HOME » NEWS » State » HUGE CLIFFS BESIDE THE NATIONAL HIGHWAY INVITING TO AN ACCIDENT HK

ಕಾರವಾರ ; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಆಹ್ವಾನಿಸುವ ಗುಡ್ಡಗಳು

ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಕೆಲವೊಂದಿಷ್ಟು ನಿರ್ಲಕ್ಷ್ಯದ ಕಾಮಗಾರಿ ನಡೆಸಿ ಹಾಗೆ ಬಿಟ್ಟು‌ಬಿಟ್ಟಿದ್ದಾರೆ. ಈ‌ ನಿರ್ಲಕ್ಷ್ಯ ದ ಕಾಮಗಾರಿ ಕೆಲಸ ಈಗ ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ‌ ನೀಡುತ್ತಿವೆ

news18-kannada
Updated:June 4, 2020, 4:17 PM IST
ಕಾರವಾರ ; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಆಹ್ವಾನಿಸುವ ಗುಡ್ಡಗಳು
ರಸ್ತೆಯ ಪಕ್ಕದಲ್ಲಿ ಬೃಹತ್​ ಗುಡ್ಡ
  • Share this:
ಕಾರವಾರ(ಜೂನ್ 04): ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 66 ಅಗಲಿಕರಣ ಕಾಮಗಾರಿಯ ನಿರ್ಲಕ್ಷ್ಯದ‌ ಕೆಲಸ ಮಾತ್ರ ಹಾಗೆ ಮುಂದುವರೆದಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಕರಾವಳಿಯ ತಾಲೂಕುಗಳಿಂದ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪತ ಕಾಮಗಾರಿ ಕೆಲಸ ಕಳೆದ ನಾಲ್ಕು ವರ್ಷದಿಂದ ಪ್ರಗತಿಯಲ್ಲಿದೆ ನೂರೆಂಟು ವಿಘ್ನ‌ ಮತ್ತು ಕೆಲವೊಂದು ತಾಂತ್ರಿಕ ಕಾರಣದಿಂದ ಯೋಜನೆ‌ ಪೂರ್ಣವಾಗಲು  ವಿಳಂಭವಾಗುತ್ತಿದ್ದು ಈಗ ಮತ್ತೆ ಮಳೆಗಾಲದ ಕಂಠಕ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಬ್ರಹತ್ ಮಣ್ಣಿನ ಗುಡ್ಡಗಳು ಅಪಾಯಕ್ಕೆ ಆಹ್ವಾ‌ನಿಸುತ್ತಿವೆ. ಕರಾವಳಿಯಲ್ಲಿ ಭಾರೀ ಮಳೆ ಆಗುತ್ತೆ ಈ ಹಿನ್ನಲೆಯಲ್ಲಿ ವರ್ಷಕ್ಕೆ ಗುಡ್ಡ ಕುಸಿತದ ಪ್ರಕರಣಗಳು ಸರ್ವೇ ಸಾಮಾನ್ಯ ಇಂತ ಸಮಸ್ಯೆ ಎದುರಿಸಲು ಜಿಲ್ಲಾಡಳಿತ ಕೂಡಾ ಅಷ್ಟೆ ಎಚ್ಚರಿಕೆಯಿಂದ ಸನ್ನದವಾಗಿರುತ್ತೆ..

ಐಆರ್​ ಬಿ ಕಂಪನಿ ನಿರ್ಲಕ್ಷ್ಯ

ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಯೋಜನೆಯ ಗುತ್ತಿಗೆ ಪಡೆದ ಐಆರ್​ಬಿ‌ ಕಂಪನಿಯಯವರು ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಕೆಲವೊಂದಿಷ್ಟು ನಿರ್ಲಕ್ಷ್ಯದ ಕಾಮಗಾರಿ ನಡೆಸಿ ಹಾಗೆ ಬಿಟ್ಟು‌ಬಿಟ್ಟಿದ್ದಾರೆ. ಈ‌ ನಿರ್ಲಕ್ಷ್ಯ ದ ಕಾಮಗಾರಿ ಕೆಲಸ ಈಗ ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ‌ ನೀಡುತ್ತಿವೆ. ಇಲ್ಲಿನ ಕಾರವಾರ ಬಿಣಗಾ ಘಟ್ಟದಲ್ಲಿ ರಸ್ತೆ ಬದಿಯ ಗುಡ್ಡದ ಮಣ್ಣನು ಅವೈಜ್ಞಾನಿಕವಾಗಿ ತೆಗೆದಿದ್ದು, ಭಾರೀ ಮಳೆಗೆ ಗುಡ್ಡ ಕುಸಿಯುವ ಭೀತಿ ಇದೆ, ಹೀಗೆ ಕರಾವಳಿಯೂದ್ದಕ್ಕೂ ಇಂತ ಅರೆಬರೆ ನಿರ್ಲಕ್ಷ್ಯದ ಕೆಲಸ ಮಾಡಿ ಕೈ‌ತೊಳೆದುಕೊಂಡಿದೆ. ನಿರಂತರವಾಗಿ ಮಳೆ ಬೀಳುವ ಕರಾವಳಿಯಲ್ಲಿ ಸಮಸ್ಯೆ ಅರಿತು ಗುತ್ತಿಗೆ ಪಡೆದ ಕಂಪನಿಯವರು ಕಾರ್ಯ ನಿರ್ವಹಿಸಬೇಕಿತ್ತು. ಆದರೆ, ಹೀಗೆ ಅರ್ಧಂಬರ್ಧ  ಕೆಲಸ ಮಾಡಿ ಹೆದ್ದಾರಿಯಲ್ಲಿ ಸಂಚಾರಕ್ಕೆ ಭಯದ ವಾತಾವರಣ ಸೃಷ್ಟಿಸಿದ್ದಾರೆ.

ಭಾರೀ ಮಳೆಗೆ ಗುಡ್ಡ ಕುಸಿತದ ಭೀತಿ

ಕಳೆದ ವರ್ಷ ಇದೇ ಭಾಗದಲ್ಲಿ ಗುಡ್ಡ ಕುಸಿತಗೊಂಡ ಘಟನೆ ನಮ್ಮ ಕಣ್ಣಮುಂದೆ ರಾಚುತ್ತಿದೆ, ಈ‌ ಎಲ್ಲ ಸಮಸ್ಯೆ ಮತ್ತು ಅಪಘಾತದ ಘಟನೆಗಳು ನಡೆದು ಸಾಕಷ್ಟು ಆವಾಂತರ ಸೃಷ್ಟಿದರು ಗುತ್ತಿಗೆ ಪಡೆದ ಕಂಪನಿಯವರು ಈ ಬಗ್ಗೆ ಮತ್ತೆ ಲಕ್ಷ್ಯವಹಿಸಿ ಸಮಸ್ಯೆ ಪರಿಹರಿಸುವ ಕಾರ್ಯಕ್ಕೆ ಮುಂದಾಗದಿರುವುದು ದುರಂತ. ಈಗಲೂ ಕೂಡಾ ಜಿಲ್ಲೆಯಲ್ಲಿ ಭಾರೀ ಮಳೆ ಆಗುವ ಲಕ್ಷಣ ಇದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿಯೇ ತಯಾರಾಗ್ತಿದೆ ಆಗ್ರಾ ಪೇಟಾ ; ಸಿಹಿ ತಿನಿಸಾಗಿ ಮಾರ್ಪಟ್ಟ ಬೂದಗುಂಬಳ ಕಾಯಿಒಂದು ವೇಳೆ ಈ‌ ನಿರ್ಲಕ್ಷ್ಯದ ಕಾಮಗಾರಿ ಕೆಲಸದಲ್ಲಿ ಗುಡ್ಡ ಕುಸಿತದ ಘಟನೆಗಳು ಭವಿಷ್ಯದಲ್ಲಿ ಘಟಿಸಿದ್ರೆ ಕಂಪನಿಯಲ್ಲಿ ಕೆಲಸ ಮಾಡಲು ಕಾರ್ಮಿಕರ‌ ಕೊರತೆ ಇದೆ. ಈಗಾಗಲೆ‌ ಲಾಕ್​​ ಡೌನ್ ನಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ‌ತವರು ರಾಜ್ಯಕ್ಕೆ ಸೇರಿಕೊಂಡಿದ್ದಾರೆ. ಹೀಗಿರುವಾಗ ಪ್ರಕೃತಿಯ ಮುನಿಸಿಗೆ ಮನುಷ್ಯ ಹೇಗೆ ಗಟ್ಟಿ ಆಗಿದ್ದಾನೆ ಎನ್ನುವುದು ಕಾದು ನೋಡಬೇಕು.
First published: June 4, 2020, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories