ನಡು ರಸ್ತೆಯಲ್ಲಿ ಬಾಟಲ್​ ಹಿಡಿದು ಕುಡಿದು ತೂರಾಡಿದ ಹುಚ್ಚ ವೆಂಕಟ್​

news18
Updated:September 5, 2018, 5:23 PM IST
ನಡು ರಸ್ತೆಯಲ್ಲಿ ಬಾಟಲ್​ ಹಿಡಿದು ಕುಡಿದು ತೂರಾಡಿದ ಹುಚ್ಚ ವೆಂಕಟ್​
news18
Updated: September 5, 2018, 5:23 PM IST
ಕಿರಣ್​ ಕೆ.ಎನ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.05): ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಮೂಲಕ ಸದ್ದು ಮಾಡುತ್ತಿದ್ದ ನಟ ಹುಚ್ಚ ವೆಂಕಟ್​ ಇಂದು ಹೊಸ ಅವಂತಾರ ಸೃಷ್ಟಿಸಿದ್ದಾರೆ. ಮಟ ಮಟ  ಮಧ್ಯಾಹ್ನ ನಡುರಸ್ತೆಯಲ್ಲಿ ಕುಡಿದು ತೂರಾಟುತ್ತಾ ಗಲಾಟೆ ಮಾಡಿದ್ದಾರೆ.

ನಗರದ ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ಮುಖ್ಯ ರಸ್ತೆಯ ಬಾರ್​ವೊಂದರಲ್ಲಿ ಕುಡಿದು ರಸ್ತೆಗೆ ಇಳಿದಿದ್ದಾನೆ. ಕುಡಿದ ಮತ್ತಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದ ವೆಂಕಟ್​ ರಸ್ತೆ ಬರುತ್ತಿದ್ದಂತೆ  ಹೊಸ ವರಸೆ ಶುರುಮಾಡಿದ್ದಾನೆ.

ಇನ್ನು ಹುಚ್ಚ ವೆಂಕಟ್​ ಕಂಡೊಡನೆ ಜನರು ಅವನ ಬಳಿ ಬಂದು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಮೈ ಮೇಲಿನ ಬಟ್ಟೆ ಕೊಳೆ ಮಾಡಿಕೊಂಡು ಥೇಟ್ ಕುಡುಕನಂತೆ ಹುಚ್ಚ ವೆಂಕಟ್​ ವರ್ತಿಸಿದ್ದು, ಬಳಿಕ ರಸ್ತೆಯಲ್ಲಿ ಕೂಲ್​ ಡ್ರಿಂಕ್ಸ್​ ಬಾಟಲ್​ ಹಿಡಿದುಕೊಂಡು ತೂರಾಟ ನಡೆಸಿದ್ದಾನೆ.

ವೆಂಕಟ್​ ಹುಚ್ಚಾಟಕ್ಕೆ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಯಾಗಿ ಹೆಸರು ಮಾಡಿರುವ ಹುಚ್ಚ ಈ ರೀತಿ ವರ್ತನೆ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ