Hubli: ಕಟ್ಟಿಗೆ ತರಲು ಬಂದ ಕುರಿಗಾಹಿ ಮಹಿಳೆ.. ನಿರ್ಜನ ಪ್ರದೇಶದಲ್ಲಿ ನಡೆಯಬಾರದ್ದು ನಡೆದೇ ಹೋಯ್ತು!

ಕುರಿಗಾಹಿ ಮಹಿಳೆ ಮೇಲೆ ಕಾಮುಕರು ಅತ್ಯಾಚಾರ ಎಸಗಿ, ಕೊಲೆಗೈದು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ಕೃತ್ಯ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ:  ಕುರಿ (Sheep) ಕಾಯುತ್ತಾ ಊರೂರು ಸುತ್ತೋ ಸಮುದಾಯದಲ್ಲಿ ( Community) ಆತಂಕ ಮನೆ ಮಾಡಿದೆ. ಕುಟುಂಬ (Family) ಸಮೇತ ಊರೂರು ಸುತ್ತುವ ವೇಳೆ  ಮಹಿಳೆಯ ಮೇಲೆ ಕಾಮುಕರು ದೌರ್ಜನ್ಯ ಎಸಗಿ(Rape), ಚಿನ್ನಾಭರಣ (Gold Jewellery) ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ.  ಕಟ್ಟಿಗೆ ತರೋಕೆ ಅಂತ ಹೋಗಿದ್ದ ಮಹಿಳೆ ಮೇಲೆ ದುರುಳರು ಕಣ್ಣು ಬಿದ್ದು, ಅತ್ಯಾಚಾರ ಎಸಗಿದ್ದಲ್ಲದೆ, ಕೊಂದೇ ಹೋಗಿದ್ದಾರೆ ಪಾಪಿಗಳು.  ಮಗಳನ್ನ ನೆನೆದು ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ . ಹೊಟ್ಟೆ ಪಾಡಿಗಾಗಿ ಆ ಕುಟುಂಬ ಕುರಿಗಳ ಹಿಂಡಿನ ಜೊತೆ ಊರಿಂದ ಊರು ಅಲೆಯುತ್ತಾ ಬದುಕು ಕಟ್ಟಿಕೊಂಡಿತ್ತು. ಜಿಲ್ಲೆಯ ಬೈಲಹೊಂಗಲ ತಾಲೂಕಿನಿಂದ ಕುರಿಗಳ ಜೊತೆಗೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮಕ್ಕೆ ಆ ಕುರಿಗಾಯಿ ಕುಟುಂಬ ಬಂದಿತ್ತು.

ಇದನ್ನೂ ಓದಿ: "ನನಗೆ ಇರುವ AIDS ನನ್ನ ಹೆಂಡ್ತಿಗೂ ಬರಲಿ" ಅಂತ ಈ ಪಾಪಿ ಮಾಡಿದ್ದೇನು? ತಿಳಿದರೆ ನೀವು ಬೆಚ್ಚಿ ಬೀಳುತ್ತೀರಿ!

ಕಟ್ಟಿಗೆ ಬರಲು ಹೋದ ಗೃಹಿಣಿ ಮೇಲೆ ಪೈಶಾಚಿಕ ಕೃತ್ಯ 

ಕುರಿ ಕಾಯುತ್ತ ಬಾಳ ಬಂಡಿ ದೂಡುತ್ತಿದ್ದವರ ಬಾಳಲ್ಲಿ ಅದೊಂದು ಘಟನೆ ಬಿರುಗಾಳಿ ಏಳುವಂತೆ ಮಾಡಿದೆ. ಎಲ್ಲರನ್ನೂ ದುಃಖದ ಕೋಡಿಯಲ್ಲಿ ಮುಳುಗುವಂತೆ ಮಾಡಿದೆ. ನಿನ್ನೆ ಎಂದಿನಂತೆ ಮನೆ ಕೆಲಸ ಮುಗಿಸಿ, ಕುರಿ ಕಾಯುತ್ತಿದ್ದ ಗೃಹಿಣಿ ಕಟ್ಟಿಗೆ ತರಲು ಹೋಗಿದ್ದಳು. ಅದೆಷ್ಟೋ ಟೈಮ್ ಆದ್ರೂ ವಾಪಾಸ್ ಬಂದಿರ್ಲಿಲ್ಲ. ಪತ್ನಿಯನ್ನ ಹುಡುಕುತ್ತಾ ಹೋದ ಗಂಡ ಅಲ್ಲಿಯ ದೃಶ್ಯ ನೋಡಿ ಕುಸಿದು ಬಿದ್ದಿದ್ದ. ಒಂದು ಕ್ಷಣ ದಿಕ್ಕು ತೋಚದವನಂತಾಗಿದ್ದ.‌ ಒಂದು ಕಡೆ ಕಟ್ಟಿಗೆಯ ಹೊರೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ರೆ, ಮತ್ತೊಂದು ಕಡೆ ಆಕೆಯ ಚಪ್ಪಲಿ ಕಾಣ್ತಿತ್ತು. ಅನತಿ ದೂರದಲ್ಲಿ ಬಿದ್ದಿದ್ದ ಹೆಂಡತಿಯನ್ನ ಕಂಡು ತಬ್ಬಿಬ್ಬಾಗಿದ್ದ ಗಂಡ. ಕಟ್ಟಿಗೆ ತರಲು ಬಂದವಳು ಅಲ್ಲಿ ಹೆಣವಾಗಿ ಬಿದ್ದಿದ್ದಳು. ಊರ ಹೊರಗಿನ‌ ನಿರ್ಜನ ಪ್ರದೇಶದಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಅಂತಾ  ಪತಿ ಆರೋಪಿಸಿದ್ದಾರೆ.

ಕೃತ್ಯದಿಂದ ಬೆಚ್ಚಿ ಬಿದ್ದ ಸಮುದಾಯ

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಹೊರವಲಯದಲ್ಲಿ ಈ ಮನಕಲಕುವ ಕೃತ್ಯ ನಡೆದಿದೆ. ಯರಗುಪ್ಪಿ ಶಾಸಕಿ ಕುಸುಮಾವತಿ ಶಿವಳ್ಳಿಯ ಊರು. ಇಂತಹ ಗ್ರಾಮದಲ್ಲಿ ಕಟ್ಟಿಗೆ ತರಲು ಬಂದ ಮಹಿಳೆ ಮೇಲೆ ಕಾಮಾಂಧರು ಪೈಶಾಚಿಕ ಕೃತ್ಯ ಎಸಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ಮಹಿಳೆನ್ನ ನೋಡಿದ ಕಿಡಿಗೇಡಿಗಳು ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆತಂಕದಿಂದಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ.  ಊರೂರು ಅಲೆದು ಜೀವನ ನಡೆಸುತ್ತಿದ್ದವರು ಇದೀಗ ಈ ಘಟನೆಯಿಂದ ಇಡೀ ಸಮುದಾಯವೇ ಬೆಚ್ಚಿ ಬಿದ್ದಿದೆ. ಮಹಿಳೆಗೆ ಅನ್ಯಾಯ ಎಸಗಿದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಮೃತಳ ಸಂಬಂಧಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Belagavi: ಕುಂದಾನಗರಿಯಲ್ಲಿ ಗಾಂಜಾ ಘಾಟು! 6 ಜನರಿಂದ ಯುವಕನ ಮೇಲೆ ತಲ್ವಾರ್ ದಾಳಿ

ಕೊಲೆಗೈದಿರೋ ಆರೋಪಿಗಳು ಮಹಿಳೆಯ ಮೇಲಿದ್ದ ಚಿನ್ನಾಭರಣಗಳನ್ನೂ ದೋಚಿ ಪರಾರಿಯಾಗಿದ್ದಾರೆ. ಕಿವಿಯ ಓಲೆ ಸೇರಿ 20 ಗ್ರಾಂ ಚಿನ್ನಾಭರಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಕುಂದಗೋಳ ಠಾಣೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆದ್ರೆ ಹಾಡುಹಗಲೆ ಕಟ್ಟಿಗೆ ತರಲು ತೆರಳಿದ ಮಹಿಳೆ ಮೇಲೆ ನಡೆದ ಪೈಶಾಚಿಕ ಕೃತ್ಯಕ್ಕೆ ಕುರಿಗಾಹಿ ಸಮುದಾಯ ಆತಂಕಕ್ಕೀಡಾಗುವಂತೆ ಮಾಡಿದೆ. ಅಲ್ಲದೆ ಗ್ರಾಮಸ್ಥರಲ್ಲಿಯೂ ಆತಂಕ ಹೆಚ್ಚಿಸಿದೆ.

ಇನ್ನು ಫೆ.16ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನ ಹಳ್ಳಿ ವ್ಯಾಪ್ತಿಯ ದೇವಣ್ಣನ ಪಾಳ್ಯ ಎಂಬಲ್ಲಿ ಹಣದ ವಿಚಾರವಾಗಿ ವ್ಯಕ್ತಿಯೊಬ್ಬ ಸ್ನೇಹಿತನಿಂದಲೇ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ನಡೆದಿದೆ.ಮಂಜುನಾಥ್ ಎಂಬ 28 ವರ್ಷ ವಯಸ್ಸಿನ ಯುವಕ ಹತ್ಯೆಯಾಗಿದ್ದಾನೆ.
Published by:Kavya V
First published: