Psycho Killer: ರಸ್ತೆ ಬದಿ ಮಲಗಿದ್ದೋರೇ ಇವನ ಟಾರ್ಗೆಟ್! ಸೈಕೋ ಕಿಲ್ಲರ್ ಹಿಡಿಯಲು ಭಿಕ್ಷುಕರ ವೇಷ ಹಾಕಿದ ಪೊಲೀಸರು!

ಒಂದರ್ಥದಲ್ಲಿ ಇವನೊಬ್ಬ ಸೈಕೋ ಕಿಲ್ಲರ್. ಚಿಂದಿ ಆಯೋರು, ಭಿಕ್ಷುಕರೇ ಇವ್ನ ಟಾರ್ಗೆಟ್. ಹಣ ಬೇಕೆಂದಾಗ ರಸ್ತೆ ಬದಿ ಮಲಗಿದೋರನ್ನು ಕೊಲೆ ಮಾಡೋದು, ಹಣದೊಂದಿಗೆ ಎಸ್ಕೇಪ್ ಆಗೋದೇ ಇವನ ಕಾಯಕ. ಹಲವು ಕೊಲೆಗಳಲ್ಲಿ ಭಾಗಿಯಾಗಿರೋ ಶಂಕೆಯೊಂದಿಗೆ ಈ ಕಿಲ್ಲರ್‌ನನ್ನು ಪೊಲೀಸರು ವಿಚಾರಿಸುತ್ತಿದ್ದಾರೆ.

ಬಂಧಿತ ಸೈಕೋ ಕಿಲ್ಲರ್

ಬಂಧಿತ ಸೈಕೋ ಕಿಲ್ಲರ್

  • Share this:
ಹುಬ್ಬಳ್ಳಿ: ಹಣಕ್ಕಾಗಿ (Money) ದೊಡ್ಡ ದೊಡ್ಡ ಶ್ರೀಮಂತರನ್ನ (Rich Person) ಟಾರ್ಗೆಟ್ (Target) ಮಾಡೋದನ್ನ ನೋಡಿದ್ದೇವೆ. ಮೈಮೇಲೆ ಚಿನ್ನಾಭರಣ ಹಾಕಿಕೊಂಡೋರನ್ನ ರಾಬರಿ (Robbery) ಮಾಡೋದು, ದೊಡ್ಡ ಶ್ರೀಮಂತರ ಮನೆಗೆ ಕನ್ನಾ ಹಾಕಿ ಕದಿಯೋದನ್ನ ನೋಡಿರ್ತೀವಿ, ಆದ್ರೆ ಈ ಆಸಾಮಿಯ ಕಥೆಯೇ ಬೇರೆ. ರಸ್ತೆ ಬದಿ ಮಲಗುವವರೇ ಇವನ ಟಾರ್ಗೆಟ್. ಹಣಕ್ಕಾಗಿ ಈತ ಟಾರ್ಗೆಟ್ ಮಾಡ್ತಿದ್ದುದೇ ರಸ್ತೆ ಬದಿ ಮಲಗಿದೋರನ್ನ. ಚಿಂದಿ ಆಯೋರು, ಭಿಕ್ಷೆ ಬೇಡಿ ಮಲಗಿದೋರ ಹೆಣ ಉರುಳಿಸಿ ಹಣ ಕಿತ್ಕೊಂಡ್ ಎಸ್ಕೇಪ್ ಆಗ್ತಿದ್ದ ಕಿರಾತಕ. ಕತ್ತಲಲ್ಲಿ ಖತರ್ನಾಕ್ ಐಡಿಯಾ ಹಾಕ್ತಿದ್ದ ಇವ್ನು, ರಸ್ತೆ ಬದಿ ಮಲಗಿದವರ ಹೆಣ (Dead Body) ಉರುಳಿಸಿಯೇ ಬಿಡ್ತಿದ್ದ. ಅವರ ಬಳಿ ಇದ್ದ ಹಣ ಕಿತ್ಕೊಂಡು ಬೇರೆ ಊರಿಗೆ ಎಸ್ಕೇಪ್ ಆಗಿಬಿಡ್ತಿದ್ದ. ಸದ್ಯಕ್ಕೆ ಒಂದೇ ಠಾಣೆಯ (Station) ವ್ಯಾಪ್ತಿಯಲ್ಲಿ ಒಂದೇ ಮಾದರಿಯ ಎರಡು ಕೊಲೆ ಪತ್ತೆಯಾಗಿವೆ. ಇತರೆಡೆಯೂ ಇದೇ ರೀತಿಯ ಕೊಲೆ (Murder) ಮಾಡಿರೋ ಮಾಹಿತಿ ಸಿಕ್ಕಿದೆ.

ಚಿಂದಿ ಆಯುತ್ತಿದ್ದ ಮಹಿಳೆ ಕೊಲೆಗೆ ಟ್ವಿಸ್ಟ್

ಚಿಂದಿ ಆರಿಸುತ್ತಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದ ಚಿಂದಿ ಆಯೋ ಮಹಿಳೆಯ ಹಂತಕನ ಹಿಸ್ಟರಿ ನೋಡಿ ಸ್ವತಹ ಪೊಲೀಸರೇ ಶಾಕ್ ಆಗಿದ್ದಾರೆ. ಒಂದೇ ಹತ್ಯೆಯಲ್ಲಿ ಭಾಗಿಯಾಗದೆ ಇಂಥದ್ದೇ ಹಲವು ಕೃತ್ಯಗಳನ್ನ ಎಸಗಿರೋ ಹಂತಕ, ಚಾಲಾಕಿ ತನದಿಂದಲೇ ತಪ್ಪಿಸಿಕೊಳ್ತಿದ್ದ.

ಪಕ್ಕದ ರಾಜ್ಯಕ್ಕೆ ಎಸ್ಕೇಪ್ ಆಗಿದ್ದ ಹಂತಕ

ಮಾರ್ಚ್ 11 ರ ರಾತ್ರಿ ನಡೆದಿದ್ದ ಒಂಟಿ ಮಹಿಳೆ ಹತ್ಯೆ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಚಿಂದಿ ಆರಿಸಿ ಜೀವನ ಸಾಗಿಸುತ್ತಿದ್ದ ಸುಮಾ ಎನ್ನುವ ಮಹಿಳೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಹತ್ಯೆ ಪ್ರಕರಣ ನಡೆದಿತ್ತು. ಹತ್ಯೆಯ ಬಳಿಕ ಅಲ್ಲಿಯೇ ಭಿಕ್ಷೆ ಬೇಡುತ್ತಿದ್ದ ಹಂತಕ, ನಂತರ ಅಲ್ಲಿಂದ ಮಂಗಮಾಯವಾಗಿದ್ದ. ಹೀಗೆ ಮಂಗಮಾಯವಾಗಿದ್ದ ಹಂತಕ ನೆರೆ ರಾಜ್ಯಕ್ಕೆ ಎಸ್ಕೇಪ್ ಆಗಿದ್ದ. ಹೀಗೆ ಎಸ್ಕೇಪ್ ಆಗಿ ಕೊನೆಗೂ ಪೊಲೀಸರ ಬಲೆಗೆ ಬಿದ್ದ ಆರೋಪಿಯನ್ನು ಗಿಡ್ಡಾ ರಫೀಕ್ ಎಂದು ಗುರುತಿಸಲಾಗಿದೆ.

ಮೂರು ಕೊಲೆಗಳಲ್ಲಿ ಭಾಗಿಯಾಗಿದ್ದ ಹಂತಕ

ಈ ಗಿಡ್ಡ ರಫೀಕ್ ಮೂಲತಹ ಧಾರವಾಡ ದವನಾಗಿದ್ದಾನೆ. ಹುಬ್ಬಳ್ಳಿ - ಧಾರವಾಡ ವ್ಯಾಪ್ತಿಯಲ್ಲಿ ಇವನ್ನು ಹಲವು ದಿನಗಳಿಂದ ಇಂಥದ್ದೇ ಕಾಯಕ ಮಾಡ್ತಿದ್ದ ಎನ್ನಲಾಗಿದೆ. ರಫೀಕ್ ಎನ್ನುವ ಹಂತಕನ ಬಗ್ಗೆ ಬಗೆದಷ್ಟು ಕ್ರೈಮ್ ಹಿಸ್ಟರಿ ಬೆಳಕಿಗೆ ಬರುತ್ತಿದೆ. ಒಂದಲ್ಲ... ಎರಡಲ್ಲ... ಮೂರಲ್ಲ.... ಹಲವು ಕೊಲೆಗಳು ಈತನಿಂದ ನಡೆದಿವೇ ಎನ್ನಲಾಗುತ್ತಿದೆ.

ಇದನ್ನೂ ಓದಿ: Shocking News: ಹೊರಗೆ ಮಸಾಜ್ ಪಾರ್ಲರ್, ಒಳಗೆ 'ಆ' ದಂಧೆ! ಮಾಡೆಲ್‌ ಆಗೋಕೆ ಬಂದವರು ಮೈ ಮಾರಿಕೊಂಡರು!

ಸದ್ಯಕ್ಕೆ ಈತನಿಂದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಮಹಿಳೆ ಕೊಲೆ ನಡೆದಿರೋದು ಮತ್ತು 2020 ರಲ್ಲಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಮಲಗಿದ್ದ ವ್ಯಕ್ತಿಯ ಕೊಲೆ ನಡೆದಿರೋದು ಖಾತ್ರಿಯಾಗಿದೆ ಎಂದಿದ್ದಾರೆ ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಲಾಬೂ ರಾಮ್.

ಹುಡ್ಕೊಂಡು ಹೋಗಿ ಕೊಲೆ ಮಾಡ್ತಿದ್ದ!

ಹಾಗೆ ನೋಡಿದ್ರೆ ಈ ಗಿಡ್ಡಾ ರಫೀಕ್ ಗೆ ಅಂತಹ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರಲಿಲ್ಲ. ಇವನ್ನೂ ಮಾಡ್ತಿದ್ದ ಕಾಯಕ ಅಂದ್ರೆ ಅದೇ ಭಿಕ್ಷೆ ಬೇಡೋದು. ತಾನು ಭಿಕ್ಷೆ ಬೇಡ್ತಿದ್ದ. ಜೊತೆಗೆ ಭಿಕ್ಷೆ ಬೇಡೋರನ್ನ, ಚಿಂದಿ ಆಯೋರನ್ನ ಟಾರ್ಗೆಟ್ ಮಾಡ್ತಿದ್ದ. ಯಾರ ಬಳಿಯಾದ್ರೂ ಹಣ ಇರೋದನ್ನು ಗಮನಿಸಿ ಅವರ ಕೊಲೆ ಮಾಡಿ, ದುಡ್ಡು ಕಿತ್ತುಕೊಂಡು ಪರಾರಿಯಾಗ್ತಿದ್ದ.

2020 ರಲ್ಲಿ ರೈಲ್ವೆ ಸ್ಟೇಷನ್ ಬಳಿ ಮಲಗಿದ ವ್ಯಕ್ತೀನ ಕೊಲೆ ಮಾಡಿ ಅವನ ಬಳಿ ಇದ್ದ 500 ರೂಪಾಯಿ ಕಿತ್ತುಕೊಂಡು ಎಸ್ಕೇಪ್ ಆಗಿದ್ದ. ಮೊನ್ನೆ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದ್ದ ಚಿಂದಿ ಆಯುವ ಮಹಿಳೆ ಕೊಲೆ ಪ್ರಕರಣದಲ್ಲಿ ಆಕೆಯ ಬಳಿ ಇದ್ದ ಮೂರು ಸಾವಿರ ರೂಪಾಯಿ ಕಿತ್ತುಕೊಂಡು ಎಸ್ಕೇಪ್ ಆಗಿದ್ದ.

ಭಿಕ್ಷುಕರಂತೆ ವೇಷ ಮರೆಸಿಕೊಂಡು ಹೋದ ಪೊಲೀಸರು

ಮಹಿಳೆ ಕೊಲೆ ಬಳಿಕ ಎಸ್ಕೇಪ್ ಆಗಿ, ಮಹಾರಾಷ್ಟ್ರದ ಮೀರಜ್ ನಲ್ಲಿ ಭಿಕ್ಷೆ ಬೇಡೋ ಕೆಲಸ ಮುಂದುವರೆಸಿದ್ದ. ಆತನನ್ನು ಬಲೆಗೆ ಬೀಳಿಸಲು ಹುಬ್ಬಳ್ಳಿಯ ಶಹರ ಪೊಲೀಸರು ಮೀರಜ್ ಗೆ ಹೋಗಿ ಎರಡು-ಮೂರು ದಿನಗಳ ಕಾಲ ಭಿಕ್ಷುಕರ ರೀತಿಯಲ್ಲಿಯೇ ಅಲೆದಾಡಿದ್ದಾರೆ.

ಪೊಲೀಸರಿಂದ ಆರೋಪಿ ವಿಚಾರಣೆ

ಈತನ ಗೆಳೆತನ ಸಂಪಾದಿಸಿ ನಯವಾಗಿಯೇ ಮಾಹಿತಿ ಸೆಳೆದುಕೊಂಡಿದ್ದರು. ಪೊಲೀಸರೆಂದು ಅರಿಯದೇ ಗಿಡ್ಡಾ ರಫೀಕ್ ಕೊಲೆ ವಿಷಯ ಬಾಯಿಬಿಟ್ಟಿದ್ದ. ಅಷ್ಟಾಗುತ್ತಿದ್ದಂತೆಯೇ ಆತನ ಹೆಡೆಮುರಿ ಕಟ್ಟಿಕೊಂಡು ಬಂದಿರೋ ಪೊಲೀಸರು ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ: Morning Digest: ಹಾಸನ ಜಿಲ್ಲೆಯಲ್ಲಿ ಸರಣಿ ಕೊಲೆ, ಪ್ರೇಯಸಿಯನ್ನ ಕೊಂದ ಗೆಳೆಯ, ದುಬಾರಿಯಾದ ಚಿನ್ನ: ಬೆಳಗಿನ ಟಾಪ್ ನ್ಯೂಸ್ ಗಳು

ಈ ಹಿಂದೆ ನಡೆದ ಕೃತ್ಯದಲ್ಲೂ ಭಾಗಿಯಾಗಿರೋ ಮಾಹಿತಿ ವಿಚಾರಣೆಯಲ್ಲಿ ಬಹಿರಂಗಗೊಂಡಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದಿರೋದಾಗಿ ಪೊಲೀಸ್ ಆಯುಕ್ತ ಲಾಬೂ ರಾಮ್ ಮಾಹಿತಿ ನೀಡಿದ್ದಾರೆ.

(ವರದಿ: ಶಿವರಾಮ ಅಸುಂಡಿ)
Published by:Annappa Achari
First published: