ಲಸಿಕೆ ಹಾಕಿಸಿಕೊಂಡ ಸ್ಥಳದಲ್ಲಿ ಬಲ್ಬ್ ಬೆಳಗಿದ ಪ್ರಕರಣಕ್ಕೆ ಟ್ವಿಸ್ಟ್: ಬಯಲಾಯ್ತು ಅಸಲಿ ಸತ್ಯ..!

ಬಲ್ಬ್ ಗಳಲ್ಲಿ ವಿದ್ಯುತ್ ಅಲ್ಪ ಪ್ರಮಾಣದಲ್ಲಿ ಸ್ಟೋರೇಜ್ ಆಗಿರುತ್ತಾದ್ದರಿಂದ ಲೈಟ್ ಬೆಳಗುತ್ತೆ. ಈ ಬಗ್ಗೆ ಮಾಹಿತಿ ಇದ್ದವರು ಈ ರೀತಿ ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಹುಬ್ಬಳ್ಳಿಯ ಅಣ್ಣ-ತಂಗಿ

ಹುಬ್ಬಳ್ಳಿಯ ಅಣ್ಣ-ತಂಗಿ

  • Share this:
ಹುಬ್ಬಳ್ಳಿ: ಕೋವಿಶೀಲ್ಡ್ ಹಾಕಿಸಿಕೊಂಡ ಸ್ಥಳದಲ್ಲಿ ಬಲ್ಬ್ ಬೆಳಗಿದ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದೆ. ವಿದ್ಯುತ್ ಬಲ್ಬ್ ಬೆಳಗೋದನ್ನು ವೈದ್ಯರು ಅಲ್ಲಗಳೆದಿದ್ದಾರೆ. ಬಲ್ಬ್ ಬೆಳಗುವುದಕ್ಕೂ ಕೋವಿಶೀಲ್ಡ್ ವ್ಯಾಕ್ಸಿನ್ ಗೂ ಸಂಬಂಧವಿಲ್ಲ ಎಂದಿದ್ದಾರೆ. ಕೆಲ ಎಲ್​​ಇಡಿ ಬಲ್ಬ್ ಗಳಲ್ಲಿ ಕೆಪಾಸಿಟರ್ ಅಳವಡಿಸಲಾಗಿರುತ್ತೆ. ಕರೆಂಟ್ ಸಂಪರ್ಕ ಸ್ಥಗಿತಗೊಂಡಾಗ ಲೈಟ್ ಬೆಳಗುತ್ತೆ. ಇನ್ವರ್ಟರ್ ಸಂಪರ್ಕವಿದ್ದಾಗ ಬೆಳಗಿದಂತೆ ಬೆಳಗುತ್ತೆ. ಅದರಲ್ಲಿ ಅಚ್ಚರಿ ಅಥವಾ ವಿಸ್ಮಯ ಏನೂ ಇಲ್ಲ. ಇಂತಹ ಬಲ್ಬ್ ಗಳನ್ನು ವ್ಯಾಕ್ಸಿನ್ ಹಾಕಿದ ಸ್ಥಳದಲ್ಲಿಟ್ಟು ವೈರಲ್ ಮಾಡಲಾಗಿದೆ. ವ್ಯಾಕ್ಸಿನ್ ಹಾಕಿಸಿಕೊಳ್ಳದವರೂ ಇಂತಹ ಎಲ್ಇಡಿ ಬಲ್ಬ್ ಇಟ್ಟರೆ ಕೆಲ ಸೆಕೆಂಡ್ ಗಳ ಕಾಲ ಬೆಳಗುತ್ತೆ ಎಂದು ಹುಬ್ಬಳ್ಳಿ - ಧಾರವಾಡ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ್ ದಂಡಪ್ಪನವರ್ ನ್ಯೂಸ್ 18 ಗೆ ತಿಳಿಸಿದ್ದಾರೆ.

ಬಲ್ಬ್ ಗಳಲ್ಲಿ ವಿದ್ಯುತ್ ಅಲ್ಪ ಪ್ರಮಾಣದಲ್ಲಿ ಸ್ಟೋರೇಜ್ ಆಗಿರುತ್ತಾದ್ದರಿಂದ ಲೈಟ್ ಬೆಳಗುತ್ತೆ. ಈ ಬಗ್ಗೆ ಮಾಹಿತಿ ಇದ್ದವರು ಈ ರೀತಿ ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಇದುವರೆಗೂ ಸಾಕಷ್ಟು ಮಂದಿಗೆ ವ್ಯಾಕ್ಸಿನ್ ಹಾಕಿದ್ದೇವೆ. ಎಲ್ಲಿಯೂ ಈ ರೀತಿಯ ಪ್ರಕರಣ ಬೆಳಕಿಗೆ ಬಂದಿಲ್ಲ. ವಿದ್ಯುತ್ ಪ್ರವಹಿಸಿದ ಮಾಹಿತಿ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: IMA Case: ಆರೋಪಿ ರೋಷನ್ ಬೇಗ್ ಆಸ್ತಿ ಜಪ್ತಿಗೆ ಸರ್ಕಾರದ ಮೀನಾಮೇಷ: ಹೈಕೋರ್ಟ್​​​ ಗರಂ

ಕೋವಿಶೀಲ್ಡ್ ಹಾಕಿಸಿಕೊಂಡ ಸಹೋದರ ಮತ್ತು ಸಹೋದರಿಯ ಮೈಯಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ವ್ಯಾಕ್ಸಿನ್ ಹಾಕಿಸಿಕೊಂಡ ಸ್ಥಳದಲ್ಲಿ ಬಲ್ಬ್ ಬೆಳಗುತ್ತದೆ ಎಂಬ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸವೇಶ್ವರ ಕಾಲೋನಿಯಲ್ಲಿ ಘಟನೆ ಬೆಳಕಿಗೆ ಬಂದಿತ್ತು. ಸುದ್ದಿ ತಿಳಿದು ಕೆಲ ನಾಗರೀಕರೂ ಯುವಕ - ಯುವತಿಯ ಮನೆಗೆ ತೆರಳಿ, ಬಲ್ಬ್ ಬೆಳಗೋದನ್ನು ನೋಡಿದ್ದರು. ಆದರೆ ಇದನ್ನು ವೈದ್ಯರು ಅಲ್ಲಗಳೆದಿದ್ದಾರೆ.

ವ್ಯಾಕ್ಸಿನ್ ಹಾಕಿದ ತೋಳಿಗೆ ಬಲ್ಬ್ ತಾಗಿಸಿದರೆ ಬಲ್ಬ್ ಉರಿಯುತ್ತಿರೋದಕ್ಕೆ ಪ್ರಯೋಗ ನಡೆಸಿದ ಯುವಕ ತನ್ನ ಅಭಿಪ್ರಾಯ ಹಂಚಿಕೊಂಡಿದ್ದ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುದ್ದಿ ಕೇಳಿದ್ದೆ. ನಾವೂ ಯಾಕೆ ಪ್ರಯತ್ನಿಸಬಾರದೆಂದು ಬಲ್ಬ್ ಉರಿಸಲು ಟ್ರೈ ಮಾಡಿದೆ. ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡು ಬಂದ ಕೆಲ ಹೊತ್ತಿನಲ್ಲಿಯೇ ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿ ವಿದ್ಯುತ್ ಬಲ್ಬ್ ಇಟ್ಟು ನೋಡಿದೆ. ನನ್ನ ದೇಹದಿಂದ ಬಲ್ಬ್ ಬೆಳಗಿದ ನಂತರ ನನ್ನ ಸಹೋದರಿ ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿಯೂ ಇಟ್ಟು ನೋಡಲಾಯಿತು.ಇಲ್ಲಿಯೂ ಬಲ್ಬ್ ಬೆಳಗುತ್ತಿರೋದು ಖಾತ್ರಿಯಾಯಿತು. ಬಲ್ಬ್ ಹೇಗೆ ಬೆಳಗಿತು ಅಂತ ಆಶ್ಚರ್ಯ ಆಗ್ತಿದೆ ಎಂದಿದ್ದ. ಆದರೆ ಈಗ ದೇಹದಲ್ಲಿ ವಿದ್ಯುತ್​ ಉತ್ಪತ್ತಿಯಾಗಿತ್ತ ಎಂಬುವುದನ್ನು ಅಲ್ಲಗಳೆದಿದ್ದಾರೆ.

ಇನ್ನು ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದು, ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈವರೆಗೂ ಕೇಂದ್ರದಿಂದ ರಾಜ್ಯಗಳಿಗೆ 25.60 ಕೋಟಿ ಡೋಸ್ ಹಂಚಿಕೆಯಾಗಿದೆ. ಈವರೆಗೂ 24.44 ಕೋಟಿ ಡೋಸ್ ಬಳಕೆಯಾಗಿದೆ. ರಾಜ್ಯಗಳಲ್ಲಿ ಸದ್ಯ 1.17 ಕೋಟಿ ಡೋಸ್ ಬಳಕೆಗೆ ಲಭ್ಯವಿದೆ. ಇನ್ನು ಮೂರು ದಿನಗಳಲ್ಲಿ 38 ಲಕ್ಷ ಡೋಸ್ ಹಂಚಿಕೆಯಾಗಕಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: