ಮಹಾತ್ಮ ಗಾಂಧೀಜಿ ಅವರ ಮಾತನ್ನ Rahul Gandhi ಕಾರ್ಯರೂಪಕ್ಕೆ ತಂದಿದ್ದಾರೆ: Pralhad Joshi ವ್ಯಂಗ್ಯ

ನಾಲ್ಕು ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಉತ್ತರಾಖಂಡ್ (Uttarakhand) ಭೇಟಿ ಗೆಲುವಿಗೆ ಕಾರಣವಾಯಿತು. ಉತ್ತರಾಖಂಡ ಗೆಲುವಿಗೆ ನಾನೊಬ್ಬನೇ ಕಾರಣ ಅಂತ ಹೇಳುವುದಿಲ್ಲ ಎಂದರು.  

ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ

  • Share this:
ಇಂದು ಹುಬ್ಬಳ್ಳಿ (Hubballi Airport) ವಿಮಾನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Union Minister Pralhad Joshi), ಪಂಚ ರಾಜ್ಯಗಳ ಚುನಾವಣೆಯ (Assembly Election Results) ಗೆಲುವಿನ ಕುರಿತು ಸಂತೋಷ ಹಂಚಿಕೊಂಡರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ (BJP) ಅದ್ಧೂರಿ ಗೆಲುವು ಸಾಧಿಸಿದೆ. ಜಗತ್ತಿನ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ. ನಾಲ್ಕು ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಉತ್ತರಾಖಂಡ್ (Uttarakhand) ಭೇಟಿ ಗೆಲುವಿಗೆ ಕಾರಣವಾಯಿತು. ಉತ್ತರಾಖಂಡ ಗೆಲುವಿಗೆ ನಾನೊಬ್ಬನೇ ಕಾರಣ ಅಂತ ಹೇಳುವುದಿಲ್ಲ ಎಂದರು.  

80 ಸಾವಿರ ಸಭೆಗಳನ್ನು ಮಾಡಿದ್ದು ಮೈಲುಗಲ್ಲು. ಈ ಐದು ವರ್ಷದಲ್ಲಿ ಉತ್ತರಾಖಂಡ ರಾಜ್ಯ ಅಭಿವೃದ್ಧಿ ಕಂಡಿದೆ. ಹಾಗಾಗಿ ಅಲ್ಲಿಯ ಜನರು ಸಹ ಬಿಜೆಪಿಯನ್ನು ಒಪ್ಪಿಕೊಂಡಿದ್ದಾರೆ. ನಾಲ್ಕು ರಾಜ್ಯದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆಎ ಎಂದು ತಿಳಿಸಿದರು.

ಉಕ್ರೇನ್ ನಿಂದ 22 ಸಾವಿರ ಜನರನ್ನು ಭಾರತಕ್ಕೆ

ಮೋದಿ ಉಕ್ರೇನ್ ಹಾಗೂ ರಷ್ಯಾ ಜೊತೆ ಮತುಕತೆ ನಡೆಸಿ 22 ಸಾವಿರ ಜನರನ್ನ ಭಾರತಕ್ಕೆ ಕರೆತರುವ ಕೆಲಸ ಮಾಡಿದರು.  ಇದು ಮೋದಿ ವ್ಯಕ್ತಿತ್ವದ ಗಟ್ಟಿತನ ತೋರಿಸುತ್ತೆ ಎಂದು ಹೊಗಳಿದರು.

ಇದನ್ನೂ ಓದಿ:  ಜನ ಹಿಂದುತ್ವದ ಮೇಲೆ ಮತ ಹಾಕ್ತಿದ್ದಾರೆಯೇ ವಿನಃ ಕೆಲಸದ ಮೇಲೆ ಅಲ್ಲ: Siddaramaiah ಹೇಳಿಕೆ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಏಪ್ರಿಲ್ 8 ರವರೆಗೆ ಅಧಿವೇಶನ ಇದೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆ ನಡೆಸಲಾಗುವುದು ಅಲ್ಲಿಯವರೆಗೆ ಯಾವುದೇ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಡಿಕೆಶಿ ಗೋವಾಗೆ ಹೋಗಿದ್ಯಾಕೆ?

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಅವರು ಯಾಕೆ ಗೋವಾಕ್ಕೆ ಹೋಗಿದ್ರು ಅನ್ನೋದು ಇನ್ನು ಅರ್ಥವಾಗಿಲ್ಲ. ತೋಳ್ಬಲ ತೋರಿಸಲು, ಗೂಂಡಾಗಿರಿ ಮಾಡಲು ಡಿಕೆಶಿ ಗೋವಾಗೆ ಹೋಗಿದ್ರಾ..? ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದ್ರು ಎಂಬಂತೆ ಕಾಂಗ್ರೆಸ್ ನಡೆ ಇದೆ. ಫಲಿತಾಂಶ ಬರುವ ಮುನ್ನ ಹೋಗಿ ಗೂಂಡಾಗಿರಿ‌ ಮಾಡಲು ತಯಾರಿ ಮಾಡಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.

ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ವಿಸರ್ಜಿಸಿ‌ ಅಂತ ಗಾಂಧಿ ಹೇಳಿದ್ರು, ಅದನ್ನು ರಾಹುಲ್ ಗಾಂಧಿ ಕಾರ್ಯರೂಪಕ್ಕೆ ತರುತ್ತಿದ್ದಾರೆ‌ ಎಂದು ವ್ಯಂಗ್ಯ ಮಾಡಿದ್ದಾರೆ.

ಸಂಪುಟಕ್ಕೆ ಮೇಜರ್ ಸರ್ಜರಿ, BSY ಜೊತೆ ಬೊಮ್ಮಾಯಿ ಚರ್ಚೆ

ಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ಕರ್ನಾಟಕ(Karnataka)ದತ್ತ ಮುಖ ಮಾಡುತ್ತಿದೆ. ಕಾರಣ ಮುಂದಿನ ವರ್ಷವೇ ವಿಧಾನಸಭಾ ಚುನಾವಣೆ (Karnataka Assembly Election 2023) ನಡೆಯಲಿದೆ. ಈ ಹಿನ್ನೆಲೆ ರಾಜ್ಯ ಸಚಿವ ಸಂಪುಟಕ್ಕೆ (Cabinet) ಮೇಜರ್ ಸರ್ಜರಿ ನಡೆಸಲು ಬಿಜೆಪಿ ಹೈಕಮಾಂಡ್ (BJP High command) ನಿರ್ಧರಿಸದಂತೆ ಕಾಣಿಸುತ್ತಿದೆ.

ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿಯೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿವೆ.

ಇದನ್ನೂ ಓದಿ:  ಯಾವುದೇ ಮೈತ್ರಿ ಇಲ್ಲ; ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ; HD Devegowda

ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ವಿಸ್ತರಣೆ ಆಥವಾ ಪುನಾರಚನೆಯ ಕುರಿತು ಮಾಜಿ ಸಿಎಂ ಬಿ.ಎಸ್.ಯಡಿಯೂಪ್ಪ ಅವರ ಜೊತೆ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ದೆಹಲಿ ಪ್ರವಾಸ ಮತ್ತು ಹೈಕಮಾಂಡ್ ನಾಯಕರ ಭೇಟಿಯ ಕುರಿತು ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.
Published by:Mahmadrafik K
First published: