HOME » NEWS » State » HUBLI UNION MINISTER PRALHAD JOSHI SAYS WE ARE FACING SHORTAGE OF OXYGEN CARRYING TANKERS SAKLB SESR

ಆಕ್ಸಿಜನ್​ಗಿಂತಲೂ ಅದನ್ನು ಸಾಗಿಸುವ ಟ್ಯಾಂಕರ್ ಗಳ ಕೊರತೆ ಹೆಚ್ಚು; ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ಕೊರೋನಾ ಎರಡನೆಯ ಅಲೆ ಅಬ್ಬರದ ಕಾರಣದಿಂದಾಗಿ ಅದರ ಪ್ರಮಾಣ ಶೇ. 06 ರಿಂದ ಶೇ. 07 ರವರೆಗೆ ಏರಿಕೆಯಾಗಿದೆ. ಇದರಿಂದ ಇದರ ಸಾಗಾಟದಲ್ಲೂ ಸಾಕಷ್ಟು ಸಮಸ್ಯೆ ಉಂಟಾಗಿದೆ.

news18-kannada
Updated:May 14, 2021, 7:19 PM IST
ಆಕ್ಸಿಜನ್​ಗಿಂತಲೂ ಅದನ್ನು ಸಾಗಿಸುವ ಟ್ಯಾಂಕರ್ ಗಳ ಕೊರತೆ ಹೆಚ್ಚು; ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ
ಆಕ್ಸಿಜನ್ ಸಿಲಿಂಡರ್ (ಸಾಂದರ್ಭಿಕ ಚಿತ್ರ).
  • Share this:
ಹುಬ್ಬಳ್ಳಿ (ಮೇ-14):  ದೇಶದಲ್ಲಿ ಆಕ್ಸಿಜನ್​​ ಕೊರತೆಗಿಂತಲೂ, ಅದನ್ನು ಸಾಗಿಸುವ ಟ್ಯಾಂಕರ್ ಗಳ ಕೊರತೆ ಹೆಚ್ಚಾಗಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈ ಮೊದಲು ಶೇ. 01 ರಷ್ಟು ಆಕ್ಸಿಜನ್ ವೈದ್ಯಕೀಯ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಕೊರೋನಾ ಎರಡನೆಯ ಅಲೆ ಅಬ್ಬರದ ಕಾರಣದಿಂದಾಗಿ ಅದರ ಪ್ರಮಾಣ ಶೇ. 06 ರಿಂದ ಶೇ. 07 ರವರೆಗೆ ಏರಿಕೆಯಾಗಿದೆ. ಇದರಿಂದ ಇದರ ಸಾಗಾಟದಲ್ಲೂ ಸಾಕಷ್ಟು ಸಮಸ್ಯೆ ಉಂಟಾಗಿದೆ. ದೇಶಾದ್ಯಂತ 105 ರೈಲುಗಳ ಮೂಲಕ ಆಕ್ಸಿಜನ್​ ಟ್ಯಾಂಕರ್ ಗಳ ಸಾಗಾಟ ಮಾಡಲಾಗಿದೆ. ವಾಯು ಮಾರ್ಗದ ಮೂಲಕ 230 ಆಕ್ಸೀಜನ್ ಟ್ಯಾಂಕರ್ ಗಳ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು

ಭಾರತೀಯ ವಾಯುಸೇನೆ ಮೂಲಕ 1142 ಮೆಟ್ರಿಕ್ ಟನ್ ವೂ ಆಕ್ಸಿಜನ್​ ಸರಬರಾಜು ಮಾಡಲಾಗಿದೆ. 322 ಕೋಟಿ ರೂಪಾಯಿ ವೆಚ್ಚದಲ್ಲಿ 1.50 ಲಕ್ಷ ಆಕ್ಸಿಕೇರ್ ಸಿಸ್ಟಮ್ ನ್ನು ಕೇಂದ್ರ ಖರೀದಿಸಿದೆ. 40 ಕ್ಕೂ ಹೆಚ್ಚು ದೇಶಗಳು ಭಾರತಕ್ಕೆ ವಿವಿಧ ರೂಪದಲ್ಲಿ ಸಹಾಯ ಮಾಡ್ತಿವೆ. ರಾಜ್ಯದಲ್ಲಿ 34 ಕೋಟಿ ರೂಪಾಯಿ ವೆಚ್ಚದಲ್ಲಿ ಅಕ್ಸೀಜನ್ ಉತ್ಪಾದನಾ ಘಟಕಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ಪಿಎಂ ಕೇರ್ ಫಂಡ್ ನಿಂದ 1595 ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ  ಅನುಮೋದನೆ ಸಿಕ್ಕಿದೆ. ರಾಜ್ಯದ 28 ಆಸ್ಪತ್ರೆಗಳಲ್ಲಿ ಆಕ್ಸೀಜನ್ ಉತ್ಪಾದನಾ ಘಟಕಗಳಿಗೆ ಅನುಮೋದನೆ ದೊರೆತಿದೆ. ಆಕ್ಸಿಜನ್ ಗಿಂತ ಹೆಚ್ಚು  ಟ್ಯಾಂಕರ್ ಗಳ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಸದ್ಯ 1580 ಟ್ಯಾಂಕರ್ ಲಭ್ಯವಿದೆ. ಹೈಡ್ರೋಜನ್ ಟ್ಯಾಂಕರ್, ಪೆಟ್ರೋಲಿಯಂ ಉತ್ಪನ್ನ ಸಾಗಿಸುವ ಟ್ಯಾಂಕರ್ ಗಳನ್ನು ಕನ್ವರ್ಟ್ ಮಾಡಿ, ಆಕ್ಸಿಜನ್ ಪೂರೈಕೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಆಕ್ಸಿಜನ್ ಸರಬರಾಜಿಗೆ 2000 ಟ್ಯಾಂಕರ್ ಅಗತ್ಯವಿದ್ದು, ಅದನ್ನು ಸರಿಪಡಿಸುವ ಯತ್ನ ನಡೀತಿದೆ ಎಂದು ತಿಳಿಸಿದ್ದಾರೆ.
Youtube Video

ನಕಾರಾತ್ಮಕ ವರದಿಯಿಂದ ವ್ಯಾಕ್ಸಿನ್ ಗೆ ಹಿನ್ನಡೆ:

ಕೊರೋನಾ ವ್ಯಾಕ್ಸಿನ್ ಕುರಿತ ನಕಾರಾತ್ಮಕ ಸುದ್ದಿಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ವ್ಯಾಕ್ಸಿನ್ ಹಾಕಲು ಸಾಧ್ಯವಾಗಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು. ರಾಜ್ಯದಲ್ಲಿ ಶೇ. 01 ರಷ್ಟು ವ್ಯಾಕ್ಸಿನ್ ಕೊಟ್ಟಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದಲ್ಲಿ ತಯಾರಾದ ವ್ಯಾಕ್ಸಿನ್ ಬಗ್ಗೆ ನಕಾರಾತ್ಮಕ ಸುದ್ದಿಗಳು ಬಂದವು. ಜನರೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಿರಾಸಕ್ತಿ ತೋರಿದರು. ಔಷಧ ಕಂಪನಿಗಳೂ ಉತ್ಪಾದನೆಯನ್ನೂ ಕಡಿಮೆ ಮಾಡಿದವು. ಅದರ ಪರಿಣಾಮದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ವ್ಯಾಕ್ಸಿನ್ ಹಾಕಲು ಆಗಿಲ್ಲ ಎಂದರು.

ಆದರೆ, ಕೊರೋನಾ ಎರಡನೇ ಅಲೆ ಬಂದ ನಂರತ ಕೊರೋನಾ ವ್ಯಾಕ್ಸಿನ್ ಗೆ ಬೇಡಿಕೆ ಹೆಚ್ಚಿತು. ಹೈಕೋರ್ಟಿನ ನ್ಯಾಯಾಧೀಶರ ಭಾವನೆಗಳನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸುತ್ತೇವೆ. ಇದುವರೆಗೆ 1. 90 ಕೋಟಿ ವ್ಯಾಕ್ಸಿನ್ ಪೂರೈಕೆಯಾಗಿದೆ. ಒಂದು ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ. ಆಗಸ್ಟ್​​ ತಿಂಗಳಾಂತ್ಯದವರೆಗೆ 200 ಕೋಟಿ ವ್ಯಾಕ್ಸಿನ್ ತಯಾರಿಸಲಾಗುವುದು. ಎಲ್ಲರಿಗೂ ವ್ಯಾಕ್ಸಿನ್ ಹಾಕುವ ಕೆಲಸವನ್ನು ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರುಸೋಂಕಿಗೆ ಭಯ ಬೇಡ; ಸುರಕ್ಷಾ ಕ್ರಮ ಅಗತ್ಯ

ಕೋವಿಡ್ ಗೆ ಭಯಪಡೋ ಅಗತ್ಯವಿಲ್ಲ. ಕೋವಿಡ್ ಬಂದಿದೆ ಎಂದು ಭೀತಿಗೊಳ್ಳಬೇಡಿ. ಆದರೆ ಸುರಕ್ಷತಾ ಕ್ರಮಗಳ ಅಗತ್ಯವಿದೆ. ಯಾರೂ ಕೋವಿಡ್ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು.

ಲಾಕ್​ಡೌನ್​ನಿಂದಾಗಿ ಕಷ್ಟಕ್ಕೆ ಒಳಗಾಗಿರುವ ರೈತರಿಗೆ ಕೃಷಿ ಸಮ್ಮಾನ್ ಯೋಜನೆ ಅಡಿ ರೈತರಿಗೆ ನೇರವಾಗಿ ಹಣ ಜಮಾ ಆಗಿದೆ. ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1.58 ಲಕ್ಷ ಕುಟುಂಬಗಳಿಗೆ ಹಣ ಜಮಾ ಆಗಿದೆ. ಇಲ್ಲಿಯವರೆಗೆ 237.30 ಕೋಟಿ ರೂಪಾಯಿ ರೈತರ ಖಾತೆಗೆ ಜಮಾ ಆಗಿದೆ. ಮಾರ್ಚ್ 31 ರ ವರೆಗಿನ ಬಡ್ಡಿ ವಿನಾಯಿತಿಗೆ ಅವಕಾಶವಿತ್ತು. ಕೊರೋನಾ ಹಿನ್ನೆಲೆಯಲ್ಲಿ ಜೂನ್ 30 ರ ವರೆಗೆ ಕಾಲಾವಕಾಶ ನೀಡಲಾಗಿದೆ. ಜೂನ್ 30 ರೊಳಗೆ ಸಾಲ ಮರುಪಾವತಿಸಿದಲ್ಲಿ ಬಡ್ಡಿ ವಿನಾಯಿತಿ ಸಿಗಲಿದೆ ಎಂದು  ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by: Seema R
First published: May 14, 2021, 7:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories