HOME » NEWS » State » HUGE ACCIDENT BETWEEN LORRY AND CAR FOUR PEOPLE DIED RHHSN NKCKB

ಸಿಮೆಂಟ್ ಮಿಕ್ಸರ್ ಲಾರಿ ಹಿಂಬದಿಗೆ ಕಾರು ಡಿಕ್ಕಿ; ಕಾರಿನಲ್ಲಿದ್ದ ನಾಲ್ವರ ದುರ್ಮರಣ

ಅಪಘಾತದ ರಭಸಕ್ಕೆ ಕಾರು ಛಿದ್ರಛಿದ್ರವಾಗಿದೆ. ಬಾಳಿ ಬದುಕಬೇಕಿದ್ದ ಯುವಕರ ಸಾವಿಗೆ ಊರಿನ ಜನರು ಸೇರಿದಂತೆ, ಸ್ನೇಹಿತರು ಕಂಬನಿ‌ ಮಿಡಿದಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

news18-kannada
Updated:February 1, 2021, 10:47 AM IST
ಸಿಮೆಂಟ್ ಮಿಕ್ಸರ್ ಲಾರಿ ಹಿಂಬದಿಗೆ ಕಾರು ಡಿಕ್ಕಿ; ಕಾರಿನಲ್ಲಿದ್ದ ನಾಲ್ವರ ದುರ್ಮರಣ
ಸಾಂದರ್ಭಿಕ ಚಿತ್ರ
  • Share this:
ದೇವನಹಳ್ಳಿ:  ಸಿಮೆಂಟ್ ಮಿಕ್ಸರ್  ಲಾರಿಗೆ ಹಿಂಬದಿಗೆ ಕಾರು ಡಿಕ್ಕಿ  ಹೊಡೆದ ಪರಿಣಾಮ ಕಾರಿನಲ್ಲಿದ್ದ  ನಾಲ್ವರು ಸಾವನ್ನಪ್ಪಿದ್ದಾರೆ. ಯಲಹಂಕದ  ಬಾಗಲೂರು  ಬಳಿ ತಡರಾತ್ರಿ  1:30 ರ ಸಮಯದಲ್ಲಿ ಈ ದುರ್ಘಟನೆ  ನಡೆದಿದ್ದು, ಕಣ್ಣೂರಿನಿಂದ ಬೆಳ್ಳಳ್ಳಿ ಕಡೇ ವೋಗ್ಸ್ ವ್ಯಾಗನ್ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಕಾರಿನ ಚಾಲಕನ  ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಮುಂದೆ ಹೋಗುತ್ತಿದ್ದ  ಸಿಮೆಂಟ್  ಮಿಕ್ಸರ್  ಲಾರಿಗೆ  ಡಿಕ್ಕಿ  ಹೊಡೆದಿದ್ದಾನೆ. ಡಿಕ್ಕಿ  ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಮಧುಸೂಧನ್ (26), ಪಿ.ಶಂಕರ್ (26), ಮಿಲನ್ ರಾಜ್ (19) ಸ್ಥಳದಲ್ಲೇ  ಸಾವನ್ನಪ್ಪಿದ್ದಾರೆ. ಗಂಭೀರವಾಗಿ  ಗಾಯಾಗೊಂಡಿದ್ದ ಎಂ.ಅನುಷಾ (22) ಚಿಕಿತ್ಸೆ  ಫಲಕಾರಿಯಾಗದೆ ಆಸ್ಪತ್ರೆಯಲ್ಲಿ   ಸಾವನ್ನಪ್ಪಿದ್ದಾರೆ. ಮೃತರು ಬಾಗಲೂರಿನ ನಿವಾಸಿಗಳಾಗಿದ್ದಾರೆ. ಚಿಕ್ಕಜಾಲ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಡರಾತ್ರಿ ಯುವಕರು ಊರಿಗೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಚಾಲಕ ನಿದ್ದೆಯ ಮಂಪರಿನಲ್ಲಿ ಅಜಾಗರೂಕತೆಯಿಂದ ಕಾರನ್ನು ವೇಗವಾಗಿ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಕಾರು ಛಿದ್ರಛಿದ್ರವಾಗಿದೆ. ಬಾಳಿ ಬದುಕಬೇಕಿದ್ದ ಯುವಕರ ಸಾವಿಗೆ ಊರಿನ ಜನರು ಸೇರಿದಂತೆ, ಸ್ನೇಹಿತರು ಕಂಬನಿ‌ ಮಿಡಿದಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನು ಓದಿ: Budget 2021: ನಿರ್ಮಲಾ ಸೀತಾರಾಮನ್ 3ನೇ ಬಾರಿ ಪೂರ್ಣಾವಧಿ ಬಜೆಟ್ ಮಂಡಿಸುವ ಮುನ್ನ ನೀವು ತಿಳಿದಿರಬೇಕಾದ ಅಂಶ

ಯುವಕರು ಕ್ರೇಜ್​ಗಾಗಿ ಮಾಡುವ ಕೆಲ ಡ್ರೈವ್‌ಗಳು ಪ್ರಾಣಕ್ಕೆ ಕುತ್ತು ತರುತ್ತವೆ. ಇದರಿಂದ ತಮ್ಮ ಮಕ್ಕಳನ್ನು ಕಳೆದುಕೊಳ್ಳುವ ಪೋಷಕರು ನಿರಂತರ ದುಃಖ ಅನುಭವಿಸುತ್ತಿರುವ ಸಾವಿರಾರು ಘಟನೆಗಳು ನಮ್ಮ ಎದುರೇ ಕಾಣಸಿಗುತ್ತವೆ. ವಾಹನ ಚಾಲನೆ ಮಾಡುವಾಗ ಮುನ್ನೆಚ್ಚರಿಕೆ, ಜಾಗರೂಕತೆಯಿಂದ ಚಾಲನೆ ಮಾಡಬೇಕು ಎಂದು ಸಂಚಾರ ವಿಭಾಗದ ಡಿ.ಸಿ.ಪಿ ಸಜಿತ್ ಅವರು ನ್ಯೂಸ್ 18 ಕನ್ನಡದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Published by: HR Ramesh
First published: February 1, 2021, 10:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories