ಬೆಂಗಳೂರಿನಲ್ಲಿ ಪ್ರತಿ ವರ್ಷ ಒಂದೇ ಸಮಸ್ಯೆ. ಮಳೆಗಾಲ ಬಂದ್ರೆ ಸಾಕು ಬೆಂಗಳೂರಿನ ಜನರಿಗೆಲ್ಲ ಆತಂಕ ಸೃಷ್ಟಿಯಾಗುತ್ತದೆ. ಈ ವರ್ಷ ಸಪ್ಟೆಂಬರ್ 5 ರಿಂದ ಸುರಿದ ಭಾರಿ ಮಳೆಯಿಂದ (Rain) ಸೃಷ್ಟಿಯಾದ ಅವಾಂತರಗಳು ಒಂದೆರಡಲ್ಲ. ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ (Loss) ಉಂಟಾಗಿದೆ. ಬೆಂಗಳೂರಿನ(Bangalore) ಕೆಲವು ಪ್ರದೇಶಗಳಲ್ಲಂತೂ ಮನೆಯೊಳಗೆ ನೀರುತುಂಬಿ ಮನೆಯ ಎಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ಅದರಲ್ಲೂ ಮುಖ್ಯವಾಗಿ ವಾಹನಗಳಿಗೆ (Vehicle)ನೀರು ತಗಲಿ ಎಷ್ಟೋ ವಾಹನಗಳು ಕೆಟ್ಟುನಿಂತಿವೆ. ಪ್ರವಾಹದ (Flood) ನಂತರ ಹಲವಾರು ಜನರು ತಮ್ಮ ವಾಹನಗಳಿಗೆ ವಿಮೆ ಪಡೆಯಲು (People) ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತರಕ್ಕೆ ಎಷ್ಟೋ ಮನೆಗಳು ಜಲಾವೃತಗೊಂಡಿದ್ದವು. ಇನ್ನೆಷ್ಟೋ ಕಡೆ ಓಡಾಟಕ್ಕೆ ವಾಹನದ ಬದಲು ಬೋಟ್ ಉಪಯೋಗಿಸುವಂತಾಗಿತ್ತು. ಸತತ ಮೂರು ದಿನಗಳ ಕಾಲ ಎಲ್ಲರೂ ಸಂಕಷ್ಟದಲ್ಲೇ ಬದುಕು ನಡೆಸುವಂತಾಗಿತ್ತು.
ಮಳೆತಂದ ಅವಾಂತರ:
ಭಾರತದ ಟೆಕ್ ಹಬ್ ಬೆಂಗಳೂರಿನಲ್ಲಿ ಪ್ರವಾಹದ ನೀರು ಇಳಿಮುಖವಾಗುತ್ತಿದ್ದಂತೆ ಹಾನಿಗೊಳಗಾದ ಕಾರು ಮತ್ತು ಆಸ್ತಿಯ ವಿಮೆ ಪಡೆಯಲು ಅಂದಾಜಿನ ಪ್ರಕಾರ ಹಲವಾರು ಕೋಟಿಗಳಷ್ಟು ಹಣ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 5 ರಿಂದ ಮೂರು ದಿನಗಳ ಭಾರೀ ಮಳೆಯಿಂದಾಗಿ ಹಲವಾರು ವಾಹನಗಳು ನೀರಿನಲ್ಲಿ ಮುಳುಗಿ ಕೆಟ್ಟು ನಿಂತಿವೆ.
ಹಾನಿಗೊಳಗಾದ ಕಾರುಗಳು:
ಭಾರೀ ಮಳೆಯ ಸಮಯದಲ್ಲಿ ನನ್ನ ಕಾರನ್ನು ನೆಲಮಾಳಿಗೆಯಲ್ಲಿ ನಿಲ್ಲಿಸಲಾಗಿತ್ತು. ಆಗ ಕಾರು ನೀರಿಲ್ಲಿ ಮುಳುಗಿ ಹಾನಿಗೊಳಗಾಗಿತ್ತು. ವಿಮಾ ಸಿಬ್ಬಂದಿಗಳು ಕಾರು ತಪಾಸಣೆ ಮಾಡಲು ನಾಕ್ಕು ದಿನ ತೆಗೆದುಕೊಂಡರು. ವಿಮೆಗೆ ಅರ್ಜಿಸಲ್ಲಿಸುವ ಮೊದಲು ಕಾರನ್ನು ಗ್ಯಾರೇಜಿಲ್ಲಿ ಪರಿಶೀಲನೆ ಮಾಡಲಾಗಿತ್ತು ಎಂದು 38 ವರ್ಷದ ಗೃಹಿಣಿ ಪ್ರಭಾ ದೇವ್ ತಿಳಿಸಿದ್ದಾರೆ. ತಪಾಸಣೆ ಮಾಡಲು ಬಂದವರು ಕಾರನ್ನು ರಿಪೇರಿ ಮಾಡಲು ಬರುವುದಿಲ್ಲ ಈ ವಾಹನ ದುರಸ್ಥಿ ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಆದರೆ ಅವರ ಹತ್ತಿರದ ಗ್ಯಾರೇಜ್ ಅವರನ್ನು ಕೇಳಿದಾಗ ಈ ವಾಹನವನ್ನು ಮತ್ತೆ ಚಲಿಸುವಂತೆ ಮಾಡಬಹುದು ಎಂದಿದ್ದಾರಂತೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಸಂಜೆ ವೇಳೆ ಮಳೆ ಅಬ್ಬರ; ಧರೆಗೆ ಉರುಳಿದ ನಾಲ್ಕು ಮರ
ವಿಳಂಬಗೊಂಡ ವಾಹನಗಳ ಪರೀಕ್ಷೆ:
ವಿಮಾ ಪೂರೈಕೆದಾರರು ವಾಹನದ ಮಾಲಿಕರು ಸಲ್ಲಿಸಿದ ವಿಮೆ ಅರ್ಜಿಯ ಎರಡನೇ ಹಂತದ ತಪಾಸಣೆಯನ್ನು ಮುಂದಿನ ಎರಡು ವಾರಗಳಲ್ಲಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಬಿಎಂಡಬ್ಲ್ಯು, ಮರ್ಸಿಡಿಸ್ ಮತ್ತು ಆಡಿಸ್‌ನಂತಹ ಪ್ರೀಮಿಯಂ ವಿಭಾಗದ ವಾಹನಗಳದ್ದೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. ಈ ಕಂಪನಿಯ ವಾಹನಗಳ ಮಾಲಿಕರೇ ಹೆಚ್ಚು ಜನ ವಿಮೆ ಪಡೆಯಲು ಮುಂದಾಗಿದ್ದಾರೆ. ಸೆಪ್ಟೆಂಬರ್ 13 ರವರೆಗೆ ವರದಿಯಾದ ಕ್ಲೈಮ್‌ಗಳ ಆಧಾರದ ಮೇಲೆ ಬೆಂಗಳೂರು ಪ್ರವಾಹದಲ್ಲಿ ಹಾನಿಗೊಳಗಾದ ವಾಹನಗಳ ನಷ್ಟವು 10 ಕೋಟಿ ರೂಪಾಯಿಗಳನ್ನು ($1.26 ಮಿಲಿಯನ್) ದಾಟಿವೆ ಎಂದುICICI ಲೊಂಬಾರ್ಡ್ ಜನರಲ್ ಸಂಜಯ್ ಧತ್ ತಿಳಿಸಿದ್ದಾರೆ.
ಇದನ್ನೂ ಓದಿ: ಭೀಕರ ಮಳೆಗೆ ಬೆಚ್ಚಿಬಿದ್ದಿದೆ ಬೆಂಗಳೂರು! ರಾಜಧಾನಿ ಅವಾಂತರಕ್ಕೆ ಕಾರಣ ಯಾರು?
ಭಾರೀ ಪ್ರಮಾಣದ ನಷ್ಟ:
ಮುಂದಿನ ಕೆಲವು ದಿನಗಳಲ್ಲಿ ಸರಿಸುಮಾರು 100ಕ್ಕಿಂತಲೂ ಅಧಿಕ ಪ್ರವಾಹ ನಷ್ಟದ ದೂರು ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದುವರೆಗೆ ಅಕೋ ಜನರಲ್ ಇನ್ಶುರೆನ್ಸ್ ಲಿಮಿಟೆಡ್ ಪ್ರವಾಹದಿಂದಾಗಿ 200 ಕ್ಕೂ ಹೆಚ್ಚು ವಿಮೆ ಅರ್ಜಿಯನ್ನು ಸ್ವೀಕರಿಸಿದೆ ಅದರಲ್ಲಿ ಸುಮಾರು 20 ಪ್ರತಿಶತದಷ್ಟು ವಾಹನಗಳ ಸಂಪೂರ್ಣ ಹಾಳಾಗಿದೆ. ಕೆಲ ಕಂಪನಿಗಳು ಮೊದಲೇ ಈ ಪರಿಸ್ಥಿತಿಯನ್ನು ಊಹಿಸಿದ್ದು ಇನ್ನೂ ಅನೇಕ ದೂರು ದಾಖಲಾಗುತ್ತವೆ ಎಂದು ಹೇಳುತ್ತಿದ್ದಾರೆ. ದೂರುಗಳ ಸಂಖ್ಯೆ ಹೆಚ್ಚುತ್ತಿದ್ದು ವಿಚಾರಣೆ ಮಾಡಲು ವಿಳಂಬವಾಗಿತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ