Hijab ಧರಿಸದೇ ಇದ್ದರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ: ಜಮೀರ್ ವಿವಾದಾತ್ಮಕ ಹೇಳಿಕೆ..!

ಹಿಂದೂಸ್ತಾನದಲ್ಲಿ ಅತಿ ಹೆಚ್ಚು ರೇಪ್ ಪ್ರಕರಣಗಳು ನಡೆಯುತ್ತಿವೆ. ಪರದೆ ಹಾಕಿಕೊಳ್ಳದೆ ಇರೋದೇ ಇದಕ್ಕೆ ಮುಖ್ಯ ಕಾರಣ. ಹಿಜಾಬ್ ಸಮರ್ಥನೆ ಮಾಡಿಕೊಳ್ಳಲು ಹೋಗಿ ಜಮೀರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಾಸಕ ಜಮೀರ್​​

ಶಾಸಕ ಜಮೀರ್​​

  • Share this:
ಹುಬ್ಬಳ್ಳಿ:  ಹಿಂದೂಸ್ತಾನದಲ್ಲಿ (Hindustan) ಅತಿ ಹೆಚ್ಚು ರೇಪ್ ಪ್ರಕರಣಗಳು (Rape Cases) ನಡೆಯುತ್ತಿವೆ. ಮುಖದ ಮೇಲೆ ಹಿಜಾಬ್ ಪರದೆ (Hijab) ಹಾಕಿಕೊಳ್ಳದೆ ಇರೋದೇ ಇದಕ್ಕೆ ಕಾರಣ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ (Zameer Ahmed Khan) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಜಾಬ್ ಸಮರ್ಥನೆ ಮಾಡಿಕೊಳ್ಳಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಜಾಬ್ ಅಂದ್ರೆ ಘೋಶ್ವಾ ಪರದೆ ಅಂತ ಕರಿತೀವಿ. ಹೆಣ್ಣು ಮಕ್ಕಳ ಸೌಂದರ್ಯ ಕಾಣದಿರಲಿ ಎಂದು ಈ ಪರದೆಯನ್ನು ಹಾಕಿಕೊಳ್ಳಲಾಗುತ್ತೆ. ಬಹಳ ವರ್ಷಗಳ ಹಿಂದಿನಿಂದಲೂ ಈ ಪದ್ಧತಿ ಇದೆ. ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಾಬ್ ಹಾಕಿಕೊಳ್ಳೋ ಪದ್ದತಿಯಿದೆ. ಈ ರೀತಿ ಪರದೆ ಹಾಕಿಕೊಳ್ಳದೆ ಇರೋದು ರೇಪ್ ಗೆ ಕಾರಣವಾಗುತ್ತೆ. ವಿಶ್ವದಲ್ಲೇ ಹಿಂದೂಸ್ತಾನದಲ್ಲಿ ಅತಿ ಹೆಚ್ಚು ರೇಪ್ ಪ್ರಕರಣಗಳು ನಡೆಯುತ್ತಿವೆ. ಈ ರೀತಿ ಪರದೆ ಹಾಕಿಕೊಳ್ಳದೆ ಇರೋದೇ ಇದಕ್ಕೆ ಮುಖ್ಯ ಕಾರಣ ಎಂದು ಜಮೀರ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಿಮ್ಮ ಚಿಕ್ಕಮಗಳೂರಿನ ಆಟವನ್ನು ರಾಮನಗರದಲ್ಲಿ ಆಡಲು ಬಿಡಲ್ಲ: ಎಸ್​ಪಿಗೆ HD Kumaraswamy ವಾರ್ನಿಂಗ್​

ಹಿಜಾಬ್ ವಿವಾದ ಬಿಜೆಪಿವರು ಮಾಡಿದ ರಾಜಕೀಯ ಪಿತೂರಿ

ಮುಸ್ಲಿಂ ಯುವತಿಯರು ಹಿಜಾಬ್ ಧರಿಸೋದು ನಿನ್ನೆ ಇವತ್ತಿನದಲ್ಲ. ತುಂಬ ಹಿಂದಿನಿಂದಲೂ ಶಾಲಾ - ಕಾಲೇಜುಗಳಿಗೆ ಹಾಕಿಕೊಂಡು ಬರ್ತಿದಾರೆ. ಆದರೆ ಬಿಜೆಪಿ ಇದನ್ನು ರಾಜಕೀರಣ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದೆ ಎಂದು ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದಾರೆ. ಪ್ರಕರಣ ನ್ಯಾಯಲಯದಲ್ಲಿರೋದ್ರಿಂದ ನಾನೇನು ಪ್ರತಿಕ್ರಿಯೆ ನೀಡಲ್ಲ. ಹಿಜಾಬ್ ವಿವಾದ ಬಿಜೆಪಿವರು ಮಾಡಿದ ರಾಜಕೀಯ ಪಿತೂರಿಯಾಗಿದೆ.
ಸಮಾಜದಲ್ಲಿ ಹಿಂದೂ ಮುಸ್ಲಿಂ ಅಂತ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಅವರು ಯಾವತ್ತೂ ತಮ್ಮ ಕೆಲಸ ಆಧಾರದ ಮೇಲೆ ಮತ ಕೇಳಲ್ಲ. ಬದಲಿಗೆ ಇಂತಹ ಗೊಂದಲ ಸೃಷ್ಟಿ ಮಾಡೋದೆ ಅವರ ಕೆಲಸವಾಗಿದೆ. ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬರುತ್ತೆ ಅನ್ನೋ ವಿಶ್ವಾಸವಿದೆ.  ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕಾಗುತ್ತೆ. ರಾಮ ಮಂದಿರ ತೀರ್ಪನ್ನ ನಾವೂ ಸ್ವಾಗತಿಸಿದ್ದೆವು. ಇದನ್ನ ಹಾಗೆಯೇ ಸ್ವಾಗತಿಸುತ್ತೇವೆ. ಪಕ್ಷ ಅಧಿಕಾರಕ್ಕೆ ತರೋ ದೃಷ್ಟಿಯಿಟ್ಟುಕೊಂಡು ರಾಜ್ಯ ಪ್ರವಾಸ ಕೈಗೊಂಡಿದ್ದೇನೆ ಎಂದರು.

ಜಮೀರ್ - ಇಬ್ರಾಹಿಂ ಸಭೆ

ಒಂದು ಕಡೆ ಜಮೀರ್ ಅಹ್ಮದ್ ಬಿರುಸಿನ ಪ್ರವಾಸ ಕೈಗೊಂಡಿದ್ದರೆ, ಮತ್ತೊಂದು ಕಡೆ ಮಾಜಿ ಸಿ ಎಂ ಇಬ್ರಾಹಿಂ ಆಪ್ತರ ಸಭೆ ನಡೆಯಿತು. ವಾಣಿಜ್ಯ ನಗರಿ ಹುಬ್ಬಳ್ಳಿ ಕಾಂಗ್ರೆಸ್ ರಾಜಕೀಯ ಚಟುವಟಿಕೆಗಳ ಕೇಂದ್ರ ತಾಣವಾಗಿ ಮಾರ್ಪಟ್ಟಿತ್ತು. ಇಬ್ರಾಹಿಂ ಹಾಗೂ ಜಮೀರ್ ಅಹ್ಮದ್ ನಡೆ ತೀವ್ರ ಕುತೂಹಲ ಕೆರಳಿಸಿದೆ. ಸಿಎಂ ಇಬ್ರಾಹಿಂ ಗೆ ಪರ್ಯಾಯ ಶಕ್ತಿ ಆಗಲು ಜಮೀರ್ ಹೊರಟಿದ್ದಾರಾ ಅನ್ನೋ ಪ್ರಶ್ನೆ ಎದುರಾಗಿದೆ.

ಈ ವೇಳೆ ನ್ಯೂಸ್ 18 ಕನ್ನಡಕ್ಕೆ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿರೋ ಜಮೀರ್ ಅಹ್ಮದ್, ಸಿಎಂ ಇಬ್ರಾಹಿಂ ಅವರಿಗೆ ಪರ್ಯಾಯ ನಾಯಕನಾಗೋಕೆ ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ. ಪೂರ್ವ ಯೋಜಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಾನು ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಹೋಗಲ್ಲ ಅನ್ನೋ ವಿಶ್ವಾಸ ನನ್ನದು. ಸಿದ್ದರಾಮಯ್ಯ ಅವರನ್ನು ಬಿಟ್ಟು ಇಬ್ರಾಹಿಂ ಹೊಗಲ್ಲ. ಮೊನ್ನೆ ಸಿದ್ದರಾಮಯ್ಯನ ಅವರೇ ಮಾತನಾಡಿದ್ದಾರೆ.

ಇದನ್ನೂ ಓದಿ: ನನ್ನ ವಿರುದ್ಧ ಆ ನಾಯಿಗಳ ಮೂಲಕ ಬೊಗಳಿಸುತ್ತಿರೋದೇಕೆ.. C.M.Ibrahim ‘ಉಗ್ರ’ ಮಾತು ಯಾರ ಬಗ್ಗೆ?

ಇಬ್ರಾಹಿಂಗೆ ಅನ್ಯಾಯವಾಗಿರೋದಕ್ಕೆ ನಮಗೂ ಬೇಸರ...
ವಿಧಾನ ಪರಿಷತ್ ವಿರೋಧ ಪಕ್ಷದ ಸ್ಥಾನ ನೀಡದೆ ಇರೋದಕ್ಕೆ ಇಬ್ರಾಹಿಂ ಅವರಿಗೆ ನೋವಾಗಿತ್ತು. ಅವರ ಜತೆ ನಮಗೂ ತುಂಬಾ ನೋವಾಗಿತ್ತು. ಹೈಕಮಾಂಡ್ ಬಿ ಕೆ ಹರಿಪ್ರಸಾದ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿದೆ. ಈ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಇಬ್ರಾಹಿಂ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ.  ಹುಬ್ಬಳ್ಳಿಯಲ್ಲಿ ಇಬ್ರಾಹಿಂ ಅವರ ಮತ್ತು ನನ್ನ ಕಾರ್ಯಕ್ರಮಗಳು ನಡೆಯುತ್ತಿರುವುದು ಕಾಕತಾಳೀಯ.

40 ಕೋಟಿ ಕಳೆದುಕೊಂಡಿರೋದು ಗೊತ್ತಿಲ್ಲ...
ಕಾಂಗ್ರೆಸ್ ಪಕ್ಷಕ್ಕಾಗಿ 40 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದೇನೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ಇಬ್ರ‍ಾಹಿಂ ಅವರು ಅಷ್ಟು ಹಣ ಖರ್ಚು ಮಾಡಿ  ನನಗೆ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನು ಕೊಟ್ಟಿದೆ. ಭದ್ರಾವತಿಯಲ್ಲಿ ಗೆಲ್ಲೋದಿಲ್ಲ ಅಂದ್ರು ಸಹ ಇಬ್ರಾಹಿಂ ಅವರು ಪಟ್ಟು ಹಿಡಿದು ಟಿಕೆಟ್ ತೆಗೆದುಕೊಂಡರು.
ಇಬ್ರಾಹಿಂ ಹಿರಿತನಕ್ಕೆ ಮಾನ್ಯತೆ ನೀಡಿ ಹಾಲಿ ಶಾಸಕ ಸಂಗಮೇಶ್ ಅವರಿಗೆ ಟಿಕೆಟ್ ಕೊಡದೆ ಇವರಿಗೆ ಕಾಂಗ್ರೆಸ್ ಕೊಟ್ಟಿತ್ತು. ಆದರೆ ಚುನಾವಣೆಯಲ್ಲಿ ಇಬ್ರಾಹಿಂ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಆದರೂ ನಂತರದಲ್ಲಿ ನಿಗಮ ಮಂಡಳಿ ಮತ್ತು ಎಂಎಲ್ ಸಿ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಮಾತು ಕೇಳಿ ಚುನಾವಣೆಗೆ ನಿಲ್ಲದೇ ಇದ್ದರೆ ಅಂದೇ ವಿಧಾನಪರಿಷತ್ ಸದಸ್ಯರಾಗಿ ಸಚಿವರೂ ಆಗುತ್ತಿದ್ದರು.

ಇಬ್ರಾಹಿಂಗೆ ನಾನು ಪರ್ಯಾಯ ನಾಯಕನಲ್ಲ 
ಸಿಎಂ ಇಬ್ರಾಹಿಂ ಅವರಿಗೆ ಪರ್ಯಾಯ ನಾಯಕನಾಗಲು ನನ್ನಿಂದ ಸಾಧ್ಯವಿಲ್ಲ. ಸಿ.ಎಂ.ಇಬ್ರಾಹಿಂ ನಮ್ಮ ಹಿರಿಯ ನಾಯಕರು. ಅವರ ಎದರು ನಾನು ಬಚ್ಚಾ.  ನನ್ನ ನಾಯಕರೂ ಅವರಾಗಿದ್ದಾರೆ. ಅವರು ಕಾಂಗ್ರೆಸ್ ನಲ್ಲಿಯೇ ಮುಂದುವರಿಯೋಕೆ ಒಪ್ಕೊಂಡಿದ್ದಾರೆ. ಪಕ್ಷ ಬಿಟ್ಟು ಹೋಗಲ್ಲ ಅಂತ ನನಗೆ ನೂರಕ್ಕೆ ನೂರ ರಷ್ಟು ವಿಶ್ವಾಸವಿದೆ ಎಂದು ಜಮೀರ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published by:Kavya V
First published: