Moral Policing: ಗಂಡನನ್ನು ಬಿಡಲು ಮುಂದಾಗಿದ್ದ ಮಹಿಳೆಯನ್ನು ತಡೆದ ಇನ್ಸ್​​ಪೆಕ್ಟರ್​ಗೆ ₹1 ಲಕ್ಷ ದಂಡ!

ಪಕ್ಕದ ಮನೆಯಲ್ಲಿ ವಾಸಿಸುವ ವ್ಯಕ್ತಿಯನ್ನು ಹೆಂಡತಿ ಪ್ರೀತಿಸುತ್ತಿದ್ದು, ಅವನೊಂದಿಗೆ ವಾಸಿಸುವ ಉದ್ದೇಶದಿಂದ ನನ್ನಿಂದ ದೂರವಾಗಿದ್ದಾಳೆ ಎಂದು ಪತಿ ದೂರಿದ್ದ. ನನಗೆ ಗಂಡನೊಂದಿಗೆ ಬದುಕಲು ಇಷ್ಟವಿಲ್ಲ, ಈ ಹಿನ್ನೆಲೆ ಮನೆಯಿಂದ ಹೊರ ಬಂದಿದ್ದೇನೆ ಎಂದು ಪತ್ನಿ ಹೇಳಿದ್ದಳು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಧಾರವಾಡ: ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು (Dharwad bench of Karnataka High Court)  ವಿವಾಹಿತ ಮಹಿಳೆ (Married Woman) ಮತ್ತು ಆಕೆಯ 3 ವರ್ಷದ ಮಗಳನ್ನು ಪುನರ್ವಸತಿ ಕೇಂದ್ರದಲ್ಲಿ ಬಲವಂತವಾಗಿ ಇರಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ (Police Inspector) ಮತ್ತು ಪುನರ್ವಸತಿ ಕೇಂದ್ರಕ್ಕೆ (Rehabilitation Centre) ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಕೃತ್ಯವನ್ನು ನೈತಿಕ ಪೊಲೀಸ್​ಗಿರಿ ಎಂದು ಕರೆಯುವ ಮೂಲಕ ನ್ಯಾಯಾಲಯವು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಮಹಿಳೆಯ ವೈವಾಹಿಕ ಜೀವನದಲ್ಲಿ ಇನ್ಸ್‌ಪೆಕ್ಟರ್ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನ್ಯಾಯಾಧೀಶ ಎನ್.ಎಸ್.ಸಂಜಯ್ ಗೌಡ ನೇತೃತ್ವದ ಪೀಠವು ದಂಡದ ಮೊತ್ತವನ್ನು ಹೆಣ್ಣು ಮಗುವಿನ ಹೆಸರಿನಲ್ಲಿ ಸ್ಥಿರ ಠೇವಣಿಯಾಗಿ ಇಡುವಂತೆ ನ್ಯಾಯಾಲಯದ ರಿಜಿಸ್ಟ್ರಾರ್ಗೆ ಆದೇಶಿಸಿದೆ.  ತಾಯಿ ಈ ಸ್ಥಿರ ಠೇವಣಿಯಿಂದ ಬಡ್ಡಿಯನ್ನು ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Wife Torture: ಹೊಡಿತಾಳೆ, ಬಡಿತಾಳೆ ನನ್ ಹೆಂಡ್ತಿ.. ದುಬಾರಿ ವಸ್ತುಗಳಿಗಾಗಿ ಗಂಡನಿಗೆ ನರಕ ತೋರಿಸಿದ ಹೆಂಡತಿ!

ಗಂಡನಿಂದ ದೂರಾಗಲು ಮುಂದಾಗಿದ್ದ ಮಹಿಳೆ

ಈ ವರ್ಷ ಮೇ 3 ರಂದು, ವಿವಾಹಿತೆ ಕೌಟುಂಬಿಕ ಸಮಸ್ಯೆಗಳಿಂದಾಗಿ ತಮ್ಮ ಮಗುವಿನೊಂದಿಗೆ ತನ್ನ ಗಂಡನ ಮನೆಯಿಂದ ಹೊರ ಬಂದಿದ್ದರು. ಪತಿ ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಬಾಳಾಸಾಹೇದ್ ಪಾಟೀಲ್ ಮಹಿಳೆಯನ್ನು ಠಾಣೆಗೆ ಕರೆಸಿ ದಂಪತಿ ನಡುವೆ ಸಂಧಾನಕ್ಕೆ ಯತ್ನಿಸಿದ್ದರು. ಪಕ್ಕದ ಮನೆಯಲ್ಲಿ ವಾಸಿಸುವ ವ್ಯಕ್ತಿಯನ್ನು ಹೆಂಡತಿ ಪ್ರೀತಿಸುತ್ತಿದ್ದು, ಅವನೊಂದಿಗೆ ವಾಸಿಸುವ ಉದ್ದೇಶದಿಂದ ನನ್ನಿಂದ ದೂರವಾಗಿದ್ದಾಳೆ ಎಂದು ಪತಿ ದೂರಿದ್ದ. ನನಗೆ ಗಂಡನೊಂದಿಗೆ ಬದುಕಲು ಇಷ್ಟವಿಲ್ಲ, ಈ ಹಿನ್ನೆಲೆ ಮನೆಯಿಂದ ಹೊರ ಬಂದಿದ್ದೇನೆ ಎಂದು ಪತ್ನಿ ಹೇಳಿದ್ದಳು.

ಮಹಿಳೆಗೆ ಅಕ್ರಮ ಬಂಧನ

ನಂತರ ಆಕೆಯನ್ನು ಇನ್ಸ್‌ಪೆಕ್ಟರ್ ಪಾಟೀಲ್ ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಆಶ್ರಯ ನೀಡುವ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದರು. ಹೊರ ಜಗತ್ತಿನೊಂದಿಗೆ ಅದರಲ್ಲೂ ಪ್ರಿಯಕರನೊಂದಿಗೆ ಯಾವುದೇ ಸಂಪರ್ಕ ಹೊಂದಲು ಅವಕಾಶವಿಲ್ಲದಂತೆ ಮಾಡಿದ್ದರು ಎಂದು ಮಹಿಳೆ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ. ಹಲವಾರು ಮನವಿ ಮಾಡಿದರ ಹೊರತಾಗಿಯೂ, 6 ತಿಂಗಳ ಕಾಲ ಮಹಿಳೆಯನ್ನು ಹೊರಗೆ ಹೋಗಲು ಬಿಟ್ಟಿರಲಿಲ್ಲ.  ಇದು "ಅಕ್ರಮ ಬಂಧನ" ಎಂದು ನ್ಯಾಯಾಲಯವು ಹೇಳಿದೆ.

ನೈತಿಕ ಪೊಲೀಸ್​​​ಗಿರಿ ವಿರುದ್ಧ ಕೋರ್ಟ್​ ಸಿಡಿಮಿಡಿ

ಮಹಿಳೆ ಯಾವುದೇ ಆಶ್ರಯವನ್ನು ಕೋರಿಲ್ಲ ಮತ್ತು ಅವಳು ತನ್ನ ಪತಿಯೊಂದಿಗೆ ವಾಸಿಸಲು ಬಯಸಿಲ್ಲ. ಈ ಪರಿಸ್ಥಿತಿಯಲ್ಲಿ ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಬಲವಂತವಾಗಿ ಕಳುಹಿಸುವುದು ಸರಿಯಲ್ಲ. ಇದು ಪೊಲೀಸ್ ಇನ್ಸ್‌ಪೆಕ್ಟರ್‌ನ ಮಾನವೀಯತೆ ಮತ್ತು ಸೂಕ್ಷ್ಮತೆಯ ಕೊರತೆಯನ್ನು ತೋರಿಸುತ್ತದೆ ಎಂದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ಡಿಸೆಂಬರ್ 8 ರಂದು ನೀಡಿದ ತೀರ್ಪಿನಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ವ್ಯಕ್ತಿಯ ಜೀವನದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಏನೇ ಮಾಡಿದರೂ ಅದು “ನೈತಿಕ ಪೊಲೀಸ್​​​ಗಿರಿ” ಗೆ ಸಮ ಎಂದು ಹೇಳಿದೆ.

ಇದನ್ನೂ ಓದಿ: Dharwad: 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರು ಅಪ್ರಾಪ್ತ ಬಾಲಕರ ಬಂಧನ

ಆನೇಕಲ್​​ ನಲ್ಲಿ ಹೆಂಡತಿಯ ಕೊಲೆ 

ಜಿಗಣಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ವೋಟ್​ ಮಾಡಿ ಹಿಂತಿರುಗುತ್ತಿದ್ದ ಮಹಿಳೆಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ಮಹಿಳೆಯನ್ನು ಅರ್ಚನಾ ರೆಡ್ಡಿ (32) ಎಂದು ಗುರುತಿಸಲಾಗಿದೆ.ಜಿಗಣಿ ನಿವಾಸಿ ಅರ್ಚನಾ ರೆಡ್ಡಿಯನ್ನು 2ನೇ ಗಂಡ ನವೀನ್​ ಕುಮಾರ್​​ ಹತ್ಯೆಗೈದಿದ್ದಾನೆ. ವೋಟ್​ ಮಾಡಿ ಕಾರಿನಲ್ಲಿ ಹೋಗುತ್ತಿದ್ದ ಅರ್ಚನಾರನ್ನು ನವೀನ್​ ತನ್ನ ಸಹಚರರೊಂದಿಗೆ ರಸ್ತೆ ಮಧ್ಯೆ ಅಡ್ಡಗಟ್ಟಿ ಕೊಲೆ ಮಾಡಿದ್ದಾನೆ.ಅರ್ಚನಾಗೆ ಈಗಾಗಲೇ ಮದುವೆ ಆಗಿ ಒಂದು ಮಗು ಇತ್ತು. ಮೊದಲ ಗಂಡನಿಂದ ಡಿವೋರ್ಸ್​ ಪಡೆದ ಬಳಿಕ 5 ವರ್ಷಗಳ ಹಿಂದೆ ಆರೋಪಿ ನವೀನ್​ ಕುಮಾರನನ್ನು 2ನೇ ಮದುವೆಯಾಗಿದ್ದರು.
Published by:Kavya V
First published: