• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕಷ್ಟಕಾಲದಲ್ಲಿ ಹೆಂಡತಿ ಒಡವೆ ಅಡವಿಟ್ಟು ಸಹಾಯ ಮಾಡಿದ ಸ್ನೇಹಿತನಿಗೆ ಮೋಸ; ಜೀವದ ಗೆಳೆಯ ಮಾಡಿದ್ದೇನು?

ಕಷ್ಟಕಾಲದಲ್ಲಿ ಹೆಂಡತಿ ಒಡವೆ ಅಡವಿಟ್ಟು ಸಹಾಯ ಮಾಡಿದ ಸ್ನೇಹಿತನಿಗೆ ಮೋಸ; ಜೀವದ ಗೆಳೆಯ ಮಾಡಿದ್ದೇನು?

ಹಾವೇರಿ ಪೊಲೀಸರು

ಹಾವೇರಿ ಪೊಲೀಸರು

ಬಂಕಾಪುರ ಪಟ್ಟಣ ನಿವಾಸಿ, ಮೆಣಸಿನಕಾಯಿ ವ್ಯಾಪಾರಿ ಜಮೀನಲ್‌ ಅಹಮ್ಮದ ಮತ್ತು ಹಾವೇರಿ ಜಿಲ್ಲೆ ಶಿಗ್ಗಾಂವಿ ನಗರದ ನಿಮ್ತಿಯಾಜ್ ಚೌದರಿ ಇಬ್ಬರು ಆಪ್ತ ಸ್ನೇಹಿತರು.

  • Share this:

ಹಾವೇರಿ (ಮಾ. 19):  ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿ ಮೆಣಸಿನಕಾಯಿ ವ್ಯಾಯಾರಿಯನ್ನು ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಣ ದೋಚಿ ಕಳ್ಳರು ಪರಾರಿಯಾದ ಘಟನೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪೊಲೀಸರ ತನಿಖೆ ವೇಳೆ ಗೊತ್ತಾದ ವಿಷಯ ದೂರುದಾರನಿಗೆ ಒಂದು ಕ್ಷಣ ದಿಗ್ಭ್ರಮೆ ಆಗುವಂತೆ ಮಾಡಿತ್ತು. ಯಾಕೆಂದರೆ ಈ ಪ್ರಕರಣದ ಸೂತ್ರಧಾರಿ ನಿತ್ಯ ಆತನ ಜೊತೆಗೆ ಇರುತ್ತಿದ್ದ ಆಪ್ತ ಮಿತ್ರನೇ ಆಗಿದ್ದ.ಬಂಕಾಪುರ ಪಟ್ಟಣ ನಿವಾಸಿ, ಮೆಣಸಿನಕಾಯಿ ವ್ಯಾಪಾರಿ ಜಮೀನಲ್‌ ಅಹಮ್ಮದ ಮತ್ತು ಹಾವೇರಿ ಜಿಲ್ಲೆ ಶಿಗ್ಗಾಂವಿ ನಗರದ ನಿಮ್ತಿಯಾಜ್ ಚೌದರಿ ಇಬ್ಬರು ಆಪ್ತ ಸ್ನೇಹಿತರು. ಇಮ್ತಿಯಾಜ್​ಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ‌ ಎದುರಾದಾಗ ಜಮೀನಲ್ ನೆ ಹಣ ನೀಡಿ ಸಹಾಯ ಮಾಡುತ್ತಿದ್ದನಂತೆ. ಒಂದೊಮ್ಮೆ ಪತ್ನಿ ಕೊರಳಲ್ಲಿನ ಚಿನ್ನದ ಸರ ಮಾರಾಟ ಮಾಡಿ ಗೆಳೆಯನಿಗೆ ಹಣ ನೀಡಿದ್ದಂತೆ. ಪ್ರತಿದಿನ ಬಂಕಾಪುರದಿಂದ ಶಿಗ್ಗಾಂವಿ ನಗರದವರೆಗೆ  ಹೋಗಿ ಗೆಳೆಯ ಜಮೀನಲ್‌ ಮನೆ ಮುಂದೆ ಬೈಕ್ ನಿಲ್ಲಿಸಿ ಹುಬ್ಬಳ್ಳಿಗೆ ವ್ಯಾಪಾರಕ್ಕೆ ಹೋಗುತ್ತಿದ್ದ. ವ್ಯಾಪಾರ ಮುಗಿಸಿ ವಾಪಸ್ ಬಂದು ಮತ್ತೆ ಗೆಳೆಯನ ಮನೆ‌ ಮುಂದೆ ನಿಲ್ಲಿಸಿದ್ದ ಬೈಕ್ ಮೇಲೆ ಮನೆಗೆ ಹೋಗುತ್ತಿದ್ದ.


ಅದು ಫೆಬ್ರುವರಿ 27 ಸಮಯ ರಾತ್ರಿ ಒಂಬತ್ತು ಗಂಟೆ ಐವತ್ತು ನಿಮಿಷ. ಜಮೀನಲ್ ಅಹಮ್ಮದ ವ್ಯಾಪಾರ ಮುಗಿಸಿ ಏಳೂವರೆ ಲಕ್ಷ ರೂಪಾಯಿ ಹಣ ಇಟ್ಕೊಂಡು ಬೈಕ್ ಮೇಲೆ ಮನೆಗೆ ಹೋಗುತ್ತಿದ್ದ. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಿರುವ ಬಿಸನಳ್ಳಿ ಗ್ರಾಮದ ಬಳಿ ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ  ಜಮೀನಲ್ ಅಹಮ್ಮದಗೆ ಹಿಂದಿನಿಂದ ಯಾರೋ ತಲೆ, ಮೈ, ಕೈಗೆ ಹೊಡೆದಿದ್ದರು. ನಂತರ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದರು. ಜಮೀನಲ್‌ ಅಹಮ್ಮದಗೆ ತಲೆ ಮತ್ತು ಕೈಗೆ ಬಲವಾದ ಏಟು ಬೀಳುತ್ತಿದ್ದಂತೆ ಅಲ್ಲಿಯೆ ಕುಸಿದು ಬಿದ್ದಿದ್ದ. ನಂತರ ಯಾರೋ ಪೊಲೀಸರು ಹಾಗೂ ಆತನ ಮನೆಯವರಿಗೆ ಮಾಹಿತಿ ಮುಟ್ಟಿಸಿದರು. ನಂತರ ಜಮೀನಲ್‌ ಅಹಮ್ಮದಗೆ ಬಂಕಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಕೈ ಮೂಳೆ ಮುರಿದಿದ್ದು, ತಲೆಗೆ ಬಲವಾದ ಏಟು ಬಿದ್ದು ಎಂಟು ಸ್ಟಿಚ್ ಗಳನ್ನ ಹಾಕಲಾಗಿದೆ. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಆಗುತ್ತಿದ್ದಂತೆ ಜಮೀನಲ್‌ ಅಹಮ್ಮದ ಬಂಕಾಪುರ ಪೊಲೀಸರಿಗೆ ನಡೆದ ಸಂಗತಿಯನ್ನ ತಿಳಿಸಿದ್ದ.


ಇದನ್ನು ಓದಿ: ರಾಜ್ಯದಲ್ಲಿ ಮತ್ತೊಮ್ಮೆ ಮೊಳಗಲಿದೆ‌ ರೈತ ಕಹಳೆ: ರಾಷ್ಟ್ರೀಯ ರೈತಮುಖಂಡರಿಂದ ಮಾ.26ರಂದು ಭಾರತ್ ಬಂದ್ ಗೆ ಕರೆ


ಶಿಗ್ಗಾಂವಿ ಸಿಪಿಐ ಬಸವರಾಜ ಹಲಬನ್ನವರ ನೇತೃತ್ವದಲ್ಲಿ ತನಿಖೆಗೆ ಇಳಿದಿದ್ದ ಬಂಕಾಪುರ ಪಿಎಸ್ಐ ಸಂತೋಷ ಪಾಟೀಲ ನೇತೃತ್ವದ ಪೊಲೀಸರ ತಂಡ ಒಟ್ಟು ಏಳು ಜನ ಆರೋಪಿಗಳನ್ನ ಪೊಲೀಸ್ ಠಾಣೆಗೆ ಎಳೆದು ತಂದು ವಿಚಾರಣೆ ನಡೆಸಿತು. ಆಗ ಜಮೀನಲ್ ಅಹಮ್ಮದನ ಕುಚಿಕು ಗೆಳೆಯನ ಹಣ ಸುಲಿಗೆ ಮಾಡಿಸಿದ್ದ. ಜಮೀನಲ್‌ ಅಹಮ್ಮದನ ಕುಚಿಕು ಗೆಳೆಯ ಇಮ್ತಿಯಾಜ್ ಚೌಧರಿ ಗೆಳೆಯ ವ್ಯಾಪಾರದಿಂದ ಬಂದಿರುವ ಹಣದ ಬಗ್ಗೆ ಪ್ರತಿದಿನ ಮಾಹಿತಿ ಕೊಟ್ಟು ಹೋಗುತ್ತಿದ್ದ. ಜಮೀನಲ್ ಅಹಮ್ಮದ ಹಣ ಒಯ್ಯುವಾಗ ಸುಲಿಗೆ ಮಾಡುವಂತೆ ತಿಳಿಸಿದ್ದ. ಅದರಂತೆ ಗೆಳೆಯನ ಮನೆಯಿಂದ ತಮ್ಮ‌ ಮನೆಗೆ ಹಣದ ಸಮೇತ ಹೊರಟಿದ್ದ ಜಮೀನಲ್‌ ಅಹಮ್ಮದ ಸುಲಿಗೆ ಮಾಡಲಾಗಿದೆ ಎಂದರು


ಹಣ ಕಳೆದುಕೊಂಡಿದ್ದ ಜಮೀನಲ್‌ ಅಹಮ್ಮದನ ಕುಚಿಕು ಗೆಳೆಯ ಇಮ್ತಿಯಾಜ್ ಚೌಧರಿ ಸೇರಿ ಈಗ ಏಳು ಜನರನ್ನ ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಬಂಧಿತರನ್ನ ಜಮೀನಲ್‌ ಅಹಮ್ಮದನ ಕುಚಿಕು ಗೆಳೆಯ ಇಮ್ತಿಯಾಜ್ ಅಹಮ್ಮದ, ಅಫ್ತಾಬ ಬಾಗವಾನ, ಹಜರತ್ ಅಲಿ ಹುಬ್ಬಳ್ಳಿ, ಹಜರೆಸಾಬ ಹುಬ್ಬಳ್ಳಿ, ಮುಸ್ತಾಕ ಅಹಮ್ಮದ ಪರಸಾಪುರ, ಮಹ್ಮದಜಾಫರ ಮಲ್ಲಂಗನವರ ಮತ್ತು ಅಸ್ಲಂ ಪಾಳೇದ ಎಂದು ಗುರುತಿಸಲಾಗಿದೆ.


(ವರದಿ: ಮಂಜುನಾಥ್ ತಳವಾರ)

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು