ಹುಬ್ಬಳ್ಳಿ (ಜು. 21); ಹೂವಿನ ಸೊಬಗಿಗೆ ಮತ್ತೊಂದು ಸಾಟಿಯಿಲ್ಲ. ಅದ್ರಲ್ಲಿಯೂ ಬ್ರಹ್ಮ ಕಮಲ ಅರಳುತ್ತೆ ಅಂದ್ರೆ ಜನ ನಿದ್ದೆ ಕಾದು ನೋಡ್ತಾರೆ. ಅರಳಿದ ಸೊಬಗನ್ನ ಕಣ್ತುಂಬಿಕೊಳ್ತಾರೆ. ಹುಬ್ಬಳ್ಳಿಯಲ್ಲಿ (Hubballi) ಏಕ ಕಾಲಕ್ಕೆ ನೂರಾರು ಬ್ರಹ್ಮ ಕಮಲ ಅರಳಿ ನಿಂತು ತನ್ನ ಸೊಬಗಿನಿಂದ ಕಣ್ಮನ ಸೆಳೆಯಿತು. ರಾತ್ರಿ ರಾಣಿ ಎಂದೇ ಖ್ಯಾತಿ ಪಡೆದಿರುವ ಬ್ರಹ್ಮ ಕಮಲ (Brahma Kamala) ರಾತ್ರಿ 10 ಗಂಟೆಯ ಬಳಿಕ ಅರಳಿ ಬೆಳಗಾಗುವುದರ ಒಳಗೆ ಕಮರಿ ಹೋಗುವ ಅತ್ಯಾಕರ್ಷಕ ಹೂವು. (Flowers) ಈ ಹೂವು ಹುಬ್ಬಳ್ಳಿಯಲ್ಲಿ ಕಂಗೊಳಿಸುತ್ತಿದೆ.
ಹೌದು ರಾತ್ರಿ ರಾಣಿ ಎನ್ನುವ ಹೂವಿನ ಗಿಡದ ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ. ಸೌಂದರ್ಯಕ್ಕಿಂತಲೂ ಧಾರ್ಮಿಕ ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು. ಮಹಿಳೆಯರಿಗೆ ಈ ಹೂವು ಪೂಜ್ಯನೀಯ. ಇಂತಹ ಹೂವು ಹುಬ್ಬಳ್ಳಿಯ ನವನಗರದ ನಿವಾಸಿ ಲಲಿತಾ ಹೂಗಾರ ಎಂಬುವವರ ಮನೆಯ ಆವರಣದಲ್ಲಿ ಅರಳಿದ್ದು, ನಿಜಕ್ಕೂ ಜನರು ನೋಡಲು ಆಗಮಿಸುತ್ತಿದ್ದಾರೆ.
ರಾತ್ರಿ ರಾಣಿಗೆ ವಿಶೇಷ ಪೂಜೆ
ಇನ್ನು ರಾತ್ರಿಯ ವೇಳೆ ಈ ಹೂವು ಬಿಟ್ಟಾಗ ಮನೆಯವರೆಲ್ಲ ಸೇರಿ ಪೂಜೆ ಮಾಡುತ್ತಾರೆ. ಬ್ರಹ್ಮ ಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ, ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ನಂಬಿಕೆ ಇದೆ. ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ ಕಮಲಭವ ಅಂದರೆ, ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮಕಮಲ ಎನ್ನುವ ಹೆಸರು ಬಂದಿದೆ. ಕೇವಲ ವರ್ಷಕೊಮ್ಮೆ ಅರಳುವ ಈ ಹೂವು ರಾತ್ರಿ ವೇಳೆ ಅರಳಿ ರಾತ್ರಿಯೇ ಬಾಡಿಹೋಗುತ್ತೆ. ಹೂವುಗಳಲ್ಲೇ ಈ ಥರದ ಸ್ವಭಾವವನ್ನು ತೋರಿಸುವ ಹೂವು ಇದೊಂದೇ.
ಇದನ್ನೂ ಓದಿ: Elephant: ಕಾಡಾನೆಗಳಿಗೆ ಆಟ, ರೈತರಿಗೆ ಪ್ರಾಣ ಸಂಕಟ! ಆನೇಕಲ್ ಭಾಗದಲ್ಲಿ ಗಜಪಡೆಯಿಂದ ಆತಂಕ
ಹೂವು ಅರಳೋದು ಅದೃಷ್ಟದ ಸಂಕೇತ
ಇಂಥ ಅಪರೂಪದ ಹೂವು ಬ್ರಹ್ಮ ಕಮಲದ ಹೂವು ಅರಳೋದು ಅದೃಷ್ಟದ ಸಂಕೇತ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಈ ಹೂವು ಮೊದಲ ಬಾರಿಗೆ ಅರಳಿದಾಗ 5 ಜನ ಮುತ್ತೈದೆಯರಿಗೆ ಉಡಿತುಂಬಿ ಸತ್ಕರಿಸುವ ಸಂಪ್ರದಾಯ ಕೂಡ ಉತ್ತರ ಕರ್ನಾಟಕದಲ್ಲಿದೆ. ಸಾಮಾನ್ಯವಾಗಿ ಯಾವುದೇ ಗಿಡ ಹೂ ಬಿಡಬೇಕಾದರೆ ಮೊದಲು ಬೇರು, ನಂತರ ಕಾಂಡ ಬೆಳೆದು ಆಮೇಲೆ ಎಲೆ, ಹೂವು ಬಿಡುತ್ತೆ. ಎಲ್ಲ ಗಿಡಗಳು ಬೇರು, ಕಾಂಡ ಅಥವಾ ಬೀಜದಿಂದ ಬೆಳೆದರೆ ಬ್ರಹ್ಮ ಕಮಲ ಎಲೆಯಿಂದಲೇ ದೊಡ್ಡದಾಗುತ್ತದೆ.
ಗಿಡದ ಎಲೆಯನ್ನು ನೆಟ್ಟರೆ ಗಿಡವಾಗಿ ಬೆಳೆಯುತ್ತದೆ.
ಇದನ್ನೂ ಓದಿ: Elephant: ನದಿಯಲ್ಲಿ ಮುಳುಗುತ್ತಿದ್ದ ಮಾವುತನ ಪಾಲಿಗೆ ಹೀರೋ ಆದ ಆನೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ
ಅರಳಿನಿಂತ ಬ್ರಹ್ಮ ಕಮಲ
ಒಂದೂವರೆ ವರ್ಷದಲ್ಲಿ ಹೂವು ಬಿಡಲು ಆರಂಭವಾಗುತ್ತದೆ. ಬ್ರಹ್ಮ ಕಮಲ ಹೂವು ಬಿಡುವುದು ಜೂನ್- ಜುಲೈ ತಿಂಗಳಿನಲ್ಲಿ, ಒಂದೇ ಒಂದು ಎಲೆಯಿಂದ ಗಿಡವಾಗಿ ಬೆಳೆಯುತ್ತಾ ತನ್ನ ಮೈ ತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಒಮ್ಮಲೆ ಹತ್ತು ಹದಿನೈದು ಮೊಗ್ಗುಗಳು ಹೂವಾಗಿ ಅರಳುವುದೇ ವಿಸ್ಮಯ. ಆದರೆ ಹೂಗಾರ ಅವರ ಮನೆಯ ಮುಂದೆ ಇರೋ ಬ್ರಹ್ಮಕಮಲ ಗಿಡ ಮಾತ್ರ ಬೃಹತ್ ಗಾತ್ರದ್ದಾಗಿದ್ದ, ಏಕ ಕಾಲಕ್ಕೆ ನೂರಾರು ಹೂಗಳು ಅರಳಿಸಿದ್ದರಿಂದ ಅದರ ಸೊಬಗಿನಿಂದ ಹುಣ್ಣಿಮೆ ದಿನದಂದು ಕಂಗೊಳಿಸೋ ನಕ್ಷತ್ರಗಳಂತೆ ಕಾಣಿಸುತ್ತಿದ್ದವು. ಅಕ್ಕ-ಪಕ್ಕದ ಜನರೂ ಈ ಹೂಗಳನ್ನು ನೋಡಿ ಕಣ್ತುಂಬಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ