Mysuru: ಒಂದೇ ತಿಂಗಳಲ್ಲಿ ಮೂರೂವರೆ ಕೋಟಿ ಒಡತಿ ಚಾಮುಂಡೇಶ್ವರಿ

ಮೈಸೂರು (ಜು.26): ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಬಂದ ಭಕ್ತರು ತಾಯಿ ಚಾಮುಂಡಿ ದರ್ಶನ ಪಡೆದು ಹುಂಡಿಗೆ ಕಾಣಿಕೆ ಅರ್ಪಿಸಿ ಹೋಗಿದ್ದಾರೆ. ಒಂದೇ ತಿಂಗಳಲ್ಲಿ ಚಾಮುಂಡೇಶ್ವರಿ ದೇಗುಲಕ್ಕೆ ಕಾಣಿಕೆ ಹರಿದು ಬಂದಿದೆ.

ನಾಡದೇವತೆ ಚಾಮುಂಡೇಶ್ವರಿ

ನಾಡದೇವತೆ ಚಾಮುಂಡೇಶ್ವರಿ

  • Share this:
mysore chamundeshwari temple vardhanthotsava in chamundi hill
ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ದಾಖಲೆ ಆದಾಯ ಹರಿದು ಬಂದಿದೆ. ದೇವಸ್ಥಾನದ ಇತಿಹಾಸಲ್ಲೇ ಒಂದೇ ತಿಂಗಳಲ್ಲಿ ಅತಿ ಹೆಚ್ಚು ಕಾಣಿಕೆ ಸಂಗ್ರವಾಗಿದೆ.


ashada Shukravara special decoration in Mysuru Chamundeshwari Temple
2 ಕೋಟಿ, 33 ಲಕ್ಷದ , 51 ಸಾವಿರದ 270 ರೂಪಾಯಿ ಹುಂಡಿ ಕಾಣಿಕೆ ಸಂದಾಯವಾಗಿದೆ. 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂದಾಯ ಮಾಡಲಾಗಿದೆ. 1 ಕೋಟಿ, 3 ಲಕ್ಷದ, 69 ಸಾವಿರದ ,270 ರೂಪಾಯಿ ಪ್ರವೇಶದ ಟಿಕೆಟ್ ನಿಂದ ಬಂದಿದೆ.


july 20th mysore chamundeshwari temple vardhanthotsava
ಈ ಬಾರಿಯ ಆಷಾಢ ಮಾಸದ ಆದಾಯ ಹಿಂದಿನ ಎಲ್ಲಾದ ದಾಖಲೆಯನ್ನು ಮೀರಿಸಿದೆ. ಇಂದು ಚಾಮುಂಡಿಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.


ದಿನವಿಡಿ 250 ಮಂದಿಯಿಂದ ಹುಂಡಿ ಎಣಿಕೆ ಕಾರ್ಯ ನಡೆದಿದೆ. ವಿದೇಶಿಯರಿಂದಲೂ ಹುಂಡಿಗೆ ಕಾಣಿಕೆ ಹರಿದು ಬಂದಿದೆ.


mysore chamundeshwari temple vardhanthotsava in chamundi hill
ರದ್ದಾದ 500, 1000 ಮುಖ ಬೆಲೆಯ ನೋಟುಗಳು ಹುಂಡಿ ಎಣಿಕೆ ವೇಳೆ ಸಿಕ್ಕಿದೆ. ಒಂದು ಲಕ್ಷಕ್ಕೂ ಅಧಿಕ ಬೆಲೆಯ ರದ್ದಾದ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ.


ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಹುಂಡಿ ಕಾಣಿಕೆ ಹಣ ಚಾಮುಂಡಿಬೆಟ್ಟದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಸಂದಾಯ ಮಾಡಲಾಗಿದೆ.


ಮೈಸೂರು-ಸಾಂಸ್ಕ್ರತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಜುಲೈ 20 ರಂದು ನಾಡ ದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ವರ್ಧಂತೋತ್ಸವ  ಅದ್ಧೂರಿಯಾಗಿ ನಡೆಯಿತು. ಚಿನ್ನದ ಪಲ್ಲಕ್ಕಿ ಉತ್ಸವ ಈ ಬಾರಿಯ ಅದ್ಧೂರಿಯಾಗಿ ನಡೆಯಿತು.
Published by:Pavana HS
First published: