Hubli: ಲವರ್ ಜೊತೆ ಮಗ ಪರಾರಿ.. ತಂದೆಯ ಉಗುರು ಕಿತ್ತು ಟಾರ್ಚರ್ ಕೊಟ್ಟ ಯುವತಿಯ ಮನೆಯವರು!

ಪ್ರೇಮಿಗಳು ಹಾರಿ ಹೋಗಿ ಹಾಯಾಗಿ ಜೀವನ ನಡೆಸ್ತಿವೆ. ಆದ್ರೆ ಯುವಕನ ಪೋಷಕರಿಗೆ ಯುವತಿಯ ಕಡೆಯವರು ಚಿತ್ರಹಿಂಸೆ ನೀಡಿದ್ದಾರೆ. ಉಗುರು ಕಿತ್ತು ಪೈಶಾಚಿಕವಾಗಿ ವರ್ತಿಸಿದ್ದಾರೆ.

ಹುಡುಗನ ಕುಟುಂಬಸ್ಥರ ಮೇಲೆ ಹಲ್ಲೆ

ಹುಡುಗನ ಕುಟುಂಬಸ್ಥರ ಮೇಲೆ ಹಲ್ಲೆ

  • Share this:
ಹುಬ್ಬಳ್ಳಿ : ಲವ್ (Love) ಪ್ರಕರಣಗಳು ಕೆಲವೊಮ್ಮೆ ಏನೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತೆ. ಮಕ್ಕಳು ಲವ್ ಮಾಡಿದರೇ ಪಾಲಕರು (Parents) ಮಕ್ಕಳಿಗೆ ಬುದ್ಧಿ ಹೇಳುವುದು ಕಾಮನ್. ಮಕ್ಕಳು ಮಾತು ಕೇಳಿಲ್ಲ ಅಂದರೆ ಪಾಲಕರು ಮಕ್ಕಳಿಗೆ ಶಿಕ್ಷೆ ಕೊಡುವುದು ಕೂಡ ಸಾಮಾನ್ಯ. ಆದರೆ ಇಲ್ಲೊಂದು ಲವ್ ಸ್ಟೋರಿ (Love Story) ಮಾತ್ರ ವಿಭಿನ್ನವಾಗಿದೆ. ಇಲ್ಲಿ ಮಕ್ಕಳ ಪ್ರೀತಿಗೆ ಪಾಲಕರು ಶಿಕ್ಷೆ ಅನುಭವಿಸುವಂತಾಗಿದೆ.   ಹಾಸಿಗೆ ಹಿಡಿದು ಮಲಗಿರುವ ತಂದೆ. ಮಗನ ತಪ್ಪಿಗೆ ಕಣ್ಣೀರು ಹಾಕುತ್ತಿರುವ ತಾಯಿ.‌ ಇಂತಹದೊಂದು ಮನಕಲುಕುವ ಘಟನೆಗೆ ಸಾಕ್ಷಿಯಾಗಿದ್ದೇ ಹುಬ್ಬಳ್ಳಿಯ ನವನಗರದ ನಂದೀಶ್ವರ ಬಡಾವಣೆ. ಮಗನ ಪ್ರೀತಿಗೆ ದುರುಳರು ಅಪ್ಪನಿಗೆ ಶಿಕ್ಷೆ ಕೊಟ್ಟಿದ್ದು, ಮಗನ ಪ್ರೀತಿಗೆ ತಂದೆಯ ಉಗುರುಗಳನ್ನು ಕಿತ್ತು ವಿಕೃತಿ ಮೆರೆದಿದ್ದಾರೆ. ಹುಬ್ಬಳ್ಳಿಯ ನವನಗರದ ನಂದೀಶ್ವರ ನಿವಾಸಿ ನೂರ ಅಹ್ಮದ ಬ್ಯಾಹಟ್ಟಿ ಎಂಬುವವರನ್ನು ಕಿಡ್ನಾಪ್ ಮಾಡಿ ಮನಬಂದಂತೆ ಹಲ್ಲೆ ನಡೆಸಿದ ದುಷ್ಟರು.

ಮಗನ ಲವ್​ನಿಂದ ತಂದೆಗೆ ಟಾರ್ಚರ್​ 

ಮಗನ ಪ್ರೀತಿಗೆ ತಂದೆಯ ಮೇಲೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ. 53 ವರ್ಷದ ನೂರ್ ಅಹ್ಮದ್ ಬ್ಯಾಹಟ್ಟಿಯ ಎಂಬುವವರನ್ನು ಟಾಟಾ ಸುಮೋ ವಾಹನದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದು, ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ನೀಡಿದಂತಾಗಿದೆ. ತನ್ನದಲ್ಲದ ತಪ್ಪಿಗೆ ಚಿತ್ರ ಹಿಂಸೆಗೆ ಗುರಿಯಾಗಬೇಕಾಯಿತು ಎಂದು ಯುವಕನ ತಂದೆ ನೂರ್ ಅಹ್ಮದ್ ಬ್ಯಾಹಟ್ಟಿ ಕಣ್ಣೀರು ಹಾಕಿದ್ದಾನೆ.

ಪ್ರೇಮಿಗಳಿಬ್ಬರು ಪರಾರಿ.. 

ನೂರ್ ಅಹ್ಮದ್ ಪುತ್ರ ಸುಬಾನಿ ಬ್ಯಾಹಟ್ಟಿ ಮತ್ತು ಯುವತಿ ನಡುವೆ ಪ್ರೇಮಾಂಕುರವಾಗಿತ್ತು. ಸುಬಾನಿ ಮತ್ತು ಆ ಯುವತಿ ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದರು. ಕಳೆದ ಡಿ. 29 ರಂದು ಈ ಜೋಡಿ ಮನೆ ಬಿಟ್ಟು ಪರಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಯುವತಿಯರ ಮನೆಯವರು ಯುವಕನ ತಂದೆಗೆ ಸಾಕಷ್ಟು ಬಾರಿ ಟಾರ್ಚರ್ ಮಾಡಿದ್ದು,‌ ಹುಡುಗನ ತಂದೆಯನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆ. ಟಾಟಾ ಸುಮೋದಲ್ಲಿ ಕಿಡ್ನ್ಯಾಪ್ ಮಾಡಿ ಹುಬ್ಬಳ್ಳಿ ಹೊರಹೊಲಯದ ಪ್ರದೇಶದಲ್ಲಿ ಕಾಲಿನ ಉಗುರು ಕಿತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Mysore: ತಾತನಿಂದ ಕಲಿತ ವಾಮಾಚಾರ ಪ್ರಯೋಗ ಮಾಡಿದ ಗೆಳೆಯರು.. ಪೂಜೆ ವೇಳೆ ಹೆಣ ಬಿದ್ದೇ ಬಿಡ್ತು!

ಆರೋಪಿಗಳ ಬಂಧನ 

ನೂರ್ ಅಹ್ಮದ್ ಸೇರಿ ಯುವಕನ ಕುಟುಂಬಸ್ಥರನ್ನು ಹುಡುಗಿಯ ಮನೆಯವರು ಥಳಿಸಿದ್ದಾರೆ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಿತ್ರ ಹಿಂಸೆ ನೀಡಿದ್ದ 5 ಜನರ ಬಂಧನ ಮಾಡಲಾಗಿದೆ. ಇಬ್ರಾಹಿಂ ಖಾನ್ ಕಿತ್ತೂರ, ಇಲಿಯಾಸ್ ಕಿತ್ತೂರ, ಶಬ್ಬೀರ್ ಬೆಟಗೇರಿ, ಸಲ್ಮಾ ಕಿತ್ತೂರ, ಹೀನಾ ಕಿತ್ತೂರ ಬಂಧಿತರು ಆರೋಪಿಗಳಾಗಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಯುವಕನ ಅಜ್ಜಿ ರಹಮತ್ ಬೀ ಆಗ್ರಹಿಸಿದ್ದಾಳೆ.  ಲವ್ ಮಾಡಿ ಓಡಿ ಹೋದ ಜೋಡಿ ಅಲ್ಲಿ ಆರಾಮವಾಗಿ ಇದ್ದಾರೆ. ಆದರೆ ಇಲ್ಲಿ ಮಾತ್ರ ಪಾಲಕರು ನರಕಯಾತನೆ ಅನುಭವಿಸುವಂತಾಗಿದೆ. ಪ್ರೀತಿಯನ್ನು ವಿರೋಧಿಸುವ ವಿಕೃತ ಮನಸ್ಸಿನವರಿಗೆ ಶಿಕ್ಷೆ ಕೊಡುವ ಮನಸ್ಸಾದರೂ ಹೇಗೆ ಬಂದಿದೆಯೋ ಅರ್ಥವಾಗುತ್ತಿಲ್ಲ.

ಇನ್ನು ತಾಯಿ ತಾನೂ ಆತ್ಮಹತ್ಯೆ ಮಾಡಿಕೊಂಡು, ತನ್ನಿಬ್ಬರು ಮಕ್ಕಳ ಸಾವಿಗೂ ಕಾರಣಳಾಗಿದ್ದಾಳೆ. ಈ ಮನಕಲಕುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.ತಾಯಿ ಸಂಧ್ಯಾ (33), ಈಕೆಯ 4 ಮತ್ತು 2 ವರ್ಷದ ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ. ತನಗೆ ಬೆಂಕಿ ಹಚ್ಚಿಕೊಂಡ ತಾಯಿ, ಇಬ್ಬರು ಮಕ್ಕಳನ್ನು ತಬ್ಬಿ ಹಿಡಿದಿದ್ದಾಳೆ. ಇದರಿಂದ ಮೂವರು ಬೆಂಕಿಯಲ್ಲಿ ಬೆಂದಿದ್ದಾರೆ. ಮನೆಯಿಂದ ದಟ್ಟ ಹೊಗೆ ಬರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ  ತಾಯಿ ಜೊತೆ ಮಕ್ಕಳು ಸಾವಿನ ಮನೆ ಸೇರಿದ್ದಾರೆ.
Published by:Kavya V
First published: