• Home
 • »
 • News
 • »
 • state
 • »
 • World Heart Day: ಇದು ಹುಬ್ಬಳ್ಳಿ-ಧಾರವಾಡ ಜನರ ಹೃದಯದ ವಿಷ್ಯ ಕಣ್ರೀ!

World Heart Day: ಇದು ಹುಬ್ಬಳ್ಳಿ-ಧಾರವಾಡ ಜನರ ಹೃದಯದ ವಿಷ್ಯ ಕಣ್ರೀ!

ಹೃದಯ ಮಿಡಿದ ವಿಡಿಯೋ ನೋಡಿ

"ಹೃದಯ ಮಿಡಿದ ವಿಡಿಯೋ ನೋಡಿ"

World Heart Day 2022: ಸೂರ್ಯನಮಸ್ಕಾರದ ಮೂಲಕ ಯೋಗಾಥಾನ್ ಶುರುವಾಯ್ತು. ನಂತರ ಯೋಗಾಚಾರ್ಯರು ಭ್ರಾಮರಿ, ಕಪಾಲಭಾತಿ, ಅನುಲೋಮ, ವಿಲೋಮಗಳನ್ನು ಹೇಳಿಕೊಟ್ಟರು. 

 • Share this:

  ಹುಬ್ಬಳ್ಳಿ: ಮ್ಯಾರಥಾನ್ ಬಗ್ಗೆ ಕೇಳಿರ್ತೀರಿ, ಸೈಕ್ಲೋಥಾನ್ ಬಗ್ಗೆನೂ ಕೇಳಿರ್ತೀರಿ, ಆದ್ರೆ ಯೋಗಾಥಾನ್ ಬಗ್ಗೆ ಕೇಳಿದ್ದೀರಾ? ವಿಶ್ವ ಹೃದಯ ದಿನದ ಅಂಗವಾಗಿ (World Heart Day 2022) ಹುಬ್ಬಳ್ಳಿಯಲ್ಲಿ (Hubballi) ನಡೆದ ಯೋಗಾಥಾನ್ (Yogathon) ಎಂಬ ವಿಶೇಷ ಕಾರ್ಯಕ್ರಮವಿದು ಅವಳಿ ನಗರದ ಸಾವಿರಾರು ನಾಗರಿಕರು ಹೃದಯದ ಆರೋಗ್ಯ ಹೆಚ್ಚಿಸಲು ವಿಧವಿಧದ ಯೋಗಾಸನ ಮಾಡಿದ್ದಕ್ಕೆ ಹುಬ್ಭಳ್ಳಿಯ ಕೇಶ್ವಾಪುರದ ರೈಲ್ವೇ ಮೈದಾನ ಸಾಕ್ಷಿಯಾಯಿತು.


  ಸೂರ್ಯನಮಸ್ಕಾರದ ಮೂಲಕ ಯೋಗಾಥಾನ್ ಶುರುವಾಯ್ತು. ನಂತರ ಯೋಗಾಚಾರ್ಯರು ಭ್ರಾಮರಿ, ಕಪಾಲಭಾತಿ, ಅನುಲೋಮ, ವಿಲೋಮಗಳನ್ನು ಹೇಳಿಕೊಟ್ಟರು.


  ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


  ಇದೇ ಯೋಗಾಥಾನ್​ನಲ್ಲಿ ಯೋಗಿಕ್ ಜಾಗಿಂಗ್​ಅನ್ನು  ಸಹ ಪರಿಚಯಿಸಲಾಯಿತು. ಪತಂಜಲಿ ಸಂಸ್ಥೆ ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಸೋ ಬಗ್ಗೆ ಯೋಗಾಚಾರ್ಯ ಭವರಲಾಲ್ ಆರ್ಯ ತಿಳಿಸಿದರು.


  ಇದನ್ನೂ ಓದಿ:  Dog Blood Donation: ನಾಯಿಯಿಂದ ರಕ್ತದಾನ! ಎರಡು ಜೀವ ಬಚಾವ್


  ಯೋಗಾಚಾರ್ಯ ಭವರಲಾಲ್ ಆರ್ಯ ಹಾಗೂ ಸುಚಿರಾಯು ಆಸ್ಪತ್ರೆಯ ನ್ಯೂರೋಲಜಿಸ್ಟ್ ಡಾ ಮಯೂರ್ ಅವರು ನೆರೆದ ಎಲ್ಲರಿಗೂ ಯೋಗಾಸನ ಹೇಳಿಕೊಟ್ಟರು ಮಕ್ಕಳೂ ಕೂಡ ವಿಶೇಷ ಆಸಕ್ತಿಯಿಂದ ಯೋಗಾಸನ ಮಾಡಿ ಗಮನ ಸೆಳೆದರು.

  Published by:ಗುರುಗಣೇಶ ಡಬ್ಗುಳಿ
  First published: