ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಯತ್ನ - ನೂರಾರು ರೈತರನ್ನು ವಶಕ್ಕೆ ಪಡೆದ ಪೊಲೀಸರು

ಚನ್ನಮ್ಮ ವೃತ್ತದಲ್ಲಿ ಕರವೇ, ರೈತ ಸಂಘ, ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ಆರಂಭಿಸಲಾಯಿತು. ರಸ್ತೆ ತಡೆದು ಸಂಚಾರವನ್ನು ರೈತರು ನಿಲ್ಲಿಸಿದ್ರು. ಚನ್ನಮ್ಮ ವೃತ್ತದಲ್ಲಿ ಟೈಯರ್​​ಗೆ ಬೆಂಕಿ ಹಚ್ಚಲು ರೈತರು ಯತ್ನಿಸಿದ್ದರು. ಆಗ ಪೊಲೀಸರು ಹಾಗೂ ರೈತರ ನಡುವೆ ಕೆಲ ಕಾಲ ತಳ್ಳಾಟ, ನೂಕಾಟ ನಡೆಯಿತು.

news18-kannada
Updated:September 28, 2020, 4:59 PM IST
ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಯತ್ನ - ನೂರಾರು ರೈತರನ್ನು ವಶಕ್ಕೆ ಪಡೆದ ಪೊಲೀಸರು
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ(ಸೆ.28): ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೆಳಗಾವಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ಕ್ರಮವನ್ನು ರೈತರು  ತೀವ್ರವಾಗಿ ಖಂಡಿಸಿದರು. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಕೊನೆಗೆ  ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಯತ್ನ ನಡೆಯಿತು. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ತಳ್ಳಾಟ, ನೂಕಾಟ ನಡೆದು, ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿಯಲ್ಲಿ ಇಂದು ಅನ್ನದಾತನ ಆಕ್ರೋಶ ಮುಗಿಲು ಮುಟ್ಟಿತ್ತು. ರೈತರ ಹೋರಾಟಕ್ಕೆ ವಿವಿಧ ಸಂಘಟನೆಗಳು ಸಾಥ್ ನೀಡಿದ್ದು, ಬೃಹತ್ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯಲ್ಲಿ ಬೆಳಗ್ಗೆ 7 ಗಂಟೆಗೆ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಬಸ್ ನಿಲ್ದಾಣದ ಮುಂಭಾಗದಲ್ಲಿ ಧರಣಿ ಮಾಡಿದ್ದರು. ಇದೇ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಬಸ್ ಸಂಚಾರನ್ನ ಸ್ಥಗಿತಗೊಳಿಸಲಾಗಿತ್ತು. ಮುಂಜಾನೆ ಸಮಯದಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿ, ಧಾರವಾಡ ಸೇರಿ ಅಂತರಾಜ್ಯ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಟ ನಡೆಸಿದ್ರು.

ಚನ್ನಮ್ಮ ವೃತ್ತದಲ್ಲಿ ಕರವೇ, ರೈತ ಸಂಘ, ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ಆರಂಭಿಸಲಾಯಿತು. ರಸ್ತೆ ತಡೆದು ಸಂಚಾರವನ್ನು ರೈತರು ನಿಲ್ಲಿಸಿದ್ರು. ಚನ್ನಮ್ಮ ವೃತ್ತದಲ್ಲಿ ಟೈಯರ್​​ಗೆ ಬೆಂಕಿ ಹಚ್ಚಲು ರೈತರು ಯತ್ನಿಸಿದ್ದರು. ಆಗ ಪೊಲೀಸರು ಹಾಗೂ ರೈತರ ನಡುವೆ ಕೆಲ ಕಾಲ ತಳ್ಳಾಟ, ನೂಕಾಟ ನಡೆಯಿತು. ನಂತರ ಬಾರಕೋಲು ಚಳವಳಿ, ಬೊಬ್ಬೆ ಚಳವಳಿ, ಕಸದ ಪೊರಕೆಯನ್ನು ತೋರಿಸುವ ಮೂಲಕ ರೈತರು ಸರ್ಕಾರ ವಿರುದ್ಧ ಘೋಷಣೆ ಕೂಗಿದ್ದರು.

ಇಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ ಹೋರಾಟಗಾರರು ನಂತರ ಸುವರ್ಣ ಸೌಧಕ್ಕೆ ಕಾಲ್ನಡಿಗೆ ಮೂಲಕ ಮುತ್ತಿಗೆ ಹಾಕೋ ಹೋರಾಟವನ್ನು ಆರಂಭಿಸಿದ್ರು. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಹೋರಾಟಗಾರರನ್ನು ತಡೆದು ಪೊಲೀಸರು ಅನೇಕರ ರೈತರನ್ನು ಬಂಧಿಸಿದ್ದರು. ಈ ವೇಳೆಯಲ್ಲಿ ಪೊಲೀಸರು ಹಾಗೂ ಹೋರಾಟಗಾರರ ನಡುವೆ ವಾಗ್ದಾದ ನಡೆಯಿತು.

ಇದನ್ನೂ ಓದಿ: ಸ್ಯಾಂಡಲ್​​ವುಡ್​​ ಡ್ರಗ್ಸ್ ಕೇಸ್​​​: ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ, ಜೈಲೇ ಗತಿ

ಕೆಲ ರೈತರು ಸುವರ್ಣ ಸೌಧದ ಬಳಿ ಧರಣಿ ನಡೆಸಲು ಮುಂದಾಗಿದ್ದರು. ರೈತ ಮಹಿಳೆ ಜಯಶ್ರೀ ಗುರಣ್ಣವರ್ ಅಸ್ವಸ್ಥಗೊಂಡರು. ನಂತರ ಪೊಲೀಸರನ್ನು ವಶಕ್ಕೆ ಪಡೆದರು. ಪೊಲೀಸರ ನಡೆಗೆ ಬೇಸತ್ತ ರೈತರು ಕಣ್ಣಿರು ಹಾಕಿದ್ದರು. ಬೆಳಗಾವಿಯಲ್ಲಿ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದ್ರು. ಆದರೇ ನಿರಂತರವಾಗಿ ರೈತರ ಸುವರ್ಣ ಸೌಧದ ಬಳಿ ಆಗಮಿಸುತ್ತಿದ್ದು, ತೀವ್ರ ಪ್ರತಿಭಟನೆ ನಡೆಸುವ  ಮೂಲಕ ಗಮನ ಸೆಳೆದಿದ್ದಾರೆ.
Published by: Ganesh Nachikethu
First published: September 28, 2020, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading