ನಕಲಿ ಬ್ಯಾಂಕ್ ಖಾತೆ ಸೃಷ್ಟಿ - ಬರೋಬ್ಬರಿ 24 ಲಕ್ಷ ವಿದ್ಯಾರ್ಥಿ ವೇತನ ಗುಳುಂ

ಹುಬ್ಬಳ್ಳಿಯ ಹೆಗ್ಗೆರೆ ಆಯುರ್ವೇದ ಕಾಲೇಜಿನಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ವಿದ್ಯಾರ್ಥಿನ ವೇತನದ 24 ಲಕ್ಷ ರೂಪಾಯಿಯನ್ನ ಲಪಟಾಯಿಸಿರುವ ಹಗರಣ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಆಯುರ್ವೇದ ವಿದ್ಯಾಲಯ

ಹುಬ್ಬಳ್ಳಿಯ ಆಯುರ್ವೇದ ವಿದ್ಯಾಲಯ

  • Share this:
ಹುಬ್ಬಳ್ಳಿ: ನಕಲಿ ಖಾತೆ ಸೃಷ್ಟಿಸಿ ಬಡ ವಿದ್ಯಾರ್ಥಿಗಳಿಗೆ ಸೇರಬೇಕಾಗಿದ್ದ ಲಕ್ಷಾಂತರ ರೂಪಾಯಿ ವಿದ್ಯಾರ್ಥಿ ವೇತನ ಗುಳುಂ ಮಾಡಲಾಗಿದೆ. ಕಾಲೇಜಿನ ಪ್ರಾಂಶುಪಾಲರ ಖಾತೆಗೆ ಹೋಗೋ 24 ಲಕ್ಷ ರೂಪಾಯಿ ಹಣ ಅನಾಮಧೆಯ ವ್ಯಕ್ತಿಯ ಖಾತೆಗೆ ಜಮಾ ಆಗಿದೆ. ನಕಲಿ ಖಾತೆ ತೆಗೆದು 24 ಲಕ್ಷ ರೂಪಾಯಿ ವಂಚನೆ ಘಟನೆ ಹುಬಳ್ಳಿಯ ಹೆಗ್ಗೆರೆ ಆಯುರ್ವೇದಿಕ್ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಹೆಗ್ಗೆರೆಯ ಆಯುರ್ವೇದಿಕ್ ಕಾಲೇಜಿನ ಹೆಸರಲ್ಲಿ ಹಿಂದುಳಿದ ವರ್ಗ ಇಲಾಖೆಯ ಸಿಬ್ಬಂದಿ ಯೋರ್ವ ನಕಲಿ ಖಾತೆ ತೆಗೆದಿದ್ದಾನೆ ಎನ್ನಲಾಗಿದೆ.

ನಕಲಿ ಖಾತೆ ಸೃಷ್ಟಿಸಿದ ಕಿಲಾಡಿ, ವಿದ್ಯಾರ್ಥಿ ವೇತನವನ್ನು ನಕಲಿ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾನೆ.  2017 - 18 ನೇ ಸಾಲಿನಲ್ಲಿ ವಂಚನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರ ಖಾತೆಗೆ ವರ್ಗಾಯಿಸುವ ಬದಲು ನಕಲಿ ಖಾತೆಗೆ ಜಮಾ ಮಾಡಿ ವಂಚನೆ ಮಾಡಲಾಗಿದೆ.

ಬರೋಬ್ಬರಿ 24 ಲಕ್ಷ ರೂಪಾಯಿ ಪಂಗನಾಮ ಹಾಕಲಾಗಿದೆ. ವಿದ್ಯಾರ್ಥಿಗಳಿಗೆ ಬರಬೇಕಿದ್ದ 24,40,090  ರೂಪಾಯಿ ವಿದ್ಯಾರ್ಥಿ ವೇತನ ವಂಚನೆಯಾಗಿದೆ ಎಂದು ಆರೋಪಿಸಲಾಗಿದೆ. 2017 - 18, 2018 - 19 ಹಾಗು 2019 - 20 ರ ಸಾಲಿನ ಆಂತರಿಕ ಲೆಕ್ಕ ತಪಾಸಣೆ ಮಾಡಿದಾಗ ವಂಚನೆ ಬಹಿರಂಗಗೊಂಡಿದೆ ಎಂದು ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: CM Ibrahim - ಸಿದ್ದರಾಮಯ್ಯಗೆ ಮೇಕಪ್ ಮಾಡಿದವರೇ ನಾವು: ಸಿಎಂ ಇಬ್ರಾಹಿಂ

ಒಟ್ಟು 100 ವಿದ್ಯಾರ್ಥಿಗಳಿಗೆ ಬರಬೇಕಿದ್ದ ವಿದ್ಯಾರ್ಥಿ ವೇತನ ಬೇರೆ ಖಾತೆಗೆ ಜಮಾ ಆಗಿದೆ. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸಕ್ಕೆಂದು ಬಿಡುಗಡೆಗೊಂಡ ಹಣ ದುರ್ಬಳಕ್ಕೆ ಮಾಡಿಕೊಳ್ಳಲಾಗಿದೆ. ಯಾರ ಗಮನಕ್ಕೂ ಬಾರದಂತೆ ವ್ಯವಸ್ಥಿತವಾಗಿ ಹಣ ಲಪಟಾಯಿಸಲಾಗಿದೆ.

ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಇದೆಲ್ಲವನ್ನೂ ಯಾರೋ ಗೊತ್ತಿದ್ದವರೇ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಹತ್ತಿ ಮೊಳಕೆಯೊಡೆಯದ ರೈತ ಕಂಗಾಲು...

ಬಿತ್ತಿದ ಬೀಜ ಮೊಳಕೆಯೊಡೆಯದೆ ಧಾರವಾಡ ಜಿಲ್ಲೆಯ ರೈತ ಕಂಗಾಲಾಗಿದ್ದಾನೆ. ಬಿತ್ತಿದ ಬೀಜ ಮೊಳಕೆಯೊಡೆಯದೆ ಮತ್ತೊಮ್ಮೆ ಬಿತ್ತನೆ ಮಾಡುವಂತ ಪರಿಸ್ಥಿತಿ ಧಾರವಾಡ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಹತ್ತಿ ಬಿತ್ತಿದ ರೈತ ಕಣ್ಣೀರಿನಲ್ಲಿ ಕೈ ತೊಳೀತಿದ್ದಾನೆ.

ಇದನ್ನೂ ಓದಿ: COVID Vaccination ರಾಜ್ಯದಲ್ಲಿ​ ಯಾವ ಜಿಲ್ಲೆ ಫಸ್ಟ್​​, ಯಾವುದು ಲಾಸ್ಟ್?

ಅತಿಯಾದ ಮಳೆಯಿಂದ ಅಥವಾ ಕಳಪೆ ಬೀಜದ ಸಮಸ್ಯೆಯೊ ಗೊತ್ತಾಗದೆ ರೈತ ಕಂಗಾಲಾಗಿದ್ದಾನೆ. ಮೊಳಕೆಯೊಡೆಯುವ ಮುನ್ನವೆ ಬಿತ್ತನೆ ಬೀಜ ಹಾಳಾಗಿದೆ. ಮತ್ತೆ ಬೀಜ ನಾಟಿ ಮಾಡೋ ಅನಿವಾರ್ಯತೆಯಲ್ಲಿರೋ ರೈತನಿದ್ದಾನೆ. ಹುಬ್ಬಳ್ಳಿ ತಾಲೂಕು ಸೇರಿ ಹಲವೆಡೆ ರೈತರು ಎರಡನೆಯ ಬಾರಿಗೆ ಹತ್ತಿ ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರೈತ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಉಚಿತವಾಗಿ ಬಿತ್ತನೆ ಬೀಜ ನೀಡಿ, ನೆರವಾಗುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: