ಮಾನವೀಯತೆ ಮರೆತ ಜನರು ; ಅಪಘಾತದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಯುವಕ

ಬೈಕ್ ಸವಾರ  ಅಪಘಾತದಲ್ಲಿ ಗಾಯಗೊಂಡಿದ್ದರು ಆತನ ಸಹಾಯಕ್ಕೆ ಬರದೇ ವಿಡಿಯೋ ಚಿತ್ರೀಕರಣ ಮಾಡುವುದರಲ್ಲಿ ತಲ್ಲೀನರಾಗಿದ್ದರು ಎನ್ನಲಾಗಿದೆ.

G Hareeshkumar | news18india
Updated:December 7, 2018, 5:48 PM IST
ಮಾನವೀಯತೆ ಮರೆತ ಜನರು ; ಅಪಘಾತದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಯುವಕ
ಮೃತಪಟ್ಟ ಯುವಕ
  • Share this:
- ಸಂತೋಷ್ ಕೋಣ್ಣೂರ

ಗದಗ (ಡಿ.07) : ಬೈಕ್ ಸಾವರನೊಬ್ಬ ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲೇ ಒದ್ದಾಡುತ್ತಿದ್ದರೂ ಜನರು ಆತನನ್ನು ಆಸ್ಪತ್ರೆಗೆ ದಾಖಲಿಸದೆ ಮಾನವೀಯತೆಯನ್ನು ಮರೆತ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

ಗಾಯಗೊಂಡ ಸವಾರನನ್ನುರವಿ ಚವ್ಹಾಣ ಎಂದು ಗುರುತಿಸಲಾಗಿದೆ. ಬೈಕ್ ಸವಾರ  ಅಪಘಾತದಲ್ಲಿ ಗಾಯಗೊಂಡಿದ್ದರು ಆತನ ಸಹಾಯಕ್ಕೆ ಬರದೇ ವಿಡಿಯೋ ಚಿತ್ರೀಕರಣ ಮಾಡುವುದರಲ್ಲಿ ತಲ್ಲೀನರಾಗಿದ್ದರು ಎನ್ನಲಾಗಿದೆ.


ಸಮೀಪದಲ್ಲೆ ಆಸ್ಪತ್ರೆ ಇದ್ದರೂ ಸಮಯಕ್ಕೆ ಸರಿಯಾಗಿ ಬಾರದ ಆಂಬ್ಯುಲೆನ್ಸ್ ವಿರುದ್ಧ ಅದೇ ಸಾರ್ವಜನಿಕರು ಕಿಡಿಕಾರಿದರು.  ಕಳೆದ 15 ದಿನಗಳಿಂದ ಕೆಟ್ಟು ನಿಂತಿರುವ ಅಂಬ್ಯುಲೆನ್ಸ್ ಹಾಗೂ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.


ನಂತರ ಕ್ರೂಸರ್ ವಾಹನದಲ್ಲಿ ಗಜೇಂದ್ರಗೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಗಾಯಾಳು ಯುವಕನ ಪರಸ್ಥಿತಿ ಚಿಂತಾಜನಕವಾದ್ದರಿಂದ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸಗೆ ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸುವ ಮಾರ್ಗದಲ್ಲಿ ಗಾಯಾಳು ಸಾವನ್ನಪ್ಪಿದ ಎನ್ನಲಾಗಿದೆ

First published:December 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading