• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Pramod Muthalik: ರಾಜ್ಯ ಬಿಜೆಪಿ ಸರ್ಕಾರಕ್ಕೆ ಗಣೇಶನ ಶಾಪ ತಟ್ಟಲಿದೆ : ಪ್ರಮೋದ್ ಮುತಾಲಿಕ್ ಆಕ್ರೋಶ

Pramod Muthalik: ರಾಜ್ಯ ಬಿಜೆಪಿ ಸರ್ಕಾರಕ್ಕೆ ಗಣೇಶನ ಶಾಪ ತಟ್ಟಲಿದೆ : ಪ್ರಮೋದ್ ಮುತಾಲಿಕ್ ಆಕ್ರೋಶ

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

ಬ್ರಿಟಿಷರು ಕೂಡ ಸಾರ್ವಜನಿಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವುದನ್ನು‌ ನಿಲ್ಲಿಸಿರಲಿಲ್ಲ. ಬ್ರಿಟಿಷ್ ಬ್ಯಾನ್ ಮಾಡದಿರುವುದನ್ನು‌ ನೀವು ಬ್ಯಾನ್ ಮಾಡುತ್ತಿದ್ದಿರಿ ಎಂದು ಕಿಡಿಕಾಡಿದರು.

  • Share this:

ಧಾರವಾಡ : ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೆ ಆಗ್ರಹಿಸಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​​‌ ಮುತಾಲಿಕ್​​ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರಕ್ಕೆ ನಾವು ಭಿಕ್ಷೆ ಬೇಡುತ್ತಿಲ್ಲ, ಇದು ನಮ್ಮ‌ ಹಕ್ಕು. ನಾವು ಸಾರ್ವಜನಿಕ ಗಣೇಶ ಪ್ರತಿಷ್ಠನೆ ಮಾಡಿಯೇ ಮಾಡುತ್ತೆವೆ. ನಮ್ಮ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಲಿ, ಗುಂಡು ಬೇಕಾದ್ರು ಹೊಡೆಯಲಿ. ಸಾರ್ವಜಿಕವಾಗಿ ಗಣೇಶೋತ್ಸವ ನಡೆಸಿಯೇ ತೀರುತ್ತೇವೆ ಎಂದು ಮುತಾಲಿಕ್​​​ ಘೋಷಿಸಿದರು. ನಿರಂತರವಾಗಿ ಒಂದು ತಿಂಗಳಿನಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಇಂದು ಕ್ಯಾಬಿನೆಟ್ ನಲ್ಲಿ ನಿರ್ಣಯ ತೆಗೆದುಕೋಳ್ಳುತ್ತೆವೆ ಎಂದಿದ್ದರು. ಇಂದು ನಿರ್ಣಯ ಆಗಿಲ್ಲ, ಸೆ.೫ ರಂದು ಸಭೆ ಮಾಡುವುದಾಗಿ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರ ಪಧಾಧಿಕಾರಿಗಳಿಗೆ ಮಾನ-ಮರ್ಯಾದೆ ಇದ್ರೆ ಸಭೆ ಮಾಡಲಿ ಎಂದು ಸವಾಲೆಸೆದರು.


ಹಿಂದೂತ್ವದ ಬಗ್ಗೆ ಕಳಕಳಿ ಇದ್ರೆ ಸೆ. ೧೦ರಂದು ಸಭೆ ಮಾಡಿ . ಅಂದು ಸಾರ್ವಜನಿಕ ಗಣೇಶ ಪ್ರತಿಷ್ಠಾನಕ್ಕೆ‌ ಪರವಾನಿಗೆ ಕೊಡುತ್ತಿರೋ ಬಿಡ್ತಿರೋ ನೋಡಿ ಎಂದು ವ್ಯಂಗ್ಯವಾಡಿದರು. ಸರ್ಕಾರ ಅಪಹಾಸ್ಯಕ್ಕೆ ಒಳಗಾಗುತ್ತಿದೆ. ಬ್ರಿಟಿಷರು ಕೂಡ ಸಾರ್ವಜನಿಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವುದನ್ನು‌ ನಿಲ್ಲಿಸಿರಲಿಲ್ಲ. ಬ್ರಿಟಿಷ್ ಬ್ಯಾನ್ ಮಾಡದಿರುವುದನ್ನು‌ ನೀವು ಬ್ಯಾನ್ ಮಾಡುತ್ತಿದ್ದಿರಿ ಎಂದು ಕಿಡಿಕಾಡಿದರು.


ಬಿಜೆಪಿಯವರು ಕೇಸರಿ ಶಾಲು ಹಾಕಿಕೊಂಡು ಹಿಂದುತ್ವ, ಹಿಂದೂ ಧರ್ಮ ಎಂದು ಹೇಳುತ್ತಾರೆ. ನೀವೇ ಅಪಪ್ರಚಾರ ಮಾಡುತ್ತಿದ್ದಿರಿ, ಇದು ನಿಮಗೆ ಶೋಭೆ ತರುವಂತದಲ್ಲ. ಜನರ ಶಾಪ ಅಲ್ಲ, ಗಣೇಶನ ಶಾಪ ಸರ್ಕಾರಕ್ಕೆ ತಟ್ಟಲಿದೆ. ನೀವು ಏನು ಬೇಕಾದ್ರು ಮಾಡಿಕೋಳ್ಳಿ ನಾವು ಸಾರ್ವಜನಿಕ ಗಣೇಶ ಪ್ರತಿಷ್ಟಾಪನೆ ಮಾಡುತ್ತೆವೆ ಎಂದು ಪಟ್ಟು ಹಿಡಿದರು.


ಇದನ್ನೂ ಓದಿ: BS Yediyurappa: ಬಿಎಸ್​ವೈ ರಾಜ್ಯ ಪ್ರವಾಸ: ಪ್ರಭಾವಿ ನಾಯಕನ ಮೇಲೆ ಕಣ್ಣಿಟ್ಟ ಬಿಜೆಪಿ ಹೈಕಮಾಂಡ್​


ಕೋವಿಡ್ ನಿಯಮಗನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಆಚರಣೆ ಮಾಡುತ್ತೆವೆ. ನೂತನ‌ ಸಿಎಂ‌ ನೇತೃತ್ವದಲ್ಲಿ ನಡೆದ ಸಭೆ ನೋಡಿದ್ರೆ ನನಗೆ ಸಂಶಯ ಬರುತ್ತಿದೆ. ಸೆಕ್ಯುಲರ್​​, ಕೋಮುವಾದಿಗಳು, ದೇಶಭಕ್ತರು ಎಲ್ಲರು ಮಿಕ್ಸ್ ಆಗಿದ್ದಾರೆ. ವ್ಯವಸ್ಥಿತವಾಗಿ ಹಿಂದುತ್ವಕ್ಕೆ ಅಪಚಾರ ಮಾಡಬೇಕೆಂದು ಹೀಗೆ ಮಾಡುತ್ತಿದ್ದಾರೆ. ಆಂಧ್ರ, ಮಹಾರಾಷ್ಟ್ರ ರಾಜ್ಯದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಿಗೆ ಇದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಿದ್ದರು ಆರು ತಿಂಗಳ‌ ಮೊದಲೇ ಪರವಾನಿಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಏಕಿಲ್ಲ ಎಂದು ಮುತಾಲಿಕ್​ ಪ್ರಶ್ನಿಸಿದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: