ನಡೆದ ಲೋಕಲ್ ಫೈಟ್ ಫಲಿತಾಂಶ ಪ್ರಕಟವಾಗಿದ್ದು. ಅನೇಕರಿಗೆ ಖುಷಿ ತಂತ್ರೆ ಇನ್ನೂ ಅನೇಕರಿಗೆ ಮುಖಭಂಗ ಉಂಟುಮಾಡಿದೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂಬುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ