ಬೆಳಗಾವಿ ಜಿಲ್ಲೆಯಲ್ಲಿ ಗಂಡ ಹೆಂಡತಿಗೆ ಬಿಜೆಪಿಯಿಂದ ಟಿಕೆಟ್ ಭಾಗ್ಯ

news18
Updated:April 16, 2018, 8:12 PM IST
ಬೆಳಗಾವಿ ಜಿಲ್ಲೆಯಲ್ಲಿ ಗಂಡ ಹೆಂಡತಿಗೆ ಬಿಜೆಪಿಯಿಂದ ಟಿಕೆಟ್ ಭಾಗ್ಯ
news18
Updated: April 16, 2018, 8:12 PM IST
- ಲೋಹಿತ್ ಶಿರೋಳ, ನ್ಯೂಸ್18 ಕನ್ನಡ

ಚಿಕ್ಕೋಡಿ ( ಏ.16) :  ಕರ್ನಾಟಕದ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಗಂಡ ಹೆಂಡತಿ ಇಬ್ಬರೂ ಏಕಕಾಲಕ್ಕೆ ಅಖಾಡಕ್ಕಿಳಿಯುತ್ತಿರುವ ಸನ್ನಿವೇಶಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆ ಸಾಕ್ಷಿಯಾಗಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದಿಂದ ಹಾಲಿ ಶಾಸಕಿ ಶಶಿಕಲಾ ಜೊಲ್ಲೆಯವರಿಗೆ ಮೊದಲ ಪಟ್ಟಿಯಲ್ಲೇ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಇದರ ಜೊತೆಗೆ ಚಿಕ್ಕೋಡಿ- ಸದಲಗಾ ಕ್ಷೇತ್ರದಿಂದ ಶಶಿಕಲಾರ ಪತಿ ಅಣ್ಣಾಸಾಹೇಬ್‌ ಜೊಲ್ಲೆಯವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು ಇದು ಕರ್ನಾಟಕ ಬಿಜೆಪಿ ಇತಿಹಾಸದಲ್ಲಿ ಮೊದಲ ಬಾರಿ ಎಂದು ಹೇಳಬಹುದು.

ಅಣ್ಣಾಸಾಹೇಬ್ ಜೊಲ್ಲೆಯವರು ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಶಶಿಕಲಾ ಜೊಲ್ಲೆಯವರು ನಿಪ್ಪಾಣಿಯ ಹಾಲಿ ಶಾಸಕಿಯಾಗಿದ್ದು, ಮೂರನೇ ಬಾರಿಗೆ ಚುನಾವಣೆಯನ್ನ ಎದುರುಸುತ್ತಿದ್ದು, ಬಿಜೆಪಿಯಿಂದ ಅವರನ್ನೇ ಮೂರನೇ ಬಾರಿ ಕಣಕ್ಕಿಳಿಸಲಾಗುತ್ತಿದೆ. ಸಾಮಾನ್ಯವಾಗಿ ತಂದೆ ಮಕ್ಕಳು ಚುನಾವಣಾ ಅಖಾಡಕ್ಕಿಳಿದಿರುವ ನಿದರ್ಶನಗಳು ಸಾಕಷ್ಟಿವೆ.  ಹಾಗೇನೇ ಪತಿಯ ನಂತರ ಪತ್ನಿಗೆ ಟಿಕೆಟ್ ಕೊಟ್ಟಿರೋ ಉದಾಹರಣೆಗಳೂ ಇವೆ.

ಆದರೇ  ಪತಿ ಮತ್ತು ಪತ್ನಿ ಇಬ್ಬರೂ ಏಕಕಾಲಕ್ಕೆ ಕಣಕ್ಕಿಳಿಯುತ್ತಿರುವುದು ಬಿಜೆಪಿ ಇತಿಹಾಸದಲ್ಲೇ ಇದೇ ಮೊದಲು. ವಿಶೇಷ ಅಂದ್ರೆ ಈ ದಂಪತಿಯರ ಪೈಕಿ ವಿಧಾನಸಭೆಗೆ ಮೊದಲು ಪ್ರವೇಶಿಸಿರೋದು ಪತ್ನಿ ಶಶಿಕಲಾ ಜೊಲ್ಲೆ. 2008 ರಲ್ಲಿ ಮೊದಲ ಬಾರಿ ಬಿಜೆಪಿ ಪಕ್ಷದಿಂದಲೆ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ ಶಶಿಕಲಾ ಸೋಲನ್ನು ಒಪ್ಪಿಕೊಳ್ಳದೆ ಸತತ ಕ್ಷೇತ್ರದಲ್ಲಿ ಒಡಾಟ ನಡೆಸುವ ಮೂಲಕ 2013 ರಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಸಿಸಿದ್ದಾರೆ. ಈಗ ಮತ್ತೆ 2018 ವಿಧಾನಸಭೆ ಚುನಾವಣೆಗೆ ಮತ್ತೊಮ್ಮೆ ನಿಪ್ಪಾಣಿ ಕ್ಷೇತ್ರದಿಂದಲೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಇನ್ನು ಪತಿ ಅಣ್ಣಾಸಾಬ ಜೊಲ್ಲೆ ಕೂಡ ತಮ್ಮದೆ ಜೊಲ್ಲೆ ಉದ್ಯೋಗ ಸಮೂಹ ಹಾಗೂ ಸಂಘ ಸಂಸ್ಥೆಗಳ ಮೂಲಕ ಹಲವು ಕ್ಷೇತ್ರಗಳಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ.. ಹಾಗಾಗಿ. ಸದ್ಯ ಚಿಕ್ಕೋಡಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ನ ಗಣೇಶ್ ಹುಕ್ಕೇರಿ ಶಾಸಕರಿದ್ದು ಕಳೆದ 30. ವರ್ಷಗಳಿಂದ ಈ ಕ್ಷೇತ್ರ ಕಾಂಗ್ರೇಸ್ ನ ಭದ್ರ ಕೊಟೆಯಾಗಿದೆ ಹೇಗಾದ್ರು ಮಾಡಿ ಕಾಂಗ್ರೆಸ್ ಭದ್ರ ಕೋಟೆಯನ್ನ ಭೇದಿಸಲು ರಣತಂತ್ರ ಮಾಡಿರುವ ಬಿಜೆಪಿ ಈ ಬಾರಿ ಶಶಿಕಲಾ ಜೊಲ್ಲೆ ಪತಿ ಅಣ್ಣಾಸಾಬ ಜೊಲ್ಲೆ ಯನ್ನ ಕನಕ್ಕಿಳಿಸೂವ ಮೂಲಕ ಅಚ್ಚರಿ ಮೂಡಿಸಿದೆ. ಸದ್ಯ ಚಿಕ್ಕೋಡಿ-ಸದಲಗಾ ಕ್ಷೇತ್ರ ಮತ್ತು ನಿಪ್ಪಾಣಿ ಕ್ಷೇತ್ರ ಅಕ್ಕಪಕ್ಕದ ಕ್ಷೇತ್ರಗಳಾಗಿದ್ದು ಜಿಲ್ಲೆಯಲ್ಲೆ ಕುತೂಹಲ ಮೂಡಿಸಿವೆ.

ಒಟ್ಟಿನಲ್ಲಿ ಗಂಡ ಹೆಂಡತಿ ಇಬ್ಬರು ಸಹ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡುತ್ತಿದ್ದು ಯಾರ ಗೆಲ್ಲುತ್ತಾರೆ ಯಾರು ಸೊಲುತ್ತಾರೆ ಅಥವಾ ಇಬ್ಬರು ಗೆದ್ದು ದಂಪತಿಗಳಾಗಿ ವಿಧಾನಸಭೆ ಪ್ರವೇಶ ಮಾಡುತ್ತಾರಾ ಅನ್ನೋದು ಕೂತುಹಲವಾಗಿದೆ.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ