ಸ್ವಾಭಿಮಾನಕ್ಕಾಗಿ ಸಿದ್ಧರಾಮಯ್ಯ ಜೆಡಿಎಸ್​​ಗೆ ರಾಜೀನಾಮೆ ನೀಡಿದ್ರು - ಅದೇ ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದೇನೆ; ಎಚ್. ವಿಶ್ವನಾಥ್

ಚಾಮುಂಡೇಶ್ವರಿ ದೇವಾಲಯಕ್ಕೆ ಬಾ ಆಣೆ ಮಾಡು ಅಂತಾ ಕರೆದೆ. ದೇವಸ್ಥಾನಕ್ಕೆ ಅವರು ಬಂದರು. ಮಹಾಭಾರತದಲ್ಲಿ ದುರ್ಯೋಧನದನ ರೀತಿ ದೇವಸ್ಥಾನ ದಲ್ಲಿ ಅಡಗಿ ಕುಳಿತು ಬಿಟ್ಟರು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ದ ವಿಶ್ವನಾಥ್​ ವಾಗ್ದಾಳಿ ನಡೆಸಿದರು.

news18-kannada
Updated:November 25, 2019, 10:18 PM IST
ಸ್ವಾಭಿಮಾನಕ್ಕಾಗಿ ಸಿದ್ಧರಾಮಯ್ಯ ಜೆಡಿಎಸ್​​ಗೆ ರಾಜೀನಾಮೆ ನೀಡಿದ್ರು - ಅದೇ ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದೇನೆ; ಎಚ್. ವಿಶ್ವನಾಥ್
ಹೆಚ್ ವಿಶ್ವನಾಥ್ ಹಾಗೂ ಸಿದ್ದರಾಮಯ್ಯ
  • Share this:
ಮೈಸೂರು(ನ.25): ಜೆಡಿಎಸ್‌‌ನಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಅವರನ್ನ ಹೊರಕ್ಕೆ ಹಾಕಿದ್ರು. ಆಗ ಶಾಸಕ ಸ್ಥಾನಕ್ಕೆ ರಾಜೀನಾಮೆ‌ ನೀಡಿ ಮತ್ತೆ ಚುನಾವಣೆ ಎದುರಿಸಿದರು. ಆಗ ಅವರು ನೀಡಿದ್ದು ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದೆ ಅಂದ್ರು. ಈಗಲೂ ನಾನು ಸ್ವಾಭಿಮಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು  ಹೂಣಸೂರು ಬಿಜೆಪಿ ಅಭ್ಯರ್ಥಿ ಎಚ್​​ ವಿಶ್ವನಾಥ್​​ ಹೇಳಿದರು.

ಸಿದ್ದರಾಮಯ್ಯ ಅವರು ನನ್ನ ಅಣ್ತಮ್ಮ. ಅವರೊಬ್ಬ ಜನನಾಯಕ. ನಮಗು ಸ್ವಾಭಿಮಾನ ಇದೆ. ನಮಗೂ ಮಾನ ಮರ್ಯಾದೆ ಎಂದ ಅವರು, ಮುನೇಶ್ವರನ ಮೇಲೆ ಆಣೆ. ನಾನು ರಾಜಕೀಯದಲ್ಲಿ ಶುದ್ದವಾಗಿದ್ದೇನೆ. ವಿಶ್ವನಾಥ್ 25 ಕೋಟಿ ತೆಗೆದುಕೊಂಡು ಬಿಜೆಪಿ ಸೇರಿದ್ರು ಅಂತಾ ಮಾಜಿ ಸಚಿವರೊಬ್ಬರು ಹೇಳಿದ್ರು. ಅದಕ್ಕೆ ಚಾಮುಂಡೇಶ್ವರಿ ದೇವಾಲಯಕ್ಕೆ ಬಾ ಆಣೆ ಮಾಡು ಅಂತಾ ಕರೆದೆ. ದೇವಸ್ಥಾನಕ್ಕೆ ಅವರು ಬಂದರು. ಮಹಾಭಾರತದಲ್ಲಿ ದುರ್ಯೋಧನದನ ರೀತಿ ದೇವಸ್ಥಾನ ದಲ್ಲಿ ಅಡಗಿ ಕುಳಿತು ಬಿಟ್ಟರು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ದ ವಿಶ್ವನಾಥ್​ ವಾಗ್ದಾಳಿ ನಡೆಸಿದರು.

ಸೂರ್ಯ ಚಂದ್ರ ಇರುವವರೆಗೂ ದೇವರಾಜ ಅರಸು ಹೆಸರು ಶಾಶ್ವತ. ಶಾಶ್ವತವಾಗಿರುವಂತೆ ಮಾಡುವುದಾಗಿ ಭರವಸೆ‌ ನೀಡಿದ್ದಾರೆ ಎಂದು ಪರೋಕ್ಷವಾಗಿ ಹುಣಸೂರು ಪ್ರತ್ಯೇಕ ಜಿಲ್ಲೆ ಬಗ್ಗೆ ಒಪ್ಪಿಗೆ ನೀಡಿರುವುದಾಗಿ ಹೇಳಿದ ಅವರು, ಸ್ವಾತಂತ್ರ್ಯದ ಮುಂಚೆ ದೇಶಕ್ಕಾಗಿ ನಾವು ಎನ್ನುತ್ತಿದ್ದರು. ಆದ್ರೆ ಸ್ವಾತಂತ್ರ್ಯದ ನಂತರ ನಮಗಾಗಿ ದೇಶ ಅನ್ನೋ ಥರ ಆಗಿದೆ ಎಂದು ತಿಳಿಸಿದರು.

ನಾವು 15 ಕ್ಕೆ 15 ಕ್ಷೇತ್ರಗಳನ್ನು ಗೆಲ್ತಿವಿ : ಯಡಿಯೂರಪ್ಪ

ಹುಣಸೂರಿನ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ನಾವು 15 ಕ್ಕೆ 15 ಕ್ಷೇತ್ರಗಳನ್ನು ಗೆಲ್ತಿವಿ. ಲೋಕಸಭಾ ಚುನಾವಣೆ ವೇಳೆಯೂ 25 ಕ್ಷೇತ್ರ ಗೆಲ್ತಿವಿ ಅಂಥಾ ಹೇಳಿದ್ದೆ. ಆಗ ಮಾಧ್ಯಮದವರು ನಂಬಿರಲಿಲ್ಲ. ಫಲಿತಾಂಶ ಬಂದ ಮೇಲೆ ಎಲ್ಲರಿಗೂ ಗೊತ್ತಾಯ್ತು. ಈ ಉಪಚುನಾವಣೆ ಫಲಿತಾಂಶವೂ ಅದೇ ರೀತಿ ಬರುತ್ತೆ ಎಂದು ಹೇಳಿದರು.

ಹುಣಸೂರಿನ ಹನುಮ ಜಯಂತಿ ಹೆಸರಲ್ಲಿ ಸುಳ್ಳು ಕೇಸ್ ಹಾಕಿದ್ದಾರೆ ಅಂತಾ ಗೊತ್ತಿದೆ. ಆ ಪ್ರಕರಣ ವಾಪಾಸ್ ಪಡೆಯುತ್ತೇನೆ. ಇಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲೆಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಲಾಗಿದೆಯೋ ಅದನ್ನು ವಾಪಾಸ್ ಪಡೆಯುತ್ತೇವೆ . 17 ಶಾಸಕರ ತ್ಯಾಗ ಸಣ್ಣ ವಿಷಯವೇನೂ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿ ಮಂತ್ರಿ ಸ್ಥಾನಕ್ಜೆ ರಾಜೀನಾಮೆ ಕೊಟ್ಟು ನನ್ನ ಸಿಎಂ ಮಾಡಿದ್ದಾರೆ. ನಮ್ಮ ಜವಾಬ್ದಾರಿ ಜಾಸ್ತಿ ಇದೆ. ಅವರನ್ನ ಗೆಲ್ಲಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ : ನಾನು ಈಗಾಗಲೇ ಗೆದ್ದಿದ್ದೇನೆ - ಯಾರನ್ನೇ ಸಚಿವರನ್ನಾಗಿ ಮಾಡ್ಲಿ, ನಾನು ಯಾವ ಸಿಎಂಗೂ ಕಮ್ಮಿಯಿಲ್ಲ ; ಎಂಟಿಬಿ ನಾಗರಾಜ್ದೇವರಾಜ ಅರಸು ಹೆಸರು ಅಜರಾಮರವಾಗಿ ಉಳಿಸಲು ಶ್ರಮಿಸುತ್ತೇನೆ. ನೀವು ಒಂದು ಪಟ್ಟಿ ಕೊಡಿ ಅದೇಲ್ಲವನ್ನು ಮಾಡ್ತಿನಿ. ನನಗೆ 6 ತಿಂಗಳು ಸಮಯ ಕೊಡಿ ಸಾಕು ವಿಶ್ವನಾಥ್ ಕಂಡ ಕನಸನ್ನ ನನಸು ಮಾಡುತ್ತೇನೆ ಎಂದರು
First published: November 25, 2019, 10:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading