ಹುಬ್ಬಳ್ಳಿ: ತಾಲೂಕಿನ ಅದರಗುಂಚಿ ಗ್ರಾಮದ (Village) ಬಳಿ ನಡೆದ ಕೊಲೆಯ (Murder) ರಹಸ್ಯವನ್ನು (Secret) ಭೇದಿಸುವಲ್ಲಿ ಹುಬ್ಬಳ್ಳಿ (Hubballi) ಗ್ರಾಮೀಣ ಠಾಣೆಯ ಪೊಲೀಸರು (Rural Station Police) ಯಶಸ್ವಿಯಾಗಿದ್ದಾರೆ. ಮೊನ್ನೆಯಷ್ಟೇ ಅದರಗುಂಚಿ ಗ್ರಾಮದ ಹೊರವಲಯದಲ್ಲಿ ನಡೆದ ಕೊಲೆಗೆ ಬಿಗ್ ಟ್ವಿಸ್ಟ್ (Big Twist) ಸಿಕ್ಕಿದ್ದು, ಅನೈತಿಕ ಸಂಬಂಧಕ್ಕೆ (Immoral relationship) ಅಡ್ಡಿಯಾಗಿದ್ದ ತಮ್ಮನನ್ನೇ (Brother) ಅಕ್ಕ (Sister) ಕೊಲೆ ಮಾಡಿರುವ ಅಂಶ ಪೊಲೀಸ್ ತನಿಖೆ ಮೂಲಕ ಬೆಳಕಿಗೆ ಬಂದಿದೆ. ತಾವು ಕೊಲೆ ಮಾಡಿ ಬೇರೆಯವರ ಮೇಲೆ ಕೊಲೆ ಆರೋಪ ಹೊರಿಸಲು ಹೋದವಳು ಮತ್ತು ಆಕೆಯ ಪ್ರಿಯಕರ ಅಂದರ್ ಆಗಿದ್ದಾರೆ.
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಎರಡು ದಿನಗಳ ಹಿಂದೆ ಶಂಭುಲಿಂಗ ಕಮಡೊಳ್ಳಿ(35) ಎಂಬ ಯುವಕನನ್ನು ಅದರಗುಂಚಿ - ನೂಲ್ವಿ ಗ್ರಾಮಗಳ ನಡುವೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲಿಯೆ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧಕ್ಕೆ ಸಹೋದರ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಶಂಭುವಿನ ಸಹೋದರಿ ಬಸವ್ವ ನರಸಣ್ಣವರ ಹಾಗೂ ಆಕೆಯ ಪ್ರಿಯಕರ ಚನ್ನಪ್ಪ ಮರೆಪ್ಪಗೌರಡ ಸೇರಿಕೊಂಡು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದರು.
ಹೆಣದ ಮುಂದೆ ಕುಳಿತು ಅತ್ತಿದ್ದ ಅಕ್ಕ
ರಾತ್ರಿ ಹೊರಗಡೆ ಹೋದವನು ಬೆಳಿಗ್ಗೆ ಹೆಣವಾಗಿ ಪತ್ತೆಯಾಗಿದ್ದ. ಕೊಲೆ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ನೂಲ್ವಿ ಗ್ರಾಮದ ಕೊಲೆಯಾದ ಸ್ಥಳದ ಬಳಿ ಜಮಾಯಿಸಿತ್ತು. ಪೊಲೀಸರಿಗೆ ಸಂಶಯ ಬಾರದ ರೀತಿಯಲ್ಲಿ ಸಹೋದರಿ ಬಸವ್ವ ಸಹೋದರನ ಶವದ ಎದುರು ಕುಳಿತು ಕಣ್ಣಿರು ಹಾಕಿ ನಾಟಕವಾಡಿದ್ದಳು. ನಂತರ ತಾಯಿಯ ಮೂಲಕ ಆಸ್ತಿಗಾಗಿ ಶಂಭು ಪತ್ನಿಯೇ ಕೊಲೆ ಮಾಡಿಸಿದ್ದಾಳೆ ಎಂಬ ಹೇಳಿಕೆ ನೀಡಿಸಿದ್ದಳು.
ಇದನ್ನೂ ಓದಿ: Datta Peetha: ದತ್ತಪೀಠದ ಹೋಮ ನಡೆಯುವ ಪವಿತ್ರ ಜಾಗದಲ್ಲಿ ಮಾಂಸಾಹಾರ! ಗೋರಿಗೆ ಅರ್ಪಿಸಿದರಾ ಕಿಡಿಗೇಡಿಗಳು?
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ
ಆದರೆ ತನಿಖೆ ಮಾಡಿದ ಪೊಲೀಸರು ಕೊಲೆಗಾರರ ಜಾಡು ಪತ್ತೆಯಾಗಿದೆ. ಕೊಲೆಗಾರರ ಅಸಲಿಯತ್ತು ಬಹಿರಂಗಗೊಂಡಿದೆ. ಪೊಲೀಸ್ ತನಿಖೆಯಲ್ಲಿ ಅನೈತಿಕ ಸಂಬಂಧಕ್ಕೆ ಕೊಲೆ ಮಾಡಿರುವದನ್ನು ಆರೋಪಿಗಳು ಒಪ್ಪಿಕೊಂಡಿದ್ದು, ತನ್ನ ಕಾಮದಾಟಕ್ಕೆ ಒಡ ಹುಟ್ಟಿದ ತಮ್ಮನನ್ನೇ ಬಲಿ ಕೊಟ್ಟಿರೋದು ಬಹಿರಂಗಗೊಂಡಿದೆ. ಸಂಚು ರೂಪಿಸಿ ಕೊಲೆ ಮಾಡಿದ ಅಕ್ಕ ಬಸವ್ವ ಹಾಗೂ ಆಕೆಯ ಪ್ರಿಯಕರನನ್ನು ಇದೀಗ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಶಂಭುವಿಗೆ ಗೆಳೆಯ, ಅಕ್ಕನಿಗೆ ಪ್ರಿಯಕರ!
ಕೊಲೆ ಆರೋಪಿ ಚೆನ್ನಪ್ಪ ಶಂಭವಿನ ಆತ್ಮೀಯ ಗೆಳೆಯನೂ ಆಗಿದ್ದ. ದಿನ ಬೆಳಗಾದರೇ, ಗೆಳೆಯ ಜೊತೆ ಹರಟೆ ಹೊಡೆದು ಹೋಗುತ್ತಿದ್ದ. ಒಂದರ್ಥದಲ್ಲಿ ಕುಚುಕೂ ಕುಚುಕೂ ಗೆಳೆಯನಂತಿದ್ದ. ವಿಚಿತ್ರವೆಂದರೆ ಗಂಡನನ್ನು ಕಳೆದುಕೊಂಡು ತವರು ಮನೆ ಸೇರಿದ್ದ ಬಸವ್ವನಿಂದ ರಾಖಿಯನ್ನೂ ಕಟ್ಟಿಸಿಕೊಂಡಿದ್ದ. ಮೇಲ್ನೋಟಕ್ಕೆ ಎಲ್ಲರ ದೃಷ್ಟಿಯಲ್ಲಿ ಸಹೋದರ ಸಂಬಂಧಿಯಂತೇ ಇದ್ದ ಚೆನ್ನಪ್ಪ, ಒಳಗೊಳಗೆ ಬಸವ್ವಳ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ.
ತಮ್ಮನಿಗೆ ತಿಳಿದಿತ್ತು ಅಕ್ಕನ ಅನೈತಿಕ ಸಂಬಂಧ
ಅಕ್ಕನೆಂದುಕೊಂಡ ವಿಧವೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದು ಬಹಿರಂಗ ಆಗದಂತೆ ನೋಡಿಕೊಂಡಿದ್ದ. ಆದರೆ ಅದು ಹೇಗೋ ಶಂಭವಿಗೆ ಈ ವಿಷಯ ಗೊತ್ತಾಗಿತ್ತು. ಹೀಗಾಗಿ ತಮ್ಮ ಬಂಡವಾಳ ಬಯಲಾಗುತ್ತದೆ ಎಂದು ಲವರ್ ಜೊತೆಗೂಡಿ ಅಕ್ಕಳೇ ತಮ್ಮನ ಕೊಲೆಗೆ ಮುಹೂರ್ತ ಫಿಕ್ಸ್ ಮಾಡಿದ್ದಳು.
ಇದನ್ನೂ ಓದಿ: Blood Letter: ಪಿಎಸ್ಐ ಅಭ್ಯರ್ಥಿಗಳಿಂದ ಪ್ರಧಾನಿಗೆ ರಕ್ತದಲ್ಲಿ 'ಉಗ್ರ' ಸಂದೇಶ! ಅಷ್ಟಕ್ಕೂ ಆ ಪತ್ರದಲ್ಲಿ ಏನಿದೆ?
ಅಂದುಕೊಂಡಂತೆ ಕೊಲೆ ಮಾಡಿ, ಶವವನ್ನು ರಸ್ತೆ ಪಕ್ಕದ ಹೊಲದಲ್ಲಿ ಎಸೆದು ಆರೋಪಿಗಳು ಕೈತೊಳೆದುಕೊಂಡುಬಿಟ್ಟಿದ್ದರು. ಶಂಭುಲಿಂಗನನ್ನ ಕೊಲೆ ಮಾಡಿದ ನಂತರ ಬಟ್ಟೆಯನ್ನ ಬದಲಾಯಿಸಿದ್ದ ಚೆನ್ನಪ್ಪ, ಏನೂ ಆಗಿಲ್ಲ ಎನ್ನುವವನಂತೆ ರಾಯಾಪುರದ ಬಳಿ ಕೆಲಸಕ್ಕೆ ಹೋಗಿದ್ದ. ಹಾಗೆಯೇ ಕೊಲೆಗಾರ್ತಿ ಬಸವ್ವಳೂ ತಮ್ಮನ ಹೆಣದ ಮೇಲೆ ಬಿದ್ದು ಹೊರಳಾಡಿ ಅತ್ತಿದ್ದಳು. ಪೊಲೀಸರು ಮಾತ್ರ ಇಬ್ಬರನ್ನೂ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ