ವಿರೋಧದ ನಡುವೆಯೇ Hubli Flyoverಗೆ ಹಸಿರು ನಿಶಾನೆ: ಮೇಲ್ಸೇತುವೆಯಿಂದ ಆಗುವ ತೊಂದರೆ ಏನು?

ವರ್ತಕರು ಮತ್ತು ಸಾರ್ವಜನಿಕರ ವಿರೋಧದ ನಡುವೆಯೇ ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ನಿರ್ಮಿಸೋಕೆ ಹಸಿರು ನಿಶಾನೆ ತೋರಲಾಗಿದೆ. ಯಾರನ್ನೋ ಖುಷಿಪಡಿಸೋಕೆ ಈ ಯೋಜನೆ ನಿರ್ಮಿಸ್ತಿಲ್ಲ ಎಂದಿರೋ ಡಿಸಿ, ಈಗಲೂ ಆಕ್ಷೇಪಗಳಿದ್ದರೆ ಸಲ್ಲಿಸಿ ಎಂದಿದ್ದಾರೆ.

ಯೋಜನೆಯ ಗ್ರಾಫಿಕ್​ ಚಿತ್ರಣ

ಯೋಜನೆಯ ಗ್ರಾಫಿಕ್​ ಚಿತ್ರಣ

  • Share this:
ಹುಬ್ಬಳ್ಳಿ: ರಾಣಿ ಚೆನ್ನಮ್ಮ ವೃತ್ತದಲ್ಲಿ (Rani Channamma Circle) ನಿರ್ಮಿಸಲು ಉದ್ದೇಶಿಸಿರೋ ಫ್ಲೈ ಓವರ್ ಗೆ (Flyover) ವಿರೋಧಗಳು ವ್ಯಕ್ತವಾಗುತ್ತಲೇ ಇವೆ. ಇದೆಲ್ಲವನ್ನು ತಣ್ಣಗಾಗಿಸೋ ನಿಟ್ಟಿನಲ್ಲಿ ತಜ್ಞರ ಸಮಿತಿಯೊಂದನ್ನು ಮಾಡಿದ್ದ ಜಿಲ್ಲಾಡಳಿತ, ಅದರ ಮೂಲಕವೇ ಸಮ್ಮತಿ ಪಡೆದು, ಮೇಲ್ಸೇತುವೆ ಕಾಮಗಾರಿ (Flyover Construction) ನಡೆಸೋಕೆ ತುದಿಗಾಲ ಮೇಲೆ ನಿಂತಿದೆ. ಈ ಯೋಜನೆ ಯಾರನ್ನೋ ಮೆಚ್ಚಿಸೋಕೆ ಅಲ್ಲ ಎಂದಿರೋ ಡಿಸಿ ನಿತೇಶ್ ಪಾಟೀಲ, ಕೆಲವರ ವಿರೋಧವಿದ್ದರು, ಹಲವಾರು ಜನರಿಗೆ ಅನುಕೂಲವಾಗುತ್ತೇ ಅನ್ನೋ ಕಾರಣಕ್ಕೆ ಈ ಯೋಜನೆ ನಡೆಸೋದಾಗಿ ತಿಳಿಸಿದ್ದಾರೆ.

ಫ್ಲೈ ಓವರ್ ನಿರ್ಮಾಣಕ್ಕೆ ವಿರೋಧ: ವರ್ತಕರ ವಿರೋಧದ ನಡುವೆಯೇ ಫ್ಲೈ ಓವರ್ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಫ್ಲೈಓವರ್ ನಿರ್ಮಾಣಕ್ಕೆ ತಜ್ಞರ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಕೆಲ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಫ್ಲೈಓವರ್ ಜಾರಿಗೆ ತೀರ್ಮಾನ ಮಾಡಲಾಗಿದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಮೇಲ್ಸೆತುವೆ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಆ ಹಿನ್ನಲೆ ಕೇಂದ್ರ ಸಚಿವ ಜೋಶಿ ಸಮಿತಿ ರಚನೆ ಮಾಡಿದ್ರು. ಸಮಗ್ರ ಅಧ್ಯಯನದ ಬಳಿಕ ನಾವು ಕೆಲ ಬದಲಾವಣೆಗಳೊಂದಿಗೆ ಫ್ಲೈಓವರ್ ನಿರ್ಮಾಣ ಶಿಫಾರಸ್ಸು ಮಾಡ್ತಿದ್ದೆವೆ ಎಂದು ಹುಬ್ಬಳ್ಳಿಯಲ್ಲಿ ಧಾರವಾಡ ಡಿಸಿ ನಿತೇಶ್ ಪಾಟೀಲ ಹೇಳಿದ್ದಾರೆ.

ವಾಣಿಜ್ಯ ಕಟ್ಟಡಗಳಿಗೆ ಧಕ್ಕೆ ಆರೋಪ: ವಾಣಿಜ್ಯ ನಗರಿ ಎಂದು ಕರೆಸಿಕೊಂಡಿರೋ ಹುಬ್ಬಳ್ಳಿಗೆ ನಿತ್ಯ 2.50 ಲಕ್ಷ ಜನ ಭೇಟಿ ನೀಡುತ್ತಾರೆ. ಅದರಲ್ಲಿ 1.5 ಲಕ್ಷ ಜನ ಚನ್ನಮ್ಮ ವೃತ್ತದ ಮೂಲಕ ಹಾದು ಹೋಗುತ್ತಾರೆ. ಚನ್ನಮ್ಮ ವೃತ್ತ ಸಂಪರ್ಕ ಏಳು ರಸ್ತೆಗಳಲ್ಲಿ ನಾಲ್ಕು ರಸ್ತೆಗಳ ಮೇಲೆ ಈಗಾಗಲೇ ಒತ್ತಡ ಹೆಚ್ಚಾಗಿದೆ. ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ಶೇ 7 ರಷ್ಟು ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸದ್ಯಕ್ಕೆ ಸಂಜೆ ವೇಳೆಯಲ್ಲಿ ನಿತ್ಯ 16 ಸಾವಿರ ವಾಹನಗಳು ಸಂಚರಿಸುತ್ತಿದ್ದು, ದಿನೇ ದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಪರ್ಯಾಯ ರಸ್ತೆಗಳನ್ನು ಬಳಸಿಕೊಳ್ಳೋಕೆ ಮುಂದಾದಲ್ಲಿ ಮನೆ, ವಾಣಿಜ್ಯ ಕಟ್ಟಡಗಳಿಗೆ ಧಕ್ಕೆಯಾಗಲಿದೆ ಎನ್ನೋ ಆತಂಕವನ್ನೂ  ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಅಶೋಕ ಶೆಟ್ಟರ್ ನೇತೃತ್ವದ ತಜ್ಞರ ಸಮಿತಿ ಆತಂಕ ವ್ಯಕ್ತಪಡಿಸಿದೆ.

300 ಕೋಟಿ ವೆಚ್ಚ:  ಇದೆಲ್ಲಕ್ಕೂ ಮೇಸ್ಸೇತುವೆ ನಿರ್ಮಾಣವೊಂದೇ ಮುಂದಿರುವ ದಾರಿ ಎಂದಿರೋ ಡಿಸಿ ನಿತೇಶ್ ಪಾಟೀಲ, ಗದಗ ರಸ್ತೆಯಲ್ಲಿ ಅರ್ಧ ಕಿಲೋಮೀಟರ್ ನಷ್ಟು ಮೇಲ್ಸೇತುವೆ ಕಡಿತಗೊಳಿಸಲಾಗಿದೆ. ಮೂರು ಕಡೆ ಬಿ.ಆರ್.ಟಿ.ಎಸ್. ಬಸ್ ನಿಲ್ದಾಣದ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ. ಅದೇ ಬಜೆಟ್ ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಚ್ಚಿನ ಕಾಮಗಾರಿ ಕೈಗೊಳ್ಳುತ್ತಿದೆ. ಸುಮಾರು 300 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಇನ್ನೂ ಆಕ್ಷೇಪಗಳಿದ್ದರೆ ಸಲ್ಲಿಸಿ:  ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗ್ತಿರೋ ಫ್ಲೈಓವರ್ ನಿಂದ ಹುಬ್ಬಳ್ಳಿ- ಗದಗ, ಹುಬ್ಬಳ್ಳಿ- ಬೆಂಗಳೂರು, ಹುಬ್ಬಳ್ಳಿ- ವಿಜಯಪುರ ಸಂರ್ಪಕ ಕಲ್ಪಿಸಲಿದೆ. ಸಾರ್ವಜನಿಕರ ಆಕ್ಷೇಪಗಳನ್ನು ಪರಿಗಣಿಸಿ ಕೆಲ ಬದಲಾವಣೆ ಮಾಡಿದ್ದೇವೆ. ಯಾರಿಗೋ ಖುಷಿ ಮಾಡೋಕೆ ಈ ಯೋಜನೆ ಮಾಡ್ತಿಲ್ಲ. ಜನರಿಗೆ ಟ್ರಾಫಿಕ್ ಕಿರಿ ಕಿರಿಯಿಂದ ಮುಕ್ತಿ ನೀಡೋಕೆ ಮಾಡ್ತಿದ್ದೇವೆ. ಇಷ್ಟಾದರೂ ಆಕ್ಷೇಪಗಳಿದ್ದರೇ ತಮ್ಮ ಕಛೇರಿಗೆ ಆಕ್ಷೇಪ ಸಲ್ಲಿಸೋಕೆ ಅವಕಾಶ ನೀಡಲಾಗುವುದ ಎಂದು ಡಿಸಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿಗಳಿಗೆ ಕಾರಣರಾದ BBMP ಅಧಿಕಾರಿಗಳ ವಿರುದ್ಧ ಕೇಸ್ ಹಾಕಿ; ಬೆಂಗಳೂರಿಗರ ಒತ್ತಾಯ

ಒಟ್ಟಾರೆ ಶತಾಯಗತಾಯ ಮೇಲ್ಸೇತುವೆ ಮಾಡಲೇಬೆಕೆನ್ನೋ ಉದ್ದೇಶ ಹೊಂದಿರೋ ಜಿಲ್ಲಾಡಳಿತ ತನ್ನ ಕಾರ್ಯಕ್ಕೆ ಎದುರಾಗಿದ್ದ ವಿಘ್ನಗಳನ್ನು ತಜ್ಞರ ಸಮಿತಿಯ ಮೂಲಕ ನಿವಾರಿಸಿಕೊಂಡಿದೆ. ತಜ್ಞರ ಸಮಿತಿ ಒಪ್ಪಿಗೆ ಸೂಚಿಸಿರೋದ್ರಿಂದ ಯೋಜನೆ ಕಾರ್ಯಗತಗೊಳಿಸೋದಾಗಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಈಗಾಗಲೇ ಕಾಮಗಾರಿ ಆರಂಭಿಸಿ, ಸಾರ್ವಜನಿಕರ ವಿರೋಧದ ನಂತರ ತಜ್ಞರ ಸಮಿತಿ ರಚಿಸಿದ್ದ ಜಿಲ್ಲಾಡಳಿತ, ಕಾಮಗಾರಿಯನ್ನು ಶರವೇಗದಲ್ಲಿ ಮುಗಿಸೋ ಧಾವಂತದಲ್ಲಿದೆ.
Published by:Kavya V
First published: