Hubballi: ಪ್ರಚೋದನಾಕಾರಿ ಪೋಸ್ಟ್: ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ: ಪೊಲೀಸರಿಂದ ಗಾಳಿಯಲ್ಲಿ ಗುಂಡು

ಕಿಡಿಗೇಡಿಯೊಬ್ಬ ಸಾಮಾಜಿಕ ಜಾತಲಾಣದಲ್ಲಿ ಹಾಕಿದ ಪೋಸ್ಟ್ ನಿಂದಾಗಿ ಹುಬ್ಬಳ್ಳಿ ಉದ್ವಿಗ್ನಗೊಂಡಿದೆ. ಕಲ್ಲು ತೂರಾಟದಲ್ಲಿ ಹಲವು ಪೊಲೀಸ್ ಜೀಪ್ ಗಳು ಜಖಂಗೊಂಡು, ಹಲವು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹುಬ್ಬಳ್ಳಿ

ಹುಬ್ಬಳ್ಳಿ

  • Share this:
ಹುಬ್ಬಳ್ಳಿ : ಕಿಡಿಗೇಡಿಯೋರ್ವನ ಪ್ರಚೋದನಾಕಾರಿ ಪೋಸ್ಟ್ (Provocative Post) ಶಾಂತವಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿ (Hubballi)ಯಲ್ಲಿ ಉದ್ವಿಗ್ನತೆ ಸೃಷ್ಟಿಸುವಂತೆ ಮಾಡಿದೆ. ಪೋಸ್ಟ್ ಹಾಕಿದ ಯುವಕನ ಬಂಧನದ (Youth Arrest) ನಂತರವೂ ಭಾರೀ ಪ್ರಮಾಣದಲ್ಲಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ (Hale Hubballi Police Station) ಬಳಿ ಜಮಾಯಿಸಿದ್ದ ಮತ್ತೊಂದು ಸಮುದಾಯಕ್ಕೆ ಸೇರಿದ ಗುಂಪು ಕಲ್ಲು ತೂರಾಟ ಮಾಡಿದೆ. ಹಲವು ಪೊಲೀಸ್ ಜೀಪ್ (Police Jeep) ಗಳು ಜಖಂಗೊಂಡಿದ್ದು, ಓರ್ವ ಪೊಲೀಸ್ ಇನ್ಸ್ ಪೆಕ್ಟರ್ ಸೇರಿ ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ಮಕ್ಕಾ ಮಸೀದಿ (Mecca Mosque) ಚಿತ್ರದ‌ ಮೇಲೆ ಕೇಸರಿ ಧ್ವಜ (Saffron Flag) ಹಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ ವಿವಾದದ ಸ್ವರೂಪ ಪಡೆದುಕೊಂಡಿದೆ.

ಯುವಕನೋರ್ವ ಫೋಟೋ ಎಡಿಟ್ (Photo Edit) ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಕಿಡಿಗೇಡಿ ಯುವಕನನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೋಸ್ಟ್ ವೈರಲ್ (Post Viral) ಆಗುತ್ತಿದ್ದಂತೆಯೇ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಅನ್ಯ ಕೋಮಿನ ಗುಂಪು ದಿಢೀರಾಗಿ ಕಲ್ಲು ತೂರಾಟ ಆರಂಭಿಸಿದೆ.

ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು

ಈ ಗಲಾಟೆಯಲ್ಲಿ ಹಲವು ಪೊಲೀಸ್ ವಾಹನಗಳು ಜಖಂಗೊಂಡಿವೆ. ಬಸ್ ಗಳ ಮೇಲೂ ಕಲ್ಲು ತೂರಾಟ ಮಾಡಲಾಗಿದೆ. ಉಪ ನಗರ ಠಾಣೆ ಇನ್ ಸ್ಪೆಕ್ಟರ್ ವಾಹನ ಜಖಂಗೊಂಡಿದೆ. ದುಷ್ಕರ್ಮಿಗಳು ಪೊಲೀಸ್ ಜೀಪ್ ನ್ನು ಪಲ್ಟಿ ಹೊಡಿಸಿದ್ದಾರೆ. ಹಳೆ ಹುಬ್ಬಳ್ಳಿಯ ದಿಡ್ಡಿ‌ ಓಣಿಯ ಗುರುವ ಆಸ್ಪತ್ರೆಯ ಮೇಲೂ ದಾಳಿ ಮಾಡಲಾಗಿದೆ.

ಇದನ್ನೂ ಓದಿ:  Chamarajanagar: 6 ವರ್ಷಗಳ ಬಳಿಕ ಬಿಳಿಗಿರಿರಂಗನಾಥಸ್ವಾಮಿ ರಥೋತ್ಸವ; ಟ್ರಾಫಿಕ್ ಜಾಮ್‌

ಪೊಲೀಸ್ ಇನ್ ಸ್ಪೆಕ್ಟರ್ ಕಾಡದೇವರಮಠ ಸೇರಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಲವು ಜನರಿಗೂ ಗಾಯಗಳಾಗಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಉದ್ರಿಕ್ತರನ್ನು ಚುದುರಿಸಲು ಲಾಠಿ ಚಾರ್ಚ್ ಮಾಡಿರೋ ಪೊಲೀಸರು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಟಿಯರ್ ಗ್ಯಾಸ್ ನ್ನೂ ಸಿಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಶಾಂತಿ ಕಾಪಾಡುವಂತೆ ಮುಸ್ಲಿಂ ಮುಖಂಡರ ಮನವಿ

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂ ರಾಮ್, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು. ಘಟನೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಶಾಂತಿ ಕಾಪಾಡುವಂತೆ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಕಾಂಗ್ರೆಸ್ ಮುಖಂಡ ಶಹಾಜಮಾನ್ ಮುಜಾಹಿದ್ ಮನವಿ ಮಾಡಿದ್ದಾರೆ.

stone pelting over social media post Section 144 imposed in hubballi
ಪೊಲೀಸ್ ಜೀಪ್ ಪಲ್ಟಿ


ಕೋಮು ದ್ವೇಷ ಬಿತ್ತುವ ಕಿಡಿಗೇಡಿಯನ್ನು ಈಗಾಗಲೇ ಬಂಧಿಸಲಾಗಿದೆ. ರಂಜಾನ್ ಮಾಸ ಇರೊ ಹಿನ್ನೆಲೆಯಲ್ಲಿ ಎಲ್ಲರೂ ಶಾಂತಿ ಕಾಪಾಡಬೇಕು. ಉದ್ರೇಕಕ್ಕೆ ಒಳಗಾಗಿ ಕೆಲವರು ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆ ನಡೆಯಬಾರದಾಗಿತ್ತು. ಎಲ್ಲರೂ ಶಾಂತಿ ಕಾಪಾಡುವಂತೆ ಅಲ್ತಾಫ್ ಕಿತ್ತೂರ ಮನವಿ ಮಾಡಿದ್ದಾರೆ.

ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದ ಪೊಲೀಸ್ ಆಯುಕ್ತ.

ಈ ಕುರಿತು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಪೊಲೀಸ್ ಆಯುಕ್ತ ಲಾಭೂ ರಾಮ್, ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ನಿಂದಾಗಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಬಂಧನದ ನಂತರವೂ ಪೊಲೀಸ್ ಠಾಣೆ ಎದುರು ಜನ ಜಮಾಯಿಸಿದಾಗ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ಹಲವು ಸಿಬ್ಬಂದಿಗೆ ಗಾಯಗಳಾಗಿವೆ.

ಇದನ್ನೂ ಓದಿ:  Hijab Row: ಆರು ಜನ ವಿದ್ಯಾರ್ಥಿನಿಯರ ಪಾಪದ ಕೂಸು ಈ ಧರ್ಮ ಸಂಘರ್ಷ: ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ

ಪೊಲೀಸ್ ವಾಹನ ಸೇರಿ ಹಲವು ವಾಹನಗಳು ಜಖಂಗೊಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹುಬ್ಬಳ್ಳಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಲಾಭೂ ರಾಮ್ ತಿಳಿಸಿದ್ದಾರೆ.
Published by:Mahmadrafik K
First published: