ಹುಬ್ಬಳ್ಳಿ (ಫೆ.9): ಕೋವಿಡ್ (Covid 19) ಬರದಂತೆ ತಡೆಯಲು ಕನಿಷ್ಟ ಎರಡೂ ಡೋಸ್ (2 dose) ಆದ್ರೂ ವ್ಯಾಕ್ಸಿನ್ (Vaccine) ಹಾಕಿಸಿಕೊಳ್ಳಲೇ ಬೇಕು. ಅದರಲ್ಲಿಯೂ ವೃದ್ಧರು ವ್ಯಾಕ್ಸಿನ್ ಹಾಕಿಸಿಕೊಳ್ಳೋದು ಅನಿವಾರ್ಯವಾಗಿದೆ. ಆದರೆ ಕೆಲವೊಬ್ಬರು ಬೇರೆ ಬೇರೆ ಕಾರಣಗಳಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳೋದನ್ನು ಮಿಸ್ ಮಾಡಿಕೊಂಡಿರ್ತಾರೆ. ಅಂತಹ ವೃದ್ಧರಿಗೆ ವ್ಯಾಕ್ಸಿನ್ ಹಾಕೋಕೆ ಹುಬ್ಬಳ್ಳಿ - ಧಾರವಾಡ ಪಾಲಿಕೆ ವ್ಯಾಪ್ತಿಯ ಚಿಟಗುಪ್ಪಿ (Chitaguppi) ಆಸ್ಪತ್ರೆ ವಿಶೇಷ ವ್ಯವಸ್ಥೆ ಮಾಡಿದೆ. ವೃದ್ಧರಿಗಾಗಿಯೇ ಪ್ರತ್ಯೇಕ ಕಂಟ್ರೋಲ್ ರೂಮ್ ಸ್ಥಾಪಿಸಿ, ಮನೆ ಮನೆಗೆ ತೆರಳಿ ವೃದ್ಧರಿಗೆ ವ್ಯಾಕ್ಸಿನ್ ಹಾಕೋ ಕಾರ್ಯ ಆರಂಭಿಸಿದೆ. ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ತೀವ್ರತೆ ಇಳಿಮುಖದತ್ತ ಸಾಗಿದೆ. ಜಿಲ್ಲೆಯಲ್ಲಿ ಇಂದು 102 ಜನರಿಗೆ ಸೋಂಕು ದೃಢಪಟ್ಟಿದ್ದು, ಸದ್ಯ ಜಿಲ್ಲೆಯಲ್ಲಿ 1732 ಆ್ಯಕ್ಟಿವ್ ಕೇಸ್ ಗಳಿವೆ.
ವೃದ್ಧರಿರುವಲ್ಲಿಯೇ ತೆರಳಿ ವ್ಯಾಕ್ಸಿನ್
ಹೀಗಾಗಿ ಕೋವಿಡ್ ವ್ಯಾಕ್ಸಿನ್ ಹಾಕುವತ್ತ ವೈದ್ಯಕೀಯ ಸಿಬ್ಬಂದಿಯ ಚಿತ್ತ ಹರಿಸಲಾರಂಭಿಸಿದೆ. ವೃದ್ಧರು ಇರುವಲ್ಲಿಗೇ ಹೋಗಿ ವ್ಯಾಕ್ಸಿನ್ ಹಾಕೋ ಕಾರ್ಯವನ್ನು ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡಪ್ಪನವರ ನೇತೃತ್ವದಲ್ಲಿ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಸಿಬ್ಬಂದಿ ಆರಂಭಿಸಿದ್ದಾರೆ. ಡಾ. ಶ್ರೀಧರ್ ದಂಡಪ್ಪನವರ ನೇತೃತ್ವದ ವೈದ್ಯಕೀಯ ತಂಡವು ಮನೆ ಮನೆಗೆ ತೆರಳಿ ವೃದ್ಧರಿಗೆ ವ್ಯಾಕ್ಸಿನ್ ಕೊಡುತ್ತಿದ್ದಾರೆ. ಇದಲ್ಲದೇ ವೃದ್ಧರಿಗಾಗಿಯೇ ಪ್ರತ್ಯೇಕ ಕಂಟ್ರೋಲ್ ರೂಮ್ ವ್ಯವಸ್ಥೆ ಮಾಡಿರುವ ಚಿಟಗುಪ್ಪಿ ಆಸ್ಪತ್ರೆ ಸಿಬ್ಬಂದಿಗಳು, ಮನೆಯಿಂದ ಹೊರಗೆ ಬರಲಾರದವರು ಕಂಟ್ರೋಲ್ ರೂಮ್ ಗೆ ಕರೆ ಮಾಡಿದರೆ ಸಾಕು, ಅವರ ಮನೆಗೆ ಹೋಗಿ ವ್ಯಾಕ್ಸಿನ್ ನೀಡುತ್ತಿದ್ದಾರೆ.
ಇದನ್ನೂ ಓದಿ: Coronavirus: ಆನೇಕಲ್ ತಾಲ್ಲೂಕಿನ 2 ಖಾಸಗಿ ಶಾಲೆಗಳಲ್ಲಿ ಕೊರೋನಾ ಸ್ಫೋಟ; 46 ಮಂದಿಯಲ್ಲಿ ಸೋಂಕು ಪತ್ತೆ!
ಈ ನಂಬರ್ಗೆ ಕಾಲ್ ಮಾಡಿ
ಈ ಕಾರ್ಯಕ್ಕೆಂದೇ ಎರಡು ಫೋನ್ ನಂಬರ್ ಗಳನ್ನು (0836- 2213888, 2213869) ಚಿಟಗುಪ್ಪಿ ಆಸ್ಪತ್ರೆ ಮೀಸಲಿಟ್ಟಿದೆ. ಈ ತಂಡವು ವೃದ್ಧರಿದ್ದಲ್ಲಿಗೇ ಹೋಗಿ ವ್ಯಾಕ್ಸಿನ್ ನೀಡುವುದು ಹಾಗೂ ಕೋ ಮಾರ್ಬಲಿಟಿ ಇರೋರಿಗೆ ಬೂಸ್ಟರ್ ಡೋಸ್ ಸಹ ನೀಡಿ ವೈದ್ಯಕೀಯ ನೆರವನ್ನು ನೀಡುತ್ತಿದೆ. ಚಿಟಗುಪ್ಪಿ ಆಸ್ಪತ್ರೆ ಸಿಬ್ಬಂದಿಗಳ ಈ ಕಾರ್ಯಕ್ಕೆ ವೃದ್ಧರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸೇವೆಯನ್ನು ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಾದ್ಯಂತ ವಿಸ್ತರಿಸಿ ವೃದ್ಧರಿಗೆ ನೆರವಾಗುವುದಾಗಿ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡಪ್ಪನವರ ಮಾಹಿತಿ ನೀಡಿದ್ದಾರೆ.
ಗ್ಯಾರಂಟಿ ಕೊಡ್ತೀರಾ ಎಂದ ವ್ಯಕ್ತಿ : ತಾವೇ ಖುದ್ದು ಲೆಟರ್ ನೀಡಿ ವ್ಯಾಕ್ಸಿನ್ ಹಾಕಿಸಿದ ಡಿಸಿ ಪಾಟೀಲ
ಹುಬ್ಬಳ್ಳಿ - ಲಸಿಕೆಗೆ ಗ್ಯಾರಂಟಿ ಪತ್ರ ಪಡೆದು ವ್ಯಕ್ತಿಯೋರ್ವ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ವಿಚಿತ್ರ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಸ್ವತ H ಡಿಸಿ ನಿತೇಶ್ ಪಾಟೀಲರೇ ಗ್ಯಾರಂಟಿ ಪತ್ರಕ್ಕೆ ಸಹಿ ಹಾಕಿದ ನಂತ್ರ ವ್ಯಕ್ತಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾನೆ. ಕೊರೋನಾ ಮೂರನೇ ಅಲೆಯ ಬರುವ ಆತಂಕ ಜನರನ್ನು ಕಾಡುತ್ತಿದೆ. ಇದರ ಮಧ್ಯೆ ಎರಡು ಡೋಸ್ ಪಡೆದವರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಲಸಿಕೆ ಮೇಲೆ ವಿಶ್ವಾಸಾರ್ಹತೆಯನ್ನು ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ನನಗೇನು ಆಗೋವುದಿಲ್ಲವೆಂದು ಬರೆದು ಕೊಡಿ. ಆವಾಗ ಬೇಕಿದ್ರೆ ಲಸಿಕೆ ಹಾಕಿಸಿಕೊಳ್ತೇನೆ. ಏನಾದ್ರೂ ಆದ್ರೆ ಯಾರು ಜವಾಬ್ದಾರರು. ಲಸಿಕೆ ಹಾಕಿಸಿಕೊಂಡ ನಂತ್ರ ಏನಾದ್ರು ಆದ್ರೆ ಏನ್ ಗತಿ ಎಂದು ವ್ಯಕ್ತಿ ಪ್ರಶ್ನೆ ಹಾಕಿದ. ವ್ಯಕ್ತಿಯ ಪ್ರಶ್ನೆಗೆ ಅಲ್ಲಿದ್ದ ಅಧಿಕಾರಿಗಳು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.
ಇದನ್ನೂ ಓದಿ: Omicron ಆತಂಕ.. ಮೈಸೂರಿಗೆ ಹೊಂದಿಕೊಂಡಿರುವ ಕೇರಳ ಗಡಿಯಲ್ಲಿ ಹೈ ಅಲರ್ಟ್: ಯಾವೆಲ್ಲಾ ನಿಯಮ ಪಾಲಿಸಬೇಕು?
ಗ್ಯಾರೆಂಟಿ ಪತ್ರ ಬರೆದುಕೊಟ್ಟ ಜಿಲ್ಲಾಧಿಕಾರಿ
ಕೂಡಲೇ ಬರೆದುಕೊಂಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ
ಸೂಚನೆ ನೀಡಿದಲ್ಲದೇ ನಾನು ಸಹಿ ಮಾಡಿಕೊಡ್ತೇನೆ.
ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದರು.
ವ್ಯಕ್ತಿಗೆ ಗ್ಯಾರೆಂಟಿ ಪತ್ರ ಬರೆದುಕೊಟ್ಟು ಸಭೆಯಲ್ಲೇ ವ್ಯಕ್ತಿಗೆ ಲಸಿಕೆ ಹಾಕಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ