• Home
  • »
  • News
  • »
  • state
  • »
  • Cabinet Expansion: ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ- ಪ್ರಹ್ಲಾದ್​ ಜೋಶಿ, ಸಚಿವಾಕಾಂಕ್ಷಿ ನಾನಲ್ಲ ಎಂದ್ರು ವಿಜಯೇಂದ್ರ

Cabinet Expansion: ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ- ಪ್ರಹ್ಲಾದ್​ ಜೋಶಿ, ಸಚಿವಾಕಾಂಕ್ಷಿ ನಾನಲ್ಲ ಎಂದ್ರು ವಿಜಯೇಂದ್ರ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿರೋ ವೇಳೆಯಲ್ಲಿಯೇ ನಾನು ಸಚಿವಾಕಾಂಕ್ಷಿಯಲ್ಲ ಎಂದು ವಿಜಯೇಂದ್ರ ತಿಳಿಸಿದ್ದಾರೆ.

  • Share this:

ಹುಬ್ಬಳ್ಳಿ (ಮಾ.13):  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನ ಹಿಂದೆಯೇ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ (Cabinet Expansion) ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸದ್ಯಕ್ಕಿಲ್ಲ ಎಂದು ಕೇಂದ್ರ ಸಚಿವ (Union Minister) ಪ್ರಹ್ಲಾದ್ ಜೋಶಿ (Prahlad Joshi) ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸ್ಥಾನಕ್ಕೆ ಒತ್ತಡ ತರೋ ಪ್ರಯತ್ನ ನಡೆಸಿಲ್ಲ ಎಂದು ವಿಜಯೇಂದ್ರ (Vijayendra) ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸದ್ಯಕ್ಕಿಲ್ಲ ಎಂದು ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ  ಸಂದರ್ಭದಲ್ಲಿ ಮಾತನಾಡಿದ ಅವರು, ಅಲ್ಲಿಯವರೆಗೆ ಯಾವುದೇ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದರು.


ಮಾರ್ಚ್ 30 ರವರೆಗೆ ರಾಜ್ಯ ವಿಧಾನಸಭೆ ಅಧಿವೇಶನ


ಏಪ್ರಿಲ್ 8 ರವರೆಗೆ ಲೋಕಸಭೆ ಅಧಿವೇಶನ ಇದೆ. ಮಾರ್ಚ್ 30 ರವರೆಗೆ ರಾಜ್ಯ ವಿಧಾನಸಭೆ ಅಧಿವೇಶನ ಇದೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆ ನಡೆಸಲಾಗುವುದು. ಅಲ್ಲಿಯವರೆಗೆ ಯಾವುದೇ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದರು. ಡಿಕೆಶಿ ಗೋವಾಕ್ಕೆ‌ ಹೋಗಿದ್ದಕ್ಕೆ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಅವರು ಯಾಕೆ ಹೋಗಿದ್ರು ಅನ್ನೊದು ಇನ್ನು ಅರ್ಥವಾಗಿಲ್ಲ ಎಂದ್ರು.


ಗುಂಡಾಗಿರಿ ಮಾಡಲು ಡಿಕೆಶಿ ಗೋವಾ ಹೋಗಿದ್ರಾ?


ತೋಳ್ಬಲ ತೋರಿಸಲು, ಗುಂಡಾಗಿರಿ ಮಾಡಲು ಡಿಕೆಶಿ ಗೋವಾ ಹೋಗಿದ್ರಾ? ಕೂಸು ಹುಟ್ಟುವ ಮುನ್ನಕುಲಾವಿ ಹೊಲಿಸಿದ್ರು ಎಂಬಂತೆ ಕಾಂಗ್ರೆಸ್ ನಡೆ ಇದೆ. ಫಲಿತಾಂಶ ಬರುವ ಮುನ್ನ ಹೋಗಿ ಗುಂಡಾಗಿರಿ‌ ಮಾಡಲು ತಯಾರಿ ಮಾಡಿದ್ರಾ..? ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ವಿಸರ್ಜಿಸಿ‌ ಅಂತ ಗಾಂಧಿ ಹೇಳಿದ್ರು, ಅದನ್ನು ರಾಹುಲ್ ಗಾಂಧಿ ಕಾರ್ಯರೂಪಕ್ಕೆ ತರುತ್ತಿದ್ದಾರೆ‌. ಇದು ಖುಷಿಯ ವಿಚಾರ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ. ಹೈಕಮಾಂಡ್ ನೀಡೋ ಜವಾಬ್ದಾರಿ ನಿಭಾಯಿಸ್ತೇನೆ.


ನಾನು ಸಚಿವ ಆಕಾಂಕ್ಷಿ ಅಲ್ಲ


ನಾನು ಸಚಿವ ಆಕಾಂಕ್ಷಿ ಅಲ್ಲ. ಸಚಿವ ಸಂಪುಟ ಸೇರ್ಪಡೆಗೆ ಎಲ್ಲಿಯೂ ಒತ್ತಡ ತಂದಿಲ್ಲ. ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವುದಷ್ಟೇ ನನ್ನ ಕೆಲಸ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರ್ತೇವೆ ಎನ್ನೋ ಭ್ರಮೆಯಲ್ಲಿದ್ದರು. ಅವರಿಗೆ ಆಘಾತವಾಗಿದೆ. ಈಗಾಗಲೇ ಯಡಿಯೂಪ್ಪ ನವರು ಅದನ್ನ ಅಸೆಂಬ್ಲಿಯಲ್ಲೇ ಹೇಳಿದ್ದಾರೆ. ಬಿಜೆಪಿ ಗೆಲುವು ಕಾಂಗ್ರೆಸ್ ನಿದ್ದೆಗೆಡಿಸಿದ್ರೆ, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತರಿಸಿದೆ ಎಂದರು.


ಇದನ್ನೂ ಓದಿ: SriRamulu: ಮಹಿಳೆಯರಿಗೆ ಉಚಿತ ಬಸ್ ಪಾಸ್, ಸಚಿವ ಬಿ.ಶ್ರೀರಾಮುಲು ಹೇಳಿಕೆ


ನಾನು ಸಂಪುಟ ಸೇರ್ಪಡೆಯಾಗುವುದು ಕೇವಲ ಊಹಾಪೋಹ. ನಾನು ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆ ಕೆಲಸ ಮಾಡ್ತೇನೆ. ಯಡಿಯೂರಪ್ಪನವರು ತನ್ನ ಪುತ್ರನನ್ನು ಸಂಪುಟಕ್ಕೆ ಸೇರ್ಪಡೆ ಮಾಡೋಕೆ ಒತ್ತಡ ತರ್ತಿದ್ದಾರೆ ಅಂತ ಸುದ್ದಿಯಾಗ್ತಿದೆ. ಆದರೆ ಅದೆಲ್ಲವೂ ಸತ್ಯಕ್ಕೆ ದೂರವಾದ ಮಾತು. ನಾನು ಮಂತ್ರಿಯಾಗಬೇಕೆಂದು, ತನ್ನ ಮಗನನ್ನು ಮಂತ್ರಿಮಾಡಬೇಕೆಂದು ಯಡಿಯೂರಪ್ಪ ಅವರು ಕೂಡ ಕೇಂದ್ರ ನಾಯಕರ ಮುಂದಿಟ್ಟಿಲ್ಲ. ನಾನೂ ಕೂಡಾ ಮಂತ್ರಿ ಆಗ್ತೇನೆ ಅಂತ ಆಸೆ ಹೊಂದಿಲ್ಲ. ಸದ್ಯ ಉಪಾಧ್ಯಕ್ಷನಾಗಿದ್ದೇನೆ, ರಾಜ್ಯ ಉಪಾಧ್ಯಕ್ಷನಾಗಿ ಪಕ್ಷದ ಸಂಘಟನೆ ಮಾಡ್ತೇನೆ. ಸಚಿವಾಕಾಂಕ್ಷಿ ಆಗೋ ಪ್ರಶ್ನೆಯೇ ಇಲ್ಲ. ಪಕ್ಷದ ಹೈಕಮಾಂಡ್ ಏನು ಜವಾಬ್ದಾರಿ ವಹಿಸುತ್ತೋ ಅದನ್ನು ಮಾಡ್ತೇನೆ ಎಂದರು.


ನಡ್ಡಾ ಭೇಟಿ ವೈಯಕ್ತಿಕ ಕೆಲಸಕ್ಕೆ


ಜೆ.ಪಿ. ನಡ್ಡಾ ಅವರನ್ನ ಭೇಟಿಯಾಗಿದ್ದು ನನ್ನ ವೈಯಕ್ತಿಕ ಕೆಲಸಕ್ಕೆ. ಈ ವೇಳೆ ಪಕ್ಷದ ಸಂಘಟನೆ ಬಗ್ಗೆಯೂ ಮಾತನಾಡಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದರು. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುತ್ತೆ ಅನ್ನು ಸಂಗತಿ ಸುಳ್ಳು. ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ರಾಜ್ಯ, ಕೇಂದ್ರ ನಾಯಕ ಹತ್ತಿರ ಯಾವುದೇ ಚರ್ಚೆ ಆಗಿಲ್ಲ.


ಇದನ್ನೂ ಓದಿ: Deve Gowda: "ಕಾಂಗ್ರೆಸ್‌ನಿಂದ ಕಹಿ ಅನುಭವ ಆಗಿದೆ, ಮತ್ತೆ ಸಹವಾಸವೇ ಬೇಡ" ಎಂದ ದೇವೇಗೌಡ! ಮಾಜಿ ಪ್ರಧಾನಿ Exclusive ಮಾತು


ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ತಮ್ಮ ತಂದೆ ಜೊತೆ ನಾನೂ ಕೂಡೂ ಬಿಜೆಪಿ ಸಂಘಟನೆಗೆ ಕೆಲಸ ಮಾಡ್ತೇನೆ ಎಂದರು. ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ನಲ್ಲಿ ಸದಸ್ಯತ್ವ ಆಗ್ತಿಲ್ಲ ಅಂತ ಡಿಕೆಶಿ ಹೇಳಿದ್ದಾರೆ. ಯುವ ಸಮೂಹ ಬಿಜೆಪಿ ಜೊತೆಗಿರೋದ್ರಿಂದ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ದೇಶದ ಇತರೆ ರಾಜ್ಯಗಳಲ್ಲಿಯಂತೆ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ವಿಜಯೇಂದ್ರ ತಿಳಿಸಿದರು.

Published by:ಪಾವನ ಎಚ್ ಎಸ್
First published: