• Home
 • »
 • News
 • »
 • state
 • »
 • Hubballi: ಯಶ್-ರಾಧಿಕಾ ಪಂಡಿತ್ ಮಕ್ಕಳಿಗೆ ತೊಟ್ಟಿಲು ತಯಾರಾಗಿದ್ದುಇಲ್ಲೇ!

Hubballi: ಯಶ್-ರಾಧಿಕಾ ಪಂಡಿತ್ ಮಕ್ಕಳಿಗೆ ತೊಟ್ಟಿಲು ತಯಾರಾಗಿದ್ದುಇಲ್ಲೇ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಈ ತೊಟ್ಟಿಲಿನ ರೂಪ ಕಂಡು ಡಾ. ರಾಜ್​ಕುಮಾರ್ ಅವ್ರೇ ತಲೆದೂಗಿದ್ದರು. ಇಲ್ಲಿಂದಲೇ ಯಶ್ ಮಕ್ಕಳಿಗೆ ತೊಟ್ಟಿಲು ಹೋಗಿದ್ದು, ಇಲ್ಲಿ ಮಾಡಿದ ತೊಟ್ಟಿಲಲ್ಲೇ ಚಿರು ಸರ್ಜಾ ಮಗ ರಾಯನ್ ಸರ್ಜಾ ಆಟವಾಡಿ ಬೆಳೆದದ್ದು!

 • News18 Kannada
 • Last Updated :
 • Hubli-Dharwad (Hubli), India
 • Share this:

  ಹುಬ್ಬಳ್ಳಿ:  ಜೋ ಜೋ ಲಾಲಿ ಅಂತಾ ಹಾಡಿದ್ರೆ ಸಾಕೇ? ತೂಗೋ ತೊಟ್ಟಿಲು ಹಾಗೇ ಇರ್ಬೇಕಲ್ವೇ? ಮುದ್ದಾದ ಮಗುವಿನಷ್ಟೇ ನಯವಾದ ತೊಟ್ಟಿಲಿದ್ದರೆ ಇನ್ನೂ ಚೆಂದ ಅಲ್ವೇ? ನಿಜ, ಹೀಗೆ ಕೆತ್ತನೆ ಮಾಡ್ತಿರೋ ಈ ಕುಶಲಕರ್ಮಿಗಳು ತಯಾರಿಸ್ತಿರೋದು ಕೂಡಾ ಅಂತಹದ್ದೇ ಮುದ್ದಾದ ತೊಟ್ಟಿಲು.. ಆ ಕಡೆ ಅಮ್ಮಂದಿರು ಜೋ ಲಾಲಿ ಎನ್ನುತ್ತಿದ್ದರೆ ಮಕ್ಕಳು ಪಟ್ ಅಂತ ಕಣ್ಮುಚ್ಚಿಕೊಳ್ಳುತ್ತವೆ.


  ಕಲರ್ ಕಲರ್ ಡಿಸೈನ್​ನ್​ನಲ್ಲಿರೋ ಈ ತೊಟ್ಟಿಲುಗಳ ಮಹಿಮೆ ಅಂತಿಂತದ್ದಲ್ಲ. ಈ ತೊಟ್ಟಿಲಿನ ರೂಪ ಕಂಡು ಡಾ. ರಾಜ್​ಕುಮಾರ್ ಅವ್ರೇ ತಲೆದೂಗಿದ್ದರು. ಇಲ್ಲಿಂದಲೇ ಯಶ್ ಮಕ್ಕಳಿಗೆ ತೊಟ್ಟಿಲು ಹೋಗಿದ್ದು, ಇಲ್ಲಿ ಮಾಡಿದ ತೊಟ್ಟಿಲಲ್ಲೇ ಚಿರು ಸರ್ಜಾ ಮಗ ರಾಯನ್ ಸರ್ಜಾ ಆಟವಾಡಿ
  ಬೆಳೆದದ್ದು! ಹೌದು, ಅಷ್ಟೊಂದು ಸ್ಪೆಷಲ್ಲಾಗಿವೆ ಈ ತೊಟ್ಟಿಲುಗಳು.


  ತೊಟ್ಟಿಲುಗಳ ತವರೂರು ಈ ಗ್ರಾಮ!
  ವಿಧವಿಧದ ಚಿತ್ತಾರದ ಹೆಣಿಗೆಯಿರುವ ಈ ತೊಟ್ಟಿಲು ಪೂರ್ಣವಾಗಿ ಮರದ ಕೆತ್ತನೆಯದ್ದೇ. ಅಷ್ಟಕ್ಕೂ ಈ ತೊಟ್ಟಿಲುಗಳ ತವರೂರಾದ್ರೂ ಯಾವುದು ಗೊತ್ತಾ? ಅದುವೇ ಧಾರವಾಡ ಜಿಲ್ಲೆಯ ಕಲಘಟಗಿ..


  ರಾಮಾಯಣ, ಮಹಾಭಾರತದ ಮೆಕ್ಕಾ-ಮದೀನಾ, ಏಸು ಎಲ್ಲರೂ ತೊಟ್ಟಿಲಲ್ಲಿ!
  ಈ ತೊಟ್ಟಿಲುಗಳನ್ನ ತೇಗದ ಮರದಿಂದ ತಯಾರಿಸಲಾಗುತ್ತೆ. ಸ್ಥಳೀಯ ಬಡಿಗೇರ್ ವಂಶಸ್ಥರು ಎರಡು ಶತಮಾನಗಳಿಂದ ತಯಾರಿಸ್ತಿದ್ದಾರೆ. ಈಗ ಸದ್ಯ ತಿಪ್ಪಣ್ಣ ಬಡಿಗೇರ್ ಹಾಗೂ ಮಾರುತಿ ಬಡಿಗೇರ್ ಈ ತೊಟ್ಟಿಲು ತಯಾರಿಕೆಯಲ್ಲಿ ತೊಡಗಿದ್ದಾರೆ. ತೊಟ್ಟಿಲಿನ ಬಹುಮುಖ್ಯ ಆಕರ್ಷಣೆ ರಾಮಾಯಣ, ಮಹಾಭಾರತದ ಕಥೆಗಳನ್ನು ತೊಟ್ಟಿಲಲ್ಲಿ ಚಿತ್ರಿಸುವುದರ ಜೊತೆಗೆ ಮೆಕ್ಕಾ-ಮದೀನಾ, ಏಸು ಚರಿತೆಯನ್ನ ಸಹಾ ತೊಟ್ಟಿಲಿನಲ್ಲಿ ಬಣ್ಣ ಬಣ್ಣದಲ್ಲಿ ಚಿತ್ರಿಸಲಾಗ್ತದೆ. ಈ ಬಣ್ಣವನ್ನ ಅರಿಕೆ ಬಣ್ಣ ಎಂದು ಕರೆಯಲಾಗ್ತದೆ. ಗಿಡಮೂಲಿಕೆಗಳಿಂದ ತಯಾರಿಸಿದ ಬಣ್ಣವನ್ನು ಮಾತ್ರ ತೊಟ್ಟಿಲಿಗೆ ಲೇಪಿಸೋದ್ರಿಂದ ಮಗುವಿಗೆ ತೊಂದ್ರೆ ಆಗೋದಿಲ್ಲ.


  ತಯಾರಿಗೆ ತಿಂಗಳುಗಟ್ಟಲೇಬೇಕು!
  ಇಷ್ಟೊಳ್ಳೆ ದಿವೀನಾದ ತೊಟ್ಟಿಲು ತಯಾರಿಸೋಕೆ ಬರೋಬ್ಬರಿ ಒಂದು ತಿಂಗಳು ಬೇಕು. ಸ್ಟ್ಯಾಂಡ್ ಮಾಡಲು ಎರಡು ತಿಂಗಳಾಗುತ್ತೆ. ಹೀಗಾಗಿ ಯಾರು ಯಾರಿಗೆ ತೊಟ್ಟಿಲು ಬೇಕೋ ಮುಂಚಿತವಾಗಿ ಇವರಿಗೆ ತಿಳಿಸಬೇಕು.


  ಇದನ್ನೂ ಓದಿ: Success Story: 70 ವರ್ಷದ ಈ ಡಿಪ್ಲೋಮಾ ಸ್ಟೂಡೆಂಟ್ ರಾಜ್ಯಕ್ಕೇ ಫಸ್ಟ್!


  ಮರದ ಕಟ್ಟಿಗೆಯಿಂದಲೇ ತಯಾರಾಗುವ ಈ ಐಶಾರಾಮಿ ತೊಟ್ಟಿಲಿನ ಬೆಲೆ 70,000ದಿಂದ ಶುರುವಾಗುತ್ತದೆ. ಅಲ್ಲದೇ ಈ ಒಂದೇ ತೊಟ್ಟಿಲು ಎರಡು ಮೂರು ತಲೆಮಾರುಗಳ ತನಕ ಬಾಳಿಕೆ ಬರುತ್ತದೆ.


  ಹರಕೆ ತೊಟ್ಟಿಲನ್ನೂ ಆರ್ಡರ್ ಮಾಡಬಹುದು!
  ಇನ್ನು ಹರಕೆ ತೊಟ್ಟಿಲಿನ ವಿಷಯಕ್ಕೆ ಬಂದ್ರೆ ತೊಟ್ಟಿಲುಗಳ ಗಾತ್ರಕ್ಕೆ ತಕ್ಕಂತೆ ಬೆಲೆ. ಹೀಗೆ ತೊಟ್ಟಿಲು ತೂಗುತ್ತಾ ಮಗು ಮಲಗಿಸೋ ಆಸೆ ನಿಮ್ಮದಾಗಿದ್ದರೆ ನೀವು ಕೂಡಾ ಇಂತಹ ವೆರೈಟಿ ತೊಟ್ಟಿಲುಗಳನ್ನ ಆರ್ಡರ್ ಮಾಡಬಹುದು.


  ಇದನ್ನೂ ಓದಿ: Hubballi Girmit: ಹುಬ್ಬಳ್ಳಿ ಗಿರ್ಮಿಟ್ ಸ್ಪೆಷಲ್! ತಿಂದರೆ ತಿಂತಾನೇ ಇರ್ತೀರಿ!


  ನಿಮಗೂ ತೊಟ್ಟಿಲು ಬೇಕಿದ್ದರೆ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಹಾಗೂ ಬೇಕಾದ ಮಾದರಿಯ ತೊಟ್ಟಿಲನ್ನು ನಿಮ್ಮ ಮಗುವಿನ ಫಸ್ಟ್ ಗಿಫ್ಟಾಗಿ ಕೊಡಬಹುದಂತೆ!


  ಸಂಪರ್ಕ ಸಂಖ್ಯೆ ತಿಪ್ಪಣ್ಣ:9480317207 ಮಾರುತಿ:9242211652


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: