ಹುಣಸಮಾರನಹಳ್ಳಿ ಮಠದ ಸ್ವಾಮಿ ರಾಸಲೀಲೆ ಪ್ರಕರಣ: ಏಳು ಮಂದಿ ವಿರುದ್ಧ ಎಫ್ಐಆರ್


Updated:February 13, 2018, 6:34 PM IST
ಹುಣಸಮಾರನಹಳ್ಳಿ ಮಠದ ಸ್ವಾಮಿ ರಾಸಲೀಲೆ ಪ್ರಕರಣ: ಏಳು ಮಂದಿ ವಿರುದ್ಧ ಎಫ್ಐಆರ್
ದಯಾನಂದ ಸ್ವಾಮಿ

Updated: February 13, 2018, 6:34 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಫೆ. 13): ರಾಸಲೀಲೆಯ ಸಿಡಿ ಸಿಕ್ಕಿದೆ ಎಂದು ಹೇಳಿ ತನ್ನಿಂದ 90 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಏಳು ಜನರ ವಿರುದ್ಧ ಹುಣಸಮಾರನಹಳ್ಳಿಯ ಮಾದೇವಪುರ ಜಂಗಮ ಮಠದ ದಯಾನಂದ ಸ್ವಾಮಿ ಅವರು ಆರೋಪಿಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದಯಾನಂದ ಸ್ವಾಮಿ ದೂರು ದಾಖಲಿಸಿದ್ದಾರೆ. ಸೂರ್ಯ, ದರ್ಮೇಂದ್ರ, ಹಿಮಚಲಪತಿ, ಮಹೇಶ್​, ಪ್ರವೀಣ್​, ಬಸವರಾಜಪ್ಪ ಮತ್ತು ಶಿವಕುಮಾರ್ ಈ ಏಳ್ವರ​ ವಿರುದ್ದ ಐಪಿಸಿ ಸೆಕ್ಷನ್ 384, 341, 506, 420, 419, 149 ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ಯುವತಿಯೊಬ್ಬಳ ಜೊತೆ ತಾವಿರುವ ವಿಡಿಯೋ ಸಿಡಿ ಸಿಕ್ಕಿದೆ ಎಂದು ದಯಾನಂದ ಸ್ವಾಮಿ ಅವರನ್ನು ಸೂರ್ಯ ಎಂಬಾತ ಹೆದರಿಸಿರುತ್ತಾರೆ. ಸಿಡಿ ಬಿಡುಗಡೆ ಮಾಡಬಾರದೆಂದರೆ 5 ಕೋಟಿ ರೂ ಹಣ ಕೊಡಿ ಎಂದು ಆತ ಬೇಡಿಕೆ ಮುಂದೊಡ್ಡಿರುತ್ತಾನೆ. ಹಣ ಕೊಡದಿದ್ದರೆ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾನೆ. 2014ರ ಜನವರಿ 1ರಂದು ಈ ಘಟನೆ ನಡೆದಿರುತ್ತದೆ. ಬ್ಲ್ಯಾಕ್​ಮೇಲ್ ತಂತ್ರಕ್ಕೆ ಬಗ್ಗಿದ ಸ್ವಾಮೀಜಿ ಎರಡು ಬಾರಿ 45 ಲಕ್ಷ ರೂಗಳನ್ನು ಆರೋಪಿಗಳಿಗೆ ನೀಡಿರುತ್ತಾರೆ.

ಪ್ರಕರಣ ದಾಖಲಿಸಿಕೊಂಡಿರುವ ಜಿಕ್ಕಜಾಲ ಠಾಣೆ ಪೊಲೀಸರು ಏಳು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಕಳೆದ ವರ್ಷ ಆರೋಪಿಗಳು ಈ ವಿಡಿಯೋ ಬಿಡುಗಡೆ ಮಾಡಿ, ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಹನಿಟ್ರ್ಯಾಪ್ ಮಾಡಿ ಸ್ವಾಮೀಜಿಯನ್ನು ಖೆಡ್ಡಾಗೆ ಕೆಡವಲಾಗಿತ್ತೆಂಬ ಮಾತುಗಳು ಕೇಳಿಬಂದಿದ್ದವು. ಅದಾದ ಬೆನ್ನಲ್ಲೇ, ಶ್ರೀಶೈಲ ಮಠಾಧೀಶರು ದಯಾನಂದ ಸ್ವಾಮಿ ಅವರನ್ನು ಮಠದಿಂದ ಉಚ್ಛಾಟಿಸಿದ್ದರು. ಹುಣಸಮಾರನಹಳ್ಳಿಯ ಮಠವು ಶ್ರೀಶೈಲ ಮಠದ ಅಧೀನಕ್ಕೆ ಬರುತ್ತದೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ