Dharwad Child Death: 10 ತಿಂಗಳ ಮಗು ಅನುಮಾನಾಸ್ಪದ ಸಾವು: ತಂದೆ-ತಾಯಿಯಿಂದ ಪರಸ್ಪರರ ಮೇಲೆ ಕೊಲೆ ಆರೋಪ!

ತಂದೆಯೇ ಮಗುವಿಗೆ ವಿಷ ಹಾಕಿ ಸಾಯಿಸಿದ್ದಾನೆ ಎನ್ನುವ ಆರೋಪ ತಾಯಿಯದ್ದು. ಆದ್ರೆ ತಾಯಿಯೇ ವಿಷ ಹಾಕಿ ಸಾಯಿಸಿದ್ದಾಳೆ ಎಂದು ತಂದೆ ಪ್ರತ್ಯಾರೋಪ ಮಾಡುತಿದ್ದಾನೆ. ಹೀಗಾಗಿ ಮಗು ಸತ್ತು 24 ಗಂಟೆಯಾದರೂ ಆ ಮಗುವಿನ ಅಂತ್ಯಕ್ರಿಯೆ ನಡೆದಿಲ್ಲ.

ತಂದೆ-ತಾಯಿ, ಮಗು

ತಂದೆ-ತಾಯಿ, ಮಗು

  • Share this:
ಧಾರವಾಡ : ಏನು ಅರಿಯದ‌ ಮುಗ್ದ ಕೂಸು,  ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದ ಆ ಮಗುವೀಗ ಅನುಮಾನಾಸ್ಪವಾಗಿ ಸಾವನ್ನಪ್ಪಿದೆ (Suspicious death ). ಮಗುವಿನ  ಅಂತ್ಯ ಸಂಸ್ಕಾರ ಮಾಡಬೇಕಾದ ತಂದೆ-ತಾಯಿ ಪೊಲೀಸ್ ಠಾಣೆಯ ಮೇಟ್ಟಿಲೆರಿದ್ದಾರೆ. ಅಂತ್ಯಸಂಸ್ಕಾರ ಆಗದೇ ಆ ಮಗುವಿನ ಶವ ಜಿಲ್ಲಾ ಆಸ್ಪತ್ರೆಯ ಶವಾಗಾರ(marchary)ದಲ್ಲಿ ಇಡಲಾಗಿದೆ. ಧಾರವಾಡ (Dharwad ) ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ನಡೆದ ಘಟನೆ ಇದು. ಈ ಗ್ರಾಮದ ಮಹ್ಮದ್​​​ ಅಲಿ ಅಗಸಿಮನಿ ಹಾಗೂ ಸಮ್ರಿನ್ ಎಂಬ ದಂಪತಿಯ ಮಗು ಮೃತಪಟ್ಟಿದೆ. ಕಂದನ ಸಾವಿನ ಬೆನ್ನಲ್ಲೇ ತಂದೆ-ತಾಯಿ ಪೊಲೀಸ್​ ಠಾಣೆ ಮೆಟ್ಟಿಲೇರಿ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾನೆ. 

ಏಕಾಏಕಿ ಉಸಿರು ಚೆಲ್ಲಿದ ಕಂದಮ್ಮ 

10 ತಿಂಗಳ ಮಗು ತನ್ವೀರ್​ ಏಕಾಏಕಿ ವಾಂತಿ ಮಾಡುತ್ತ ಅಳಲಾರಂಭಿಸಿದ್ದನು. ಹೀಗಾಗಿ ತಾಯಿ ಮಗುವಿಗೆ ಔಷಧ ಕುಡಿಸಿ ಜೋಳಿಗೆಯಲ್ಲಿ ಮಲಗಿಸಿದ್ದಾಳೆ. ಆದರೆ ಮಗು ಮತ್ತಷ್ಟು ಅಸ್ವಸ್ಥಗೊಂಡಿದೆ. ಆಗ ಮನೆಯಲ್ಲಿರುವ ಎಲ್ಲರೂ ಸೇರಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ತಂದಿದ್ದಾರೆ. ಅಷ್ಟೊತ್ತಿಗೆ ಮಗು ಉಸಿರು ಚೆಲ್ಲಿತ್ತು.  ಮಗುವಿನ ಶವ ತೆಗೆದುಕೊಂಡು ಮನೆಗೆ ಹೋದಾಗ ವಿಷದ ವಾಸನೆ ಬಂದಿದೆ. ಹೀಗಾಗಿ ಎಲ್ಲರೂ ಸೇರಿ ಮತ್ತೆ ಬೆಳಿಗ್ಗೆ ಮಗುವನ್ನು ಆಸ್ಪತ್ರೆಗೆ ತಂದು ಶವಾಗಾರದಲ್ಲಿ ಇರಿಸಿದ್ದಾರೆ.

ತಂದೆ-ತಾಯಿ ಮಧ್ಯೆ ಆರೋಪ-ಪ್ರತ್ಯಾರೋಪ

ತಂದೆಯೇ ಮಗುವಿಗೆ ವಿಷ ಹಾಕಿ ಸಾಯಿಸಿದ್ದಾನೆ ಎನ್ನುವ ಆರೋಪ ತಾಯಿಯದ್ದು. ಆದ್ರೆ ತಾಯಿಯೇ ವಿಷ ಹಾಕಿ ಸಾಯಿಸಿದ್ದಾಳೆ ಎಂದು ತಂದೆ ಪ್ರತ್ಯಾರೋಪ ಮಾಡುತಿದ್ದಾನೆ. ಹೀಗಾಗಿ ಮಗು ಸತ್ತು 24 ಗಂಟೆಯಾದರೂ ಆ ಮಗುವಿನ ಅಂತ್ಯಕ್ರಿಯೆ ನಡೆದಿಲ್ಲ. ಮಹ್ಮದ್​​ ಅಲಿ ಹಾಗೂ ಸಮ್ರಿನ್ ಮದುವೆಯಾದ ಬಳಿಕ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಆದರೆ ನಿನ್ನೆ ಮಗುವಿನ ಯಾರು ವಿಷ ಹಾಕಿದರೋ ಗೊತ್ತಿಲ್ಲ. ಮಗು ಮಾತ್ರ ಸತ್ತು ಹೋಗಿದೆ. ಇನ್ನು ಈ ದಂಪತಿಗಳಿಬ್ಬರೂ ಬೇರೆಯವರ ಹೊಲದಲ್ಲೇ ಕೆಲಸ ಮಾಡಿ ಜೀವನ ಮಾಡುವವರು. ಆದರೆ ನೆಮ್ಮದಿಯಿಂದ ಇರಬೇಕಾದ ಈ ಕುಟುಂಬ ಈ ಮಗುವಿನ ಸಾವಿನಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸದ್ಯ ಯಾರು ಈ ಮಗುಗೆ ವಿಷ ಹಾಕಿದ್ದು ಎನ್ನುವದು ಗೊತ್ತಾಗಲಿ ಎಂದು ಎಲ್ಲರೂ ಕೇಳುವಂತೆ ಆಗಿದ್ದು.

FSL ವರದಿಗೆ ಕಾಯುತ್ತಿರುವ ಪೊಲೀಸರು 

ಹೆತ್ತತಾಯಿ ಹೇಗೆ ಮಗುವಿಗೆ ವಿಷ ಹಾಕಲು ಸಾಧ್ಯ. ಒಂಬತ್ತು ತಿಂಗಳು ಹೊತ್ತು, ಹೆತ್ತವಳು ವಿಷ ಹಾಕ್ತಾಳಾ ಅಂತಾ ತಾಯಿ ಕಡೆಯ ಸಂಬಂಧಿಗಳು ಪ್ರಶ್ನಿಸುತ್ತಿದ್ದಾರೆ, ಇದರಲ್ಲಿ ಮಗುವಿನ ತಂದೆಯದ್ದೇ ಕೈವಾಡ ಇದೆ ಎಂದು ಆರೋಪಿಸುತ್ತಿದ್ದಾರೆ  ಮಗುವಿನ ತಾಯಿ ಸಂಬಂಧಿ ಮುಕ್ತುಂಬಿ.  ಒಟ್ಟಾರೆಯಾಗಿ ಗಂಡ ಹೆಂಡಿರ ಜಗಳದ ಮಧ್ಯೆ ಈಗ ಮಗು ಅನುಮಾನಸ್ಪದವಾಗಿ ಸತ್ತು ಹೋಗಿದ್ದು, ಸದ್ಯ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರೋ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ತಂದೆ-ತಾಯಿ ಇಬ್ಬರನ್ನೂ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೇ ಎಫ್ಎಸ್ಎಲ್ ವರದಿ ಬಳಿಕವೇ ಮುಂದಿನ ಕ್ರಮ ಕೈಗೊಳ್ಳೋ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: Bangalore Theft News: ಬೆಂಗಳೂರಿಗರೇ ಎಚ್ಚರ.. ಮನೆ ಮುಂದೆ ಪಾರಿವಾಳ ಬಂದು ಕೂತರೆ ಡೇಂಜರ್!

ಇನ್ನು 2 ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಾಲ್ವರು ಊಟ ಮಾಡಿದ್ದ ಆಹಾರವನ್ನ ಪರೀಕ್ಷೆ ಮಾಡಿದ ಎಫ್​ಎಸ್​ಎಲ್​ (FSL), ಆಹಾರದಲ್ಲಿ ವಿಷ ಬೆರೆತಿರುವ ಕುರಿತು ವರದಿ ನೀಡಿದೆ. ತಂದೆ, ತಾಯಿ, ತಂಗಿ, ಅಜ್ಜಿ ಸಾವಿನ ಹಿಂದೆ ಅಪ್ರಾಪ್ತ ಪುತ್ರಿಯ ಕೈವಾಡ ಇರೋದು ಪೋಲೀಸರ ತನಿಖೆ ಯಲ್ಲಿ ಬಯಲಾಗಿದೆ. ತಂದೆ ತಾಯಿ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದರು, ಬೈಯುತ್ತಿದ್ದರು ಅನ್ನೋ ಕಾರಣಕ್ಕೆ ತಿನ್ನುವ ಅನ್ನಕ್ಕೆ ವಿಷ ಹಾಕಿದ್ದನ್ನ ಆರೋಪಿ ಒಪ್ಪಿಕೊಂಡಿದ್ದಾಳೆ.
Published by:Kavya V
First published: