ಚುನಾವಣಾ ಕಣದಲ್ಲಿ BSY ಅಲೆ ಇದೆಯಾ, ಹಾಗಾದರೆ ಸಿಎಂ ಬೊಮ್ಮಾಯಿ ಅಲೆ ಇಲ್ವಾ? Siddaramaiah ವ್ಯಂಗ್ಯ

ನೂರು ಕೋಟಿ ಕೋವಿಡ್ ವ್ಯಾಕ್ಸಿನ್ ಹಾಕಿಸಿರೋದಾಗಿ ತಪ್ಪು ಮಾಹಿತಿ ನೀಡಿ ಸಂಭ್ರಮ ಮಾಡ್ತಾ ಇದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಹುಬ್ಬಳ್ಳಿ:  ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (bs yediyurappa) ಬಂದ ಮೇಲೆ ಸುನಾಮಿ ಅಲೆ (tsunami wave) ಏಳುತ್ತಿದೆಯಾ..? ಹಾಗಾದ್ರೆ ಸಿಎಂ ಬೊಮ್ಮಾಯಿ (cm basavaraj bommai)  ಬಂದಾಗ ಅಲೆ ಇರಲಿಲ್ವಾ...? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah )ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣಾ (by election) ಪ್ರಚಾರಕ್ಕೆ ಯಡಿಯೂರಪ್ಪ ಬಂದ ನಂತರ ಸುನಾಮಿ ಅಲೆ ಏಳಲಿದೆ ಎಂಬ ಸಿಎಂ ಹೇಳಿಕೆಗೆ ಟಾಂಗ್ ಕೊಟ್ಟರು. ಯಡಿಯೂರಪ್ಪ ಪ್ರಚಾರಕ್ಕೆ ಬಂದ ನಂತರ ಸುನಾಮಿ ಅಲೆ ಏಳುತ್ತದೆ ಅನ್ನೋದಾದ್ರೆ ಸಿಎಂ ಬೊಮ್ಮಾಯಿ ಅವ್ರ ಅಲೆ ಏನೂ ಇಲ್ವಾ. ಹಾನಗಲ್ ನಲ್ಲಿ ಮತದಾರರು ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ.

ಬೊಮ್ಮಾಯಿ ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ

ಅಭಿವೃದ್ಧಿ ಮೇಲೆ ಮತ ನೀಡಿ ಅಂತಿದ್ದಾರೆ. ಅವರು ಮಾಡಿದ ಅಭಿವೃದ್ದಿಯ ಪಟ್ಟಿ ಮಾಡಿ ಹೇಳಲಿ. ದುಡ್ಡು ಖರ್ಚು ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ನಾನು ಸಿಎಂ ಆದ ಮೇಲೆ ಹಾವೇರಿಗೆ ಏನೇನು ಕೊಟ್ಟಿದ್ದೇನೆ ಅಂತಾ ಮನೋಹರ್ ತಹಶಿಲ್ದಾರರನ್ನ ಕೇಳಲಿ. ನಾನು 2400 ಕೋಟಿ ಕೊಟ್ಟಿದ್ದೇನೆ. ಸಿಎಂ ಬೊಮ್ಮಾಯಿ ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಜಾತಿ ಧರ್ಮಗಳನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನಮ್ಮಗೆ ಅದು ಗೊತ್ತಿಲ್ಲ. ಅವರ ಬಳಿ ಮುಸ್ಲಿಂ ಮಂತ್ರಿ ಇದಾರಾ.. ಅವರನ್ನ ಯಾಕೆ ಸಚಿವರನ್ನಾಗಿ ಮಾಡಲಿಲ್ಲ.

ಬಿಜೆಪಿ ಸೋಲುತ್ತೆ ಸಿಎಂ ಬೊಮ್ಮಾಯಿಗೆ ಗೊತ್ತಿದೆ 

ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದವರು ಯಾರು..? ನಾವೂ ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾವಣೆ ಮಾಡ್ತೇವಿ ಅಂದವರು ಅವರೇ ಅಲ್ವಾ.. ಅದು ಅಧಿಕೃತ ಆಯ್ತು ಅಲ್ವಾ.. ಅವರಿಗೆ ಅಭಿವೃದ್ಧಿ ಬಗ್ಗೆ ಹೇಳಲು ಏನೂ ಇಲ್ಲ.. ಅದಕ್ಕೆ ದುಡ್ಡು ಖರ್ಚು ಮಾಡುತ್ತಿದ್ದಾರೆ. ದುಡ್ಡು ಹಂಚಿಕೆ ಬಗ್ಗೆ ಆಯೋಗಕ್ಕೆ ದೂರು ನೀಡುವುದನ್ನ ಅವರ ಬಳಿ ಹೇಳಿಸಿಕೊಂಡು ಮಾಡಬೇಕಾ.. ಅದನ್ನ ನಾವೂ ಮಾಡ್ತೀವಿ. ಹಾನಗಲ್ ನಲ್ಲಿ ಬಿಜೆಪಿ ಸೋಲುತ್ತೆ ಅಂತ ನಿರಾಣಿ ಮತ್ತು ಬೊಮ್ಮಾಯಿಗೆ ಗೊತ್ತಿದೆ ಎಂದು ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮಾತುಮಾತಿಗೂ ಅನ್ನಭಾಗ್ಯ ಅಂತಾರೆ, ಅದಕ್ಕೂ ಮೊದಲು ಯಾರೂ ಅಕ್ಕಿ ಕೊಟ್ಟಿರಲಿಲ್ವಾ: CM Bommai

ಶತಕೋಟಿ ವ್ಯಾಕ್ಸಿನ್ ಸುಳ್ಳು..! 

ನೂರು ಕೋಟಿ ಕೋವಿಡ್ ವ್ಯಾಕ್ಸಿನ್ ಹಾಕಿಸಿರೋದಾಗಿ ತಪ್ಪು ಮಾಹಿತಿ ನೀಡಿ ಸಂಭ್ರಮ ಮಾಡ್ತಾ ಇದಾರೆ ಎಂದು ಸಿದ್ದರಾಮಯ್ಯ ಇದೇ ವೇಳೆ ಆರೋಪಿಸಿದ್ದಾರೆ. 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ನೀಡಿದ್ದಾರೆ. 42 ಕೋಟಿ ಜನರಿಗೆ ಮೊದಲ ಡೋಸ್ ನೀಡಿದ್ದಾರೆ. ಈ ಪೈಕಿ ಸತ್ತವರ ಸಂಖ್ಯೆ ಎಷ್ಟು..? 52 ಲಕ್ಷ ಜನ ಸತ್ತಿದ್ದಾರೆ. ಆಕ್ಸಿಜನ್, ಬೆಡ್, ಔಷಧಿ ಕೊಡದೇ ಇರುವುದಕ್ಕೆ 52 ಲಕ್ಷ ಜನರು ಸತ್ತಿದ್ದಾರೆ. ರಾಜ್ಯದಲ್ಲಿ ನಾಲ್ಕು ಲಕ್ಷ ಜನರು ಮೃತಪಟ್ಟಿದ್ದಾರೆ. ಇಷ್ಟಾದರೂ ನೂರು ಕೋಟಿ ಜನರಿಗೆ ವ್ಯಾಕ್ಸಿಂಗ್ ಕೊಟ್ಟಿರೋದಾಗಿ ಸಂಭ್ರಮಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಂಟಲಿಜೆನ್ಸಿ ರಿಪೋರ್ಟ್ ಸುಳ್ಳಾಗುತ್ತೆ ಎಂದ ನಿರಾಣಿ! 

ಇಂಟಲಿಜೆನ್ಸಿ ರಿಪೋರ್ಟ್ ಗಳೂ ಸಹ ಕೆಲವೊಮ್ಮೆ ಸುಳ್ಳಾಗಲಿದ್ದು, ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲ್ಲುತ್ತಾರೆಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನನಗೆ ಹಾನಗಲ್ ಉಸ್ತುವಾರಿ ನೀಡಿದ್ದಾರೆ. ಆದ್ರೆ  ನಾನು ಊರಲ್ಲಿ ಇರಲಿಲ್ಲ.. ಹೀಗಾಗಿ ತಡವಾಗಿ ಬಂದಿದ್ದೇನೆ. ಮಾಜಿ ಸಿಎಂ ಬಿಎಸ್ ವೈ ಜೊತೆ ಪ್ರಚಾರ ಕೈಗೊಳ್ಳುತ್ತೇವೆ. ವಾತಾವರಣ ಚೆನ್ನಾಗಿ ಇದೆ ಹಾನಗಲ್ ನಲ್ಲಿ ನಮಗೆ ನೂರಕ್ಕೆ ನೂರರಷ್ಟು ಮುನ್ನಡೆ ಇದೆ. ಗುಪ್ತಚರ ವರದಿ ಸಹ ಹಲವು ಭಾರಿ ಸುಳ್ಳು ಆಗಿದೆ. ಹೀಗಾಗಿ ನಾವು ಗೆಲ್ಲುತ್ತೇವೆ. ಸಾಧನೆ ಸಿದ್ದಾಂತಗಳ ಬಗ್ಗೆನೇ ಹೇಳಬೇಕು. ಎಲ್ಲ ಪಕ್ಷಗಳಲ್ಲಿಯೂ ವೈಯಕ್ತಿಕ ನಿಂದನೆ ಜೋರಾಗಿದೆ. ಯಾರೂ ವ್ಯಯಕ್ತಿಕ ನಿಂದನೆ ಮಾಡಬಾರದು ಎಂದು ನಿರಾಣಿ ತಿಳಿಸಿದ್ದಾರೆ.
Published by:Kavya V
First published: