ಪಕ್ಷ ಬಿಟ್ಟು ಹೋದವರು ನನಗೆ ಶಾಕ್ ಕೊಡೋಕೆ ಆಗಲ್ಲ: ನನಗೆ ಮಮತಾ ಬ್ಯಾನರ್ಜಿಯೇ ಸ್ಫೂರ್ತಿ; ಎಚ್​ಡಿಕೆ

ಪಕ್ಷ ಬಿಟ್ಟು ಹೋದವರಿಗೆ ಜೆಡಿಎಸ್ ಗೆ ಶಾಕ್ ಕೊಡೋಕೆ ಆಗಲ್ಲ. ನನಗೆ ಮಮತಾ ಬ್ಯಾನರ್ಜಿ ಸ್ಫೂರ್ತಿಯಾಗಿದ್ದು ಮುಂದಿನ ದಿನಗಳಲ್ಲಿ ಫಿನಿಕ್ಸ್ ಹಕ್ಕಿಯಂತೆ ಪಕ್ಷ ಮತ್ತೆ ಮೇಲೆದ್ದು ಬರಲಿದೆ ಎಂದು ಎಚ್​ಡಿಕೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.

  • Share this:
ಹುಬ್ಬಳ್ಳಿ: ನಮ್ಮ ಪಕ್ಷವನ್ನು ಬಿಟ್ಟು ಹೋದವರು ನಮಗೆ ಶಾಕ್ ಕೊಡೋಕೆ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಬುನಾದಿ ಭದ್ರವಾಗಿದೆ. ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಜಿ ಟಿ ದೇವೇಗೌಡರು ಪಕ್ಷ ಬಿಡೋದು ನನಗೆ ಮೊದಲೇ ಗೊತ್ತಿದೆ. ಶಕ್ತಿ ಇದೇನು ನನಗೆ ಹೊಸ ವಿಷಯವಲ್ಲ. ಆದ್ರೆ ಕೆಲ ವಾಹಿನಿಗಳು ಜೆಡಿಎಸ್ ಗೆ ಮತ್ತೊಂದು ಶಾಕ್ ಅಂತ ಸುದ್ದಿ ಪ್ರಸಾರ ಮಾಡುತ್ತಲೇ ಇವೆ. ದೇವೇಗೌಡರು ಪ್ರೀತಿಯಿಂದ ಜೆಡಿಎಸ್ ಪಕ್ಷದಲ್ಲೇ ಮುಂದುವರಿದಂತೆ ಜಿ ಟಿ ದೇವೇಗೌಡರಿಗೆ ಕೇಳಿದ್ದಾರೆ. ನಾನು ಈಗಾಗಲೇ ತೀರ್ಮಾನ ಕೈಗೊಂಡಿರುವುದಾಗಿ ಜಿ ಟಿ ದೇವೇಗೌಡ್ರು ಹೇಳಿದ್ದಾರೆ. ಅದಕ್ಕೆ ನಾವೇನು ಮಾಡೋಕಾಗುತ್ತೆ.

ಈ ವೇಳೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರೇ ನನಗೆ ಸ್ಫೂರ್ತಿಯಾಗಿದ್ದಾರೆ. ಎಷ್ಟೋ ನಾಯಕರು ಬಿಜೆಪಿಗೆ ಹೋದರೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರು. ಯಾರೋ ಹಳಬರು ಹೋದಕೂಡಲೇ ಹೆದರಿಕೊಂಡು ಕೂಡ ಪ್ರಶ್ನೆಯೇ ಇಲ್ಲ.

ಹೊಸ ಮುಖಗಳನ್ನು ಆಯ್ಕೆ ಮಾಡಿ ಪಕ್ಷವನ್ನು ಕಟ್ಟುತ್ತೇನೆ. ನಮ್ಮ ಪಕ್ಷದಲ್ಲಿ ಕಾರ್ಯಕರ್ತರಲ್ಲಿಯೂ ಇಚ್ಛಾಶಕ್ತಿ ಕೊರತೆ ಇದೆ. ನಾನು ಬೆಂಗಳೂರಿಗೆ ಹೋಗುತ್ತಿದ್ದಂತೆ , ಮನೆಗೆ ಹೋಗಿ ಮಲಗುತ್ತಾರೆ. ಹೀಗಾಗಿ ನಮ್ಮ‌ ಪಕ್ಷ ಉತ್ತರ ಕರ್ನಾಟಕದಲ್ಲಿ ಸಂಘಟನೆ ಆಗುತ್ತಿಲ್ಲ. ಯಾರು ಪಕ್ಷ ಬಗ್ಗೆ ಸಿರಿಯಸ್‌ ಆಗಿ ಕೆಲಸ‌ ಮಾಡ್ತಾರೆ ಅವರಿಗೆ ಮಣೆ  ಹಾಕುತ್ತೇವೆ. ಜನತಾ ಪರಿವಾರದ ಹಳಬರನ್ನ ಒಟ್ಟುಗೂಡಿಸುವ ಆಸಕ್ತಿ ಇಲ್ಲ. ಹೊಸಬರಿಂದಲೇ ಪಕ್ಷ ಕಟ್ಟುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಯುಕೆಪಿ ಗಾಗಿ ಆಲಮಟ್ಟಿಯಿಂದ ಹೋರಾಟ:

ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಅಸಡ್ಡೆ ಮಾಡುತ್ತಿದ್ದು ನೀರಾವರಿ ಯೋಜನೆಯ ನಿರ್ಲಕ್ಷ್ಯದ ವಿರುದ್ಧ ಜೆಡಿಎಸ್ ಹೋರಾಟ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ಜೊತೆ ಕಾವೇರಿ ನೀರಿನ ವಿಷಯದಲ್ಲೂ ಕೇಂದ್ರ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ.

ಆವತ್ತಿನ ಜಯಲಲಿತಾ ಸರ್ಕಾರದ ಒತ್ತಡಕ್ಕೆ ಮೋದಿ ಸರ್ಕಾರ ಮಣಿಯಿತು. ಯುಕೆಪಿ ವಿಷಯದಲ್ಲೂ ಕೇಂದ್ರ ಉತ್ತರ ಕರ್ನಾಟಕಕ್ಕೆ ದ್ರೋಹ ಮಾಡಿದೆ. ಮಹಾದಾಯಿ ವಿಷಯದಲ್ಲೂ ಗೋವಾದಂತಹ ಸಣ್ಣ ರಾಜ್ಯದ ಒತ್ತಡಕ್ಕೆ ಮಣಿಯುತ್ತಿದೆ. ಬಿಜೆಪಿಯಿಂದ ಏನ್ ಕೊಡುಗೆ ಸಿಗುತ್ತಿದೆ ಎನ್ನೋದನ್ನ ಜನ ಅರ್ಥ ಮಾಡ್ಕೋಬೇಕು.

ಕರ್ನಾಟಕದಿಂದ 25 ಸಂಸದರನ್ನು ಬಿಜೆಪಿಯಿಂದ ಆಯ್ಕೆ ಮಾಡಿ ಕಳಿಸಲಾಗಿದೆ. ಆದರೆ ರಾಜ್ಯದ ಯೋಜನೆಗಳ ಬಗ್ಗೆ ಯಾರೊಬ್ಬರು ಧ್ವನಿ ಎತ್ತುತ್ತಿಲ್ಲ. ರಾಜ್ಯದ ಐವರು ಕೇಂದ್ರ ಸಚಿವರಾದರೂ ಯಾವುದೇ ಪ್ರಯೋಜನವಿಲ್ಲ. ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ಮಾಡಿಕೊಂಡು ಕಾಲಹರಣ ಮಾಡ್ತಿದಾರೆ.

ಇನ್ನು ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೇಳಿ ಒಣ ಘೋಷಣೆ ಮಾಡಿತ್ತು. ಕಾಂಗ್ರೆಸ್ ಹೋರಾಟದಿಂದ ಯಾವುದೇ ಪ್ರಯೋಜನವಾಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಿಸಲು ಆಗುತ್ತಿಲ್ಲ. ಇದರ ವಿರುದ್ಧ ಹೋರಾಟ ಮಾಡಲಿಕ್ಕೆ ಜೆಡಿಎಸ್ ಎಂದು ಸಜ್ಜಾಗಿತ್ತು. ಆದರೆ ಕೊರೊನಾ ದಿಂದ ಹೋರಾಟ ಮಾಡಲಿಲ್ಲ.

ನಮ್ಮಿಂದ ಜನರಿಗೆ ತೊಂದರೆಯಾಗಬಾರದು ಎನ್ನೋ ಉದ್ದೇಶಕ್ಕೆ ನಾವ್ ಬೀದಿಗೆ ಬಂದಿಲ್ಲ. ನೀರಾವರಿ ಯೋಜನೆಗಳ ಕುರಿತು ಪಾದಯತ್ರೆ ಹೋರಾಟ ಆರಂಭ ಮಾಡ್ತೆವೆ. ಕೃಷ್ಣಾ ಮಲಪ್ರಭಾ ಎತ್ತಿನಹೊಳೆ ಕಾವೇರಿ ಸೇರಿ ಎಲ್ಲ ನೀರಾವರಿ ಯೋಜನೆಗಳ ಕುರಿತು ಜೆಡಿಎಸ್ ಹೋರಾಟ ಮಾಡಲಿದೆ. ಇನ್ನೊಂದು ತಿಂಗಳಲ್ಲಿ ಹೋರಾಟ ಮಾಡ್ತೆವೆ. ಕೊರೋನಾ ನಿಯಂತ್ರಣಕ್ಕೆ ಬದ್ರೆ ಕೇಂದ್ರದ ಕಣ್ತೆರೆಸಲು ಪಾದಯಾತ್ರೆ ಮಾಡ್ತೆವೆ. ಇದೇ ವಿಜಯದಶಮಿಯಿಂದ ನಮ್ಮ ಹೋರಾಟ ಆರಂಭವಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
Published by:Sharath Sharma Kalagaru
First published: