Hubballi: KIMS ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ ಆಯ್ತಾ 2 ವರ್ಷದ ಕಂದಮ್ಮ?

2 ವರ್ಷದ ರಕ್ಷಾ ಚೌದರಿ ಸಾವನ್ನಪ್ಪಿದ್ದು, ಕಂದಮ್ಮನ (Two Year Old baby) ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಆದ್ರೆ ಕಿಮ್ಸ್ ಪೋಷಕರ (Parents) ಆರೋಪ(Allegation)ವನ್ನು ತಳ್ಳಿ ಹಾಕಿದೆ.

ಹುಬ್ಬಳ್ಳಿ ಕಿಮ್ಸ್

ಹುಬ್ಬಳ್ಳಿ ಕಿಮ್ಸ್

  • Share this:
Hubballi, KIMS: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ತನ್ನ ಎಡವಟ್ಟು ಮತ್ತು ಅವ್ಯವಸ್ಥೆಗಳಿಂದಲೇ ರಾಜ್ಯದಲ್ಲಿ ಸದ್ದು ಮಾಡುತ್ತಿರುತ್ತದೆ. ಈಗಾಗಲೇ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಹಲವರು ಪ್ರಾಣ ಕಳೆದುಕೊಂಡಿರುವ ಆರೋಪಗಳು ಕಿಮ್ಸ್ ಹೆಗಲ ಮೇಲಿದೆ. ಇದೀಗ 2 ವರ್ಷದ ರಕ್ಷಾ ಚೌದರಿ ಸಾವನ್ನಪ್ಪಿದ್ದು, ಕಂದಮ್ಮನ (Two Year Old baby) ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಆದ್ರೆ ಕಿಮ್ಸ್ ಪೋಷಕರ (Parents) ಆರೋಪ(Allegation)ವನ್ನು ತಳ್ಳಿ ಹಾಕಿದೆ. ಸಂಜಯ್ ಹಾಗೂ ಕೀರ್ತಿ ದಂಪತಿಯ ಮಗಳು ರಕ್ಷಾಳನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು. ಬಾಯಿಯೊಳಗೆ ಗಡ್ಡೆ ಆಗಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ (Surgery) ನಡೆಸಿದ್ದರು. ಸರ್ಜರಿ ಬಳಿ ತೀವ್ರ ರಕ್ತಸ್ರಾವದಿಂದ ಮಗು ಸಾವನ್ನಪ್ಪಿದೆ. ವೈದ್ಯರು ಪೋಷಕರ ಅನುಮತಿ ಪಡೆಯದೇ ಆಪರೇಷನ್ ಮಾಡಿದ್ದಾರೆ ಎಂಬ ಆರೋಪಗಳಿ ಕೇಳಿ ಬಂದಿವೆ. ಪೋಷಕರು ಲಿಖಿತವಾಗಿ ಅನುಮತಿ ನೀಡಿರುವ ದಾಖಲೆಗಳು ನಮ್ಮ ಬಳಿಯಲ್ಲಿವೆ ಎಂದು ಕಿಮ್ಸ್ ವೈದ್ಯರು (KIMS Doctors) ಸ್ಪಷ್ಟನೆ ನೀಡಿದ್ದಾರೆ.

ಮಗಳು ಆಸ್ಪತ್ರೆಗೆ ದಾಖಲಾದಾಗ ಚೆನ್ನಾಗಿಯೇ ಇತ್ತು. ಸರ್ಜರಿ ಬಳಿಕ ರಕ್ತಸ್ರಾವ ಕಡಿಮೆ ಆಗಲಿಲ್ಲ. ಕಿಮ್ಸ್ ಗೆ ವಾಪಸ್ ಬಂದಾಗ ಮಗು ಸಾವನ್ನಪ್ಪಿದೆ ಎಂದು ಹೇಳಿ ರಕ್ಷಾ ಪೋಷಕರು ಕಣ್ಣೀರು ಹಾಕುತ್ತಾ, ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ವೈದ್ಯರು ಹೇಳಿದ್ದೇನು?

ಎರಡು ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಮಾಹಿತಿ ನೀಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿಲ್ಲ. ಪೋಷಕರಿಂದ ಅನುಮತಿ ಪಡೆದು ಸರ್ಜರಿ ಮಾಡಲಾಗಿದೆ. ದಾಖಲೆಗಳಿಗೆ ಸಹಿ ಮಾಡಿಸಿಕೊಂಡೆ ಸರ್ಜರಿ ಮಾಡಿದ್ದೇವೆ. ಮಗುವಿನ ಕರುಳಿನಲ್ಲಿ ಗಂಟು ಆಗಿತ್ತು. ಗಂಟು ಬರ್ಸ್ಟ್ ಆಗಿ ತೀವ್ರ ರಕ್ತಸ್ರಾವವಾಗಿದೆ.

ಇದನ್ನೂ ಓದಿ:  Hijab Controversy: ಈ ಎರಡು ದಿನಗಳಾದ್ರೂ ಹಿಜಾಬ್‌ಗೆ ಅವಕಾಶ ಕೊಡಿ ಎಂದ ವಕೀಲರು, ಹೈಕೋರ್ಟ್ ಹೇಳಿದ್ದೇನು?

ಕರುಳಿನ ಗಂಟಿನ ಸರ್ಜರಿ ವೇಳೆ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಇದನ್ನು ಪೋಷಕರಿಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ಅವರ ಒಪ್ಪಿಗೆಯ ನಂತರವೇ ಸರ್ಜರಿ ಮಾಡಲಾಗಿತ್ತು. ದುರದೃಷ್ಟವಶಾತ್ ಮಗು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದೆ ಎಂದು ರಾಮಲಿಂಗಪ್ಪ ಪ್ರಕರಣದ ಕುರಿತು ಮಾಧ್ಯಮಗಳಿಗೆ ಹೇಳಿದ್ದಾರೆ.

ಪೋಷಕರು ಮಾತ್ರ ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಆದ್ರೆ ರಕ್ಷಾ ಪೋಷಕರು ಇದುವರೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಪ್ರಕರಣದ  ಬಗ್ಗೆ ಹಲವು ಗೊಂದಲಗಳಿದ್ದು, ಸ್ಪಷ್ಟವಾಗಬೇಕಿದೆ.

ಸ್ಟ್ರೆಚರ್ ಇಲ್ಲದೆ ಆಕ್ಸಿಜನ್ ಅಳವಡಿಸಿದ್ದ ಮಗುವನ್ನು ಹೊತ್ತು ನಡೆದ ತಂದೆ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ವರ್ಷದ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು. ಮಗುವಿನ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಚಿಕಿತ್ಸೆ ನೀಡಿದ್ದರು. ನಂತ ಆಕ್ಸಿಜನ್ ಅಳವಡಿಸಿ ಮಕ್ಕಳ ವಾರ್ಡಿಗೆ ಶಿಫ್ಟ್ ಮಾಡಲು ತಿಳಿಸಿದ್ದರು. ಆದರೆ ಕಿಮ್ಸ್ ಆಯಾಗಳು ಮಕ್ಕಳ ವಾರ್ಡ್‌ ಗೆ ಸಾಗಿಸಲು ಸ್ಟ್ರೆಚರ್ ಕೊಟ್ಟಿರಲಿಲ್ಲ. ಹೀಗಾಗಿ ಆಕ್ಸಿಜನ್ ಅಳವಡಿಸಿದ್ದ ಮಗುವನ್ನು ತಂದೆಯೇ ಕೈಯಲ್ಲಿ ಹೊತ್ತು ನಡೆದಿದ್ದರು.

ಎಮರ್ಜೆನ್ಸಿ ವಾರ್ಡ್‌‌ ನಿಂದ ಮಕ್ಕಳ ವಾರ್ಡ್‌ವರೆಗೆ ಮಗುವನ್ನು ಕೈಯಲ್ಲಿ ಹಿಡಿದು ಸಾಗಿದ್ದಾರೆ. ಕಿಮ್ಸ್ ಸಿಬ್ಬಂದಿ ಹಿಂದಿನಿಂದ ಆಕ್ಸಿಜನ್ ಟ್ಯಾಂಕ್ ದೂಡಿಕೊಂಡು ಬಂದಿದ್ದಾರೆ. ಮಗುವಿನ ತಾಯಿ ವೈದ್ಯರು ಕೊಟ್ಟ ಕೇಸ್ ಫೈಲ್‌ನ್ನು ಕೈಯಲ್ಲಿ ಹಿಡಿದು ಸಾಗಿದ್ದಾರೆ. ಮಗುವನ್ನು ಹೊತ್ತು ತಂದೆ ಆತಂಕದಲ್ಲಿ ವಾರ್ಡ್‌ನತ್ತ ದೌಡಾಯಿಸುತ್ತಿದ್ದ ಮನಕಲಕುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.

ಇದನ್ನೂ ಓದಿ:  Shocking News: ಜೀವ ಕೊಟ್ಟವಳ ಜೀವವನ್ನೇ ತೆಗೆದ ಪಾಪಿ, ಜೀಪ್ ಹತ್ತಿಸಿ ತಾಯಿಯನ್ನೇ ಕೊಂದ ಪುತ್ರ!

ಸಿಬ್ಬಂದಿ ಮೇಲೆ ಬೇಜಾವಾಬ್ದಾರಿ ಆರೋಪ

ಕಿಮ್ಸ್‌ ಆಸ್ಪತ್ರೆಯ ಬಹುತೇಕ ಆಯಾಗಳ ವಿರುದ್ಧ ಬೇಜವಾಬ್ದಾರಿಯ‌ ಆರೋಪವಿದೆ. ಈ ಹಿಂದೆ ಮೂವರು ಗರ್ಭಿಣಿಯರನ್ನು ಒಂದೇ ಸ್ಟ್ರೆಚರ್‌ನಲ್ಲಿ ಸಾಗಿಸಿದ್ದರು. ಪತ್ನಿ, ಮಗನಿಂದ ರೋಗಿಯ ಸ್ಟ್ರೆಚರ್ ತಳ್ಳಿಸಿ ಕರ್ತವ್ಯಲೋಪ ಎಸಗಿದ್ದರು. ಇಂತಹ ಸಂದರ್ಭಗಳಲ್ಲಿ ಕಿಮ್ಸ್ ನಿರ್ದೇಶಕ ಡಾ.‌ರಾಮಲಿಂಗಪ್ಪ ಅಂಟರತಾನಿಯವರು ಆಯಾಗಳನ್ನು ಕರೆದು ಎಚ್ಚರಿಕೆ ನೀಡಿದ್ದಾರೆ. ಕೆಲವರಿಗೆ ನೋಟೀಸ್ ಕೊಟ್ಟಿದ್ದಾರೆ. ಇನ್ನು ಕೆಲವರನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ. ಆದರೆ ಆಯಾಗಳಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಆಯಾಗಳು ಹಣಕ್ಕಾಗಿ ರೋಗಿಗಳ ಸಂಬಂಧಿಗಳನ್ನು ಪೀಡಿಸುತ್ತಾರೆ ಎನ್ನುವ ಆರೋಪಗಳಿವೆ.
Published by:Mahmadrafik K
First published: