ಕೋಲಾರ: ಕಾಂಗ್ರೆಸ್ (Congress) ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅನರ್ಹಗೊಂಡು 6 ದಿನ ಕಳೆದಿದೆ. ಇವತ್ತಿಗೂ ಅನರ್ಹತೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಈಗ 30 ದಿನ ಮೆಗಾ ಸತ್ಯಾಗ್ರಹಕ್ಕೂ (Satyagraha) ಕಾಂಗ್ರೆಸ್ ಸಜ್ಜಾಗಿದ್ದು, ಕೋಲಾರದಲ್ಲೂ (Kolar) ಮಹಾ ಸಮಾವೇಶಕ್ಕೆ ಎಲ್ಲಾ ತಯಾರಿ ಮಾಡುತ್ತಿದೆ. ಯಾವ ಜಾಗದಲ್ಲಿ ನಿಂತು ಮೋದಿ ಅವರನ್ನು ಕಳ್ಳರಿಗೆ ಹೋಲಿಸಿದರೋ, ಯಾವ ಜಾಗದಲ್ಲಿ ನಿಂತು ಹೇಳಿಕೆ ಕೊಟ್ಟು ಜೈಲಿ ಶಿಕ್ಷೆಗೆ ಗುರಿಯಾದರೋ, ಯಾವ ಜಾಗದಲ್ಲಿ ನಿಂತು ಆಡಿದ ಮಾತಿಗೆ ಸಂಸದ ಸ್ಥಾನದಿಂದ ಅನರ್ಹತೆಗೆ ಒಳಗಾದರೋ ಅದೇ ಜಾಗದಲ್ಲಿ ರಾಹುಲ್ ಗಾಂಧಿ ಕಹಳೆ ಊದಲು ಆಗಮಿಸುತ್ತಿದ್ದಾರೆ.
2019ರಲ್ಲಿ ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿದ್ದ ಭಾಷಣದಿಂದಲೇ ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದಾರೆ. ಏಪ್ರಿಲ್ 05ಕ್ಕೆ ಅದೇ ಕೋಲಾರದಿಂದಲೇ ಪ್ರಚಾರ ಆರಂಭಿಸಿ ಅನರ್ಹಗೊಳಿಸಿದ್ದನ್ನೇ ಪ್ರಚಾರದ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಯೋಜನೆ ಮಾಡಿಕೊಂಡಿದೆ.
ಇದನ್ನೂ ಓದಿ: Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?
ಏಪ್ರಿಲ್ 5ರಂದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಜನರನ್ನು ಸೇರಿಸಿ ಸಮಾವೇಶ ಮಾಡಲಾಗುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ ಎಂದರು.
ಬಿಜೆಪಿ ಪಕ್ಷ ಹಿಂದೂ-ಮುಸ್ಲಿಂ ನಡುವೆ ಕೋಮುವಾದಿ ಅಲೆ ಎಬ್ಬಿಸುತ್ತಿದೆ. ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಎಲ್ಲಾ ಧರ್ಮದವರು ಇದ್ದಾರೆ ಎಂದು ಬಿಜೆಪಿ ಯವರು ಅರಿತುಕೊಳ್ಳಬೇಕು. ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲು ಆಗೋದಿಲ್ಲ ಎಂದು ತಿಳಿದು 2 ವರ್ಷ ಜೈಲು ಎಂದು ತೀರ್ಮಾನ ಮಾಡಿದ್ದಾರೆ. ಮೊದಲು ಇದ್ದ ಜಡ್ಜ್ ಇದು ಸಾರ್ವಜನಿಕವಾಗಿ ನಡೆಯುವ ಸಾಮಾನ್ಯ ಕ್ರಿಯೆ ಅಲ್ವಾ ಅಂತ ಹೇಳಿದ್ದರು. ಬಳಿಕ ಬಿಜೆಪಿ ಅವರು ಬೇರೆ ನ್ಯಾಯಾಧೀಶರನ್ನು ನೇಮಿಸಿ ತೀರ್ಪು ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮುನಿಯಪ್ಪ ಪರ ಪ್ರಚಾರಕ್ಕೆ ಬಂದಾಗಲೇ ರಾಹುಲ್ಗಾಂಧಿ ಎಲ್ಲಾ ಕಳ್ಳರ ಮುಂದೆ ಮೋದಿ ಉಪನಾಮ ಯಾಕಿದೆ ಅಂತೇಳಿದ್ದರು. ಅದೇ ಹೇಳಿಕೆ ರಾಜಕೀಯ ಭವಿಷ್ಯವನ್ನೇ 8 ವರ್ಷ ಗಾಳಿಗೆ ತಳ್ಳಿದೆ. ಈಗ ಅದೇ ಜಾಗದಲ್ಲಿ ಸತ್ಯಮೇವ ಜಯತೇ ಹೆಸರಿನಲ್ಲಿ ಸಮಾವೇಶ ಆಯೋಜಿಸಿದ್ದಾರೆ.
ಆ ಮೂಲಕ 1 ಕಲ್ಲಲ್ಲಿ 5 ಹಕ್ಕಿ ಹೊಡೆಯುವ ಗುರಿಯನ್ನು ಕಾಂಗ್ರೆಸ್ ಮಾಡಿಕೊಂಡಿದೆ. ಅನರ್ಹತೆಗೆ ಕಾರಣವಾದ ಜಾಗದಲ್ಲೇ ಉತ್ತರ ನೀಡುವುದು. ಬಿಜೆಪಿ ಮೋದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಸಮರ ಸಾರುವುದು. ಕರ್ನಾಟಕ ಚುನಾವಣೆಗೂ ಕಾಂಗ್ರೆಸ್ಗೆ ಪ್ರಚಾರ ಸಿಕ್ಕಂತಾಗುತ್ತೆ, ಸಿದ್ದರಾಮಯ್ಯ ಕೋಲಾರ ಸ್ಪರ್ಧೆಗೂ ಪ್ರಚಾರ ಆದಂತಾಗುತ್ತೆ. ಕೆ.ಹೆಚ್.ಮುನಿಯಪ್ಪಗೆ ಸಿಂಪತಿ ಜೊತೆಗೆ ಪ್ರಚಾರನೂ ಸಿಗುತ್ತೆ ಅಂತ ಕಾಂಗ್ರೆಸ್ ತಂತ್ರ ರೂಪಿಸಿದೆ.
ಇದನ್ನೂ ಓದಿ: BS Yediyurappa: ಬಿಎಸ್ವೈ ಮನೆಗೆ ಕಲ್ಲೆಸೆದಿದ್ದೇಕೆ? ಅಚ್ಚರಿಯ ಹೇಳಿಕೆ ಕೊಟ್ಟ ಡಿಕೆಶಿ!
ಕೋಲಾರದಲ್ಲಿ ಈಗಾಗಲೇ ರಾಹುಲ್ಗಾಗಿ ಆಯೋಜಿಸುತ್ತಿರುವ ಸತ್ಯಮೇವ ಜಯತೇ ಸಮಾವೇಶಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಇದಿಷ್ಟೇ ಅಲ್ಲ ರಾಹುಲ್ಗಾಂಧಿ ಅನರ್ಹತೆ ವಿರುದ್ಧ 30 ದಿನಗಳ ಕಾಲ ಮೆಗಾ ಸತ್ಯಾಗ್ರಹವನ್ನ ದೇಶಾದ್ಯಂತ ನಡೆಸಲು ಕಾಂಗ್ರೆಸ್ ಇವತ್ತು ಕರೆಕೊಟ್ಟಿದೆ.
ಮುಂದಿನ 30 ದಿನಗಳ ಕಾಲ ಬ್ಲಾಕ್ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಸತ್ಯಾಗ್ರಹ. ಆಮೇಲೆ ರಾಷ್ಟ್ರಮಟ್ಟದಲ್ಲಿ 'ಜೈ ಭಾರತ್ ಸತ್ಯಾಗ್ರಹ ನಡೆಸ್ತೀವಿ. ಶಾಸಕರು, ಸಂಸದರು, ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ರಾಷ್ಟ್ರೀಯ ನಾಯಕರು ಭಾಗಿಯಾಗುತ್ತಾರೆ. ಅಂದಹಾಗೇ, ಇವತ್ತೂ ಕೂಡ ರಾಹುಲ್ಗಾಂಧಿ ಅನರ್ಹತೆ ಖಂಡಿಸಿ ಪ್ರತಿಭಟನೆಗಳಾಯಿತು. ಮೋದಿ ಸರ್ಕಾರ ಪ್ರಜಾಪ್ರಭುತ್ವವನ್ನು ಛಿದ್ರಗೊಳಿಸುತ್ತಿದೆ ಅಂತ ದೆಹಲಿ ವಿಶ್ವವಿದ್ಯಾಲಯದಲ್ಲಿ ಸೇವ್ ಡೆಮಾಕ್ರಸಿ ಮಾರ್ಚ್ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ