ನನ್ನ ಬಳಿ ಹಣ ಇದ್ದರಲ್ಲವೇ ಜನರಿಗೆ ಹಂಚೋದು; ಆರೋಪಕ್ಕೆ ಹೆಚ್​.ವಿಶ್ವನಾಥ್​​ ತಿರುಗೇಟು

ಹಣ ಹಂಚಲು ನನ್ನ‌ಬಳಿ ಹಣ ಇಲ್ಲ. ಹಾಗಾಗಿ ನಾನು‌ ಕಂಡಿರುವ ಕನಸು ಹಂಚುತ್ತಿದ್ದೇನೆ.  ಜೆಡಿಎಸ್‌ ಕಾಂಗ್ರೆಸ್‌ನವರಿಗೆ ಕನಸು ಕಾಣುವುದೇ ಗೊತ್ತಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ-ವಿಶ್ವನಾಥ್​

Latha CG | news18-kannada
Updated:December 2, 2019, 5:57 PM IST
ನನ್ನ ಬಳಿ ಹಣ ಇದ್ದರಲ್ಲವೇ ಜನರಿಗೆ ಹಂಚೋದು; ಆರೋಪಕ್ಕೆ ಹೆಚ್​.ವಿಶ್ವನಾಥ್​​ ತಿರುಗೇಟು
ಹೆಚ್.ವಿಶ್ವನಾಥ್​
  • Share this:
ಮೈಸೂರು(ಡಿ.02):ನನ್ನ ಬಳಿ ಹಣ ಇದ್ದರೆ ಅಲ್ಲವೇ ಜನರಿಗೆ ಹಂಚುವುದು ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್​.ವಿಶ್ವನಾಥ್​ ಹೇಳಿದ್ದಾರೆ.

ಮತದಾರರಿಗೆ ಹಣ ಹಂಚುತ್ತಿದ್ಧಾರೆ ಎಂಬ ಆರೋಪಕ್ಕೆ ಹುಣಸೂರಿನ ಬನ್ನಿಕುಪ್ಪೆಯಲ್ಲಿ ವಿಶ್ವನಾಥ್​​ ತಿರುಗೇಟು ನೀಡಿದ್ಧಾರೆ. "ನನ್ನ ಬಳಿ ಹಣ ಇದ್ದರಲ್ಲವೇ ಹಂಚೋದು? ನಾನು‌ ಕಂಡಿರುವ ಕನಸನ್ನು ಜನರಿಗೆ ಹಂಚುತ್ತಿದ್ದೇನೆ. ಜೆಡಿಎಸ್‌ ಕಾಂಗ್ರೆಸ್‌ನವರಿಗೆ ಕನಸೇ ಗೊತ್ತಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ಧಾರೆ," ಎಂದು ಬಿಜೆಪಿ ಅಭ್ಯರ್ಥಿ ವಾಗ್ದಾಳಿ ನಡೆಸಿದ್ದಾರೆ.

ಅಯೋಧ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಮೊದಲ ಮರುಪರಿಶೀಲನಾ ಅರ್ಜಿ ಸಲ್ಲಿಕೆ

ಹುಣಸೂರು ಜನರಿಗೆ ಬಹಿರಂಗ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೆಚ್.ವಿಶ್ವನಾಥ್​, ಅಪಪ್ರಚಾರದಿಂದ ನೊಂದು ಪತ್ರ ಬರೆದೆ. ಚುನಾವಣಾ ಪ್ರಚಾರದ ವೇಳೆ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಜನರಿಗೆ ಮೊನ್ನೆ ರಾತ್ರಿ ಪತ್ರ ಬರೆದೆ. ಅದು ನಾನೇ ಖುದ್ದಾಗಿ ಬರೆದಿರುವ ಪತ್ರ. ಇಂದು ಕ್ಷೇತ್ರದ ಜನರಿಗೆ ತಲುಪಿಸುತ್ತಿದ್ದೇನೆ. ನಾನು ಸಾಹಿತಿ, ಕಾಗಕ್ಕ‌ - ಗುಬ್ಬಕ್ಕ‌ಕಥೆ ಬರೆಯೋನಲ್ಲ. ಮನಸ್ಸಿನ ಮಾತು ಬರೆಯುವ ಲೇಖಕ ನಾನು. ಎಲ್ಲವನ್ನು ಕ್ಷೇತ್ರದ ಜನರಿಗೆ ಹೇಳಲು ಪತ್ರ ಬರೆದೆ," ಎಂದು ಹೇಳಿದರು.

ಬಿಜೆಪಿಯಿಂದ ಹಣ ಹಂಚಿಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, "ಹಣ ಹಂಚಲು ನನ್ನ‌ಬಳಿ ಹಣ ಇಲ್ಲ. ಹಾಗಾಗಿ ನಾನು‌ ಕಂಡಿರುವ ಕನಸು ಹಂಚುತ್ತಿದ್ದೇನೆ.  ಜೆಡಿಎಸ್‌ ಕಾಂಗ್ರೆಸ್‌ನವರಿಗೆ ಕನಸು ಕಾಣುವುದೇ ಗೊತ್ತಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ," ಎಂದು ಕಿಡಿಕಾರಿದರು.

ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದ ಕೆ.ಸಿ. ರಾಮಮೂರ್ತಿ ರಾಜ್ಯಸಭೆಗೆ ಅವಿರೋಧ ಆಯ್ಕೆ ಖಚಿತ?

First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading