Hubli: ನನ್ನ- ಸಿಎಂ ಭೇಟಿಯಲ್ಲಿ ವಿಶೇಷತೆಯಿಲ್ಲ: ಪ್ರಹ್ಲಾದ್ ಜೋಶಿ

ಸಿಎಂ ಬೊಮ್ಮಾಯಿ ಅವರು ಸೌಜನ್ಯಕ್ಕಾಗಿ ನನ್ನನ್ನು ಭೇಟಿಯಾಗಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸೋ ಅಗತ್ಯವಿಲ್ಲ ಎಂದಿರೋ ಪ್ರಹ್ಲಾದ್ ಜೋಶಿ, ಸದ್ಯಕ್ಕೆ ಬೊಮ್ಮಾಯಿ ಬದಲಾವಣೆಯಿಲ್ಲ ಎಂದಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

  • Share this:
ಹುಬ್ಬಳ್ಳಿ (ಮಾ. 7):  ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಿಲ್ಲ. ಬಸವರಾಜ ಬೊಮ್ಮಾಯಿ (CM Basavaraja Bommai) ಸದ್ಯಕ್ಕೆ ಬದಲಾಗೋಲ್ಲ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿಕೆ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 2023 ರವರೆಗೂ ಬಸವರಾಜ ಬೊಮ್ಮಾಯಿವರೇ ಸಿಎಂ ಆಗಿ ಇರ್ತಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಇವತ್ತಿನ ನನ್ನ ಸಿಎಂ ಭೇಟಿಯಲ್ಲಿ ವಿಶೇಷತೆ ಇಲ್ಲ ಎಂದು ತಿಳಿಸಿದ್ದಾರೆ. 

ಸಂಪುಟ ವಿಸ್ತರಣೆ, ಪುನರ್​ರಚನೆ ಬಗ್ಗೆ ಇಲ್ಲ ಮಾಹಿತಿ

ಇಬ್ಬರು ಒಂದೇ ಪಕ್ಷದ ನಾಯಕರು, ಸಾಮಾನ್ಯವಾಗಿ ಭೇಟಿ ಆಗುತ್ತಿರುತ್ತೆವೆ. ನಾನೇನು ಅವರನ್ನ ಏರ್ಪೋರ್ಟ್ ಕರೆಯಿಸಿಲ್ಲ, ಅವರೇ ಬಂದಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು, ಹೈಕಮಾಂಡ್ ನಿರ್ಧರಿಸುತ್ತೆ. ಸಂಪುಟ ವಿಸ್ತರಣೆ ಮತ್ತು ಪುನರ್ರಚನೆ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ನೀವೇ ನಾಯಕತ್ವ ಬದಲಾವಣೆ ಬಗ್ಗೆ ಹೇಳುತ್ತಿದ್ದೀರ. ಆದ್ರೆ ಅದ್ಯಾವದು ನಮ್ಮ ಪಕ್ಷದಲ್ಲಿಲ್ಲ. ದಯವಿಟ್ಟು ಯಾರು ಊಹಾಪೋಹಗಳನ್ನ ನಂಬಬೇಡಿ ಎಂದ ಜೋಶಿ. ಸಿಎಂ ಕುರ್ಚಿಗೆ 2500 ಕೋಟಿ ನಮ್ಮಲ್ಲಲ್ಲ.

ಸಿಎಂ ಸ್ಥಾನ ಆರೋಪಕ್ಕೆ ಪ್ರತಿಕ್ರಿಯೆ
ಸಿಎಂ ಖುರ್ಚಿಗೆ 2500 ಕೋಟಿ ಕೇಳಿದ್ದಾರೆ ಎನ್ನೋ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಅವರೇ ಇಂದು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಪಾರ್ಟಿಯಲ್ಲಿ ಅಲ್ಲ. ಆ ಸಂಸ್ಕೃತಿ ಇರೋದು ಕಾಂಗ್ರೆಸ್ ಪಕ್ಷದಲ್ಲಿ ಅಂತ ಹೇಳಿದ್ದಾರೆ. ಹೀಗಾಗಿ ಇದನ್ನು ಅನಗತ್ಯವಾಗಿ ಬೆಳಸಿಕೊಂಡು ಹೋಗೋದು ಸರಿಯಲ್ಲ ಎಂದರು.
ನ್ಯಾಯಾಂಗ ತನಿಖೆಯಾದ್ರೆ ಯಾರೂ ಜೈಲಿಗೆ ಹೋಗಲ್ಲ.

ಇದನ್ನು ಓದಿ: Pakistanದ ಏಜೆಂಟ್‌‌ಗಳು ಹುಟ್ಟಿಕೊಳ್ಳೋದೆ ಮಂಗಳೂರಲ್ಲಿ: ಕೇಂದ್ರ ಸಚಿವ ಎ ನಾರಾಯಣಸ್ವಾಮಿ

ಪ್ರಿಯಾಂಕ್​ ಖರ್ಗೆ ಮಾಹಿತಿ ನೀಡಲಿ
ಪಿಎಸ್ ಐ ನೇಮಕಾತಿ ಹಗರಣ ವಿಚಾರದಲ್ಲಿ ಕಾಂಗ್ರೆಸ್ ನವರು ತನಿಖಾ ಸಂಸ್ಥೆಗಳಿಂದ ತನಿಖೆ ಬೇಡ ನ್ಯಾಯಂಗ ತನಿಖೆ ಬೇಕು ಅಂತಾರೆ. ನ್ಯಾಯಂಗ ತನಿಖೆಯಾದ್ರೆ ಯಾರು ಜೈಲಿಗೆ ಹೋಗಲ್ಲ. ಸುಮ್ಮನೆ ಎಲ್ಲರು ಕಾಲಹರಣ ಮಾಡಿದ್ರಾಯಿತು ಅಂತ‌ ಅನ್ಕೊಂಡಿದ್ದಾರೆ. ಪ್ರಿಯಾಂಕ್ ಅವರ ಮನೆಯಲ್ಲಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಅವರ ಸಹೋದರ ಇರ್ತಿದ್ರು. ಯಾಕೆ ಅವರು ನೋಟಿಸ್ ನೀಡಿದ್ರು ಉತ್ತರ ನೀಡ್ತಿಲ್ಲ. ಸಿಐಡಿ ನೋಟಿಸ್ ನೀಡಿದ್ರು ಅಟೆಂಡ್ ಆಗ್ತಿಲ್ಲ. ಅವರ ಹತ್ತಿರ ಮಾಹಿತಿ ಇದ್ರೆ, ಅದನ್ನ ಜವಾಬ್ದಾರಿ ವ್ಯಕ್ತಿಯಾಗಿ ನೀಡೋದು ಅವರ ಕರ್ತವ್ಯ ಎಂದರು.

ಇದನ್ನು ಓದಿ: ಚುಂಚನಕಟ್ಟೆಯಲ್ಲಿ 31 ಅಡಿ ಎತ್ತರದ‌ ಆಂಜನೇಯ ವಿಗ್ರಹ; ರಾಜವಂಶಸ್ಥ ಯದುವೀರರಿಂದ ವೀಕ್ಷಣೆ

ಸ್ಮಾರ್ಟ್ ಸಿಟಿ ಹಸಿರು ಸಂಚಾರಿ ಪಥ ಉದ್ಘಾಟನೆ
ಹತ್ತಿರ ಹುಬ್ಬಳ್ಳಿ - ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 8 ಕೋಟಿ ರೂ.ವೆಚ್ಚದಲ್ಲಿ  ಹುಬ್ಬಳ್ಳಿಯ ಲಿಂಗರಾಜನಗರದ ರಾಣಿ ಚೆನ್ನಮ್ಮ ನಗರದ ಸೇತುವೆ ಬಳಿ ನಿರ್ಮಿಸಿರುವ ಹಸಿರು ಸಂಚಾರಿ ಪಥ (Green Mobility Corridor) ಯೋಜನೆ ಮೊದಲ ಹಂತದ ಯೋಜನೆಯನ್ನು ಪ್ರಹ್ಲಾದ್ ಜೋಶಿ ಉದ್ಘಾಟಿಸಿದರು. ಇದೇ ವೇಳೆ  96 ಕೋಟಿ ರೂಪಾಯಿ ವೆಚ್ಚದ ಎರಡನೇ ಹಂತದ ಕಾಮಗಾರಿ ಭೂಮಿ ಪೂಜೆ ನೆರವೇರಿಸಲಾಯಿತು. 5  ಕಿಲೋ ಮೀಟರ್ ಉದ್ದದ ಸೈಕಲ್ ಟ್ರ್ಯಾಕ್ ಸ್ಥಾಪನೆ ಮಾಡಲಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಇದೇ ವೇಳೆ ಕರೆ ನೀಡಿದರು.

ನಗರದ ಚರಂಡಿಗಳ ನೀರು ಶುದ್ಧೀಕರಿಸಿ ನಾಲಾಕ್ಕೆ ಬಿಡುವ ಜೊತೆಗೆ ಸೈಕ್ಲಿಂಗ್ ಹಾಗೂ ಪಾದಚಾರಿಗಳ ಅನುಕೂಲಕ್ಕಾಗಿ ಹಸಿರು ಸಂಚಾರ ಪಥ ನಿರ್ಮಾಣವಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅನುದಾನದ ಜೊತೆ 130 ಕೋಟಿ ರೂ. ವಿದೇಶಿ ನೆರವು ಹಾಗೂ ಕರ್ನಾಟಕ ರಾಜ್ಯ ಸಮಗ್ರ ನಿಧಿಯಡಿ 200 ಕೋಟಿ ರೂ.ನೆರವು ಹೆಚ್ಚುವರಿಯಾಗಿ ಅವಳಿನಗರದ ಅಭಿವೃದ್ಧಿಗೆ ದೊರೆಯಲಿದೆ ಎಂದು  ತಿಳಿಸಿದರು
Published by:Seema R
First published: