Hunsur Bypoll Result: ಹುಣಸೂರಲ್ಲಿ ಶಿಷ್ಯನನ್ನು ಗೆಲ್ಲಿಸಿದ ಸಿದ್ದರಾಮಯ್ಯ; ವಿಶ್ವನಾಥ್ ಸೋಲಿಗೆ ಏನು ಕಾರಣ? ಜಿಟಿಡಿ ಪಾತ್ರವೂ ಮುಖ್ಯವಾಯಿತಾ?

ಜೆಡಿಎಸ್ ಪಕ್ಷ ಕೂಡ ಹೆಚ್ಚು ಪ್ರಬಲ ಅಭ್ಯರ್ಥಿಯಲ್ಲ ಸೋಮಶೇಖರ್ ಅವರನ್ನು ಕಣಕ್ಕಿಳಿಸಿ ತನ್ನ ಇರಾದೆಯನ್ನು ಸ್ಪಷ್ಟಪಡಿಸಿತ್ತು. ತಮ್ಮ ಪಕ್ಷ ಸೋತರೂ ಪರವಾಗಿಲ್ಲ, ವಿಶ್ವನಾಥ್ ಸೋಲಬೇಕೆಂಬ ಜೆಡಿಎಸ್ ಗುರಿ ಈಡೇರಿತು. ಒಕ್ಕಲಿಗ ಸಮುದಾಯದವರು ಸಿದ್ದರಾಮಯ್ಯಗಿಂತ ವಿಶ್ವನಾಥ್ ಮೇಲೆ ಹೆಚ್ಚು ಮುನಿಸಿಕೊಂಡಿರುವ ಸಾಧ್ಯತೆ ಇದೆ.

news18
Updated:December 9, 2019, 12:08 PM IST
Hunsur Bypoll Result: ಹುಣಸೂರಲ್ಲಿ ಶಿಷ್ಯನನ್ನು ಗೆಲ್ಲಿಸಿದ ಸಿದ್ದರಾಮಯ್ಯ; ವಿಶ್ವನಾಥ್ ಸೋಲಿಗೆ ಏನು ಕಾರಣ? ಜಿಟಿಡಿ ಪಾತ್ರವೂ ಮುಖ್ಯವಾಯಿತಾ?
ಹೆಚ್.ವಿಶ್ವನಾಥ್
  • News18
  • Last Updated: December 9, 2019, 12:08 PM IST
  • Share this:
ಮೈಸೂರು(ಡಿ. 09): ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್ ಅವರು 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹೆಚ್. ವಿಶ್ವನಾಥ್ ಅವರನ್ನು ಸೋಲಿಸಿದ್ದಾರೆ. ಮಂಜುನಾಥ್ ಅವರ ಗೆಲುವು ಬಹುತೇಕ ನಿರೀಕ್ಷಿತವೆಂದೇ ಹೇಳಲಾಗುತ್ತಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್​ನಿಂದ ಸ್ಪರ್ಧಿಸಿದ್ದ ವಿಶ್ವನಾಥ್ ಅವರು ಈ ಬಾರಿ ಮುಖಭಂಗ ಅನುಭವಿಸಿದ್ಧಾರೆ. ವಿಶ್ವನಾಥ್ ಅವರು ಕಟುವಾಗಿ ಧ್ವೇಷಿಸುವ ಮಾಜಿ ಸಿದ್ದರಾಮಯ್ಯ ಅವರು ತಮ್ಮ ಶಿಷ್ಯನನ್ನು ಗೆಲ್ಲಿಸಿದ ಖುಷಿಯಲ್ಲಿದ್ಧಾರೆ.

ಈ ಬಾರಿಯ ಉಪಚುನಾವಣೆಯು ಹೆಚ್. ವಿಶ್ವನಾಥ್ ಅವರಿಗೆ ಅಕ್ಷರಶಃ ಅಗ್ನಿಪರೀಕ್ಷೆಯೇ ಆಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಕೂಡ ವಿಶ್ವನಾಥ್ ಅವರನ್ನ ಹುರಿದು ಮುಕ್ಕಲು ಅಣಿಗೊಂಡಿದ್ದವು. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಈ ಕ್ಷೇತ್ರದ ಚುನಾವಣೆಯನ್ನು ಬಹಳ ವೈಯಕ್ತಿಕವಾಗಿ ತೆಗೆದುಕೊಂಡಿದ್ದರು. ಕುಮಾರಸ್ವಾಮಿ ಅವರಂತೂ ಇಲ್ಲಿ ಜೆಡಿಎಸ್ ಸೋತರೂ ಪರವಾಗಿಲ್ಲ, ವಿಶ್ವನಾಥ್ ಸೋಲಬೇಕು ಎಂದು ನಿಶ್ಚಯಿಸಿದ್ದರು. ಹೀಗಾಗಿ, ವಿಶ್ವನಾಥ್ ಅವರು ಹಿಂದೆಂದೂ ಕಾಣದ ಸವಾಲನ್ನು ಈ ಸಲ ನೋಡಬೇಕಾಯಿತು.

ಇದನ್ನೂ ಓದಿ: Karnataka Bypoll Results: ಹುಣಸೂರು ಮತ್ತು ಶಿವಾಜಿನಗರ ಕ್ಷೇತ್ರಗಳು ಮಾತ್ರ ಕಾಂಗ್ರೆಸ್ ತೆಕ್ಕೆಗೆ?

ಇಷ್ಟೆಲ್ಲಾ ಇದ್ದರೂ ವಿಶ್ವನಾಥ್ ಅವರ ಚುನಾವಣಾ ರಣತಂತ್ರ ಮತ್ತು ನಡವಳಿಕೆಗಳು ಸಕಾರಾತ್ಮಕವಿರಲಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತಿತ್ತು. ವಿಶ್ವನಾಥ್ ಅವರಿಗೆ ಕೈಕೊಟ್ಟ ರಣತಂತ್ರಗಳಲ್ಲಿ ಸಿ.ಪಿ. ಯೋಗೇಶ್ವರ್ ಅವರಿಗೆ ಒತ್ತುಕೊಟ್ಟು ಚುನಾವಣೆಗೆ ಬಳಸಿಕೊಂಡಿದ್ದು ಪ್ರಮುಖವಾದುದು. ಹುಣಸೂರಿನಲ್ಲಿ ಒಕ್ಕಲಿಗ ಮತಗಳು ಕೈತಪ್ಪುವ ಭೀತಿ ಇದ್ದರೂ ಅದನ್ನು ನಿಭಾಯಿಸಲು ವಿಶ್ವನಾಥ್ ಶಕ್ತರಾಗಲಿಲ್ಲ. ಬಿಜೆಪಿ ಬಗ್ಗೆ ಮೃದುಧೋರಣೆ ಹೊಂದಿದ್ದ ಹಾಗೂ ಕಳೆದ ಬಾರಿ ತಮಗೆ ಬೆಂಬಲವಾಗಿ ನಿಂತು ಗೆಲುವಿಗೆ ಕಾರಣವಾಗಿದ್ದ ಜಿ.ಟಿ. ದೇವೇಗೌಡರನ್ನು ಬಳಸಿಕೊಳ್ಳಲು ವಿಶ್ವನಾಥ್ ಹಿಂದೇಟು ಹಾಕಿದರು. ಸಾಕಷ್ಟು ಬೆಂಬಲಿಗರನ್ನು ಹೊಂದಿರುವ ಜಿಟಿಡಿ ಅವರು ವಿಶ್ವನಾಥ್ ನಡವಳಿಕೆಯಿಂದ ಭ್ರಮನಿರಸನಗೊಂಡು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಒಳಗೊಳಗೆ ಕೆಲಸ ಮಾಡಿದ್ದಾರೆನ್ನಲಾಗುತ್ತಿದೆ.

ಜೆಡಿಎಸ್ ಪಕ್ಷ ಕೂಡ ಹೆಚ್ಚು ಪ್ರಬಲ ಅಭ್ಯರ್ಥಿಯಲ್ಲ ಸೋಮಶೇಖರ್ ಅವರನ್ನು ಕಣಕ್ಕಿಳಿಸಿ ತನ್ನ ಇರಾದೆಯನ್ನು ಸ್ಪಷ್ಟಪಡಿಸಿತ್ತು. ತಮ್ಮ ಪಕ್ಷ ಸೋತರೂ ಪರವಾಗಿಲ್ಲ, ವಿಶ್ವನಾಥ್ ಸೋಲಬೇಕೆಂಬ ಜೆಡಿಎಸ್ ಗುರಿ ಈಡೇರಿತು. ಒಕ್ಕಲಿಗ ಸಮುದಾಯದವರು ಸಿದ್ದರಾಮಯ್ಯಗಿಂತ ವಿಶ್ವನಾಥ್ ಮೇಲೆ ಹೆಚ್ಚು ಮುನಿಸಿಕೊಂಡಿರುವ ಸಾಧ್ಯತೆ ಇದೆ. ಕುರುಬ ಸಮುದಾಯದ ಮತಗಳೂ ಕೂಡ ಕಾಂಗ್ರೆಸ್​ಗೆ ಬಿದ್ದಿವೆ.

ಇದರ ಜೊತೆಗೆ, ಸ್ಥಳೀಯ ಬಿಜೆಪಿ ಮುಖಂಡರೂ ಕೂಡ ವಿಶ್ವನಾಥ್​ಗೆ ಟಿಕೆಟ್ ಕೊಟ್ಟಿದ್ದರ ಬಗ್ಗೆ ಅಸಮಾಧಾನಗೊಂಡಿದ್ದರು. ಬಿಜೆಪಿಯ ರಾಜ್ಯ ನಾಯಕರೂ ಕೂಡ ವಿಶ್ವನಾಥ್ ಅವರಿಗೆ ಚುನಾವಣೆಯಲ್ಲಿ ನಿಲ್ಲಬೇಡಿ ಎಂದು ಕೇಳಿಕೊಂಡಿದ್ದರೆಂಬ ಸುದ್ದಿ ಇದೆ. ಆದರೂ ವಿಶ್ವನಾಥ್ ಹಠ ಹಿಡಿದು ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಹುಣಸೂರಿನ ಕೆಲಸ ಸ್ಥಳೀಯ ಬಿಜೆಪಿ ನಾಯಕರು ವಿಶ್ವನಾಥ್​ಗೆ ವಿರುದ್ಧವಾಗಿ ಕೆಲಸ ಮಾಡಿರುವ ಸಾಧ್ಯತೆಯೂ ಇದೆ. ಈ ಎಲ್ಲಾ ಕಾರಣಗಳು ಹೆಚ್.ಪಿ. ಮಂಜುನಾಥ್ ಗೆಲುವನ್ನು ಸುಗಮಗೊಳಿಸಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: December 9, 2019, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading