• Home
  • »
  • News
  • »
  • state
  • »
  • Puneeth Rajkumar: ಅಪ್ಪು ನೆನಪಲ್ಲಿ 300 ಕೆಜಿ ಚಿಕನ್, ಮಟನ್ ಸವಿದ ಅಭಿಮಾನಿಗಳು!

Puneeth Rajkumar: ಅಪ್ಪು ನೆನಪಲ್ಲಿ 300 ಕೆಜಿ ಚಿಕನ್, ಮಟನ್ ಸವಿದ ಅಭಿಮಾನಿಗಳು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಧಾರವಾಡದಲ್ಲಿ ಮಹಿಳೆಯೋರ್ವರು ಪುನೀತ್ ಪುಣ್ಯಸ್ಮರಣೆಗೆ ಬೆಂಗಳೂರು ತಲುಪಲು ಈಗಿಂದಲೇ ಓಟ ಆರಂಭಿಸಿದ್ದಾರೆ. ಓಡುತ್ತಲೇ ಅಪ್ಪು ಸಮಾಧಿ ತಲುಪಲು ದಾಕ್ಷಾಯಿಣಿ ಪಾಟೀಲ್ ಯೋಜನೆ ರೂಪಿಸಿದ್ದಾರೆ.

  • Share this:

    ಕನ್ನಡಿಗರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ (Puneeth Rajkumar) ಮೊದಲ ಪುಣ್ಯಸ್ಮರಣೆಗೆ (Puneeth Rajkumar Death Anniversary) ಕರುನಾಡೇ ಸಿದ್ಧವಾಗಿ ನಿಂತಿದೆ. ಹೌದು, ಅದಾಗಲೇ ಪುನೀತ ಪರ್ವ ಆರಂಭವಾಗಿದೆ. ಅಭಿಮಾನಿಗಳು ವೀರ ಕನ್ನಡಿಗನ ಸ್ಮರಣೆಯಲ್ಲಿ ತೊಡಗಿದ್ದಾರೆ. ಶಿವಮೊಗ್ಗದಲ್ಲಂತೂ (Shivamogga) ವೀರಕೇಸರಿ ಯುವಕರ ಸಂಘವು ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಮಂಟಪ ನಿರ್ಮಿಸಿ ಹತ್ತು ದಿನಗಳ ಮೊದಲೇ ಎಡೆ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪು ಭಾವಚಿತ್ರಕ್ಕೆ ಹೂಹಾರ ಹಾಕಿ ಅಭಿಮಾನಿಗಳು ನಮಿಸಿದ್ದಾರೆ. ಮೂರು ಸಾವಿರ ಮಂದಿಗೆ 300 ಕೆಜಿ ಚಿಕನ್ ಹಾಗೂ ಮಟನ್ ಮಾಂಸದ ಅಡುಗೆ ತಯಾರಿಸಿ ಉಣಬಡಿಸಿದ್ದಾರೆ.


    ಇನ್ನೊಂದೆಡೆ ಧಾರವಾಡದಲ್ಲಿ ಮಹಿಳೆಯೋರ್ವರು ಪುನೀತ್ ಪುಣ್ಯಸ್ಮರಣೆಗೆ ಬೆಂಗಳೂರು ತಲುಪಲು ಈಗಿಂದಲೇ ಓಟ ಆರಂಭಿಸಿದ್ದಾರೆ. ಓಡುತ್ತಲೇ ಅಪ್ಪು ಸಮಾಧಿ ತಲುಪಲು ದಾಕ್ಷಾಯಿಣಿ ಪಾಟೀಲ್ ಯೋಜನೆ ರೂಪಿಸಿದ್ದಾರೆ.


    ಇದನ್ನೂ ಓದಿ: Puneeth Parva: ಪುನೀತ ಪರ್ವದಲ್ಲಿ ಮೋಹಕ ತಾರೆ ರಮ್ಯಾ ಲೈವ್ ಡ್ಯಾನ್ಸ್ ಪರ್ಫಾಮೆನ್ಸ್


    ಮೂರು ಮಕ್ಕಳು ತಾಯಿಯೂ ಆಗಿರುವ ಅಥ್ಲೀಟ್ ದ್ರಾಕ್ಷಾಯಿಣಿ ಅಕ್ಟೋಬರ್ 29 ರ ಮೊದಲ ಪುನೀತ್ ಪುಣ್ಯಸ್ಮರಣೆಯಂದು ಕಂಠೀರವ ಸ್ಟುಡಿಯೋ ತಲುಪಲು ಓಟ ಆರಂಭಿಸಿದ್ದಾರೆ.


    ಇದನ್ನೂ ಓದಿ: Positive Story: ನ್ಯೂಸ್ 18 ಕನ್ನಡ ಡಿಜಿಟಲ್ ಫಲಶೃತಿ; ವಿಜಯಪುರದಲ್ಲಿ ಸೊಳ್ಳೆ ನಿರ್ಮೂಲನೆಗೆ ಪಣ


    ಪುನೀತ್ ನಿಧನ ಹೊಂದಿದಾಗಲೂ ಇವರು ಓಡುತ್ತಾ ಬೆಂಗಳೂರು ತಲುಪಿದ್ದರಂತೆ. ಒಟ್ಟಿನಲ್ಲಿ ಅಪ್ಪುವನ್ನು ಭಾವನಾತ್ಮಕವಾಗಿ ಅಪ್ಪಿಕೊಂಡಿರೋ ಅಭಿಮಾನಿಗಳು ಭರದ ತಯಾರಿ ನಡೆಸ್ತಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: