Puneeth Rajkumar ನಿಧನದ ನಂತರ ಹಾಸನ ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ದೊಡ್ಡ ಬದಲಾವಣೆ

ಇಂದಿಗೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆರಾಧನೆ ಮಾಡುತ್ತಾ ಕಣ್ಣೀರಿಡುತ್ತಿದ್ದಾರೆ. ಪುನೀತ್ ಅವರ ಜೀವಿತಾವಧಿಯಲ್ಲಿ ಮಾಡಿರುವ ಹತ್ತಾರು ಸಾಧನೆಗಳನ್ನು  ಕೊಂಡಾಡುವ ಮೂಲಕ ಬದುಕಿದರೆ ಈ ರೀತಿ ಬಾಳಿ ಬದುಕಬೇಕು ಎನ್ನುತ್ತಿದ್ದಾರೆ.

ಪುನೀತ್​ ರಾಜ್​​ಕುಮಾರ್​

ಪುನೀತ್​ ರಾಜ್​​ಕುಮಾರ್​

 • Share this:
  ಹಾಸನ: ಅ.29 ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್  (Power Star Puneeth Rajkumar) ಹಠಾತ್ ನಿಧನ ಇಡೀ ರಾಜ್ಯಕ್ಕೆ ಬರಸಿಡಿಲು ಬಡಿದಂತಾಗಿತ್ತು. ಎಲ್ಲೆಡೆ ನೀರವ ಮೌನ. ಹಿಂದೆಂದೂ ಯಾವ ನಟನಿಗೂ ಸಿಗದ ಗೌರವ, ಪ್ರೀತಿಯನ್ನು ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ಜನರು ಅಪ್ಪು ಮೇಲೆ ತೋರಿಸಿ‌ ಮರುಗಿದರು.  ಇನ್ನೂ ಈ ಆಘಾತದಿಂದ ಸ್ಯಾಂಡಲ್‌ವುಡ್ (Sandalwood) ಅಷ್ಟೇ ಅಲ್ಲ, ಅಭಿಮಾನಿಗಳು ಹೊರಬಂದಿಲ್ಲ. ಈಗಲೂ ಅಬಾಲವೃದ್ಧರಾದಿಯಾಗಿ ತಮ್ಮ ನೆಚ್ಚಿನ ನಟನ ಆರಾಧನೆ ಮಾಡುತ್ತಾ ಕಣ್ಣೀರಿಡುತ್ತಿದ್ದಾರೆ. ಪುನೀತ್ ಅವರ ಜೀವಿತಾವಧಿಯಲ್ಲಿ ಮಾಡಿರುವ ಹತ್ತಾರು ಸಾಧನೆಗಳನ್ನು  ಕೊಂಡಾಡುವ ಮೂಲಕ ಬದುಕಿದರೆ ಈ ರೀತಿ ಬಾಳಿ ಬದುಕಬೇಕು ಎನ್ನುತ್ತಿದ್ದಾರೆ.

  ಪುನೀತ್​ ಹಾದಿಯಲ್ಲಿ ಸಾಗುವ ಆಸೆ 

  ಪವರ್ ಸ್ಟಾರ್ ಸಾವಿನ ನಂತರ ಕಣ್ಣುಗಳ ದಾನದ ಮೂಲಕ ಕತ್ತಲೆಯಲ್ಲಿದ್ದ ನಾಲ್ವರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಪುನೀತ್ ಅವರ ನೇತ್ರದಾನ ಅನೇಕರಲ್ಲಿ ಪ್ರೇರಣೆ ಜೊತೆಗೆ ಅತಿಯಾದ ಪ್ರಭಾವ ಬೀರಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ರಾಜ್ಯಾದ್ಯಂತ ಪುನೀತ್ ಅಭಿಮಾನಿಗಳು ಮಾತ್ರವಲ್ಲದೆ ಸಾವಿರಾರು ಮಂದಿ ತಮ್ಮ ನಿಧನದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಲು ಸ್ವಯಂ ಪ್ರೇರಿತರಾಗಿ ಸಹಿ ಮಾಡಿದ್ದಾರೆ. ಇದು ಇನ್ನೂ ಹೆಚ್ಚುತ್ತಲೇ ಇದೆ. ಈ ಮೂಲಕ ತಮ್ಮ ಅಚ್ಚುಮೆಚ್ಚಿನ, ತಾವು ಅಗಾಧವಾಗಿ ಪ್ರೀತಿಸುತ್ತಿದ್ದ ನಟನಂತೆಯೇ ತಾವೂ ಕೂಡ ಕಣ್ಣಿಲ್ಲದವರ ಬಾಳಿಗೆ ಬೆಳಕಾಗುವ ಮಾದರಿ ಕೆಲಸಕ್ಕೆ ಮುಂದಾಗಿದ್ದಾರೆ.

  ಇದನ್ನೂ ಓದಿ: Puneeth Rajkumar : ಪುನೀತ್ ರಾಜಕುಮಾರ್ ನಮ್ಮನ್ನಗಲಿ ಇಂದಿಗೆ 2 ತಿಂಗಳು: ಅಪ್ಪು ಸಮಾಧಿ ಮುಂದೆ ಕುಟುಂಬಸ್ಥರ ಕಣ್ಣೀರು

  ದಾಖಲೆಯ ಪ್ರಮಾಣದಲ್ಲಿ ನೇತ್ರದಾನ 

  ಮೂಲಗಳ ಪ್ರಕಾರ, ನೇತ್ರದಾನಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಮುಂದಾಗಿರುವುದು ಇದೇ ಮೊದಲು ಎನ್ನಲಾಗಿದೆ. ಇದಕ್ಕೆ ಹಾಸನ ಜಿಲ್ಲೆಯೂ ಹೊರತಾಗಿಲ್ಲ. ತಮ್ಮ ಆರಾಧ್ಯ ದೈವವಾಗಿದ್ದ ನಟನ ಅಗಲಿಕೆ ನಂತರ ನೂರಾರು ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡಲು ತಂಡೋಪ ತಂಡವಾಗಿ ಮುಂದೆ ಬಂದಿದ್ದಾರೆ.  ಪ್ರಸಕ್ತ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗೆ ಕೇವಲ 270 ಮಂದಿ ಹಿಮ್ಸ್ ಆಸ್ಪತ್ರೆಯ ಐ ಬ್ಯಾಂಕ್‌ನಲ್ಲಿ ನೇತ್ರದಾನ ಮಾಡಲು ನೋಂದಣಿ ಮಾಡಿಸಿದ್ದರು. ಆದರೆ ಪುನೀತ್ ಹೃದಯಾಘಾತದಿಂದ ನಿಧನರಾದ ನಂತರ ಇದು ಮೂರು ಪಟ್ಟು ಹೆಚ್ಚಾಗಿದೆ. ಅಕ್ಟೋಬರ್ ಅಂತ್ಯದಿಂದ ಇಲ್ಲಿಯವರೆಗೆ ಅಂದರ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಸೇರಿ 760 ಮಂದಿ ಕಣ್ಣುದಾನ ಮಾಡುವುದಾಗಿ ಐ ಬ್ಯಾಂಕ್‌ನಲ್ಲಿ ಸಹಿ ಮಾಡಿದ್ದಾರೆ. ಇನ್ನೂ ಮುಂದುವರಿಯಲಿದೆ.

  ಸುಮಾರು 760 ಮಂದಿ ಸಹಿ

  ಪುನೀತ್ ರಾಜ್‌ಕುಮಾರ್ ಅವರ ನಿಧನ ನಂತರ ಅವರ ಕಣ್ಣುಗಳಿಂದ ಈಗಾಗಲೇ ನಾಲ್ವರಿಗೆ ದೃಷ್ಟಿ ಬಂದಿದೆ. ಹಿಂದಿನಿಂದಲೂ ಕಣ್ಣುದಾನ ಮಾಡುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಆದರೆ ಅಕ್ಟೋಬರ್ 29 ರಂದು ಪುನೀತ್ ರಾಜ್‍ಕುಮಾರ್ ಸಾವಿನ ನಂತರ ನೇತ್ರದಾನ ಮಾಡುವವರ ದಿಢೀರ್ ಏರಿಕೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಯಾರೇ ಕಣ್ಣುದಾನ ಮಾಡಬೇಕಿದ್ದರೂ ಹಿಮ್ಸ್‌ನ ಐ ಬ್ಯಾಂಕ್‌ನಲ್ಲಿಯೇ ಪತ್ರಕ್ಕೆ ಸಹಿ ಮಾಡಬೇಕು. ಜಿಲ್ಲೆಯ ಬೇರೆಲ್ಲೂ ಈ ವ್ಯವಸ್ಥೆ ಇಲ್ಲ. ಅದರಂತೆ ಕೇವಲ ಎರಡು ತಿಂಗಳ ಅಂತರದಲ್ಲಿ ಸುಮಾರು 760 ಮಂದಿ ಸಹಿ ಮಾಡಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಿಮ್ಸ್ ನ ವೈದ್ಯಕೀಯ ಅಧೀಕಕ್ಷರಾದ ಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ.

  ಇದನ್ನೂ ಓದಿ: Puneeth Rajkumar: `ಕರುನಾಡ ರತ್ನ’ನಿಗೆ ಇದೆಂಥಾ ಅವಮಾನ: ಕಿಡಿಗೇಡಿಗಳು ಸಿಕ್ರೆ ಸುಮ್ಮನೆ ಬಿಡಲ್ಲ ಎಂದ ಕನ್ನಡಿಗರು!

  ಮತ್ತೊಂದೆಡೆ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಇನ್ನೂ ಅನ್ನದಾನ, ರಕ್ತದಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳು ರಾಜ್ಯದ ಎಲ್ಲೆಡೆ ನಿರಂತರವಾಗಿ ನಡೆಯುತ್ತಲೇ ಇವೆ. ನೇತ್ರದಾನ ಶ್ರೇಷ್ಠದಾನವಾಗಿದ್ದು, ಮೃತರಾದ ಬಳಿಕವೂ ಜಗತ್ತನ್ನು ನೋಡಲು ಇರುವ ಅದ್ಬುತ ಅವಕಾಶ ಅಂತಲೇ ಹೇಳಬಹುದು.
  Published by:Kavya V
  First published: