ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ ; ಸಂತ್ರಸ್ಥರ ಕುಟುಂಬಕ್ಕೆ 78 ಲಕ್ಷ ಬಿಡುಗಡೆ

ಮೊದಲ  ಕಂತಿನ ಪರಿಹಾರವಾಗಿ 78 ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಾಗಿದೆ. ಪ್ರತಿ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ನೀಡಲಾಗುತ್ತಿದೆ. ನೆರೆಯಿಂದ 319 ಕುಟುಂಬಗಳು ಸಂತ್ರಸ್ಥರಾಗಿದ್ದಾರೆ.

news18-kannada
Updated:November 26, 2019, 9:47 PM IST
ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ ; ಸಂತ್ರಸ್ಥರ ಕುಟುಂಬಕ್ಕೆ 78 ಲಕ್ಷ ಬಿಡುಗಡೆ
ಹುಳಿಮಾವು ಕೆರೆ ಪ್ರದೇಶ
  • Share this:
ಬೆಂಗಳೂರು(ನ.26): ಹುಳಿಮಾವು ಬಳಿ ಕೆರೆ ಕೋಡಿ ಒಡೆದು ಮನೆ ಕಳೆದುಕೊಂಡ ಸಂತ್ರಸ್ತರ ಕುಟುಂಬಕ್ಕೆ ಮೊದಲ ಕಂತಿನ ಪರಿಹಾರವಾಗಿ ರಾಜ್ಯ ಸರ್ಕಾರ ತಲಾ 50 ಸಾವಿರದಂತೆ ಒಟ್ಟು 78 ಕೋಟಿ ರೂಪಾಯಿಯನ್ನುಬಿಡುಗಡೆ ಮಾಡಿದೆ. 

ಮೊದಲ  ಕಂತಿನ ಪರಿಹಾರವಾಗಿ 78 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.  ಪ್ರತಿ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ನೀಡಲಾಗುತ್ತಿದೆ. ನೆರೆಯಿಂದ 319 ಕುಟುಂಬಗಳು ಸಂತ್ರಸ್ಥರಾಗಿದ್ದಾರೆ. 900 ಮನೆಗಳಿಗೆ ಹಾನಿಯಾಗಿದೆ. ಅವರೆಲ್ಲರಿಗೂ ಪರಿಹಾರ ವಿತರಣೆಗೆ ಬಗ್ಗೆ ಕ್ರಮ ಕೈಕೊಳ್ಳಲಾಗುವುದು ಎಂದು ಸರ್ಕಾರದಿಂದ ಪರಿಹಾರ ಬಿಡುಗಡೆಯಾದ ಬಗ್ಗೆ ಬಿಬಿಎಂಪಿ ಕಮಿಷನರ್  ಅನಿಲ್ ಕುಮಾರ್ ಅಧಿಕೃತ  ಮಾಹಿತಿ ನೀಡಿದ್ದಾರೆ.

ಹುಳಿಮಾವು ಕೆರೆ ಪ್ರದೇಶಕ್ಕೆ ಸಿಎಂ ಬಿಎಸ್​ವೈ ಭೇಟಿ

ಮೊನ್ನೆ ಬೆಂಗಳೂರಿನ ಹುಳಿಮಾವು ಕೆರೆ ಏರಿ ಒಡೆದು ಅನೇಕ ಮನೆಗಳು ಜಲಾವೃತವಾಗಿದ್ದವು. ಅನೇಕ ಜನರು ನಿರಾಶ್ರಿತರಾಗಿದ್ದರು. ಇಂದು ಬೆಳಿಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪ ಕಾಳಜಿ ಕೇಂದ್ರಕ್ಕೆ ತೆರಳಿ, ಮನೆ-ಮಠ ಕಳೆದುಕೊಂಡ ನಿರಾಶ್ರಿತರನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು. ಈ ಅನಾಹುತದಿಂದ ಸಂತ್ರಸ್ತರಾದವರಿಗೆ ಇಲ್ಲಿನ ಕಾರ್ಪೋರೇಟರ್​ ನೆರವು ನೀಡಿದ್ದಾರೆ. 319 ಬಡವರ ಮನೆಗಳು, ಒಟ್ಟು 630 ಮನೆಗಳು ಹಾನಿಯಾಗಿವೆ. ಮನೆ ಕಳೆದುಕೊಂಡ ನಿರಾಶ್ರಿತರ ಖಾತೆಗಳಿಗೆ  50 ಸಾವಿರ ಹಣ ಜಮಾ ಮಾಡಲಾಗುವುದು ಎಂದು ಸಿಎಂ ಬಿಎಸ್​ವೈ ತಿಳಿಸಿದರು.

ಇದನ್ನೂ ಓದಿ :  ಕೆರೆ ಕೋಡಿ ಒಡೆದವರನ್ನು ಬಿಡುವುದಿಲ್ಲ ಎಂದ ಆರ್. ಅಶೋಕ್; ಗುತ್ತಿಗೆದಾರ ಕಾರ್ತಿಕ್ ಮೇಲೆ ನೆಟ್ಟ ಅನುಮಾನ

ಹೊರವಲಯದಲ್ಲಿರುವ ಹುಳಿಮಾವು ಕೆರೆಯ ಕಟ್ಟೆ ಒಡೆದು ಸುತ್ತಲಿನ ಸ್ಥಳಗಳು ಮುಳುಗಡೆಯಾದ ಘಟನೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಮಳೆ ಇಲ್ಲದಿದ್ದರೂ ಕೆರೆಯ ಕೋಡಿ ಒಡೆದು ನೀರು ಹೊರಬಂದಿದ್ದು ಅಚ್ಚರಿ ಮೂಡಿಸಿತ್ತು. ಯಾರೋ ಅಪರಿಚಿತ ವ್ಯಕ್ತಿಗಳು ಕೆರೆ ಕೋಡಿಯ ಮಣ್ಣು ತೆಗೆದುಹಾಕಿದ್ದರಿಂದ ನೀರು ಹೊರ ನುಗ್ಗಿರುವುದು ತಿಳಿದುಬಂದಿದೆ. 250ಕ್ಕೂ ಹೆಚ್ಚು ಮನೆಗಳು ನೀರಿನಿಂದ ಮುಳುಗಿಹೋಗಿವೆ. ಈ ಎಲ್ಲಾ ಕುಟುಂಬಗಳು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತಾಗಿದೆ.
First published:November 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ