ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಾದಯಾತ್ರೆ ಪರ್ವ:  ಸಿದ್ಧರಾಮಯ್ಯ ಮುನ್ಸೂಚನೆ

ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್​​, ಸೋಮಶೇಖರ್‌ಗೆ ಕೋವಿಡ್ ದೃಢಪಟ್ಟಿದ್ದು ನಮ್ಮ ಪಾದಯಾತ್ರೆಯಿಂದನಾ..? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. 

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಹುಬ್ಬಳ್ಳಿ (ಜ. 24):  ಮೇಕೆದಾಟು ಪಾದಯಾತ್ರೆ (Mekedatu March) ವಿಚಾರ, ಕೋವಿಡ್ ಪ್ರಮಾಣ ಏರಿಕೆ ಇತ್ಯಾದಿಗಳ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಗಳ ನಡುವೆ ಮಾತಿನ ಚಕಮಕಿಗಳು ಮುಂದುವರೆದೇ ಇವೆ. ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ (Opposition Leader Siddaramaiah), ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ನೀರಾವರಿ ಯೋಜನೆ, ಸಮಸ್ಯೆಗಳ ಪರಿಹಾರಕ್ಕಾಗಿ ಪಾದಯಾತ್ರೆ (March) ಕೈಗೊಳ್ಳೋ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಪಾದಯಾತ್ರೆ ರಾಜಕಾರಣ ಇಲ್ಲಿಗೇ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಮೇಕೆದಾಟು ಪಾದಯಾತ್ರೆ ತಡೆಗೆ ವೀಕೆಂಡ್​ ಕರ್ಫ್ಯೂ
ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆಯನ್ನ ಹತ್ತಿಕ್ಕಲೆಂದೇ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೆ ತಂದಿತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ.  ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಹರಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್​​, ಸೋಮಶೇಖರ್‌ಗೆ ಕೋವಿಡ್ ದೃಢಪಟ್ಟಿದ್ದು ನಮ್ಮ ಪಾದಯಾತ್ರೆಯಿಂದನಾ..? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಉತ್ತರದತ್ತ ಪಾದಯಾತ್ರೆ ಮುಖಮಾಡೋ ಮುನ್ಸೂಚನೆ...
ಮುಂದಿನ ದಿನಗಳಲ್ಲಿ ಮಹದಾಯಿ ಯೋಜನೆ, ಕೃಷ್ಣ ಮೇಲ್ದಂಡೆ ಯೋಜನೆ ಜಾರಿಗೆ, ಕಲ್ಯಾಣ ಕರ್ನಾಟಕದ ಸಂವಿಧಾನದ 371 (ಜೆ) ಕಲಂ ಸಮರ್ಪಕ ಅನುಷ್ಟಾನಕ್ಕೆ ಒತ್ತಾಯಿಸಿ, ಇಲ್ಲಿನ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸುತ್ತೇವೆ‌. ಮಹದಾಯಿ ಪಾದಯಾತ್ರೆ ಬಗ್ಗೆ ಈಗಾಗಲೇ ಪಕ್ಷದಲ್ಲಿ ಚರ್ಚೆ ನಡೆದಿದೆ. ಕೋವಿಡ್ ತೀವ್ರತೆ ಮುಗಿಯಲಿ. ಮೇಕೆದಾಟು ಪಾದಯಾತ್ರೆ ಪೂರೈಸಿದ ನಂತರ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಕೈಗೊಳ್ಳೋ ಬಗ್ಗೆ ತೀರ್ಮಾನ ಕೈಗೊಳ್ತೇವೆ.

ಇದನ್ನು ಓದಿ: ಅರ್ಧ ಆಯ್ತು, ಸ್ವಲ್ಪ ಆಯ್ತು ಅಂದರೆ ಹೆಣ ಎತ್ತಿಬಿಡ್ತೀನಿ - ಸಚಿವ ವಿ ಸೋಮಣ್ಣ ಆವಾಜ್

ಉತ್ತರ ಕರ್ನಾಟಕಕ್ಕೆ ಬಿಜೆಪಿ ನೀರು ತಂದ್ರಾ?

ನಮ್ಮ ಅಧಿಕಾರದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಹೋರಾಟ ಮಾಡಿದ್ದರು. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಮಹದಾಯಿ ಕಾಮಗಾರಿ ಜಾರಿಗೆ ತರುತ್ತೇವೆ. ರಕ್ತದಲ್ಲಿ ಬರೆದು ಕೊಡುತ್ತೆನೆಂದು ಯಡಿಯೂರಪ್ಪನವರು ಮಾತು ಕೊಟ್ಟಿದ್ದರು. ಅಲ್ಲದೆ ಅಂದಿನ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರಿಂದ ಪತ್ರವನ್ನೂ ಬರೆಯಿಸಿದ್ದರು. ಪತ್ರವನ್ನು ಡಿಸ್ಪ್ಲೇ ಮಾಡಿ ತೋರಿಸಿದ್ದರು.
ಆದರೆ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆದರು. ನಂತರದಲ್ಲಿ ಬೊಮ್ಮಾಯಿ ಸಿಎಂ ಆಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರಿಗೆ ನೀರು ಬಂತಾ...? ಎಂದು ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದನ್ನು ಓದಿ: BBMP ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿಸಿ ವಂಚನೆ- ಮೂವರ ವಿರುದ್ಧ ಪ್ರಕರಣ ದಾಖಲು

ಆದರೆ ಬಿಜೆಪಿಯವರು ಎಂದಿಗೂ ನುಡಿದಂತೆ ನಡೆದುಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಜನರು ಈಗಾಗಲೇ ಕೋವಿಡ್ ನಿಂದ ತತ್ತರಿಸಿದ್ದಾರೆ. ಅದರಲ್ಲಿಯೂ ದುಡಿಮೆಯನ್ನೇ ಅವಲಂಬಿಸಿದವರಿಗೆ ತೀವ್ರ ತೊಂದರೆಯಾಗಿದೆ. ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಲು, ಸಣ್ಣ ಕಸುಬು ಮಾಡುವವರಿಗೆ, ಕೂಲಿಕಾರ್ಮಿಕರಿಗೆ ತೊಂದರೆಯಾಗ್ತಿದೆ. ರಾತ್ರಿ ಕರ್ಫ್ಯೂ ಇದ್ದೇ ಇತ್ತು. ಹೀಗಿರುವಾಗ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೆ ತರೋ ಅವಶ್ಯಕತೆ ಇರಲಿಲ್ಲ ಎಂದು ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸರ್ವಪಕ್ಷಗಳ ಸಭೆಯ ಮಾಹಿತಿ ಗೊತ್ತಿಲ್ಲ ಎಂದ ಸಿದ್ಧರಾಮಯ್ಯ
ರಾಜ್ಯದ ನೀರಾವರಿ ಸಮಸ್ಯೆಗಳ ಕುರಿತು ಚರ್ಚಿಸಲು ಸಿಎಂ  ಬೊಮ್ಮಾಯಿ ಫೆಬ್ರವರಿಯಲ್ಲಿ ಸರ್ವಪಕ್ಷಗಳ ಸಭೆ ಕರಿಯುವುದಾಗಿ ತಿಳಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ಇದನ್ನು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಇದುವರೆಗೂ ನಮಗೆ ನೋಟೀಸ್ ಬಂದಿಲ್ಲ. ನೋಟೀಸ್ ಬರಲಿ ಆಮೇಲೆ ಈ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ತಿಳಿಸಿದರು.
Published by:Seema R
First published: