ಕೋವಿಡ್ ನಡುವೆಯೇ ಹುಬ್ಬಳ್ಳಿ - ಧಾರಾವಾಡ ಪಾಲಿಕೆಗೆ ಮೀಸಲಾತಿ ನಿಗದಿ; ಆಕ್ಷೇಪಣೆಗೆ 7 ದಿನ ಅವಕಾಶ

ಯಾವುದೇ ಆಕ್ಷೇಪಗಳು ವ್ಯಕ್ತವಾಗದೇ ಇದ್ದಲ್ಲಿ ಇದೇ ಮೀಸಲಾತಿ ಅನ್ವಯ ಮುಂಬರುವ ಪಾಲಿಕೆಯ ಚುನಾವಣೆ ನಡೆಯಲಿದೆ.

file photo

file photo

  • Share this:
ಹುಬ್ಬಳ್ಳಿ (ಮೇ. 12):  ರಾಜ್ಯದಲ್ಲಿ ಕೋವಿಡ್ ವ್ಯಾಪಕಗೊಂಡಿರುವ  ಸಂದರ್ಭದಲ್ಲಿಯೇ ರಾಜ್ಯದ ಬಳ್ಳಾರಿ ಸೇರಿ ಹಲವು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಿತು. ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಗಳಿಗೆ ಮಿಸಲಾತಿ ನಿಗದಿಗೊಳಿಸಲಾಗಿದೆ. ಮೀಸಲಾತಿ ಅಧಿಸೂಚನೆ ಪ್ರಕಟಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ಆಕ್ಷೇಪಣೆ, ಸಲಹೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು 2011 ರ ಜನಗಣತಿಯನ್ನಾಧರಿಸಿ  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನಗಳ ಮೀಸಲಾತಿ ನಿಗದಿಗೊಳಿಸಿ, ಪ್ರತಿ ವಾರ್ಡ್ ಗೆ ಒಂದು ಸ್ಥಾನವನ್ನು ನಿಗದಿಪಡಿಸಿದೆ. ಅಧಿಸೂಚನೆ ಮೂಲಕ ಕರಡು ಮಿಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ.

ಅಧಿಸೂಚನೆ ಪ್ರಕಟಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ಈ ಕುರಿತು ಆಕ್ಷೇಪ, ಸಲಹೆ ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಡಗಳಲ್ಲಿ ನಿಗದಿಪಡಿಸಲಾದ ಮೀಸಲಾತಿ ವಿವರ ಈ ರೀತಿಯಾಗಿದೆ.  ವಾರ್ಡ್ ಸಂಖ್ಯೆ 01. ಹಿಂದುಳಿದ ವರ್ಗ(ಎ) ಮಹಿಳೆ, 02. ಪರಿಶಿಷ್ಟ ಪಂಗಡ ಮಹಿಳೆ, 03. ಹಿಂದುಳಿದ ವರ್ಗ (ಎ), 04. ಸಾಮಾನ್ಯ, 05. ಸಾಮಾನ್ಯ, 06. ಹಿಂದುಳಿದ ವರ್ಗ (ಎ) ಮಹಿಳೆ, 07. ಹಿಂದುಳಿದ ವರ್ಗ (ಎ), 08. ಸಾಮಾನ್ಯ, 09. ಸಾಮಾನ್ಯ ಮಹಿಳೆ, 10. ಹಿಂದುಳಿದ ವರ್ಗ (ಎ) ಮಹಿಳೆ, 11. ಸಾಮಾನ್ಯ, 12. ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.ವಾರ್ಡ್ ಸಂಖ್ಯೆ 13. ಹಿಂದುಳಿದ ವರ್ಗ (ಎ), 14. ಹಿಂದುಳಿದ ವರ್ಗ (ಬಿ), 15. ಸಾಮಾನ್ಯ, 16. ಹಿಂದುಳಿದ ವರ್ಗ (ಎ) ಮಹಿಳೆ,17. ಪರಿಶಿಷ್ಟ ಪಂಗಡ, 18. ಸಾಮಾನ್ಯ, 19. ಸಾಮಾನ್ಯ ಮಹಿಳೆ, 20. ಪರಿಶಿಷ್ಟ ಜಾತಿ ಮಹಿಳೆ, 21. ಹಿಂದುಳಿದ ವರ್ಗ (ಬಿ), 22. ಸಾಮಾನ್ಯ ಮಹಿಳೆ, 23. ಹಿಂದುಳಿದ ವರ್ಗ (ಎ), 24. ಸಾಮಾನ್ಯ, 25 ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.

ವಾರ್ಡ್ ಸಂಖ್ಯೆ 26 ಸಾಮಾನ್ಯ ಮಹಿಳೆ, 27. ಹಿಂದುಳಿದ ವರ್ಗ (ಎ) ಮಹಿಳೆ, 28. ಸಾಮಾನ್ಯ, 29. ಸಾಮಾನ್ಯ, 30. ಹಿಂದುಳಿದ ವರ್ಗ (ಎ), 31. ಪರಿಶಿಷ್ಟ ಜಾತಿ , 32. ಹಿಂದುಳಿದ ವರ್ಗ (ಎ), 33. ಸಾಮಾನ್ಯ, 34. ಹಿಂದುಳಿದ ವರ್ಗ (ಎ) ಮಹಿಳೆ, 35. ಸಾಮಾನ್ಯ, 36. ಸಾಮಾನ್ಯ, 37. ಸಾಮಾನ್ಯ, 38. ಹಿಂದುಳಿದ ವರ್ಗ (ಎ), 39. ಹಿಂದುಳಿದ ವರ್ಗ (ಬಿ) ಮಹಿಳೆ, 40. ಹಿಂದುಳಿದ ವರ್ಗ (ಎ), 41. ಹಿಂದುಳಿದ ವರ್ಗ (ಬಿ), 42. ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ.

ವಾರ್ಡ್ ಸಂಖ್ಯೆ 43. ಸಾಮಾನ್ಯ, 44. ಸಾಮಾನ್ಯ ಮಹಿಳೆ, 45. ಪರಿಶಿಷ್ಟ ಪಂಗಡ, 46. ಸಾಮಾನ್ಯ, 47. ಸಾಮಾನ್ಯ ಮಹಿಳೆ, 48. ಸಾಮಾನ್ಯ, 49. ಹಿಂದುಳಿದ ವರ್ಗ (ಎ) ಮಹಿಳೆ, 50. ಸಾಮಾನ್ಯ ಮಹಿಳೆ, 51. ಹಿಂದುಳಿದ ವರ್ಗ (ಎ), 52. ಸಾಮಾನ್ಯ, 53. ಹಿಂದುಳಿದ ವರ್ಗ (ಎ), 54. ಸಾಮಾನ್ಯ ಮಹಿಳೆ, 55. ಸಾಮಾನ್ಯ, 56. ಪರಿಶಿಷ್ಟ ಜಾತಿ ಮಹಿಳೆ, 57. ಸಾಮಾನ್ಯ ಮಹಿಳೆ, 58. ಪರಿಶಿಷ್ಟ ಜಾತಿ, 59. ಸಾಮಾನ್ಯ ಮಹಿಳೆ, 60. ಸಾಮಾನ್ಯ ಮಹಿಳೆ, 61. ಪರಿಶಿಷ್ಟ ಜಾತಿ, 62. ಸಾಮಾನ್ಯ ಮಹಿಳೆ, 63. ಹಿಂದುಳಿದ ವರ್ಗ (ಎ), 64. ಸಾಮಾನ್ಯ ಮಹಿಳೆ, 65. ಸಾಮಾನ್ಯ ಮಹಿಳೆ, 66. ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ವಾರ್ಡ್ ಸಂಖ್ಯೆ 67 ಸಾಮಾನ್ಯ, 68 ಸಾಮಾನ್ಯ, 69 ಪರಿಶಿಷ್ಟ ಜಾತಿ ಮಹಿಳೆ, 70 ಹಿಂದುಳಿದ ವರ್ಗ (ಬಿ) ಮಹಿಳೆ, 71 ಸಾಮಾನ್ಯ, 72 ಹಿಂದುಳಿದ ವರ್ಗ (ಎ) ಮಹಿಳೆ, 73 ಸಾಮಾನ್ಯ ಮಹಿಳೆ, 74 ಸಾಮಾನ್ಯ ಮಹಿಳೆ, 75 ಸಾಮಾನ್ಯ ಮಹಿಳೆ, 76 ಹಿಂದುಳಿದ ವರ್ಗ (ಎ) ಮಹಿಳೆ, 77 ಹಿಂದುಳಿದ ವರ್ಗ (ಎ) ಮಹಿಳೆ, 78 ಸಾಮಾನ್ಯ ಮಹಿಳೆ, 79 ಹಿಂದುಳಿದ ವರ್ಗ (ಎ) ಮಹಿಳೆ, 80 ಸಾಮಾನ್ಯ ಮಹಿಳೆ, 81 ಪರಿಶಿಷ್ಟ ಜಾತಿ ಮಹಿಳೆ, 82 ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.

ಮೀಸಲಾತಿಗೆ ಸಂಬಂಧಿಸಿದ ಆಕ್ಷೇಪಗಳಿದ್ದಲ್ಲಿ ಏಳು ದಿನಗಳೊಳಲಾಗಿದೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾವುದೇ ಆಕ್ಷೇಪಗಳು ವ್ಯಕ್ತವಾಗದೇ ಇದ್ದಲ್ಲಿ ಇದೇ ಮೀಸಲಾತಿ ಅನ್ವಯ ಮುಂಬರುವ ಪಾಲಿಕೆಯ ಚುನಾವಣೆ ನಡೆಯಲಿದೆ.
Published by:Seema R
First published: