ಮೊಟ್ಟೆ ಬಗೆದೀತು ಸರ್ಕಾರದ ಹೊಟ್ಟೆ: ಮಠಾಧೀಶರಿಂದ ಸರ್ಕಾರ ಪತನದ ಎಚ್ಚರಿಕೆ

ಇವತ್ತು ಮೊಟ್ಟೆ ಕೊಡ್ತಾರೆ, ನಾಳೆ ಚಿಕನ್ ಕೊಡ್ತಾರೆ. ಚಿಕನ್ ಅನ್ನು ಸಹ ಸಸ್ಯಾಹಾರ ಅಂತಾರೆ. ಮೊಟ್ಟೆ ಯೋಜನೆ ಜಾರಿ ಮೂಲಕ ವಿದೇಶಿ ಸಂಸ್ಕೃತಿ ಜಾರಿಗೆ ತರೋಕೆ ಹೊರಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೊಟ್ಟೆ ವಿರತಣೆಗೆ ಸ್ವಾಮೀಜಿಗಳ ವಿರೋಧ

ಮೊಟ್ಟೆ ವಿರತಣೆಗೆ ಸ್ವಾಮೀಜಿಗಳ ವಿರೋಧ

  • Share this:
ಹುಬ್ಬಳ್ಳಿ: ಮೊಟ್ಟೆ (Egg) ಮುಂದಿನ ದಿನ ಬಗೆದೀತು ಸರ್ಕಾರದ (BJP Govt ) ಹೊಟ್ಟೆ. ಶಾಲೆಗಳಲ್ಲಿ ಮೊಟ್ಟೆ ಯೋಜನೆ ವಾಪಸ್ ಪಡೆಯದೇ ಇದ್ದಲ್ಲಿ ಲಿಂಗಾಯತರಿಂದಲೇ (Lingayats) ಸರ್ಕಾರ ಪತನವಾಗುತ್ತೆ ಎಂದು ವಿವಿಧ ಮಠಾಧೀಶರು (Uttara Karnataka Swamijis ) ಬೊಮ್ಮಾಯಿ (CM Basavaraj Bommai) ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರು ದಯಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವದಳದ ಚನ್ನಬಸವಾನಂದ ಸ್ವಾಮೀಜಿ, ಬಸವಧರ್ಮ ಪೀಠದ ಮಾತೆ ಗಂಗಾದೇವಿ ಮೊದಲಾ ಸ್ವಾಮೀಜಿಗಳು, ಬ್ರಾಹ್ಮಣ, ಜೈನ ಸಮುದಾಯದ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೊಟ್ಟೆಯನ್ನ ಶಾಲೆಯಲ್ಲಿ ತರಲು ಹುನ್ನಾರ

ಸರ್ಕಾರಿ, ಅನುದಾನಿತ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ ವಿತರಣೆಗೆ ನಮ್ಮ ವಿರೋಧವಿದೆ. ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕದಲ್ಲಿ ಬಹುಸಂಖ್ಯೆಯಲ್ಲಿ ಲಿಂಗಾಯತ ಧರ್ಮೀಯರಿದ್ದಾರೆ. ಅವರೆಲ್ಲ ಶುದ್ಧ ಸಸ್ಯಾಹಾರಿಗಳು. ಏಕರೂಪತೆ ಕಾಪಡಿಕೊಳ್ಳಬೇಕಿದ್ದ ಸರ್ಕಾರ ಈ ರೀತಿ ಮಾಡಬಾರದು. ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕೊಡಿ, ಮೊಟ್ಟೆಯನ್ನಲ್ಲ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಯಾಕೆ, ಎಲ್ಲರಿಗೂ ಒಂದೇ ತರವಾಗಿ ಸರ್ಕಾರ ನೋಡಬೇಕು. ಮೊಟ್ಟೆಯನ್ನ ಶಾಲೆಯಲ್ಲಿ ತರಲು ಹುನ್ನಾರ ಏನು..? ಕಾಂಗ್ರೆಸ್, ಜೆಡಿಎಸ್ ವಾಪಸ್ ಪಡೆದಿರೋ ಈ ಯೋಜನೆಯನ್ನ ಬಿಜೆಪಿ ಯಾಕೆ ತಂದಿದೆ. ಲಿಂಗಾಯತ, ಬ್ರಾಹ್ಮಣ, ಜೈನ ಧರ್ಮದ ಜನರಿಂದ ಮತ ಪಡೆದ ಬಿಜೆಪಿ ಈ ರೀತಿ ಯಾಕೆ ಮಾಡಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಶೇ.80ರಷ್ಟು ಮಕ್ಕಳಿಗೆ ಬಿಸಿಯೂಟದಲ್ಲಿ ಬೇಕು ಮೊಟ್ಟೆ: ಸಮೀಕ್ಷೆಯಲ್ಲಿ ಬಹಿರಂಗ

RSS ಈ ಬಗ್ಗೆ ಏಕೆ ಮಾತಾಡುತ್ತಿಲ್ಲ? 

ಸಾಮರಸ್ಯ ಬಗ್ಗೆ ಸಾರಿ ಹೇಳುವ, ಆರ್ ಎಸ್ ಎಸ್ ಇದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ. ಇದರ ಬಗ್ಗೆ ಆರ್ ಎಸ್ ಎಸ್ ಮಾತನಾಡದಿದ್ದರೆ ನಾವು ಸಸ್ಯಾಹಾರಿಗಳು ಮುಂದೆಂದೂ ಅವರ ಮಾತು ಕೇಳೋದಿಲ್ಲ. ರಾಜ್ಯದ ನೂರಾರು ಶ್ರೀಗಳು ಸಿಎಂ ಗೆ ಮನವಿ ಮಾಡಿದ್ದಾರೆ. ಈ ಸರ್ಕಾರ ಸ್ವಾಮಿಗಳಿಂದಲೇ ಮೊಟ್ಟೆ ತಿನ್ನಿಸುವ ಹುನ್ನಾರ ಮಾಡುತ್ತಿದೆ. ಇನ್ನೇನಿದ್ರೂ ನಾವು ಯಾರ ಜೊತೆ ಮತನಾಡೋದಿಲ್ಲ. ಎಲ್ಲ ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಮೊಟ್ಟೆ ವಾಪಸ್ ಪಡೆಯಿರಿ, ಇಲ್ಲವೇ ಸಸ್ಯಾಹಾರಿಗಳಿಗೆ ಪ್ರತ್ಯೇಕ ಮಾಂಸಾಹಾರಿಗಳಿಗೆ ಪ್ರತ್ಯೇಕ ಶಾಲೆ ಆರಂಭಿಸಿ. ಹಾಗೊಂದು ವೇಳೆ ಮಾಡದೇ ಇದ್ದಲ್ಲಿ ಸಸ್ಯಾಹಾರಿಗಳಿಂದಲೇ ಸರ್ಕಾರ ಪತನವಾಗುತ್ತದೆ ಎಂದು ಬೊಮ್ಮಾಯಿ ಸರ್ಕಾರಕ್ಕೆ ದಯಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಕೋಳಿಯನ್ನೂ ಸಸ್ಯಾಹಾರಿ ಅಂತ ತಿನ್ನಸ್ತಾರೆ 
ತೆಲಂಗಾಣ ರಾಜ್ಯದಲ್ಲಿ ವಾರಕ್ಕೆರಡು ದಿನ ಚಿಕನ್ ಕೊಡ್ತಾರೆ. ಇಲ್ಲಿಯೂ ಇವತ್ತು ಮೊಟ್ಟೆ ಕೊಡ್ತಾರೆ, ನಾಳೆ ಚಿಕನ್ ಕೊಡ್ತಾರೆ. ಚಿಕನ್ ನ್ನು ಸಹ ಸಸ್ಯಾಹಾರ ಅಂತಾರೆ. ಮೊಟ್ಟೆ ಯೋಜನೆ ಜಾರಿ ಮೂಲಕ ವಿದೇಶಿ ಸಂಸ್ಕೃತಿ ಜಾರಗೆ ತರೋಕೆ ಹೊರಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಷ್ಟ್ರೀಯ ಬಸವ ದಳದ ಚನ್ನಬಸವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ. ಮೊಟ್ಟೆ ತಿನ್ನೋದ್ರಿಂದ ಕಲ್ಯಾಣ ಆಗಲ್ಲ. ಮೌಲ್ಯಾಧಾರಿತ ಶಿಕ್ಷಣ ಕೊಡಿ. ಬೇರೆ ರೀತಿ ಪೌಷ್ಠಿಕ ಆಹಾರ ನೀಡಿ. ಜ್ಞಾನ ದೇಗುಲದಲ್ಲಿ ಮೊಟ್ಟೆ ಕೊಡೋದು ಸರಿಯಲ್ಲ. ಸರ್ಕಾರವೇ ಮಾಂಸಾಹಾರಿಗಳು, ಸಸ್ಯಾಹಾರಿಗಳೆಂದು ಇಬ್ಭಾಗ ಮಾಡ್ತಿದೆ ಎಂದ ಕಿಡಿಕಾರಿದರು.

ಇದನ್ನೂ ಓದಿ: ರಾಜ್ಯಾದ್ಯಂತ ಡಿ.8ರಿಂದ 3 ದಿನಗಳ ಕಾಲ ‘ಎಣ್ಣೆ’ ಸಿಗಲ್ಲ: ಮದ್ಯ ಮಾರಾಟ ಬಂದ್ ಏಕೆ?

ಬೆಳಗಾವಿಯಲ್ಲಿ ಸಂತ ಸಮಾವೇಶ, ವಿಧಾನಸೌಧ ಚಲೋ 
ಡಿಸೆಂಬರ್ 13 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಬೆಳಗಾವಿಯಲ್ಲಿ ಮಠಾಧೀಶರ ನೇತೃತ್ವದಲ್ಲಿ ಹೋರಾಟ ಮಾಡೋಕೆ ತೀರ್ಮಾನಿಸಿರೋದಾಗಿ ಬಸವಧರ್ಮ ಪೀಠದ ಮಾತೆ ಗಂಗಾದೇವಿ ತಿಳಿಸಿದ್ದಾರೆ. ಸಿಎಂ ಈ ರೀತಿ ಘೋಷಣೆ ಮಾಡಿದ್ದು ಬಹಳ ನೋವಾಗಿದೆ. ಬಸವಣ್ಣನ ನಾಡಿನಲ್ಲಿ ಮೊಟ್ಟೆ ವಿತರಣೆ ವಿಚಾರ ನೋವಾಗಿದೆ. ಬೊಮ್ಮಾಯಿ ಹೆಸರಲ್ಲಿಯೇ ಬಸವರಾಜ ಎಂದಿದೆ. ಬಸವಣ್ಣನವರ ಹೆಸರಿಟ್ಟುಕೊಂಡವರು ಈ ರೀತಿ ಮಾಡಬಾರದಾಗಿತ್ತು.

ಸಸ್ಯಾಹಾರಿ ಮಕ್ಕಳಿಗೆ ಮೊಟ್ಟೆ ಕೊಡುವುದು ಸರಿಯಲ್ಲ. ಕೂಡಲೇ ಮೊಟ್ಟೆ ವಿತರಣೆ ವಾಪಾಸ್ ಪಡೆಯಿರಿ ಎಂದು ಆಗ್ರಹಿಸಿದರು. ಡಿಸೆಂಬರ್ 20 ರಂದು ಬೆಳಗಾವಿಯಲ್ಲಿ ಬೃಹತ್ ಹೋರಾಟ ಮಾಡೋಕೆ ತೀರ್ಮಾನ ಮಾಡಿದ್ದೇವೆ. ಸಂತ ಸಮಾವೇಶ, ವಿಧಾನಸೌಧ ಚಲೋ ಹೋರಾಟ ಮಾಡಲಿರೋದಾಗಿ ಮಾತೆ ಗಂಗಾದೇವಿ ಎಚ್ಚರಿಕೆ ನೀಡಿದ್ದಾರೆ.
Published by:Kavya V
First published: