Mekedatu: "ಪಾದಯಾತ್ರೆ ಮಾಡಿದ್ರೆ ಸಿಎಂ ಆಗ್ತೀನಿ ಎನ್ನುವ ಭ್ರಮೆ ಬೇಡ" -ಡಿಕೆಶಿಗೆ ಪ್ರಹ್ಲಾದ್ ಜೋಶಿ ಟಾಂಗ್

ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. "ಪಾದಯಾತ್ರೆ ಮಾಡಿದರೆ ಸಿದ್ದರಾಮಯ್ಯರಂತೆ ನಾನೂ ಸಿಎಂ ಆಗಬಹುದು ಎಂಬ ಭ್ರಮೆಯಲ್ಲಿ ಡಿಕೆಶಿ ಇದ್ದಾರೆ. ಮಾತೆತ್ತಿದರೆ ಪ್ರತಿಭಟನೆ ಹಾದಿ ತುಳಿದಿರುವ ಡಿಕೆಶಿ, ಅಬ್ಬಬ್ಬಾ ಅಂದ್ರೆ ವಿರೋಧಪಕ್ಷದ ಸ್ಥಾನದಲ್ಲಿ ಕೊಡಬಹುದು" ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

  • Share this:
ಹುಬ್ಬಳ್ಳಿ: “ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಪಾದಯಾತ್ರೆ ಮಾಡಿ ಸಿಎಂ (CM) ಆಗುವ ಭ್ರಮೆಯಲ್ಲಿದ್ದಾರೆ. ಆದರೆ ಅದು ಕನಸು ಮನಸಿನಲ್ಲಿಯೂ ಸಾಧ್ಯವಾಗುವುದಿಲ್ಲ” ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Prahlad Joshi)  ಭವಿಷ್ಯ ನುಡಿದಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, “ಕಾಂಗ್ರೆಸ್ ನಿಂದ (Conhress) ಮತ್ತೆ ಮೇಕೆದಾಟು (Mekedatu) ಪಾದಯಾತ್ರೆ ಆರಂಭಗೊಂಡಿರೋದಕ್ಕೆ ಕಿಡಿ ಕಾರಿದ್ದಾರೆ. ಇದೇ ರೀತಿ ಧರಣಿ, ಸತ್ಯಾಗ್ರಹ ಮಾಡುವ ಪರಿಸ್ಥಿತಿ ಮುಂದೆಯೂ ದೇವರು ಕಾಂಗ್ರೆಸ್ ನವರಿಗೆ ಕೊಡಲಿ. ಅವರು ಇನ್ನೂ ಮುಂದಿನ ವರ್ಷಗಳಲ್ಲಿ ವಿರೋಧ ಪಕ್ಷದಲ್ಲಿ ಇರುವಂತಾಗಲಿ ಎಂದರು. ಮೇಕೆ ದಾಟು ಪಾದಯಾತ್ರೆ ನಂತರ ಮಹಾದಾಯಿ ಪಾದಯಾತ್ರೆ ಮಾಡುವ ಉದ್ದೇಶ ಕಾಂಗ್ರೆಸ್ ಗೆ ಇದೆ. ಗೋವಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ಮಹದಾಯಿ ನೀರು ಬಿಡೋದಿಲ್ಲ ಅಂತ ಕಾಂಗ್ರೆಸ್ ಹೇಳುತ್ತೆ. ಮಹದಾಯಿ ಯೋಜನೆಗಾಗಿ ಪಾದಯಾತ್ರೆ ಮಾಡೋದಾಗಿ ಇಲ್ಲಿ ಹೇಳುತ್ತೆ. ಸುಳ್ಳು ಹೇಳುವುದು ಕಾಂಗ್ರೆಸ್ ಡಿಎನ್ಎ ದಲ್ಲಿ ಬಂದಿದೆ ಅಂತ ಟೀಕಿಸಿದ್ದಾರೆ.

“ಡಿಕೆಶಿ ಸಿಎಂ ಆಗುವ ಭ್ರಮೆಯಲ್ಲಿ ಇದ್ದಾರೆ”

ಪಾದಯಾತ್ರೆ ಮಾಡಿದ್ರೆ ಸಿಎಂ ಆಗುತ್ತೇನೆಂದು ಡಿಕೆಶಿ ಭ್ರಮೆಯಲ್ಲಿದ್ದಾರೆ. ಬಳ್ಳಾರಿಗೆ ಪಾದಯಾತ್ರೆ ಮಾಡಿ ಸಿದ್ದರಾಮಯ್ಯ ಸಿಎಂ ಆದಂತೆ ಡಿಕೆಶಿ ಸಹ ಸಿಎಂ ಆಗುವ ಭ್ರಮೆಯಲ್ಲಿದ್ದಾರೆ. ಈ ಪಾದಯಾತ್ರೆ ಮಾಡಿದ್ರೆ ಡಿಕೆಶಿ ಸಿಎಂ ಆಗಲ್ಲ. ಬೇಕಾದ್ರೆ ವಿರೋಧ ಪಕ್ಷದ ನಾಯಕನಾಗಬಹುದು ಎಂದರು.

ಕಾಂಗ್ರೆಸ್ ಪಾದಯಾತ್ರೆಗೆ ಶೆಟ್ಟರ್ ಕಿಡಿ

ಸದನದಲ್ಲಿ ನಿಂತು ಮಾತಾಡಲು ಆಗದೆ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆ ವಿಚಾರ ಅತ್ಯಂತ ಸೂಕ್ಷ್ಮವಾದದ್ದು. ಆದರೆ ಇದನ್ನು ಕಾಂಗ್ರೆಸ್ ರಾಜಕೀಕರಣ ಮಾಡುತ್ತಿದೆ. ಮತ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದೆ. ವಿಧಾನಸಭೆ ಕಲಾಪ ನಡೆದಾಗ ಅಲ್ಲಿ ಇವರು ಚರ್ಚೆ ಮಾಡೋದಿಲ್ಲ. ಅದನ್ನು ಬಿಟ್ಟು ಪಾದಯಾತ್ರೆ ಮಾಡ್ತೀವಿ ಅಂತಾರೆ. ಸದನದಲ್ಲಿ ಕಾಂಗ್ರೆಸ್ ವಿನಾಕಾರಣ ಕಾಲಹರಣ ಮಾಡಿತು. ಈಗ ಪಾದಯಾತ್ರೆ ಮಾಡುವ ಮೂಲಕ ಹೊರಗೆ ಕಾಲಹರಣ ಮಾಡುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: D.K Shivakumar: ‘ಜೆಡಿಎಸ್​ನವ್ರು ನಮ್ಮ ಬ್ರದರ್ಸ್​ ಕಣ್ರೀ‘, ನೀವೂ ಬನ್ನಿ ಪಾದಯಾತ್ರೆಗೆ ಎಂದ್ರು ಡಿ.ಕೆ ಶಿವಕುಮಾರ್​

“ಮಹದಾಯಿ ವಿಚಾರದಲ್ಲೂ ಕಾಂಗ್ರೆಸ್ ದ್ವಂದ್ವ ನಿಲುವು”

ಮಹದಾಯಿ ವಿಚಾರದಲ್ಲಿಯೂ ಕಾಂಗ್ರೆಸ್ ನಿಂದ ದ್ವಂದ್ವ ನಿಲುವು. ಗೋವಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ನೀರು ಬಿಡೋದಿಲ್ಲ ಅಂತ ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತೆ. ಆದರೆ ಇಲ್ಲಿನ ಕಾಂಗ್ರೆಸ್ಸಿಗರು ಮಹದಾಯಿಗಾಗಿ ಪಾದಯಾತ್ರೆ ಮಾಡ್ತೀವಿ ಅಂತಾರೆ. ಕಾಂಗ್ರೆಸ್ ನವರು ಈ ದ್ವಂದ್ವ ನಿಲುವನ್ನು ಬಿಡಲಿ. ಬಜೆಟ್ ಅಧಿವೇಶನದಲ್ಲಿ ಬಂದು ಚರ್ಚೆ ಮಾಡಲಿ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹಿಸಿದರು.

ಜೆಡಿಎಸ್ ಡುಪ್ಲಿಕೇಟ್ ಪಕ್ಷವಾ...?

ಜೆಡಿಎಸ್ ನಿಮ್ಮ ಜೊತೆಗೆ ಸರ್ಕಾರ‌ ಮಾಡಿದ್ರೆ ಒರಿಜಿನಲ್ ಪಕ್ಷ.  ಅದೇ ನಮ್ಮ ಜೊತೆಗೆ ಮಾಡಿದ್ರೆ ಡುಪ್ಲಿಕೇಟ್ ಅಂತನಾ ? ಎಂದು ಜೋಶಿ ಪ್ರಶ್ನಿಸಿದ್ದಾರೆ. ಬಿಜೆಪಿ ಜೊತೆ ಬಂದಾಗ ಬಿ ಟೀ ಆದ್ರೆ, ಕಾಂಗ್ರೆಸ್ ಜೊತೆ ಹೋದಾಗ ಜೆಡಿಎಸ್ ಡಿ ಟೀಂ ಆಗುತ್ತಾ ಅಂತ ಲೇವಡಿ ಮಾಡಿದರು. ಕಾಂಗ್ರೆಸ್ ವಿರುದ್ಧ ಜೋಶಿ ಹರಿಹಾಯ್ದರು.

ಭಾರತೀರಯನ್ನ ಸುರಕ್ಷಿತವಾಗಿ ಕರೆತರ್ತೀವಿ

ಉಕ್ರೇನ್ ನಲ್ಲಿ ಭಾರತೀಯರು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಯುದ್ಧ ಸಾರಿರುವ ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳ ನಡುವೆ ಮಾತುಕತೆ ಮಾಡಲಾಗಿದೆ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಸಧ್ಯ ಉಕ್ರೇನ್ ಪರಿಸ್ಥಿತಿ ಸೂಕ್ಷ್ಮವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯರನ್ನು ಅಕ್ಕಪಕ್ಕದ ರಾಷ್ಟ್ರಗಳಿಗೆ ಕರೆ ತಂದು ಭಾರತಕ್ಕೆ ವಾಪಸ್ ಕರೆತರುವ ಪ್ರಯತ್ನಗಳು ಮುಂದುವರಿದಿವೆ. ಈಗಾಗಲೇ ಎರಡು ದೊಡ್ಡ ವಿಮಾನಗಳು ಬಂದಿವೆ.

ಇಂದು ಮತ್ತೆ ಎರಡು ವಿಮಾನ ಹೋಗುತ್ತವೆ. ರಷ್ಯಾ ಅಧ್ಯಕ್ಷರ ಜೊತೆಗೆ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. ಉಕ್ರೇನ್ ಅಕ್ಕ-ಪಕ್ಕದ ಸುರಕ್ಷಿತ ದೇಶಗಳಲ್ಲಿ ನಮ್ಮ ದೇಶ ನಾಗರಿಕರನ್ನು ಕರೆತಂದು ಅಲ್ಲಿಂದ ನಮ್ಮ ದೇಶಕ್ಕೆ ಕರೆಯಲಾಗುತ್ತಿದೆ. ಆದರೆ ಯುದ್ಧದ ಸ್ಥಿತಿ ಇರೋದ್ರಿಂದ ವಿಮಾನ ಹಾರಾಟವು ತುಂಬಾ ತ್ರಾಸದಾಯಕ.

ಇಷ್ಟರ ನಡುವೆಯೂ ಕೆಲವು ವಿಮಾನಗಳ ಮೂಲಕ ಭಾರತೀಯರನ್ನು ಕರೆ ತರಲಾಗಿದೆ. ನಮ್ಮ ರಾಜ್ಯದ 16 ಜನ ಸುರಕ್ಷಿತವಾಗಿ ತಲುಪಿದ್ದಾರೆ. ಭಾರತದ ಮನವಿಯನ್ನು ಯಾರೂ ತಿರಸ್ಕಾರ ಮಾಡಿಲ್ಲ. ಭಾರತೀಯರನ್ನ ಸುರಕ್ಷಿತವಾಗಿ ಕರೆತರಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಶೀಘ್ರವೇ ರಾಜ್ಯದಲ್ಲಿ SDPI, PFI, CFI ಬ್ಯಾನ್ ಆಗುತ್ತಾ.. ಸಿಎಂ ಬೊಮ್ಮಾಯಿ ಮಾತಿನ ಅರ್ಥವೇನು?

ಎಸ್.ಡಿ.ಪಿ.ಐ ಬ್ಯಾನ್ ಬಗ್ಗೆ ಜೋಶಿ ಹೇಳಿದ್ದೇನು?

ಎಸ್ ಡಿ ಪಿಐ ಬ್ಯಾನ್ ಮಾಡುವ ವಿಚಾರಕ್ಕೆ ನನ್ನ ಬೆಂಬಲವಿದೆ ಎಂದು ಪ್ರಹ್ಲಾದ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ. ಎಸ್ ಡಿ ಪಿ ಐ ಈಗ ರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಸಿಕೊಂಡಿದೆ. ಹೀಗಾಗಿ ಬ್ಯಾನ್ ಮಾಡಲು ತಾಂತ್ರಿಕ ಸಮಸ್ಯೆಗಳಿವೆ ಅದನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಪಿಎಫ್ಐ,  ಸಿಎಫ್ಐ ಸಂಘಟನೆಗಳ ನಿಷೇಧಕ್ಕೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಸದ್ಯಕ್ಕೆ ಆ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ ಎಂದು ಜೋಶಿ ತಿಳಿಸಿದ್ದಾರೆ.
Published by:Annappa Achari
First published: