Hubballiಯಲ್ಲಿ ಆಕಾಶ ಬುಟ್ಟಿ ಹಬ್ಬ; ಮಳೆಯ ನಡುವೆಯೇ ಮುಗಿಲು ಮುಟ್ಟಿದ ಸಂಭ್ರಮ

ಕಾರ್ತಿಕ ಮಾಸ - ದೀಪಾವಳಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಆಕಾಶ ಬುಟ್ಟಿ ಹಬ್ಬ ನಾಗರೀಕರ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿತ್ತು. ಚಿಕ್ಕದರಿಂದ ಹಿಡಿದು ಬೃಹತ್ ಗಾತ್ರದ ಆಕಾಶ ಬುಟ್ಟಿಗಳನ್ನು ಹಾರಿಬಿಟ್ಟ ಜನತೆ ಗಗನದತ್ತ ನೋಡುತ್ತಾ ಕೇಕೆ ಹಾಕಿದರು.

ಆಕಾಶ ಬುಟ್ಟಿ ಹಬ್ಬ

ಆಕಾಶ ಬುಟ್ಟಿ ಹಬ್ಬ

  • Share this:
ಹುಬ್ಬಳ್ಳಿ: ಆ ಆವರಣದಲ್ಲಿ ಎಲ್ಲಿ ನೋಡಿದ್ರೂ ಕಣ್ಮನ ಸೆಳೆಯುವ ಆಕಾಶ ಬುಟ್ಟಿಗಳು. (Lantern Festival)ಮಹಿಳೆಯರು, ಮಕ್ಕಳು ತಾವೇ ತಯಾರಿಸಿದ ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನ ಹಾರಿಸಿ ಆಗಸದತ್ತ ನೋಡಿ ಸಂಭ್ರಮಿಸುತ್ತಿದ್ದ ಕ್ಷಣ. ಎಲ್ಲೆಡೆ ಆಕಾಶ ಬುಟ್ಟಿ ಗಳ ಕಲರವ. ಒಂದರ್ಥದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು.‌‌  ವಾಣಿಜ್ಯ ನಗರಿ ಹುಬ್ಬಳ್ಳಿ (Hubballi)  ನಗರದ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ (Mooru Savira Mutt Groundt, Hubbballi) ಹುಬ್ಬಳ್ಳಿ ಆಕಾಶ‌ಬುಟ್ಟಿ ಹಬ್ಬ ಸಮಿತಿವತಿಯಿಂದ ಆಯೋಜಿಸಲಾಗಿದ್ದ ಆಕಾಶ ಬುಟ್ಟಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತ್ತು.

ಹುಬ್ಬಳ್ಳಿಯ ಮೂರು ಸಾವಿರ ಮಠದ ಗಂಗಾಧರ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಹಬ್ಬಕ್ಕೆ ಮೂರು ಸಾವಿರ ಮಠದ ಗುರುಸಿದ್ದರಾಜ ಯೋಗೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು. ಮಳೆಯ ನಡುವೆಯೇ ನಡೆದ  ಆಕಾಶ ಬುಟ್ಟಿ ಹಬ್ಬದ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿತು.

ಬಣ್ಣ ಬಣ್ಣದ ನಕ್ಷತ್ರ ದೀಪ

ದೀಪಾವಳಿ ಮತ್ತು ಕಾರ್ತಿಕ ಮಾಸದ(Kartik Purnima) ಅಂಗವಾಗಿ ಹಬ್ಬವನ್ನು ಆಯೋಜಿಸಲಾಗಿತ್ತು. ಬಣ್ಣ ಬಣ್ಣದ ನಕ್ಷತ್ರ, ದೀಪ, ಚೌಕಾಕಾರ ಆಕಾಶಬುಟ್ಟಿ ಸಿದ್ಧಪಡಿಸಿ ಆಕಾಶಕ್ಕೆ ಹಾರಿಬಿಟ್ಟರು. ದೀಪ ಹಚ್ಚಿ ಆಕಾಶಕ್ಕೆ ಹಾರಿಬಿಟ್ಟು ಸಂಭ್ರಮಿಸಿದರು.

ಇದನ್ನೂ ಓದಿ:  ಠಾಣೆಯ ಮುಂದೆ ಭಿಕ್ಷೆ ಬೇಡುತ್ತಿದವನ ಜೀವನ ಬದಲಿಸಿದ Inspector

ನೂರಾರು ಮಹಿಳೆಯರು, ಮಕ್ಕಳು, ನಾಗರಿಕರು ಭಾಗಿಯಾಗಿದ್ದರು. ಆಕಾಶ ಬುಟ್ಟಿ ಹಾರಾಟದ ಸ್ಪರ್ಧೆಯೂ(lantern competition) ಆಯೋಜನೆ ಮಾಡಲಾಗಿತ್ತು. ಪುಟ್ಟ ಆಕಾಶ ಬುಟ್ಟಿಯಿಂದ ಹಿಡಿದು ಬೃಹತ್ ಗಾತ್ರದ ಆಕಾಶ ಬುಟ್ಟಿಯವರೆಗೂ ಜನತೆ ಹಾರಿಬಿಟ್ಟರು.

ಹಬ್ಬದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಭಾಗಿ

ಸ್ಪರ್ಧೆಯಲ್ಲಿ ತಾವು ತಯಾರಿಸಿದ ಆಕಾಶ ಬುಟ್ಟಿಗಳನ್ನು ಆಕಾಶದೆತ್ತರಕ್ಕೆ ಹಾರಿಬಿಡುವ ಮೂಲಕ ಸಂತಸ ವ್ಯಕ್ತಪಡಿಸಿದರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳು  ಪಾಲ್ಗೊಂಡಿದ್ದು, ಬಗೆಬಗೆಯ ಬಣ್ಣದ ಆಕಾಶ ಬುಟ್ಟಿಗಳನ್ನ ಅತ್ಯಂತ ಸಂತಸದಿಂದ ಹಾರಿಬಿಡುವ ಮೂಲಕ ಪಾರಂಪರಿಕ ಆಚರಣೆ ಮತ್ತು ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರು.

ಮೂರು ಸಾವಿರ ಮಠದ ಶ್ರೀಗಳ ಹಿತ ವಚನ

ಈ ವೇಳೆ ಮಾತನಾಡಿದ ಮೂರು ಸಾವಿರ ಮಠದ ಶ್ರೀಗಳು, ಆಕಾಶಕ್ಕೆ ಬರೀ ಬುಟ್ಟಿ ಕಳಿಸೋಲ್ಲ. ಬುಟ್ಟಿ ಜೊತೆಗೆ ದೀಪವನ್ನೂ ಕಳಿಸುತ್ತೇವೆ. ಕಾರ್ತಿಕ ಮಾಸದಲ್ಲಿ ಎಲ್ಲರ ಮನೆ ಮುಂದೆ ದೀಪ ಹಚ್ಚಿರುತ್ತೇವೆ. ದೀಪಾವಳಿಯಿಂದ ಮುಂದಿನ ಅಮಾವಾಸ್ಯೆವರೆಗೂ ಮನೆಗಳ ಮುಂದೆ ದೀಪ ಹಚ್ಚಿ ಬೆಳಗುತ್ತೇವೆ ಎಂದರು.

ಇದನ್ನೂ ಓದಿ: ಮುರಿದ Melukote ಬೆಟ್ಟದ ಯೋಗನರಸಿಂಹ ಸ್ವಾಮಿ ದೇಗುಲದ ಕಳಸ! ಭಕ್ತರಲ್ಲಿ ಆತಂಕ

ದೀಪ ಮಂಗಲ ಜ್ಯೋತಿಯ ಸಂಕೇತ. ಕೇವಲ ನಮ್ಮ ಮನೆ ಮುಂದೆ ಬೆಳೆಗಿಸೋ ಜೊತೆಗೆ ಆಕಾಶಕ್ಕೂ ದೀಪ ಕಳಿಸಬೇಕೆಂದು ಸಂಕಲ್ಪ. ಆಕಾಶದ ದೀಪವನ್ನು (Lamps)ಭಗವಂತನ ಬಳಿ ಕಳಿಸೋ ಹಬ್ಬವೇ ಆಕಾಶ ಬುಟ್ಟಿ ಹಬ್ಬ ಎಂದು ಮೂರುಸಾವಿರ ಮಠದ ಶ್ರೀಗಳು ಅಭಿಪ್ರಾಯಪಟ್ಟರು. ಕತ್ತಲನ್ನು ಹೊಗಲಾಡಿಸಿ ಬೆಳಕನ್ನು ಚಿಮ್ಮಲಿ, ಎಲ್ಲರ ಬದುಕಲ್ಲಿ ಬೆಳಕಾಗಲಿ ಎಂದು ಹಾರೈಸಲಾಯಿತು.



ಒಟ್ಟಾರೆ ಇಂದಿನ‌ ಮೊಬೈಲ್ ಯುಗದಲ್ಲಿ ಆನ್ ಲೈನ್ ನಲ್ಲಿಯೇ (Online )ಬ್ಯೂಸಿಯಾಗಿರೋ ಮಕ್ಕಳಿಗೆ ಹಬ್ಬ ಹರಿದಿನಗಳನ್ನು ನಶಿಸಿ ಹೋಗುತ್ತಿರೋ ಹಲವು ಆಚರಣೆಗಳನ್ನು (Festivals)ಈ ರೂಪದಲ್ಲಿ ನೆನಪಿಸಿಕೊಡೋ ಪ್ರಯತ್ನ ಮಾಡಲಾಯಿತು.

ಎರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಆಚರಣೆ

ಈ ಆಕಾಶ ಬುಟ್ಟಿ ಹಬ್ಬದ ಸಂಭ್ರಮವನ್ನ ಪ್ರತಿಯೊಬ್ಬರೂ ಕಣ್ತುಂಬಿಕೊಳ್ಳುವಂತೆ ಪ್ರದರ್ಶಿಸಿದರು. ಕಳೆದ ಎರಡು ವರ್ಷಗಳಿಂದ  ಆಕಾಶ ಬುಟ್ಟಿ ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ಎಲ್ಲರ ಗಮನ ಸೆಳೆಯಲಾರಂಭಿಸಿದೆ. ಇನ್ನು ತಮ್ಮ ಆಕಾಶ ಬುಟ್ಟಿಗಳ ಫೋಟೋಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದರು. 
Published by:Mahmadrafik K
First published: